ಫ್ಯಾಕ್ಟ್‌ಚೆಕ್‌: ಟ್ಯಾಂಕ್‌ಬಂಡ್‌ನ ಮೆರವಣಿಗೆಯಲ್ಲಿರುವ ಜನತು ಪಾಕಿಸ್ತಾನದ ಧ್ವಜಗಳನ್ನು ಹಿಡಿದುಕೊಂಡಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?

ಟ್ಯಾಂಕ್‌ಬಂಡ್‌ನ ಮೆರವಣಿಗೆಯಲ್ಲಿರುವ ಜನತು ಪಾಕಿಸ್ತಾನದ ಧ್ವಜಗಳನ್ನು ಹಿಡಿದುಕೊಂಡಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?

Update: 2024-04-15 18:32 GMT

Tank Bund

ತೆಲಂಗಾಣದ ಪ್ರಮುಖ ಸ್ಥಾನಗಳಲ್ಲಿ ಒಂದಾಗಿರುವ ಹೈದರಾಬಾದ್‌ನಲ್ಲಿ ಲೋಕಸಭಾ ಚುನಾವಣೆಗಾಗಿ ಸಿದ್ದವಾಗಿದೆ. ಈ ಬಾರಿ ಯಾರು ಗೆಲ್ಲುತ್ತಾರೂ ಎಂಬ ಆಸಕ್ತಿ ಎಲ್ಲರಲ್ಲೂ ಈಗಾಗಲೇ ನೆಲಗೊಂಡಿದೆ. ಇನ್ನು ಕಳೆದ ಮೂರು ದಶಕಗಳಿಂದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿ ಮೀನ್ (ಎಐಎಂಐಎಂ) ನ ಭದ್ರಕೋಟೆಯಾಗಿ ಹೈದರಾಬಾದ್‌ನ ಸಂಸತ್ತಿನ ಸ್ಥಾನವಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ 2004 ರಿಂದ ಸತತವಾಗಿ ಈ ಸ್ಥಾನವನ್ನು ಗೆಲ್ಲುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮಾಧವಿ ಲತಾಗೆ ಹೈದರಾಬಾದ್‌ನ ಸ್ಥಾನ ನೀಡಲು ಬಿಜೆಪಿ ನಾಯಕತ್ವ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ.

ಓವೈಸಿ ವಿರುದ್ಧ ಈ ಬಾರಿ ಮಾಧವಿ ಲತಾ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ಬಂದಂತಹ ಮಾಹಿತಿ.

ಕೆಲವರು ಪಾಕಿಸ್ತಾನದ ಧ್ವಜ, ಹಸಿರು ಬಾವುಟವನ್ನಿಡಿದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ಬೈಕ್‌ನಲ್ಲಿ ಪರೇಡ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Full View

ಸಾಮಾಜಿಕ ಜಾಲತಾಣಗಳಲಲ್ಲಿ ಮತ್ತು ವಾಟ್ಸ್‌ಪ್‌ನಲ್ಲಿ ಈ ಕುರಿತು ಸುದ್ದಿಯೊಂದು ವೈರಲ್‌ ಆಗಿದೆ. ವೈರಲ್‌ ಆಗಿರುವ ಪೋಸ್ಟ್‌ನಲ್ಲಿ ಶೀರ್ಷಿಕೆಯಾಗಿ" హైదరాబాద్: 'పాకిస్తాన్ జిందాబాద్' అంటూ హైదరాబాద్ ట్యాంక్ బండ్ పైన పాకిస్తాన్ జెండాలతో కేరింతలు.. ఇదెక్కడో పశ్చిమ బెంగాల్, కేరళ లోనో కాదు.. తెలంగాణ రాష్ట్ర రాజధాని హైదరాబాద్ లోని సచివాలయానికి కూత వేటు దూరంలో ట్యాంక్‌ బండ్‌పై ట్రాఫిక్ కు అంతరాయం కలిగిస్తూ విచ్చల విడిగా పాకిస్తానీ జెండాలతో ఊరేగిన పాత బస్తీ మతోన్మాదులు..” ಎಂದು ಬರೆದು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಮಾಡಲಾಗಿದೆ.

ಕನ್ನಡಕ್ಕೆ ಅನುವಾದಿಸಿದಾಗ " ಹೈದರಾಬಾದ್‌ನ ಟ್ಯಾಂಕ್‌ಬಂಡ್‌ನಲ್ಲಿ ಪಾಕಿಸ್ತಾನದ ಧ್ವಜಗಳೊಂದಿಗೆ ಜನರು ಮೆರವಣಿಗೆಯಲ್ಲಿ ʼಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದು ಎಲ್ಲೋ ಪಶ್ಚಿಮ ಬಂಗಾಳ ಅಥವಾ ಕೇರಳದಲ್ಲಿ ನಡೆದ ಘಟನೆಯಲ್ಲ,ಇದು ತೆಲಂಗಾಣ ರಾಜ್ಯ ರಾಜಧಾನಿ ಹೈದರಾಬಾದ್‌ನ ಸೆಕ್ರೆಟರಿಯೇಟ್‌ನ ಹತ್ತಿರದಲ್ಲಿ ನಡೆದಂತಹ ಘಟನೆ. ಹೈದರಾಬಾದ್‌ನ ಹಳೆಯ ಬಸ್ತಿ ಮತಾಂಧರು ಪ್ರತ್ಯೇಕವಾಗಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೈರಲ್‌ ಆದ ಪೋಸ್ಟ್‌ನಲ್ಲಿ ಪಾಕಿಸ್ತಾನಿ ಧ್ವಜಗಳು, ಟ್ಯಾಂಕ್ ಬಂಡ್‌ನಲ್ಲಿ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.


ಫ್ಯಾಕ್ಟ್‌ಚೆಕ್‌

ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೀಡಿಯೋ ಇತ್ತೀಚಿನದಲ್ಲ. ಅಷ್ಟೇ ಅಲ್ಲ, ಜನರು ಪಾಕಿಸ್ತಾನದ ಧ್ವಜಗಳನ್ನು ಹಿಡಿದುಕೊಂಡಿಲ್ಲ, ಬದಲಿಗೆ ವೈರಲ್‌ ಆದ ಚಿತ್ರದಲ್ಲಿ ಕಾಣಿಸುವ ಧ್ವಜಗಳು ಇಸ್ಲಾಮಿಕ್‌ ಧ್ವಜಗಳು. ಹೈದರಾಬಾದ್‌ನಲ್ಲಿ ಸಾಮಾನ್ಯವಾಗಿ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಬಳಸುತ್ತಾರೆ. ವೀಡಿಯೊದಲ್ಲಿ ಕಾಣಿಸುವ ಧ್ವಜಗಳು ಪಾಕಿಸ್ತಾನದ ಧ್ವಜಕ್ಕಿಂತ ಭಿನ್ನವಾಗಿವೆ. ಇವೆರಡರ ನಡುವಿನ ವ್ಯತ್ಯಾಸಗಳನ್ನು ನಾವು ಗಮನಿಸಬಹುದು. ನಾವು ಆನ್‌ಲೈನ್‌ನಲ್ಲಿ ಮಿಲಾದ್-ಉನ್-ನಬಿ ಧ್ವಜಗಳನ್ನು ಹುಡುಕಿದಾಗ, ವೈರಲ್ ವೀಡಿಯೊದಲ್ಲಿ ಕಂಡುಬರುವಂತೆ ಕೆಲವು ಇ-ಕಾಮರ್ಸ್ ಸೈಟ್‌ಗಳು ಇದೇ ರೀತಿಯ ಫ್ಲ್ಯಾಗ್‌ಗಳನ್ನು ಮಾರಾಟ ಮಾಡುವುದನ್ನು ನಾವು ಕಂಡುಕೊಂಡಿದ್ದೇವೆ . ವೈರಲ್ ವೀಡಿಯೊದಲ್ಲಿನ ಧ್ವಜಗಳನ್ನು ಪಾಕಿಸ್ತಾನದ ಧ್ವಜದೊಂದಿಗೆ ಹೋಲಿಸಿದಾಗ ಇವೆರಡು ಸಂಪೂರ್ಣ ಭಿನ್ನವಾಗಿದ್ದವು.

ತೆಲುಗುಪೋಸ್ಟ್ ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಭಾರತದಲ್ಲಿ ಮಾರಾಟವಾಗುತ್ತಿರುವ ಧ್ವಜಗಳ ಕೆಲವು ಚಿತ್ರಗಳನ್ನು ಕಂಡುಹಿಡಿಯಿತು .


ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ, ಕಳೆದ ವರ್ಷದ ಮಿಲಾದ್-ಉನ್-ನಬಿ ಹಬ್ಬದ್ದು ಎಂದು ಹೈದರಾಬಾದ್‌ ಪೋಲೀಸರು ತನ್ನ ಎಕ್ಸ್‌ ಖಾತೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ, "ಇದು ಕಳೆದ ವರ್ಷದ ಮಿಲಾದ್ ಉನ್ ನಬಿ ಹಬ್ಬದ ಸಂದರ್ಭದ ವಿಡಿಯೋ, ಇತ್ತೀಚಿನ ವಿಡಿಯೋಯೊವೆಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಮಾಹಿತಿಯೊಂದಿಗೆ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ, ಇಂಥಹ ಸುಳ್ಳು ಸುದ್ದಿಯನ್ನು ಯಾರೂ ಹರಡದಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು." ಎಂದು ಬರೆದು ಪೋಸ್ಟ್‌ ಮಾಡಿದ್ದರು.

ಸಿಯಾಸತ್ ದೈನಿಕ ವರದಿಯಲ್ಲೂ ಈ ಕುರಿತು ಕೆಲವೊಂದಷ್ಟು ಲೇಖನಗಳನ್ನು ನಾವು ಕಂಡುಕೊಂಡೆವು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ, ಕಳೆದ ವರ್ಷದ ವಿಡಿಯೋವನ್ನು ಇತ್ತೀಚಿನದ್ದು ಎಂದು ಬಿಂಬಿಸಿ ಪೋಸ್ಟ್‌ ಮಾಡಲಾಗಿದೆ, ಅಷ್ಟೇ ಅಲ್ಲ ವೈರಲ್‌ ವಿಡಿಯೋವಿನಲ್ಲಿ ಕಾಣಿಸುವ ಧ್ವಜವೂ ಸಹ ಪಾಕಿಸ್ತಾನದ ಧ್ವಜವಲ್ಲ ಬದಲಿಗೆ ಇದು ಮಿಲಾದ್-ಉನ್-ನಬಿ ಹಬ್ಬದ ಮೆರವಣಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಇಸ್ಲಾಮಿಕ್ ಧ್ವಜಗಳು.

Claim :  ಟ್ಯಾಂಕ್‌ಬಂಡ್‌ನ ಮೆರವಣಿಗೆಯಲ್ಲಿರುವ ಜನತು ಪಾಕಿಸ್ತಾನದ ಧ್ವಜಗಳನ್ನು ಹಿಡಿದುಕೊಂಡಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?
Claimed By :  Social Media Users
Fact Check :  False
Tags:    

Similar News