ಫ್ಯಾಕ್ಟ್‌ಚೆಕ್‌: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಗೃಹ ಸಚಿವ ಅಮಿತ್ ಶಾ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಗೃಹ ಸಚಿವ ಅಮಿತ್ ಶಾ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ

Update: 2025-11-20 03:30 GMT

ಬಿಹಾರ ವಿಧಾನಸಭಾ ಚುನಾವಣೆ 2025ರ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ, ಕೇಂದ್ರ ಚುನಾವಣಾ ಆಯೋದ ಮುಖ್ಯ ಆಯುಕ್ತರಾದ ಜ್ಞಾನೇಶ್​ ಕುಮಾರ್​ ವಿರುದ್ಧ ವಿರೋಧ ಪಕ್ಷಗಳು ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಗೃಹ ಸಚಿವ ಅಮಿತ್ ಶಾರ ಪಾದಗಳಿಗೆ ನಮಸ್ಕರಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼSee, Amit Shah is bowing down like this. He is the Chief Election Commissioner of this country. Under his leadership, he has conducted the last parliamentary elections as Haryana, Maharashtra and Bihar elections very honestly to BJPʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನೋಡಿ, ಅಮಿತ್ ಶಾ ಹೀಗೆ ತಲೆಬಾಗುತ್ತಿದ್ದಾರೆ. ಅವರು ಈ ದೇಶದ ಮುಖ್ಯ ಚುನಾವಣಾ ಆಯುಕ್ತರು. ಅವರ ನಾಯಕತ್ವದಲ್ಲಿ, ಕಳೆದ ಸಂಸತ್ ಚುನಾವಣೆಗಳಾದ ಹರಿಯಾಣ, ಮಹಾರಾಷ್ಟ್ರ ಮತ್ತು ಬಿಹಾರ ಚುನಾವಣೆಗಳನ್ನು ಬಿಜೆಪಿಗೆ ಅತ್ಯಂತ ಪ್ರಾಮಾಣಿಕವಾಗಿ ನಡೆಸಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ನವಂಬರ್‌ 17, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼबिहार चुनाव को जीता कर आपको समर्पित अब कोई क्या उखाड़ सकता । ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಿಹಾರ ಚುನಾವಣೆಗಳನ್ನು ಗೆಲ್ಲಲು ನಿಮ್ಮನ್ನು ಅರ್ಪಿಸಿಕೊಂಡ ಮೇಲೆ ಯಾರಾದರೂ ಏನು ಮಾಡಬಹುದು?ʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼचुनाव आयोग चरणों में! जिन्हें बिहार चुनाव में ऐसा नतीजा क्यों आया इसके बारे में जानना है तो वे इस वीडियो को देखकर सच्चाई को समझ सकते हैं। इस वीडियो में मुख्य चुनाव आयुक्त परम चाटुकार अज्ञानेश कुमार गुप्ता अपने आका तड़ीपार के कदम चूमते हुए दिखाई दे रहें हैं। इससे पहले ये साहब का पर्सनल सेक्रेटरी भी रह चुका है।भारत के संवैधानिक पद पर कार्यरत प्रजातंत्र की रक्षा करने वाले ही प्रजातंत्र निर्मम हत्या कर रहे हैं।ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಚುನಾವಣಾ ಆಯೋಗವು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಿಹಾರ ಚುನಾವಣೆಯ ಫಲಿತಾಂಶವನ್ನು ಅರ್ಥಮಾಡಿಕೊಳ್ಳಲು ಬಯಸುವ ಯಾರಾದರೂ ಈ ವೀಡಿಯೊವನ್ನು ನೋಡುವ ಮೂಲಕ ವಾಸ್ತವವನ್ನು ಗ್ರಹಿಸಬಹುದು. ಇದರಲ್ಲಿ, ಮುಖ್ಯ ಚುನಾವಣಾ ಆಯುಕ್ತರಾದ ಅಜ್ಞಾನೇಶ್ ಕುಮಾರ್ ಗುಪ್ತಾ ಅವರನ್ನು - ಅತಿಯಾದ ನಿಷ್ಠಾವಂತರಾಗಿ ಚಿತ್ರಿಸಲಾಗಿದೆ - ಪ್ರಸ್ತುತ ದೇಶಭ್ರಷ್ಟರಾಗಿರುವ ತಮ್ಮ ಮಾರ್ಗದರ್ಶಕರಿಗೆ ನಮಸ್ಕರಿಸುವುದನ್ನು ತೋರಿಸಲಾಗಿದೆ. ಅವರು ಈ ಹಿಂದೆ ಆಯುಕ್ತರ ವೈಯಕ್ತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವವರು, ಬದಲಾಗಿ, ಅವರು ಎತ್ತಿಹಿಡಿಯಬೇಕಾದ ತತ್ವಗಳನ್ನೇ ದುರ್ಬಲಗೊಳಿಸುತ್ತಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ವೈರಲ್‌ ಆದ ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಐ ಬಳಸಿ ರಚಿಸಲಾಗಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್‌ ವಿಡಿಯೋವಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲೊ ನಮಗೆ ಅಂತಹ ವರದಿಗಳು ಯಾವುದೇ ಕಂಡುಬಂದಿಲ್ಲ. ನಂತರ ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನವಂಬರ್‌ 08, 2023ರಂದು ʼಕಂಟೆಂಟ್‌ ಗಾರ್ಡನ್‌ʼ ಎಂಬ ವೆಬ್‌ಸೈಟ್‌ನಲ್ಲಿ ʼUnion Home Minister Amit Shah being felicitated by Gyanesh Kumarʼ ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ಆದ ಫೋಟೋವನ್ನು ನೋಡಬಹುದು.


ಈ ವರದಿಯಲ್ಲಿ ಜ್ಞಾನೇಶ್ ಕುಮಾರ್ ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಈ ಫೋಟೋ ತೆಗೆಯಲಾಗಿದೆ. ನವೆಂಬರ್ 8, 2023ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರಿ ಸಾವಯವ ಲಿಮಿಟೆಡ್ ಆಯೋಜಿಸಿದ್ದ ಸಹಕಾರಿ ಸಂಸ್ಥೆಗಳ ಮೂಲಕ ಸಾವಯವ ಉತ್ಪನ್ನಗಳನ್ನು ಉತ್ತೇಜಿಸುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಶಾಲು ಹೊದಿಸಿ ಸನ್ಮಾನಿಸುತ್ತಿದ್ದರುʼ ಎಂದು ಬರೆದಿರುವುದನ್ನು ನೋಡಬಹುದು


ನವಂಬರ್‌ 08, 2023ರಂದು ʼMinistry of Cooperation, Government of Indiaʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ ʼNational Symposium on Promotion of Organic Products through Cooperative sector by NCOLʼ ಎಂಬ ಶೀರ್ಷಿಕೆಯನ್ನು ನೀಡಿರುವ 6:39:36 ನಿಮಿಷದ ಸುದೀರ್ಘವಾದ ವಿಡಿಯೋವೊಂದನ್ನು ನಾವಿಲ್ಲಿ ನೋಡಬಹುದು. ಈ ವಿಡಿಯೋವಿನಲ್ಲಿ 01:25:10 ನಿಮಿಷಕ್ಕೆ , ಜ್ಞಾನೇಶ್ ಕುಮಾರ್ ಅಮಿತ್ ಶಾ ಅವರದಿಗೆ ಶಾಲು ನೀಡುತ್ತಿರುವುದು ನೋಡಬಹುದು. ಈ ವಿಡಿಯೋವಿನಲ್ಲಿ ಎಲ್ಲಿಯೂ ಅವರು ಅಮಿತ್‌ ಶಾರವರ ಪಾದಗಳಿಗೆ ನಮಸ್ಕರಿಸುವುದು ನಮಗೆ ಕಾಣಸಿಗಲಿಲ್ಲ. ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್‌ ಆದ ವೀಡಿಯೊದ ಈ ಭಾಗವನ್ನು ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾಗಿದೆ.

Full View

ನಮ್ಮ ಈ ಅನುಮಾನವನ್ನು ಖಚಿತ ಪಡಿಸಿಕೊಳ್ಳಲು ನಾವು ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದೆವು. ವೈರಲ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ನಾವು ಹಲವಾರು ಅಸಂಗತತೆಗಳನ್ನು ಗಮನಿಸಿದ್ದೇವೆ. ವಿಭಿನ್ನ ಕ್ಷಣಗಳಲ್ಲಿ, ಇಬ್ಬರೂ ವ್ಯಕ್ತಿಗಳ ಕೈಗಳು ಮಸುಕಾಗಿ, ಅಸ್ವಾಭಾವಿಕವಾಗಿ ಕಂಡುಬಂದವು. ಇದನ್ನೇ ಸುಳಿವಾಗಿ ತೆಗೆದುಕೊಂಡು ನಾವು ಎಐ ಡಿಟೆಕ್ಟಿವ್‌ ಟೂಲ್‌ ಬಳಸಿ ವಿಡಿಯೋವಿನ ಕೆಲವು ಫ್ರೇಮ್‌ಗಳೊಂದಿಗೆ ಹುಡುಕಾಟ ನಡೆಸಿದೆವು. ​ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 84.7% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.


ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ʼ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 97% ಶತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ನಮಸ್ಕರಿಸುತ್ತಿರುವ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ

Claim :  ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಗೃಹ ಸಚಿವ ಅಮಿತ್ ಶಾ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News