ಫ್ಯಾಕ್ಟ್‌ಚೆಕ್‌: ಭೂಗತ ಹೈಡ್ರಾಲಿಕ್ ಕಸದ ವ್ಯವಸ್ಥೆಯ ವೀಡಿಯೊ ಕರ್ನಾಟಕದ್ದು ಎಂದು ಟರ್ಕಿಯ ವಿಡಿಯೋ ಹಂಚಿಕೆ

ಭೂಗತ ಹೈಡ್ರಾಲಿಕ್ ಕಸದ ವ್ಯವಸ್ಥೆಯ ವೀಡಿಯೊ ಕರ್ನಾಟಕದ್ದು ಎಂದು ಟರ್ಕಿಯ ವಿಡಿಯೋ ಹಂಚಿಕೆ

Update: 2025-11-07 15:36 GMT

ಕರ್ನಾಟಕದ ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಡಸ್ಟ್‌ಬಿನ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ಮುಂಬೈ ಸಂಯೋಜಕಿ ಪಲ್ಲವಿ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದು ದೇಶದಲ್ಲಿಯೇ ಮೊದಲ ಭೂಗತ ಹೈಡ್ರಾಲಿಕ್ ಡಸ್ಟ್‌ಬಿನ್ ಎಂದು ಹೇಳಿದ್ದಾರೆ. 75% ತುಂಬಿದ ತಕ್ಷಣ ನೈರ್ಮಲ್ಯ ಇಲಾಖೆಗೆ ಸ್ವಯಂಚಾಲಿತವಾಗಿ ಅಧಿಸೂಚನೆ ಬರುತ್ತದೆ ಎಂದು ಬರೆದಿರುವುದನ್ನು ನೋಡಬಹುದು. 100% ತುಂಬಿದ ನಂತರವೂ ಡಸ್ಟ್‌ಬಿನ್‌ಯನ್ನು ಎತ್ತದಿದ್ದರೆ, ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬರೆದಿರುವುದನ್ನು ನೋಡಬಹುದು. ಇದು ಕರ್ನಾಟಕದ ಬೆಳಗಾವಿ ಮಹಾನಗರ ಪಾಲಿಕೆ ಪ್ರಾರಂಭಿಸಿದ ಪ್ರಾಯೋಗಿಕ ಕಸ ವಿಲೇವಾರಿ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ನವಂಬರ್‌ 02, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼWow. Such an Amazing initiative by BJP MLA from Belgaum. @iamabhaypatil ji for GARBAGE collection. FIRST time not just in Karnataka, but in Bharat. Underground hydraulic dustbin of 1 tonne capacity. Once 75 % garbage is collected, there will automatic intimation to sanitation dept. If garbage not collected even after 100 % full, there will be PUNITIVE action against the concerned team. I for one, feel there’s a huge SCAM in BMC with THOUSANDS of garbage trucks. collecting garbage from all over from Mumbai & taking it to make a TALLER SKYSCRAPER of garbage. I feel that most garbage should be RECYCLED at current location only. I feel there should be VEGETABLE DIGESTERS in ALL vegetable markets in Mumbai; then it can be used to make Fertilisers. Already, many big housing complexes have to recycle wet waste & water. What are your IDEAS for making Mumbai the city of your dreams? Please share your IDEAS with usʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಾಹ್! ಬೆಳಗಾವಿಯ ಬಿಜೆಪಿ ಶಾಸಕ @iamabhaypatil ಜಿ ಅವರ ಕಸ ಸಂಗ್ರಹಕ್ಕಾಗಿ ಎಂತಹ ಅದ್ಭುತ ಉಪಕ್ರಮ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ 1 ಟನ್ ಸಾಮರ್ಥ್ಯದ ಭೂಗತ ಹೈಡ್ರಾಲಿಕ್ ಡಸ್ಟ್‌ಬಿನ್ ಅನ್ನು ಪರಿಚಯಿಸಲಾಗಿದೆ. 75% ಕಸವನ್ನು ಸಂಗ್ರಹಿಸಿದ ನಂತರ, ನೈರ್ಮಲ್ಯ ಇಲಾಖೆಗೆ ಸ್ವಯಂಚಾಲಿತ ಸೂಚನೆ ಕಳುಹಿಸಲಾಗುತ್ತದೆ ಮತ್ತು 100% ಸಾಮರ್ಥ್ಯವನ್ನು ತಲುಪಿದ ನಂತರವೂ ಕಸವನ್ನು ತೆರವುಗೊಳಿಸದಿದ್ದರೆ, ಸಂಬಂಧಪಟ್ಟ ತಂಡದ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುತ್ತದೆ. BMC ಯಲ್ಲಿ ಒಂದು ದೊಡ್ಡ ಹಗರಣವಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ, ಮುಂಬೈನಾದ್ಯಂತ ಸಾವಿರಾರು ಕಸದ ಟ್ರಕ್‌ಗಳು ತ್ಯಾಜ್ಯವನ್ನು ಸಂಗ್ರಹಿಸುತ್ತಿವೆ ಮತ್ತು ಕಸದ ಗಗನಚುಂಬಿ ಕಟ್ಟಡವನ್ನು ಸೃಷ್ಟಿಸುತ್ತವೆ. ಬದಲಾಗಿ, ಹೆಚ್ಚಿನ ಕಸವನ್ನು ಅದರ ಪ್ರಸ್ತುತ ಸ್ಥಳದಲ್ಲಿ ಮರುಬಳಕೆ ಮಾಡಬೇಕು. ಉದಾಹರಣೆಗೆ, ಮುಂಬೈನ ಎಲ್ಲಾ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ಡೈಜೆಸ್ಟರ್‌ಗಳನ್ನು ಸ್ಥಾಪಿಸಬೇಕು ಇದರಿಂದ ತ್ಯಾಜ್ಯವನ್ನು ಗೊಬ್ಬರಗಳಾಗಿ ಪರಿವರ್ತಿಸಬಹುದು. ಅನೇಕ ದೊಡ್ಡ ವಸತಿ ಸಂಕೀರ್ಣಗಳು ಈಗಾಗಲೇ ಆರ್ದ್ರ ತ್ಯಾಜ್ಯ ಮತ್ತು ನೀರನ್ನು ಮರುಬಳಕೆ ಮಾಡುತ್ತಿವೆ, ಇದು ಶ್ಲಾಘನೀಯ. ಮುಂಬೈಯನ್ನು ನಿಮ್ಮ ಕನಸಿನ ನಗರವನ್ನಾಗಿ ಮಾಡಲು ನಿಮ್ಮ ಆಲೋಚನೆಗಳೇನು? ದಯವಿಟ್ಟು ನಿಮ್ಮ ಆಲೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿʼ ಎಂದು ಬರೆದುಕೊಂಡಿದ್ದಾರೆ.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟನ್ನು ನೀವಿಲ್ಲಿ ನೋಡಬಹುದು


ಅಕ್ಟೋಬರ್‌ 28, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCommendable initiative by BJP MLA Shri Abhay Patil in Vadagaon Shahapur area of Belgaum south constituency. It is a pioneering effort not only in the Belgaum area but in the entire state and also in whole India. Congratulations and best wishes to Shri Abhay Patil.ʼ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬೆಳಗಾವಿ ದಕ್ಷಿಣ ಕ್ಷೇತ್ರದ ವಡಗಾಂವ್ ಶಹಾಪುರ ಪ್ರದೇಶದಲ್ಲಿ ಬಿಜೆಪಿ ಶಾಸಕ ಶ್ರೀ ಅಭಯ್ ಪಾಟೀಲ್ ಅವರ ಈ ಕಾರ್ಯ ಶ್ಲಾಘನೀಯ. ಇದು ಬೆಳಗಾವಿ ಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯ ಮತ್ತು ಇಡೀ ಭಾರತದಲ್ಲಿಯೇ ಒಂದು ಪ್ರವರ್ತಕ ಪ್ರಯತ್ನವಾಗಿದೆ. ಶ್ರೀ ಅಭಯ್ ಪಾಟೀಲ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳುʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟನ್ನು ನೀವಿಲ್ಲಿ ನೋಡಬಹುದು


ಮತ್ತೊಂದು ಫೇಸ್‌ಬುಕ್‌ ಬಳಕೆದಾರರು ʼबेळगाव महानगरपालिका अभिनव प्रयोग. अंडरग्राऊंड कचरा कंटेनर. हा डेमो व्हिडिओ आहे असे वाटतेʼ ಎಂದು ಬರೆದಿರುವುದನ್ನು ನೋಡಬಹುದು.ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬೆಳಗಾವಿ ಮಹಾನಗರ ಪಾಲಿಕೆಯ ನವೀನ ಪ್ರಯೋಗ. ಭೂಗತ ಕಸದ ಪಾತ್ರೆ. ಇದು ಡೆಮೊ ವಿಡಿಯೋ ಎಂದು ನಾನು ಭಾವಿಸುತ್ತೇನೆʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟನ್ನು ನೀವಿಲ್ಲಿ ನೋಡಬಹುದು


ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋವಿನಲ್ಲಿ ಬೆಳಗಾವಿಯಲ್ಲಿ ಹೈಡ್ರಾಲಿಕ್ ಚಾಲಿತ ಭೂಗತ ಕಸದ ಬುಟ್ಟಿಗಳನ್ನು ಅಳವಡಿಸಲಾಗಿರುವುದು ನಿಜವೇ ಆಗಿದ್ದರೂ ಆ ಕುರಿತ ಹೇಳಿಕೆಗೆ ಬಳಸಿದ ವೀಡಿಯೋ ಟರ್ಕಿಯದ್ದಾಗಿದೆ ಎಂದು ಕಂಡುಬಂದಿದೆ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಆಗಸ್ಟ್ 27, 2013ರಂದು ಯೂಟ್ಯೂಬ್ ಚಾನೆಲ್‌ನಲ್ಲಿ ʼRear Loader Refuse Truck with Crane for Underground Containerʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಪ್ರಕಟಿಸಲಾಗಿದೆ. ಇದರಲ್ಲಿ ಭೂಗತ ಕಸದ ತೊಟ್ಟಿಯಿಂದ ಲಾರಿಗೆ ಕಸವನ್ನು ಹಾಕುವ ದೃಶ್ಯಗಳನ್ನು ಕಾಣಬಹುದು.

Full View

ಇನ್ನು ನಾವು ವೈರಲ್‌ ಆದ ವಿಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಟ್ರಕ್‌ನಲ್ಲಿರುವ ನಂಬರ್ ಪ್ಲೇಟ್ 34 EF 4247 ಎಂದು ಬರೆಯಲಾಗಿದೆ. 34 ರಿಂದ ಪ್ರಾರಂಭವಾಗುವ ನಂಬರ್ ಪ್ಲೇಟ್‌ಗಳು ಇಸ್ತಾನ್‌ಬುಲ್‌ನವು. ಟ್ರಕ್‌ನಲ್ಲಿ ಬರೆಯಲಾದ "Üsküdar Belediyesi" ಎಂಬ ಪದಗಳು ವಾಹನವು ಟರ್ಕಿಯಿಂದ ಬಂದಿದೆ ಎಂದು ಸೂಚಿಸುತ್ತವೆ ಏಕೆಂದರೆ "Üsküdar Belediyesi" ಇಸ್ತಾನ್‌ಬುಲ್‌ನಲ್ಲಿರುವ ಪುರಸಭೆಯಾಗಿದೆ.


ಇನ್ನು ಹೈಡ್ರೋ-ಮ್ಯಾಕ್‌ನ ವೆಬ್‌ಸೈಟ್‌ನಲ್ಲಿ ಕೂಡ ಕಂಪನಿಯು ಇಸ್ತಾನ್‌ಬುಲ್‌ನಲ್ಲಿ ನೆಲೆಗೊಂಡಿದೆ ಎಂದು ಉಲ್ಲೇಖಿಸಲಾಗಿದೆ. ಕಂಪನಿಯು ವಿವಿಧ ರೀತಿಯ ಕಸ ಸಂಗ್ರಾಹಕಗಳನ್ನು ತಯಾರಿಸುತ್ತದೆ. ಅವುಗಳಲ್ಲಿ ಒಂದು ಭೂಗತ ಕಂಟೇನರ್‌ಗಳಿಗಾಗಿ ಕ್ರೇನ್‌ನೊಂದಿಗೆ ತ್ಯಾಜ್ಯ ಸಂಗ್ರಾಹಕವಾಗಿದೆ.

ಇನ್ನು ನಮಗೆ ಮತ್ತಷ್ಟು ಪತ್ರಿಕಾ ವರದಿಗಳು ಲಭ್ಯವಾಗಿವೆ. ಅದರಲ್ಲಿ ಬೆಳಗಾವಿ ಮಹಾನಗರದಲ್ಲಿ ಕಸವಿಲೇವಾರಿಗೆ ಹೈಡ್ರಾಲಿಕ್ ಚಾಲಿತ ಭೂಗತ ಕಸದ ತೊಟ್ಟಿ ಳವಡಿಸಿದ್ದರ ಕುರಿತು ಹೇಳಲಾಗಿದೆ. ಡಿಸೆಂಬರ್ 10, 2022ರ ವಿಜಯವಾಣಿ ವರದಿಯಲ್ಲಿ ʼಕಸ ನಿರ್ವಹಣೆಗೆ ಬಂತು ಹೈಟೆಕ್‌ ವ್ಯವಸ್ಥೆʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ “ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ, ಉತ್ಪಾದನೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಳಗಾವಿ ಮಹಾನಗರದಲ್ಲಿ ಇದೀಗ ಕಸ ನಿರ್ವಹಣೆಗೂ ಬಂತು ಹೈಟೆಕ್ ವ್ಯವಸ್ಥೆ!. ಹೌದು. ಸೆನ್ಸಾರ್ ಒಳಗೊಂಡಿರುವ ಹೈಡ್ರಾಲಿಕ್ ಚಾಲಿತ ಅಂಡರ್‌ಂಡ್ ಡಸ್ಟ್ ಬಿನ್ (ಕಸದ ತೊಟ್ಟಿ) ಗಳು ತಲೆ ಎತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಹಸಿ ಕಸ, ಒಣ ಕಸ, ಇ-ಕಸ ಸೇರಿ ಹಲವಾರು ರೀತಿಯ ಕಸ ಸುಮಾರು 320 ಮೆಟ್ರಿಕ್ ಟನ್ ವರೆಗೆ ಕಸ ಉತ್ಪತ್ತಿಯಾಗುತ್ತಿದೆ. ಜನರು ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕಸ ವಿಲೇವಾರಿ ಸಮರ್ಪಕವಾಗದೇ ರಸ್ತೆ ಪಕ್ಕದಲ್ಲಿ, ಖಾಲಿ. ನಿವೇಶನಗಳಲ್ಲೂ ಹೆಚ್ಚಾಗಿ ಕಸ ಸುರಿಯಲಾಗುತ್ತಿದೆ. ಸಮರ್ಪಕವಾಗಿ ಕಸ ನಿರ್ವಹಣೆ, ಕಸ ಎತ್ತದಿರುವುದು, ಕಸ ತೊಟ್ಟಿಗಳನ್ನು ಅಳವಡಿಸದಿರುವುದು ವಿವಿಧ ಕಾರಣಗಳಿಂದಾಗಿ ಜನವಸತಿ ಪ್ರದೇಶಗಳಲ್ಲಿನ ಸಮಸ್ಯೆ ಉಂಟಾಗುತ್ತಿದೆ. ನಗರದಲ್ಲಿ ಜನರು ಇಂತಹ ಸಮಸ್ಯೆಗಳಿಂದ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ 18 ಕಡೆ ಹೈಟೆಕ್ ಸೌಲಭ್ಯ ಮತ್ತು ಸೆನ್ಸಾರ್ ಒಳಗೊಂಡಿರುವ ಡಸ್ಟ್ ಬಿನ್‌ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಪ್ರತಿ ಡಾಬಿನ್‌ ಗೆ 6.5 ಲಕ್ಷ ರೂ.ರಂತೆ 1.56 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, ಈ ಡಸ್ಬಿನ್‌ಗಳಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಮಾಡಲು 80 ಲಕ್ಷ ರೂ. ವೆಚ್ಚದ ವಾಹನ ಜತೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ” ಎಂದು ವರದಿ ಮಾಡಿರುವುದನ್ನು ನೋಡಬಹುದು.


ಮಾರ್ಚ್ 28, 2025ರಂದು ಈಟಿವಿ ಭಾರತ್‌ ಎಂಬ ವೆಬ್‌ಸೈಟ್‌ನಲ್ಲಿ ʼಕಸ ಸಂಗ್ರಹಣೆಗೆ ಅಂಡರ್ ಗ್ರೌಂಡ್ ಡಸ್ಟ್ ಬಿನ್: ಬೆಳಗಾವಿಯ ಉತ್ತರದಲ್ಲಿ ಶೀಘ್ರದಲ್ಲೇ ವಿನೂತನ ಪ್ರಯೋಗʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಕಸ ವಿಲೇವಾರಿ ಮತ್ತು ನಗರವನ್ನು ಸ್ವಚ್ಛವಾಗಿಡಲು ಬೆಳಗಾವಿ ಮಹಾನಗರ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿ ಅಂಡರ್ ಗ್ರೌಂಡ್ ಡಸ್ಟ್ ಬಿನ್ಗಳನ್ನು ನಗರದ ವಿವಿಧೆಡೆ ಅಳವಡಿಸಿದೆ. ಗುಜರಾತ್ನ ಸೂರತ್ ಬಿಟ್ಟರೆ ಬೆಳಗಾವಿಯಲ್ಲೇ ಇರುವ ಈ ಅಂಡರ್ ಗ್ರೌಂಡ್ ಡಸ್ಟ್ ಬಿನ್ ಹೇಗೆ ಕಾರ್ಯ‌ ನಿರ್ವಹಿಸುತ್ತವೆ? ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ ಮೊದಲ ಹಂತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ 24 ಕಡೆಗಳಲ್ಲಿ ಈ ಅಂಡರ್‌ ಗ್ರೌಂಡ್ ಡಸ್ಟ್‌ ಬಿನ್‌ಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಅಳವಡಿಸಿದ್ದು, ಅವು ಕಾರ್ಯನಿರ್ವಹಿಸುತ್ತಿವೆ. ಇನ್ನು ಉತ್ತರ ಕ್ಷೇತ್ರದಲ್ಲೂ ಶೀಘ್ರದಲ್ಲಿ ಈ ಡಸ್ಟ್ ಬಿನ್ ಅಳವಡಿಕೆಗೆ ಪಾಲಿಕೆ ಸಿದ್ಧತೆ ನಡೆಸಿದೆ. ಇನ್ನು ಉತ್ತರ ಕ್ಷೇತ್ರದಲ್ಲೂ ಶೀಘ್ರದಲ್ಲಿ ಈ ಡಸ್ಟ್ ಬಿನ್ ಅಳವಡಿಕೆಗೆ ಪಾಲಿಕೆ ಸಿದ್ಧತೆ ನಡೆಸಿದೆ.” ಎಂದು ವರದಿಯಾಗಿರುವುದನ್ನು ನೋಡಬಹುದು.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ವೈರಲ್‌ ಆದ ವಿಡಿಯೋವಿನಲ್ಲಿ ಬೆಳಗಾವಿಯಲ್ಲಿ ಹೈಡ್ರಾಲಿಕ್ ಚಾಲಿತ ಭೂಗತ ಕಸದ ಬುಟ್ಟಿಗಳನ್ನು ಅಳವಡಿಸಲಾಗಿರುವುದು ನಿಜವೇ ಆಗಿದ್ದರೂ ಆ ಕುರಿತ ಹೇಳಿಕೆಗೆ ಬಳಸಿದ ವೀಡಿಯೋ ಟರ್ಕಿಯದ್ದಾಗಿದೆ ಎಂದು ಕಂಡುಬಂದಿದೆ.

Claim :  ಭೂಗತ ಹೈಡ್ರಾಲಿಕ್ ಕಸದ ವ್ಯವಸ್ಥೆಯ ವೀಡಿಯೊ ಕರ್ನಾಟಕದ್ದು ಎಂದು ಟರ್ಕಿಯ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News