ಫ್ಯಾಕ್ಟ್‌ಚೆಕ್:‌ ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿನ ಪ್ರಸ್ತುತ ಮಾಲಿನ್ಯದ ಪರಿಸ್ಥಿತಿ ಎಂದು ಚೀನಾದ ಚಿತ್ರಗಳು ಹಂಚಿಕೆ

ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿನ ಪ್ರಸ್ತುತ ಮಾಲಿನ್ಯದ ಪರಿಸ್ಥಿತಿ ಎಂದು ಚೀನಾದ ಚಿತ್ರಗಳು ಹಂಚಿಕೆ

Update: 2025-11-15 04:00 GMT

​ಪ್ರತಿವರ್ಷ ಚಳಿಗಾಲ ಶುರುವಾಗ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿ ಮಂದಿಗೆ ಉಸಿರಾಡುಲು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಇದಕ್ಕೆ ಕಾರಣ ಕಳಪೆ ವಾಯು ಗುಣ ಮಟ್ಟ, ಕಳೆದ ಕೆಲ ವರ್ಷಗಳಿಂದ ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತ ಬಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸಿಎಂ ರೇಖಾ ಗುಪ್ತಾ ನೇತೃತ್ವದ ಸರ್ಕಾರ ಹರಸಾಹಸ ಪಡುತ್ತಿದೆ. ಹೀಗಿರುವಾಗಲೇ ದೆಹಲಿ ವಾಯು ಗುಣಮಟ್ಟದ ಬಗ್ಗೆ ಸುಪ್ರೀಂ ಕೋರ್ಟ್​ ಎಚ್ಚರಿಕೆಯ ಗಂಟೆ ಬಾರಿಸಿದೆ. ಇತ್ತೀಚಿನ ದಿನಗಳಲ್ಲಿ ವಲಸಿಗರ ಸ್ವರ್ಗವಾಗುತ್ತಿರುವ ಬೆಂಗಳೂರು ಸಹ ವಾಯು ಮಾಲಿನ್ಯದಲ್ಲಿ 2ನೇ ದೆಹಲಿ ಆಗುತ್ತಿದ್ದು, ನಗರದ ಹಲವೆಡೆ ವಾಯು ಗುಣಮಟ್ಟ ಹದಗೆಡತೊಡಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳು. ದೆಹಲಿಯಲ್ಲಿ ಈಗಾಗಲೇ ವಾಯು ಗುಣಮಟ್ಟ 400ಕ್ಕೂ ಅಧಿಕ ಎಕ್ಯೂಐ ದಾಖಲಾಗಿದ್ದು, ದೆಹಲಿಯ ನಿವಾಸಿಗಳು ಇದೀಗ ಶುದ್ಧ ಗಾಳಿಗಾಗಿ ಅರಸುತ್ತಾ ಬೆಂಗಳೂರು, ಪುಣೆ ಸೇರಿದಂತೆ ವಿವಿಧ ನಗರ ಕಡೆ ಗುಳೆ ಹೊರಟಿದ್ದಾರೆ.

ಇದರ ನಡುವೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಅಸ್ಪಷ್ಟವಾಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಈ ಚಿತ್ರಗಳಿಗೆ ಸಾಮಾಜಿಕ ಬಳಕೆದಾರರು ತಮ್ಮ ಖಾತೆಯಲ್ಲಿ ನೋಯ್ಡಾ ಮತ್ತು ಫರಿದಾಬಾದ್‌ನಾದ್ಯಂತ ಹದಗೆಡುತ್ತಿರುವ ವಾಯು ಮಾಲಿನ್ಯವಿದು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ನವಂಬರ್‌ 04, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼPollution is getting worse every day in NCR region. My frnds from Noida and Faridabad sent me these images from thr homes and offices today. Look at air pollution, and the government is manipulating the data of AQI.ʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯ ದಿನೇ ದಿನೇ ಹದಗೆಡುತ್ತಿದೆ. ನೋಯ್ಡಾ ಮತ್ತು ಫರಿದಾಬಾದ್‌ನ ನನ್ನ ಸ್ನೇಹಿತರು ಇಂದು ನನ್ನ ಮನೆಗಳು ಮತ್ತು ಕಚೇರಿಗಳಿಂದ ಈ ಚಿತ್ರಗಳನ್ನು ನನಗೆ ಕಳುಹಿಸಿದ್ದಾರೆ. ವಾಯು ಮಾಲಿನ್ಯವನ್ನು ನೋಡಿ, ಮತ್ತು ಸರ್ಕಾರವು ವಾಯು ಗುಣಮಟ್ಟ ಸೂಚಕದ ಡೇಟಾವನ್ನು ಕುಶಲತೆಯಿಂದ ನಿರ್ವಹಿಸುತ್ತಿದೆʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ವೈರಲ್‌ ಆದ ಪೊಸ್ಟ್‌ಗಳನ್ನು ನೀವಿಲ್ಲಿ ನೋಡಬಹುದು.


​ನವಂಬರ್‌ 4, 2025ರಂದು ಮತ್ತೋಂದು ಎಕ್ಸ್‌ ಖಾತೆಯಲ್ಲಿ ʼPollution is getting worse every day in NCR region. My friends from Noida and Faridabad sent me these images from thr homes and offices today. Look at air pollution, and the government is manipulating the data of AQI.ʼ ಎಂದು ಬರೆದು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.

ವೈರಲ್‌ ಆದ ಪೊಸ್ಟ್‌ಗಳನ್ನು ನೀವಿಲ್ಲಿ ನೋಡಬಹುದು.


​ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಫೋಟೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾಲ್ಕು ವೈರಲ್ ಫೋಟೋಗಳು ಚೀನಾದ ಹಳೆಯ ಚಿತ್ರಗಳು. ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿ ಹೊಗೆಯನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೈರಲ್ ಚಿತ್ರಗಳು ಇತ್ತೀಚಿನದ್ದಲ್ಲ. ಈ ನಾಲ್ಕು ಛಾಯಾಚಿತ್ರಗಳನ್ನು 2013 ಮತ್ತು 2021ರ ನಡುವೆ ಚೀನಾದ್ದು.

ನಾವು ವೈರಲ್‌ ಆದ ಚಿತ್ರಗಳಲ್ಲಿರುವ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವೈರಲ್‌ ಆದ ಚಿತ್ರಗಳನ್ನು ಒಂದಾದ ನಂತರ ಒಂದು ಚಿತ್ರವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ

ಸೆಪ್ಟಂಬರ್‌ 15, 2025ರಂದು ʼದಿ ಗಾರ್ಡಿಯನ್‌ʼ ಎಂಬ ವೆಬ್‌ಸೈಟ್‌ನಲ್ಲಿ ʼThe heat is on to ensure sustainable development in Asia's swelling cities Julian Hunt and Yuguo Liʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಜಿಯಾಂಗ್ಸು ಪ್ರಾಂತ್ಯದ ಲಿಯಾನ್ಯುಂಗಾಂಗ್‌ನಲ್ಲಿ ಕಟ್ಟಡಗಳನ್ನು ಆವರಿಸಿರುವ ದಟ್ಟವಾದ ಹೊಗೆಯನ್ನು ಫೋಟೋ ತೋರಿಸುತ್ತದೆ. ಜನವರಿ 2014 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಮಿತಿಗಿಂತ ಮಾಲಿನ್ಯದ ಮಟ್ಟವು ಇಪ್ಪತ್ತು ಪಟ್ಟು ಹೆಚ್ಚು ಏರಿಕೆಯಾಗಿದ್ದರಿಂದ ಬೀಜಿಂಗ್‌ನ ಆಕಾಶರೇಖೆಯನ್ನು ಆವರಿಸಿರುವ ದಟ್ಟವಾದ ಹೊಗೆಯನ್ನು ಚಿತ್ರ ತೋರಿಸುತ್ತದೆ


​ಜನವರಿ 14, 2014ರಂದು ʼನ್ಯಾಷನಲ್ ಜಿಯಾಗ್ರಫಿಕ್ʼ ವೆಬ್‌ಸೈಟ್‌ನಲ್ಲಿ ;How Much Is U.S. to Blame for “Made-in-China” Pollution? ಎಂದು ಬರೆದಿರುವುದನ್ನು ನೋಡಬಹುದು. 


ಹುಡುಕಾಟದಲ್ಲಿ ನಮಗೆ, ಎರಡನೇ ಚಿತ್ರವನ್ನು ಮೊದಲು ಗೆಟ್ಟಿ ಇಮೇಜಸ್‌ನಲ್ಲಿ ಡಿಸೆಂಬರ್ 8, 2013 ರಂದು ಪ್ರಕಟಿಸಲಾಯಿತು. ಈ ಚಿತ್ರವು ಚೀನಾದ 2014 ರ ಮಾಲಿನ್ಯ ತುರ್ತು ಪರಿಸ್ಥಿತಿಯನ್ನು ದಾಖಲಿಸುತ್ತದೆ ಮತ್ತು ದೆಹಲಿ-ಎನ್‌ಸಿಆರ್‌ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಕ್ಟೋಬರ್ 24, 2017ರಂದು ʼಫೋರ್ಬ್ಸ್ʼ ವೆಬ್‌ಸೈಟ್‌ನಲ್ಲಿ ʼChina Shuts Down Tens Of Thousands Of Factories In Widespread Pollution Crackdownʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಚೀನಾವು ಅಭೂತಪೂರ್ವ ಮಾಲಿನ್ಯ ನಿಯಂತ್ರಣ ಕ್ರಮವನ್ನು ಜಾರಿಗೆ ತಂದಿದ್ದು, ಹತ್ತಾರು ಸಾವಿರ ಕಾರ್ಖಾನೆಗಳನ್ನು ಮುಚ್ಚಿದೆ. ಈ ಪ್ರಯತ್ನವು ಚೀನಾದ ಕುಖ್ಯಾತ ಮಾಲಿನ್ಯವನ್ನು ಪರಿಹರಿಸುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿದೆ ಮತ್ತು ಇದು ಚೀನಾದ ಉತ್ಪಾದನಾ ವಲಯದ ವ್ಯಾಪಕ ಶ್ರೇಣಿಯ ಮೇಲೆ ಪರಿಣಾಮ ಬೀರಿದೆ. ಪರಿಸರ ಬ್ಯೂರೋ ಅಧಿಕಾರಿಗಳಿಂದ ತಪಾಸಣೆಗೆ ಒಳಪಡುವ ಸಲುವಾಗಿ ಚೀನಾದ ಎಲ್ಲಾ ಕಾರ್ಖಾನೆಗಳಲ್ಲಿ ಶೇಕಡ 40 ರಷ್ಟು ಕಾರ್ಖಾನೆಗಳು ಒಂದು ಹಂತದಲ್ಲಿ ಮುಚ್ಚಲ್ಪಟ್ಟಿವೆ ಎಂದು ಅಂದಾಜಿಸಲಾಗಿದೆ. ಈ ತಪಾಸಣೆಗಳ ಪರಿಣಾಮವಾಗಿ 80,000 ಕ್ಕೂ ಹೆಚ್ಚು ಕಾರ್ಖಾನೆಗಳು ಅವುಗಳ ಹೊರಸೂಸುವಿಕೆಯ ಪರಿಣಾಮವಾಗಿ ದಂಡ ಮತ್ತು ಕ್ರಿಮಿನಲ್ ಅಪರಾಧಗಳಿಗೆ ಗುರಿಯಾಗಿವೆ. ಎಂದು ವರದಿ ಮಾಡಿರುವುದನ್ನು ನೋಡಬಹುದು.


ಡಿಸೆಂಬರ್ 10, 2013ರಂದು ʼದಿ ಗಾರ್ಡಿಯನ್ʼ ಎಂಬ ವೆಬ್‌ಸೈಟ್‌ನಲ್ಲಿ Chinese media find silver linings in smog clouds ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ವರದಿಯಲ್ಲಿ ʼಚೀನಾದ ಹಾನಿಕಾರಕ ವಾಯು ಮಾಲಿನ್ಯವು ಜನರನ್ನು ಬುದ್ಧಿವಂತರು, ತಮಾಷೆಯವರು ಮತ್ತು ಕ್ಷಿಪಣಿ ದಾಳಿಗೆ ನಿರೋಧಕರನ್ನಾಗಿ ಮಾಡಿದೆ ಎಂದು ದೇಶದ ಅಧಿಕೃತ ಮಾಧ್ಯಮ ಈ ವಾರ ವರದಿ ಮಾಡಿದೆ, ದೇಶದ ಅರ್ಧದಷ್ಟು ಭಾಗವನ್ನು ಆವರಿಸಿದ್ದ ವಿಷಕಾರಿ ಮೋಡವು ದೂರವಾಗಲು ಪ್ರಾರಂಭಿಸಿತು. ರಾಜ್ಯ ಪ್ರಸಾರಕ ಸಿಸಿಟಿವಿಯ ವೆಬ್‌ಸೈಟ್ ಹೊಗೆಯಿಂದ ಉಂಟಾಗುವ ಐದು "ಅನಿರೀಕ್ಷಿತ ಪ್ರಯೋಜನಗಳ" ಪಟ್ಟಿಯನ್ನು ಪ್ರಕಟಿಸಿತುʼ ಎಂದು ಬರೆದಿರುವುದನ್ನು ನೋಡಬಹುದು. ಇದು ಚೀನಾದ ಲಿಯಾನ್ಯುಂಗಾಂಗ್‌ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸಾಭೀತಾಗಿದೆ.


ಮೂರನೇ ವೈರಲ್ ಫೋಟೋ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ನವೆಂಬರ್ 5, 2021ರಂದು ʼHighways closed, visibility below 200m as ‘heavy pollution’ masks Beijingʼ ಎಂಬ ಶೀರ್ಷಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ನೋಡಬಹುದು ಕಾಣಿಸಿಕೊಂಡಿದ್ದು, ಬೀಜಿಂಗ್ ಕಟ್ಟಡಗಳು ಕಲುಷಿತ ದಿನದಂದು ಇದ್ದವು ಎಂದು ಅದು ಹೇಳಿದೆ.


ನವಂಬರ್‌ 5, 2021ರಂದು ಡೈಲಿಮೈಲ್‌ ಎಂಬ ವೆಬ್‌ಸೈಟ್‌ನಲ್ಲಿ ʼBeijing shuts roads and public spaces due to pollution days after COP26 went ahead - without China - and President Xi ramped up coal productionʼ ಎಂಬ ಶೀರ್ಷಿಎಕಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ಬೀಜಿಂಗ್‌ನಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದರಿಂದ ಶಾಲೆಗಳು ಆಟದ ಮೈದಾನಗಳನ್ನು ಮುಚ್ಚಿವೆ ಮತ್ತು ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆʼ ಎಂದು ಬರೆದಿರುವದುನ್ನು ನೋಡಬಹುದು.


​ನಾಲ್ಕನೇ ಫೋಟೋವನ್ನು ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಉತ್ತರ ಚೀನಾವನ್ನು ಉಸಿರುಗಟ್ಟಿಸಿದ ಧೂಳಿನ ಬಿರುಗಾಳಿಯ ಬಗ್ಗೆ ʼಬಿಬಿಸಿʼ ಮೇ 4, 2017ರಂದು ʼDust storm chokes Beijing and northern Chinaʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಬೀಜಿಂಗ್‌ನ ಅದೇ ಸ್ಕೈಲೈನ್ ಚಿತ್ರವನ್ನು ಈ ವರದಿಯಯಲ್ಲಿ ನೋಡಬಹುದು.


​ಮೇ 4, 2017ರಂದು ʼಕೈಕ್ಸಿನ್ ಗ್ಲೋಬಲ್ʼ ಎಂಬ ವೆಬ್‌ಸೈಟ್‌ನಲ್ಲಿ ʼSandstorm Chokes Northern Chinaʼ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಂಡಿದ್ದಾರೆ. ವರದಿಯಲ್ಲಿ ʼಉತ್ತರ ಚೀನಾದಾದ್ಯಂತ ಮರಳು ಬಿರುಗಾಳಿ ಬೀಸಿದ್ದರಿಂದ ಬೀಜಿಂಗ್‌ನಲ್ಲಿ ವಾಯು ಮಾಲಿನ್ಯ ಮತ್ತೊಮ್ಮೆ ಗಂಭೀರ ಮಟ್ಟವನ್ನು ತಲುಪಿದ್ದು, ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಲ್ಲಿ ಡಜನ್‌ಗಟ್ಟಲೆ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಬೀಜಿಂಗ್‌ನಲ್ಲಿರುವ ಚೀನಾ ಸೆಂಟ್ರಲ್ ಟೆಲಿವಿಷನ್ ಕಟ್ಟಡವು ಧೂಳಿನಿಂದ ಅಸ್ಪಷ್ಟವಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಈ ನಾಲ್ಕು ಛಾಯಾಚಿತ್ರಗಳನ್ನು 2013 ಮತ್ತು 2021 ರ ನಡುವೆ ಚೀನಾದಲ್ಲಿ ತೆಗೆದುಕೊಳ್ಳಲಾಗಿದ್ದು ದೆಹಲಿ- ಎನ್‌ಸಿಆರ್‌ನಲ್ಲಿ ತೆಗೆದ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Claim :  ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿನ ಪ್ರಸ್ತುತ ಮಾಲಿನ್ಯದ ಪರಿಸ್ಥಿತಿ ಎಂದು ಚೀನಾದ ಚಿತ್ರಗಳು ಹಂಚಿಕೆ
Claimed By :  Social Media Users
Fact Check :  Unknown
Tags:    

Similar News