ಫ್ಯಾಕ್ಟ್‌ಚೆಕ್‌: ಟಾಟಾ ಮತ್ತು ಟೆಸ್ಲಾ ಕಂಪನಿ ಲೆವಿಟೇಟಿಂಗ್ ಶೂಗಳನ್ನು ಬಿಡುಗಡೆ ಮಾಡಿದೆ ಎಂದು ಎಐ ವಿಡಿಯೋ ಹಂಚಿಕೆ

ಟಾಟಾ ಮತ್ತು ಟೆಸ್ಲಾ ಕಂಪನಿ ಲೆವಿಟೇಟಿಂಗ್ ಶೂಗಳನ್ನು ಬಿಡುಗಡೆ ಮಾಡಿದೆ ಎಂದು ಎಐ ವಿಡಿಯೋ ಹಂಚಿಕೆ

Update: 2025-11-19 06:00 GMT

​ಟಾಟಾ ಗ್ರೂಪ್ ಮತ್ತು ಟೆಸ್ಲಾ ಕಂಪನಿಗಳು ಗಾಳಿಯಲ್ಲಿ ತೇಲುವಂತೆ ಮಾಡುವ ಬೂಟುಗಳನ್ನು ಬಿಡುಗಡೆ ಮಾಡಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್‌ ಆಗುತ್ತಿದೆ. ವಿಡಿಯೋವಿನಲ್ಲಿ ಒಬ್ಬ ವ್ಯಕ್ತಿಯು ನೆಲದಿಂದ ಕೆಲವು ಇಂಚುಗಳಷ್ಟು ಎತ್ತರದಲ್ಲಿ ಹಾರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವನ್ನು ಫೇಸ್‌ಬುಕ್‌ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼUnreal innovation from TATA! The company has just unveiled its groundbreaking “Levitating Shoe” a major leap toward the future of walking. Designed with advanced magnet-based tech, these shoes give the feeling of walking on air. Comfort meets futuristic style like never before! The future really is here and it’s walking right beside usʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋನ್ನು ಹಂಚಿಕೊಂಡಿದ್ದಾರೆ. ಶೀರ್ಷಿಎಕಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಟಾಟಾ ತನ್ನ ಹೊಸ "ಲೆವಿಟೇಟಿಂಗ್ ಶೂ" ಅನ್ನು ಪರಿಚಯಿಸಿದೆ, ಇದು ಭವಿಷ್ಯದ ನಡಿಗೆಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಶೂಗಳು ವಿಶೇಷ ಮ್ಯಾಗ್ನೆಟ್ ತಂತ್ರಜ್ಞಾನವನ್ನು ಬಳಸುತ್ತವೆ, ಅದು ನೀವು ಗಾಳಿಯಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಅವು ಆರಾಮದಾಯಕ, ಸೊಗಸಾದ ಮತ್ತು ಭವಿಷ್ಯದವು. ಭವಿಷ್ಯ ಇಲ್ಲಿದೆ ಮತ್ತು ಅದು ನಮ್ಮೊಂದಿಗೆ ನಡೆಯುತ್ತಿದೆʼ ಎಂದು ಬರೆದಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಹಿಂದೆ ಸ್ಕ್ರೀನ್‌ನಲ್ಲಿ ಟಾಟಾ ಕಂಪನಿಯ ಹೆಸರು ಕಾಣಬಹುದು

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


​ನವಂಬರ್‌ 06, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAt a buzzing Indian tech expo, TATA stunned the crowd by revealing a pair of levitating shoes — sneakers that actually hover a few inches above the ground! As the presenter glided smoothly across the stage, jaws dropped and cameras rolled. The futuristic footwear uses advanced magnetic propulsion tech to make walking look like floating on air. Viewers are calling it “India’s Iron Man moment” — proof that the future of motion is proudly Made in Indiaʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತದಲ್ಲಿ ನಡೆದ ಕಾರ್ಯನಿರತ ತಂತ್ರಜ್ಞಾನ ಪ್ರದರ್ಶನದಲ್ಲಿ, ಟಾಟಾ ನೆಲದಿಂದ ಕೆಲವು ಇಂಚುಗಳಷ್ಟು ಎತ್ತರದಲ್ಲಿ ತೇಲುತ್ತಿರುವ ಶೂಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು! ನಿರೂಪಕ ವೇದಿಕೆಯಾದ್ಯಂತ ಸರಾಗವಾಗಿ ಚಲಿಸಿದನು, ಪ್ರೇಕ್ಷಕರನ್ನು ಬೆರಗುಗೊಳಿಸಿದನು. ಈ ಭವಿಷ್ಯದ ಶೂಗಳು ವಿಶೇಷ ಕಾಂತೀಯ ತಂತ್ರಜ್ಞಾನವನ್ನು ಬಳಸುತ್ತವೆ, ಅದು ನಡಿಗೆಯನ್ನು ತೇಲುತ್ತಿರುವಂತೆ ಕಾಣುವಂತೆ ಮಾಡುತ್ತದೆ. ಜನರು ಇದನ್ನು "ಭಾರತದ ಐರನ್ ಮ್ಯಾನ್ ಕ್ಷಣ" ಎಂದು ಕರೆಯುತ್ತಿದ್ದಾರೆ, ಇದು ಭವಿಷ್ಯದಲ್ಲಿ ಭಾರತದಲ್ಲಿ ಚಲನೆಯನ್ನು ಮಾಡಲಾಗುತ್ತಿದೆ ಎಂಬುದರ ಹೆಮ್ಮೆಯ ಸಂಕೇತವಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಹಿಂದೆ ಸ್ಕ್ರೀನ್‌ನಲ್ಲಿ ಟಾಟಾ ಕಂಪನಿಯ ಹೆಸರು ಕಾಣಬಹುದು

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼBreaking Tech Alert. “TESLA GLIDE” — The Levitating Shoe That Defies Gravity! Unveiled at IICE 2025, this next-gen innovation from Tesla is redefining the future of motion with magnetic levitation + AI control. The era of hover walking has begunʼ ಎಂದು ಬರೆದಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಹಿಂದೆ ಸ್ಕ್ರೀನ್‌ನಲ್ಲಿ ಟೆಸ್ಲಾ ಹೆಸರು ಕಾಣಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್ ಟೆಕ್ ನ್ಯೂಸ್: ಟೆಸ್ಲಾ ಕಂಪನಿಯು "ಟೆಸ್ಲಾ ಗ್ಲೈಡ್" ಅನ್ನು ಪರಿಚಯಿಸಿದೆ, ಇದು ವಾಸ್ತವವಾಗಿ ಗಾಳಿಯಲ್ಲಿ ತೇಲುತ್ತಿರುವ ಶೂ! IICE 2025 ರಲ್ಲಿ ಬಹಿರಂಗಪಡಿಸಲಾದ ಈ ಹೊಸ ಆವಿಷ್ಕಾರವು ನಾವು ಚಲಿಸುವ ವಿಧಾನವನ್ನು ಬದಲಾಯಿಸಲು ಮ್ಯಾಗ್ನೆಟಿಕ್ ಲೆವಿಟೇಶನ್ ಮತ್ತು AI ಅನ್ನು ಬಳಸುತ್ತದೆ. ಹೂವರ್ ವಾಕಿಂಗ್ ಯುಗವು ಅಧಿಕೃತವಾಗಿ ಪ್ರಾರಂಭವಾಗಿದೆ.ʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಟಾಟಾ ಗ್ರೂಪ್ ಅಥವಾ ಟೆಸ್ಲಾ ಬಿಡುಗಡೆ ಗಾಳಿಯಲ್ಲಿ ತೇಲುವ ಶೂಗಳನ್ನು ಬಿಡುಗಡೆ ಮಾಡಿದೆ ಎಂದು ಎಐ ವಿಡಿಯೋ ಹಂಚಿಕೆ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಟಾಟಾ ಗ್ರೂಪ್‌ ಅಥವಾ ಟೆಸ್ಲಾ ಲೆವಿಟೇಟಿಂಗ್ ಶೂಗಳನ್ನು ಬಿಡುಗಡೆ ಮಾಡಿದೆ ಎಂಬ ವರದಿಗಳು ನಮಗೆ ಯಾವುದೇ ವಿಶ್ವಾಸಾರ್ಹ ಮೂಲಗಳಿಂದ ಕಂಡುಬಂದಿಲ್ಲ. ಒಂದು ವೇಳೆ ನಿಜವಾಗಿ ಇಂತಹ ಶೂಗಲನ್ನು ಬಿಡುಗಡೆ ಮಾಡಿದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯನ್ನು ನಾವು ನೋಡಬಹುದಾಗಿತ್ತು. ಆದರೆ ನಮಗೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ನಾವು ಟಾಟಾ ಗ್ರೂಪ್ ಮತ್ತು ಟೆಸ್ಲಾದ ಅಧಿಕೃತ ವೆಬ್‌ಸೈಟ್‌ಗಳನ್ನು ಸಹ ಪರಿಶೀಲಿಸಿದ್ದೇವೆ , ಆದರೆ ಅಂತಹ ಬೆಳವಣಿಗೆಯ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಹೆಚ್ಚುವರಿಯಾಗಿ, ಇಂಡಿಯನ್ ಇಂಟರ್ನ್ಯಾಷನಲ್ ಕನ್ಸ್ಯೂಮರ್ ಎಕ್ಸ್‌ಪೋ 2025 ಎಂಬ ಕಾರ್ಯಕ್ರಮ ಅಸ್ತಿತ್ವದಲ್ಲಿದೆ ಎಂದು ಸೂಚಿಸುವ ಯಾವುದೇ ಮಾಹಿತಿ ನಮಗೆ ಸಿಗಲಿಲ್ಲ.

ಈ ವಿಡಿಯೋ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವೈರಲ್‌ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಕುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನವಂಬರ್‌ 06, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼ This video is AI generated. The product isnt realʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಈ ವಿಡಿಯೋವನ್ನು ಎಐ ಬಳಸಿ ರಚಿಸಲಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು.

ಇನ್ನು ಈ ಖಾತೆಯ ಬಯೋವಿನಲ್ಲಿ ಬಳಕೆದಾರ ಸಾಮಾಜಿಕ ಮಾಧ್ಯಮ ವಿಷಯ ತಜ್ಞರು ಮತ್ತು ಮಲ್ಟಿವರ್ಸ್ ಮ್ಯಾಟ್ರಿಕ್ಸ್ ಪುಟಕ್ಕಾಗಿ ಮತ್ತು ಚಲನಚಿತ್ರಗಳು ಮತ್ತು ಬ್ರ್ಯಾಂಡ್‌ಗಳಿಗಾಗಿ AI ದೃಶ್ಯಗಳನ್ನು ರಚಿಸುತ್ತಾರೆ ಎಂದು ಬರೆದಿರುವುದನ್ನು ನೋಡಬಹುದು. ಇದೇ ರೀತಿಯ ಎಐ ರಚಿತ ವೀಡಿಯೊಗಳನ್ನು ಈ ಪೇಜ್‌ನಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ಇಲ್ಲಿ ನೋಡಬಹುದು.


ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌́ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 99% ಶತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.




​ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.9% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.




​ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.




​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ಟೆಸ್ಲಾ ಅಥವಾ ಟಾಟಾ ಕಂಪನಿ ಯಾವುದೇ ಲೆವಿಟೇಟಿಂಗ್ ಶೂಗಳನ್ನು ಬಿಡುಗಡೆ ಮಾಡಿಲ್ಲ.

Claim :  ಟಾಟಾ ಮತ್ತು ಟೆಸ್ಲಾ ಕಂಪನಿ ಲೆವಿಟೇಟಿಂಗ್ ಶೂಗಳನ್ನು ಬಿಡುಗಡೆ ಮಾಡಿದೆ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News