ಫ್ಯಾಕ್ಟ್‌ಚೆಕ್: ರೈಲ್ವೆ ಹಳಿ ದಾಟಲು ನಾಯಿಯೊಂದು ಮಗುವಿಗೆ ಸಹಾಯ ಮಾಡಿದೆ ಎಂದು ಎಐ ವಿಡಿಯೋ ಹಂಚಿಕೆ
ರೈಲ್ವೆ ಹಳಿ ದಾಟಲು ನಾಯಿಯೊಂದು ಮಗುವಿಗೆ ಸಹಾಯ ಮಾಡಿದೆ ಎಂದು ಎಐ ವಿಡಿಯೋ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ನಾಯಿಯೊಂದು ಮಗುವನ್ನು ರಕ್ಷಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋವನ್ನು ನೋಡುವುದಾದರೆ, ಮುಂಬೈ ಸೆಂಟ್ರಲ್ ಸ್ಟೇಷನ್‌ನ ಸಾಮಾನ್ಯ ಜನದಟ್ಟಣೆ ಮತ್ತು ಗದ್ದಲದ ನಡುವೆ, ರೈಲುಗಳು ಗುಡುಗುತ್ತಾ ಹಿಂದೆ ಸರಿಯುತ್ತಿರುವಾಗ ಮತ್ತು ಪ್ಲಾಟ್‌ಫಾರ್ಮ್‌ಗಳ ಉದ್ದಕ್ಕೂ ಪ್ರಯಾಣಿಕರು ಧಾವಿಸುವಾಗ, ಜನಸಂದಣಿಯಿಂದ ವಿಚಲಿತನಾದ ಒಂದು ಚಿಕ್ಕ ಮಗು, ಪ್ಲಾಟ್‌ಫಾರ್ಮ್‌ನ ಅಂಚಿಗೆ ಅಪಾಯಕಾರಿಯಾಗಿ ಬಂದಿರುವುದನ್ನು ನೋಡಬಹುದು. ಅಲ್ಲೇ ಇದ್ದ ನಾಯಿಯೊಂದು ಜೋರಾಗಿ ಬೊಗಳುತ್ತಾ, ಮುಂದಂಕ್ಕೆ ಬಂದು ಮಗುವಿನ ಕಾಲರ್ ಅನ್ನು ತನ್ನ ಹಲ್ಲುಗಳ ನಡುವೆ ನಿಧಾನವಾಗಿ ಹಿಡಿದು, ತನ್ನ ಎಲ್ಲಾ ಶಕ್ತಿಯಿಂದ ಮಗುವನ್ನು ಹಿಂದಕ್ಕೆ ಎಳೆಯುವುದನ್ನು ನೋಡಬಹುದು.
ಅಕ್ಟೋಬರ್ 15, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼBreaking News from Mumbai Cenntral Stationʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅಕ್ಟೋಬರ್ 16, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼજાનવર ની માનવ પ્રત્યે વફાદારીʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮನುಷ್ಯರ ಮೇಲೆ ಪ್ರಾಣಿಗಳ ನಿಷ್ಠೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು
ವೈರಲ್ ಆದ ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ವೈರಲ್ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಅಕ್ಟೋಬರ್ 08, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼBreaking News from Mumbai Central Station! DailyNews4- A heartwarming act of bravery unfolded at Mumbai Central today when a stray dog leapt into action to save a young child from an oncoming train. Eyewitnesses reported the dog barking frantically as it grabbed the child’s collar and yanked them out of harm’s way just moments before the train zoomed by. The quick-thinking dog became an instant hero as passengers cheered, some filming the heroic rescue. Authorities are praising the dog’s bravery, while the child’s grateful family showers the canine with love. Mumbai’s latest hero may not wear a uniform, but he’s certainly earned the title of “Guard Dog of the Year.” ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮುಂಬೈ ಸೆಂಟ್ರಲ್ ಸ್ಟೇಷನ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಚಿಕ್ಕ ಮಗುವನ್ನು ರಕ್ಷಿಸಿದ ನಂತರ ಇಂದು ಬೀದಿ ನಾಯಿಯೊಂದು ಅಸಂಭವ ನಾಯಕನಾಗಿದ್ದು, ಧೈರ್ಯ ಮತ್ತು ಪ್ರವೃತ್ತಿಯ ಗಮನಾರ್ಹ ಪ್ರದರ್ಶನ ನೀಡಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲು ಸಮೀಪಿಸುತ್ತಿದ್ದಾಗ ಮಗು ರೈಲ್ವೆ ಹಳಿಗಳ ಬಳಿ ಅಪಾಯಕಾರಿಯಾಗಿ ಅಲೆದಾಡುತ್ತಿತ್ತು. ಯಾರಾದರೂ ಪ್ರತಿಕ್ರಿಯಿಸುವ ಮೊದಲು, ಪ್ಲಾಟ್‌ಫಾರ್ಮ್ ಬಳಿ ಓಡಾಡುತ್ತಿದ್ದ ಬೀದಿ ನಾಯಿ ಉಗ್ರವಾಗಿ ಬೊಗಳಲು ಪ್ರಾರಂಭಿಸಿತು. ಒಂದು ಕ್ಷಣದಲ್ಲಿ, ನಾಯಿ ಮುಂದಕ್ಕೆ ಧಾವಿಸಿ, ಮಗುವಿನ ಕಾಲರ್ ಅನ್ನು ಹಲ್ಲುಗಳಿಂದ ಹಿಡಿದು ಸುರಕ್ಷಿತ ಸ್ಥಳಕ್ಕೆ ಎಳೆದಿದೆ. ಹೃದಯ ವಿದ್ರಾವಕ ರಕ್ಷಣೆಯು ಪ್ರಯಾಣಿಕರನ್ನು ವಿಸ್ಮಯಗೊಳಿಸಿತು. ಹಲವಾರು ಪ್ರಯಾಣಿಕರು ಚಪ್ಪಾಳೆ ತಟ್ಟಿದರು, ಕೆಲವರು ಆ ವೀರ ಕ್ಷಣವನ್ನು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿದರು. "ಇದೆಲ್ಲವೂ ತುಂಬಾ ವೇಗವಾಗಿ ಸಂಭವಿಸಿತು" ಎಂದು ಪ್ರತ್ಯಕ್ಷದರ್ಶಿ ರಮೇಶ್ ಅಯ್ಯರ್ ಹೇಳಿದರು. "ನಮ್ಮಲ್ಲಿ ಯಾರಿಗೂ ತಿಳಿಯುವ ಮೊದಲೇ ನಾಯಿ ಅಪಾಯವನ್ನು ಅರ್ಥಮಾಡಿಕೊಂಡಂತೆ ತೋರುತ್ತಿತ್ತು. ಅದು ನಿಜವಾಗಿಯೂ ಆ ಮಗುವಿನ ಜೀವವನ್ನು ಉಳಿಸಿತು." ಎಂದು ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳು ನಾಯಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಪ್ರಾಣಿಗೆ ಪಶುವೈದ್ಯಕೀಯ ಆರೈಕೆ, ಆಹಾರ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸಲು ಯೋಜನೆಗಳು ನಡೆಯುತ್ತಿವೆ. ಕೃತಜ್ಞತೆಯಿಂದ ತುಂಬಿ ತುಳುಕುತ್ತಿದ್ದ ಮಗುವಿನ ಕುಟುಂಬವು ನಾಯಿಯನ್ನು ತಮ್ಮ "ಗಾರ್ಡಿಯನ್ ಏಂಜಲ್" ಎಂದು ಬಣ್ಣಿಸಿದರು. "ಈ ನಾಯಿ ನನ್ನ ಜಗತ್ತಾದ ನನ್ನ ಮಗನ್ನು ಉಳಿಸಿದನು ಎಂದು ಹೇಳಿದ್ದಾರೆ. ರಕ್ಷಣೆಯ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ಮುಂಬೈನ ಜನರು ಈ ನಾಯಿಯನ್ನು ನಗರದ ಹೊಸ ನಾಯಕ ಎಂದು ಶ್ಲಾಘಿಸುತ್ತಿದ್ದಾರೆ - ಅದಕ್ಕೆ "ಗಾರ್ಡ್ ಡಾಗ್ ಆಫ್ ದಿ ಇಯರ್" ಎಂಬ ಪ್ರೀತಿಯ ಬಿರುದನ್ನು ನೀಡಿದ್ದಾರೆ ಕೊನೆಗೆ. ವಿವರಣೆಯನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ವೀಡಿಯೊವನ್ನು AI ವೀಡಿಯೊ ಪ್ಲಾಟ್‌ಫಾರ್ಮ್, Higgsfield.ai ಬಳಸಿ ರಚಿಸಲಾಗಿದೆ ಎಂದು ಕಂಡುಬಂದಿದೆʼ ಎಂದು ಬರೆದಿರುವುದನ್ನು ನೋಡಬಹುದು.
ನಾವು ಯೂಟ್ಯೂಬ್ ಚಾನೆಲ್ ಮಲ್ಟಿವರ್ಸ್ ಮ್ಯಾಟ್ರಿಕ್ಸ್‌ನ ಬಯೋ ವಿಭಾಗವನ್ನು ಸಹ ಪರಿಶೀಲಿಸಿದೆ, ಅಲ್ಲಿ ಬಳಕೆದಾರರು ಚಾನೆಲ್‌ನಲ್ಲಿ ಹಂಚಿಕೊಂಡ ವಿಷಯವನ್ನು AI ಮೂಲಕ ರಚಿಸಲಾಗಿದೆ ಎಂದು ಹೇಳಿದ್ದಾರೆ.
ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು. ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 97% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಹೈವ್ ಮಾಡರೇಶನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.