ಫ್ಯಾಕ್ಟ್‌ಚೆಕ್‌: ಯುವಕನೊಬ್ಬ ವಿಮಾನದಲ್ಲಿನ ಗಗನಸಖಿಯ ಮೇಲೆ ಕೂಗಾಡಿದ್ದಾನೆ ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

ಯುವಕನೊಬ್ಬ ವಿಮಾನದಲ್ಲಿನ ಗಗನಸಖಿಯ ಮೇಲೆ ಕೂಗಾಡಿದ್ದಾನೆ ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

Update: 2025-11-19 06:03 GMT

​ವಿಮಾನ ಕ್ಯಾಬಿನ್‌ನಲ್ಲಿ ಪ್ರಯಾಣಿಕ ಮತ್ತು ಫ್ಲೈಟ್ ಅಟೆಂಡೆಂಟ್ ನಡುವೆ ನಡೆದ ವಾಗ್ವಾದವನ್ನು ತೋರಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನವಂಬರ್‌ 13, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼA small moment turned into a big problem with flight sir hostʼ ಎಂದು ಬರೆದು ವಿಡಿಯೋವನ್ನು ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಒಂದು ಸಣ್ಣ ಜಗಳ ವಿಮಾನದೊಳಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತುʼ ಎಂದು ಬರೆದಿರುವುದನ್ನು ನೋಡಬಹುದು

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ ವಿಡಿಯೋವನ್ನು ನೀವಿಲ್ಲಿ ನೋಡಬಹುದು​


​ನವಂಬರ್‌ 13, 2025ರಂದು ಇನ್ನೊಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼWATCH | Kalesh Between A Passenger and Air Hostess inside the flight turned into a Big Problem.ʼ ಎಂದು ಬರೆದು ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವೀಕ್ಷಿಸಿ | ವಿಮಾನದೊಳಗೆ ಪ್ರಯಾಣಿಕ ಮತ್ತು ಗಗನಸಖಿಯ ನಡುವಿನ ಜಗಳ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು.ʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


​ನವಂಬರ್‌ 13, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼShame ful Women have No Respect in India this kind of Videos really heartsʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಾಚಿಕೆಗೇಡಿನ ಸಂಗತಿ. ಭಾರತದಲ್ಲಿ ಮಹಿಳೆಯರಿಗೆ ಗೌರವವಿಲ್ಲ ಈ ರೀತಿಯ ವೀಡಿಯೊಗಳು ನಿಜಕ್ಕೂ ನೋವುಂಟುಮಾಡುತ್ತವೆʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


​ನವಂಬರ್‌ 13, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼSuch chapris should be immediately thrown down, that too by grabbing their collar...ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇಂತಹ ಜನರನ್ನು ಕುತ್ತಿಗೆಯ ಪಟ್ಟಿಯನ್ನು ಹಿಡಿದು ಹೊರಗೆ ಹಾಕಬೇಕುʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


​ನವಂಬರ್‌ 12, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼA small moment turned into a big problem with flight sir hostʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


​ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವಂಬರ್‌ 11, 2025ರಂದು ನಾಗ್ಪುರ ಮೂಲದ ವಾಯುಯಾನ ತರಬೇತಿ ಕೇಂದ್ರವಾದ ಫ್ಲೈಹೈ ಇನ್‌ಸ್ಟಿಟ್ಯೂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼA small moment turned into a big scene when a passenger demanded cashew nuts which was not available that time and poha on a short sector flight, where hot meals aren’t served. Despite the commotion, our senior crew stepped in with calmness, professionalism, and a smile handling the situation gracefully and ensuring peace onboard. A perfect example of how true hospitality and presence of mind keep the skies friendly and smooth!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಿಮಾನದಲ್ಲಿ ಇಲ್ಲದಿದ್ದ ಗೋಡಂಬಿಯನ್ನು, ಮತ್ತು ಬಿಸಿ ಊಟವು ಸೇವೆಯ ಭಾಗವಲ್ಲದ ಕಿರು ವಲಯದ ವಿಮಾನದಲ್ಲಿ ಪೋಹಾ ಬೇಕೆಂದು ಪ್ರಯಾಣಿಕರೊಬ್ಬರು ಬಡಿಸಬೇಕೆಂದು ಒತ್ತಾಯಿಸಿದಾಗ ಪ್ರಯಾಣಿಕ ಮತ್ತು ಗಗನಸಖಿಯ ನಡುವಿನ ಜಗಳ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಈ ಜಗಳದಿಂದ ಉದ್ವಿಗ್ನತೆ ಹೆಚ್ಚಾಗಲು ಪ್ರಾರಂಭಿಸಿತು, ಆದರೆ ಅದು ಕ್ಯಾಬಿನ್‌ನ್ನು ಅಸ್ತವ್ಯಸ್ತಗೊಳಿಸುವ ಮೊದಲು, ನಮ್ಮ ಹಿರಿಯ ಸಿಬ್ಬಂದಿ ಶಾಂತ ಆತ್ಮವಿಶ್ವಾಸದಿಂದ ಮುಂದೆ ಬಂದರು. ಬೆಚ್ಚಗಿನ ನಗು, ಸ್ಥಿರ ವೃತ್ತಿಪರತೆ ಮತ್ತು ಗಮನಾರ್ಹ ಮನಸ್ಸಿನ ಉಪಸ್ಥಿತಿಯೊಂದಿಗೆ, ಅವರು ಪರಿಸ್ಥಿತಿಯನ್ನು ಸಲೀಸಾಗಿ ನಿಭಾಯಿಸಿದರು. ಇದರಿಂದ ಕೆಲವೇ ಕ್ಷಣಗಳಲ್ಲಿ, ವಾತಾವರಣವು ಶಾಂತಿಯುತ ಮತ್ತು ಆಹ್ಲಾದಕರವಾಗಿ ಬದಲಾಯಿತು. ನಿಜವಾದ ಆತಿಥ್ಯವು ನೀವು ಏನು ಬಡಿಸುತ್ತೀರಿ ಎಂಬುದರ ಬಗ್ಗೆ ಮಾತ್ರವಲ್ಲ, ನೀವು ಅನಿರೀಕ್ಷಿತ ಸಂದರ್ಭವನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಪುರಾವೆಯಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು. ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ವಿಮಾನಯಾನ ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ವೃತ್ತಿಪರವಾಗಿ ನಿರ್ವಹಿಸಲು ಹೇಗೆ ತರಬೇತಿ ನೀಡಲಾಗಿದೆ ಎಂಬುದನ್ನು ತೋರಿಸುವ ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತದೆ. ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ದೃಶ್ಯಗಳು ಅಂತಹ ಒಂದು ಉದಾಹರಣೆಯಾಗಿದೆ.

​ಇನ್ನು ಈ ಪೇಜ್‌ನ ಬಯೋವಿನಲ್ಲಿ ನೋಡಬಹುದು, ಫ್ಲೈ ಹೈ ಇನ್ಸ್ಟಿಟ್ಯೂಟ್ ವ್ಯಾಪಕ ಶ್ರೇಣಿಯ ಪದವಿ, ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕಾರ್ಯಕ್ರಮಗಳ ಮೂಲಕ ಹೊಂದಿಕೊಳ್ಳುವ, ಸಮತೋಲಿತ ಮತ್ತು ಪ್ರಮಾಣೀಕೃತ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ವರ್ಷಗಳ ಸಮರ್ಪಿತ ಸಂಶೋಧನೆಯ ನಂತರ ವಿನ್ಯಾಸಗೊಳಿಸಲಾದ ಇದರ ಪಠ್ಯಕ್ರಮವು ವಿಮಾನಯಾನ, ಆತಿಥ್ಯ ಮತ್ತು ಪ್ರಯಾಣ ಮತ್ತು ಪ್ರವಾಸೋದ್ಯಮ ನಿರ್ವಹಣಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಎಂದು ಇರುವುದನ್ನು ನೋಡಬಹುದು. ವಿಮಾನ ಕ್ಯಾಬಿನ್‌ನಲ್ಲಿ ಪ್ರಯಾಣಿಕ ಮತ್ತು ಫ್ಲೈಟ್ ಅಟೆಂಡೆಂಟ್ ನಡುವಿನ ನಿಜವಾದ ವಾಗ್ವಾದವನ್ನು ತೋರಿಸಲು ಹೇಳಲಾದ ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಯಾವುದೇ ನೈಜ ಘಟನೆಯನ್ನು ಚಿತ್ರಿಸಿಲ್ಲ ಎಂದು ಡೆಸ್ಕ್ ತೀರ್ಮಾನಿಸಿದೆ.




​​​ಅಷ್ಟೇ ಅಲ್ಲ ವೈರಲ್ ವೀಡಿಯೊದಲ್ಲಿ ಟೋಪಿ ಧರಿಸಿರುವ ಅದೇ ವ್ಯಕ್ತಿ ಹಲವಾರು ಇತರ ವೀಡಿಯೊಗಳಲ್ಲಿ ಪ್ರಯಾಣಿಕನ ಪಾತ್ರ ಮಾಡಿರುವುದನ್ನು ನಾವು ಗಮನಿಸಿದ್ದೇವೆ.


​ಇದರಿಂದ ಸಾಭೀತಾಗಿದ್ದೇನೆಂದರೆ, ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್‌ಡ್‌ ಮಾಡಿರುವ ವೀಡಿಯೊ.

Claim :  ಯುವಕನೊಬ್ಬ ವಿಮಾನದಲ್ಲಿನ ಗಗನಸಖಿಯ ಮೇಲೆ ಕೂಗಾಡಿದ್ದಾನೆ ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News