ಫ್ಯಾಕ್ಟ್‌ಚೆಕ್‌: ತಾಜ್‌ ಮಹಲ್‌ನಲ್ಲಿ ಭಾರೀ ಬೆಂಕಿ ಅನಾಹುತ ಎಂದು ಎಐ ವಿಡಿಯೋ ಹಂಚಿಕೆ

ತಾಜ್‌ ಮಹಲ್‌ನಲ್ಲಿ ಭಾರೀ ಬೆಂಕಿ ಅನಾಹುತ ಎಂದು ಎಐ ವಿಡಿಯೋ ಹಂಚಿಕೆ

Update: 2025-11-16 06:33 GMT

ಪ್ರಸ್ತುತ ತಾಜ್ ಮಹಲ್ ಬಗ್ಗೆ ತುಂಬಾ ಚರ್ಚೆಗಳಾಗುತ್ತಿವೆ. ತಾಜ್‌ ಮಹಲ್‌ ಎಂದರೆ ಅದನ್ನು ಪ್ರೀತಿಯ ಸಂಕೇತ ಎನ್ನಲಾಗುತ್ತದೆ. ತಾಜ್ ಮಹಲ್ ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ್ದಾನೆ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ದೇಶದ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ. ವಿಡಿಯೋದಲ್ಲಿ, ನೂರಾರು ಸಂದರ್ಶಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಬೆಂಕಿಯನ್ನು ಸೆರೆಹಿಡಿಯುತ್ತಿರುವುದು ಕಂಡುಬರುತ್ತದೆ. ವಿಡಿಯೋ ನೋಡಿದ ಯಾರಾದರೂ ಭಯಭೀತರಾಗುತ್ತಾರೆ. ಅತ್ಯುತ್ತಮ ಭದ್ರತಾ ವ್ಯವಸ್ಥೆಗಳನ್ನು ಹೊಂದಿರುವ ತಾಜ್ ಮಹಲ್ ಹೇಗೆ ಬೆಂಕಿಗೆ ಆಹುತಿಯಾಯಿತು ಎಂದು ಎಲ್ಲರೂ ಗೊಂದಲಕ್ಕೊಳಗಾಗಿದ್ದಾರೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ. ವೈರಲ್‌ ಆದ ವಿಡಿಯೋವಿನಲ್ಲಿ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ನವಂಬರ್‌ 04, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼTaj Mahal Me Aag Lag gyiʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾಜ್ ಮಹಲ್‌ನಲ್ಲಿ ಸಂಭವಿಸಿದ ಬೆಂಕಿಯನ್ನು ವೀಡಿಯೊದಲ್ಲಿ ಹಲವು ಕೋನಗಳಿಂದ ತೋರಿಸಲಾಗಿದೆ. ಮೊದಲ ನೋಟದಲ್ಲೇ ಇದು ಕುತೂಹಲ ಮೂಡಿಸುತ್ತದೆ

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಅಕ್ಟೋಬರ್‌ 31, 2025ರಂದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʼताज महल में किस ने आग लगाई ?ʼ ಎಂಬ ಶೀರ್ಷಿಕೆಯೊಂದಿಗೆ ತಾಜ್‌ಮಹಲ್‌ಗೆ ಬೆಂಕಿ ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼತಾಜ್ ಮಹಲ್ ಗೆ ಬೆಂಕಿ ಹಚ್ಚಿದವರು ಯಾರು?ʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ವೈರಲ್‌ ಆದ ವಿಡಿಯೋವಿನ್ನು ನೀವಿಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್‌ ಆದ ವಿಡಿಯೋಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ  ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಆಜ್‌ತಕ್‌ ವೆಬ್‌ಸೈಟ್‌ನಲ್ಲಿ ʼताजमहल के दक्षिणी गेट के पास लगी आग, उठा धुएं का गुबार, सामने आई ये वजहʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ತಾಜ್ ಮಹಲ್‌ನ ದಕ್ಷಿಣ ದ್ವಾರದ ಬಲಭಾಗದಲ್ಲಿರುವ ಕೋಣೆಗಳ ಮೇಲೆ ವಿದ್ಯುತ್ ತಂತಿ ಹಾದುಹೋಯಿತು  . ಆ ಮಾರ್ಗದಲ್ಲಿರುವ ಒಂದು ಸಂಪರ್ಕವು ಇದ್ದಕ್ಕಿದ್ದಂತೆ ಹೊತ್ತಿಕೊಂಡಿತು, ಇದರಿಂದಾಗಿ, ಹೊಗೆ ಹರಡಿತು. ಪ್ಲಾಸ್ಟಿಕ್ ಸಂಪರ್ಕದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಸ್ವಲ್ಪ ಸಮಯದವರೆಗೆ ಹೊಗೆಯ ಮೋಡ ಆವರಿಸಿತು. ಬೆಳಿಗ್ಗೆ ಸುಮಾರು 8 ಗಂಟೆಗೆ ತಾಜ್‌ಮಹಲ್‌ ಬಳಿ ಟೊರೆಂಟ್ ಪವರ್‌ನ ಎಲ್‌ಟಿ ಲೈನ್‌ನಲ್ಲಿ ಸ್ಪಾರ್ಕ್ ಉಂಟಾಗಿ, ಪ್ಲಾಸ್ಟಿಕ್ ಜಾಯಿಂಟರ್‌ಗೆ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಆ ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಟೊರೆಂಟ್ ಪವರ್‌ಗೆ ಮಾಹಿತಿ ನೀಡಿದರು. ಟೊರೆಂಟ್ ಪವರ್‌ನ ತಂಡ ಸ್ಥಳಕ್ಕೆ ಧಾವಿಸಿ, ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ, ತಕ್ಷಣವೇ ದುರಸ್ತಿ ಕಾರ್ಯ ಕೈಗೊಂಡಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ಘಟನೆಯಿಂದ ತಾಜ್ ಮಹಲ್ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲʼ ಎಂದು ವರದಿಯಾಗಿರುವುದನ್ನು ನೋಡಬಹುದು.


ಅಕ್ಟೋಬರ್‌ 13, 2025ರಂದು ʼಇಂಡಿಯಾ ಟಿವಿ ನ್ಯೂಸ್ʼ ವೆಬ್‌ಸೈಟ್‌ನಲ್ಲಿ ʼFire breaks out at Taj Mahal premises, flames erupt near South Gateʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದಂತೆ, ಆಗ್ರಾದ ತಾಜ್ ಮಹಲ್ ಸಂಕೀರ್ಣದ ದಕ್ಷಿಣ ದ್ವಾರದ ಬಳಿ ಭಾನುವಾರ ಸಣ್ಣ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿಯ ಪ್ರಕಾರ, ಈ ಘಟನೆ ಮುಖ್ಯ ಗುಮ್ಮಟದಿಂದ ಸುಮಾರು 300 ಮೀಟರ್ ದೂರದಲ್ಲಿ ಸಂಭವಿಸಿದೆ ಮತ್ತು ಸ್ಮಾರಕದ ದಕ್ಷಿಣ ದ್ವಾರದ ಬಳಿ ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು ಮತ್ತು ಸ್ಮಾರಕಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದರು. ಭಾನುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಪ್ರಾರಂಭವಾಯಿತು ಎಂದು ವರದಿಯಾಗಿದೆ, ಆದರೆ ಒಂದು ದಿನದ ನಂತರ ಸೋಮವಾರ ವೀಡಿಯೊ ಕಾಣಿಸಿಕೊಂಡಿತು. ದಕ್ಷಿಣ ದ್ವಾರದ ಬಳಿ ಇದ್ದಕ್ಕಿದ್ದಂತೆ ಕಿಡಿ ಕಾಣಿಸಿಕೊಂಡು ಜನರು ಸ್ವಲ್ಪ ಸಮಯದವರೆಗೆ ಭಯಭೀತರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದನ್ನು ತ್ವರಿತವಾಗಿ ನಂದಿಸಲಾಯಿತು. ಸ್ಮಾರಕಕ್ಕೆ ಯಾವುದೇ ಹಾನಿಯಾಗಿಲ್ಲʼ ಎಂದು ವರದಿಯಾಗಿರುವುದನ್ನು ನೋಡಬಹುದು.


ಮತ್ತಷ್ಟು ಹುಡುಕಾಟ ನಡೆಸಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸೆಪ್ಟೆಂಬರ್ 29 ರಂದು ಆಡ್ರಿಯನ್ ಜೀ ಎಂಬ ಫೇಸ್‌ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋವಿಗೆ ಶೀರ್ಷಿಕೆಯಾಗಿ ʼಆಗ್ರಾದಲ್ಲಿ ನಿಂತು, ಪ್ರಕಾಶಮಾನವಾದ ದಿನದಂದು ತಾಜ್ ಮಹಲ್ ಕಡೆಗೆ ನಡೆದುಕೊಂಡು ಹೋಗುವುದನ್ನು ಊಹಿಸಿ, ಮೇಲಕ್ಕೆ ನೋಡಿ ಯೋಚಿಸಲಾಗದದನ್ನು ನೋಡಿ. ಒಂದು ಕಾಲದಲ್ಲಿ ಶಾಶ್ವತ ಪ್ರೀತಿಯ ಸಂಕೇತದಂತೆ ಹೊಳೆಯುತ್ತಿದ್ದ ಬಿಳಿ ಅಮೃತಶಿಲೆಯನ್ನು ಈಗ ಬೆಂಕಿ ನುಂಗಿದೆ, ಕಪ್ಪು ಹೊಗೆ ಆಕಾಶಕ್ಕೆ ಸುರಿಯುತ್ತಿದೆ. ಜನಸಮೂಹ ಮುಂದಕ್ಕೆ ಒತ್ತುತ್ತದೆ, ಕೆಲವರು ಅಪನಂಬಿಕೆಯಲ್ಲಿ ಹೆಪ್ಪುಗಟ್ಟಿದ್ದಾರೆ, ಇತರರು ಓಡುತ್ತಿದ್ದಾರೆ, ಇತರರು ಆ ಕ್ಷಣವನ್ನು ಸೆರೆಹಿಡಿಯಲು ತಮ್ಮ ಫೋನ್‌ಗಳನ್ನು ಎತ್ತುತ್ತಿದ್ದಾರೆ. ಚಿತ್ರ ನಿರ್ಮಾಪಕ ಅವ್ಯವಸ್ಥೆಯ ಮೂಲಕ ತಳ್ಳುತ್ತಿದ್ದಂತೆ ಕ್ಯಾಮೆರಾ ನಡುಗುತ್ತದೆ, ಪ್ರತಿ ಹೆಜ್ಜೆಯೊಂದಿಗೆ ಫ್ರೇಮ್ ನಡುಗುತ್ತದೆ, ಗುಮ್ಮಟದ ಮೂಲಕ ಹರಿದುಹೋಗುವ ಜ್ವಾಲೆಗಳನ್ನು ಜೂಮ್ ಮಾಡುತ್ತದೆ. ಗೊಂದಲದಲ್ಲಿ ಈ ರೀತಿಯ ಹೆಗ್ಗುರುತನ್ನು ನೋಡುವುದರಲ್ಲಿ ಏನೋ ಕಾಡುತ್ತಿದೆ. ಪ್ರೀತಿ, ಸೌಂದರ್ಯ ಮತ್ತು ಸ್ಮರಣೆಗಾಗಿ ನಿರ್ಮಿಸಲಾದ ಕಟ್ಟಡ ಅವ್ಯವಸ್ಥೆಗೆ ಇಳಿಸಲಾಗಿದೆ. ಮತ್ತು ಇನ್ನೂ, ಹೊಗೆ ಮತ್ತು ಭಯದ ಕೆಳಗೆ, ಒಂದು ವಿಚಿತ್ರವಾದ ಜ್ಞಾಪನೆ ಇದೆ: ಕಲ್ಲು ಕೂಡ ಅಲ್ಲ, ಯಾವುದೂ ಶಾಶ್ವತವಲ್ಲ. ನಮಗೆ ನೀಡಲಾದ ಸಮಯದಲ್ಲಿ ನಾವು ಹೇಗೆ ಬದುಕಲು ಮತ್ತು ಪ್ರೀತಿಸಲು ಆರಿಸಿಕೊಳ್ಳುತ್ತೇವೆ ಎಂಬುದು ಶಾಶ್ವತವಾಗಿದೆ. ಜ್ವಾಲೆಗಳು ಸ್ಪಷ್ಟವಾದಾಗ, ಉಳಿದಿರುವುದು ಕೇವಲ ಅವಶೇಷಗಳು ಅಥವಾ ಅಮೃತಶಿಲೆಯಲ್ಲ ಇದು ಜನರು ಹೊತ್ತಿರುವ ಕಥೆಗಳು. ಸ್ಥಿತಿಸ್ಥಾಪಕತ್ವ. ಕುಸಿತದ ಎದುರು ನಿಂತು ಹೇಳುವ ಆಯ್ಕೆ, ಈ ಕ್ಷಣ ನನ್ನನ್ನು ಮುರಿಯುವುದಿಲ್ಲ. ಬಹುಶಃ ಈ ರೀತಿಯ ದರ್ಶನವನ್ನು ನೋಡುವುದರಲ್ಲಿ ಪಾಠ ಅದೇ ಆಗಿರಬಹುದು: ವಸ್ತುಗಳು ಎಷ್ಟು ಬೇಗನೆ ಕಳೆದುಹೋಗಬಹುದು ಮತ್ತು ಮುಖ್ಯವಾದ ವಿಷಯಗಳನ್ನು ಸತ್ಯ, ಉದ್ದೇಶ ಮತ್ತು ನಾವು ಉಚಿತವಾಗಿ ನೀಡುವ ಪ್ರೀತಿಯನ್ನು ಎಷ್ಟು ಆಳವಾಗಿ ಹಿಡಿದಿಟ್ಟುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳುವುದು. ಎಂದು ಬರೆದಿರುವುದನ್ನು ನೋಡಬಹುದು. ನಾವು ಆಡ್ರಿಯನ್ ಖಾತೆಯನ್ನು ಪರಿಶೀಲಿಸಿದಾಗ, ಆತನ ಬಯೋವಿನಲ್ಲಿ ಎಐನಿಂದ ರಚಿಸಲಾಗಿರುವ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ರಚಿಸುವುದನ್ನು ಹೇಳಿಕೊಡುತ್ತಾರೆ ಎಂದು ತಿಳಿದುಬಂದಿದೆ. ಆಡ್ರಿಯನ್‌ಗೆ 2 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ ಮತ್ತು ಈ ಹಿಂದೆ ಅಂತಹ ಅನೇಕ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.

Full View



ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್‌ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವಿಡಿಯೋದಲ್ಲಿ ಕಾಣುವ ಕೆಲವು ವ್ಯಕ್ತಿಗಳ ವಿಡಿಯೋವಿನ ಕೆಲವು ಫ್ರೇಮ್‌ಗಳಲ್ಲಿ ಕಾಣೆಯಾಗುವುದನ್ನು ಗಮನಿಸಿದರೆ ನಮಗೆ ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಅನುಮಾನ ಬಂದಿತು. ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 99% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ಇತ್ತೀಚಿಗೆ ತಾಜ್‌ಮಹಲ್‌ಗೆ ಬೆಂಕಿ ಹತ್ತಿರುವ ಸುದ್ದಿ ಯಾವ ಸುದ್ದಿ ಮಾದ್ಯಮದಲ್ಲೂ ವರದಿಯಾಗಿಲ್ಲ.

Claim :  ತಾಜ್‌ ಮಹಲ್‌ನಲ್ಲಿ ಭಾರೀ ಬೆಂಕಿ ಅನಾಹುತ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News