ಫ್ಯಾಕ್ಟ್‌ಚೆಕ್: ದೆಹಲಿಯ ಹೆಣ್ಣು ಮಕ್ಕಳ ಹಾಸ್ಟಲ್‌ನ ಒಳಚರಂಡಿಯಲ್ಲಿ ನೂರಾರು ಕಾಂಡೋಮ್‌ಗಳು ಪತ್ತೆ ಎಂದು ನೈಜಿರಿಯಾದ ವಿಡಿಯೋ ಹಂಚಿಕೆ
ದೆಹಲಿಯ ಹೆಣ್ಣು ಮಕ್ಕಳ ಹಾಸ್ಟಲ್‌ನ ಒಳಚರಂಡಿಯಲ್ಲಿ ನೂರಾರು ಕಾಂಡೋಮ್‌ಗಳು ಪತ್ತೆ ಎಂದು ನೈಜಿರಿಯಾದ ವಿಡಿಯೋ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳ ಹಾಸ್ಟಲ್‌ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಮೊದಲ ವಿಡಿಯೋದಲ್ಲಿ, ಬಳಸಿದ ಕಾಂಡೋಮ್‌ಗಳು ಒಳಗೆ ಮತ್ತು ಚರಂಡಿಯ ಬಳಿ ಹರಡಿಕೊಂಡಿರುವುದನ್ನು ನೋಡಬಹುದು. ಕೆಲವು ಸಾಮಾಜಿಕ ಜಾಲತಾಣದ ಬಳಕೆದಾರರು ಈ ವೀಡಿಯೊವನ್ನು "ದೆಹಲಿ ಪಿಜಿ ಹಾಸ್ಟೆಲ್‌ನಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಸಾವಿರಾರು ಬಳಸಿದ ಕಾಂಡೋಮ್‌ಗಳು ಕಂಡುಬಂದಿದ್ದರಿಂದ ಆಘಾತವಾಗಿದೆ. ಸ್ಥಳೀಯರು ಇದನ್ನು 'ಕಾಂಡೋಮ್ ನಲಾ ಹಗರಣ' ಎಂದು ಕರೆದಿದ್ದಾರೆ, ಇದು ಗಂಭೀರ ನೈರ್ಮಲ್ಯ ಮತ್ತು ಸುರಕ್ಷತಾ ಕಾಳಜಿಗಳನ್ನು ಹುಟ್ಟುಹಾಕಿದೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಅಕ್ಟೋಬರ್ 25, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼTHOUSANDS OF USED CONDOMS FOUND IN DELHI PC HOSTEL. DRAINS SHOCK LOCALSʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದೆಹಲಿಯ ಪಿಸಿ ಹಾಸ್ಟೆಲ್‌ನಲ್ಲಿ ಸಾವಿರಾರು ಬಳಸಿದ ಕಾಂಡೋಮ್‌ಗಳು ಡ್ರೈನ್‌ನಲ್ಲಿ ಪತ್ತೆ. ಇದನ್ನು ಕಂಡ ಸ್ಥಳೀಯರು ಆಘಾತಕ್ಕೊಳಗಾದರುʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಮತ್ತೊಂದು ಇನ್‌ಸ್ಟಾಗ್ರಾಮ್ ಖಾತೆದಾರರು ಅಕ್ಟೋಬರ್ 25, 2025ರಂದು ಹಂಚಿಕೊಂಡ ವಿಡಿಯೋವಿಗೆ ʼShock in Delhi PG Hostel as thousands of used condoms were found during drainage cleaning. Locals have dubbed it the “Condom Nala Scandal,” raising serious hygiene and safety concerns.ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದೆಹಲಿಯ ಪಿಜಿ ಹಾಸ್ಟೆಲ್‌ನಲ್ಲಿ ಒಳಚರಂಡಿ ಶುಚಿಗೊಳಿಸುವ ಸಮಯದಲ್ಲಿ ಸಾವಿರಾರು ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿದೆ. ಇದರಿಂದ ಸ್ಥಳೀಯರು ಆಘಾತಗೊಳಗಾಗಿದ್ದಾರೆ. ಸ್ಥಳೀಯರು ಇದನ್ನು "ಕಾಂಡೋಮ್ ಚಂರಂಡಿ ಹಗರಣ" ಎಂದು ಕರೆದಿದ್ದಾರೆ, ಇದು ಗಂಭೀರ ನೈರ್ಮಲ್ಯ ಮತ್ತು ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆʼ ಎಂಬ ಶೀರ್ಷಿಕೆಯನ್ನು ಒಳಗೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಷ್ಟೇ ಅಲ್ಲ ಎನ್‌ಡಿಟಿವಿ ಮರಾಠಿ , ಒರಿಸ್ಸಾ ಪೋಸ್ಟ್ ಮತ್ತು ಸಾಮ್‌ನಂತಹ ಸುದ್ದಿವಾಹಿನಿಗಳು ತಮ್ಮ ವರದಿಗಳಲ್ಲಿ ವೀಡಿಯೊವನ್ನು ಪ್ರಕಟಿಸಿದ್ದು, ಅದು ದೆಹಲಿಯದ್ದು ಎಂದು ಹೇಳಿಕೊಂಡಿವೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ, ಅದು ನೈಜೀರಿಯಾಗೆ ಸಂಬಂಧಿಸಿದ್ದು. ದೆಹಲಿಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ.
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಲನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ವೈರಲ್ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ನಮ್ಮ ತನಿಖೆಯು ಅದೇ ವೀಡಿಯೊವನ್ನು ಹಲವಾರು ನೈಜೀರಿಯನ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪತ್ತೆಹಚ್ಚಿದೆ. ಅಕ್ಟೋಬರ್ 14, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼNigeria just got crowned the official Muegbesegbe HQ of the world — after 3 billion used condoms were reportedly found in a suckaway pit. We weren’t readyʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ3 ಬಿಲಿಯನ್ ಬಳಸಿದ ಕಾಂಡೋಮ್‌ಗಳು ಡ್ರೈನೇಜ್‌ನಲ್ಲಿ ಪತ್ತೆಯಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು
ನೈಜೀರಿಯಾದ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರು ಅಕ್ಟೋಬರ್ 13, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼNigerians too like doking. Keep being safe out thereʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 13, 2025ರಂದು ಮತ್ತೊಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼNa only this thing nor be problem for this country because e nor get as e hard reach them must! Finish the sentenceʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼNigerians are really enjoying in this administration!ʼ ಎಂದು ಬರೆದುಕೊಂಡು ಹಂಚಿಕೊಂಡಿರುವುದನ್ನು ನೋಡಬಹುದು.
ಮೂಲ ದೃಶ್ಯಗಳಲ್ಲಿ, ಚಿತ್ರೀಕರಣ ಮಾಡುತ್ತಿರುವ ವ್ಯಕ್ತಿಯು ನೈಜೀರಿಯಾವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾನೆ, ಇದು ಸ್ಥಳವನ್ನು ದೃಢಪಡಿಸುತ್ತದೆ. ಈ ದೃಶ್ಯಗಳನ್ನು ಭಾರತದಲ್ಲಿ ರೆಕಾರ್ಡ್ ಮಾಡಲಾಗಿದೆ ಅಥವಾ ದೆಹಲಿಯ ಹಾಸ್ಟೆಲ್‌ಗೆ ಸಂಬಂಧಿಸಿದ್ದು ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ ಭಾರತಕ್ಕೆ ಸಂಬಂಧಿಸಿದಲ್ಲ, ಅದು ನೈಜೀರಿಯಾಗೆ ಸಂಬಂಧಿಸಿದ್ದು. ಆದಾಗ್ಯೂ, ನಮಗೆ ವಿಶ್ವಾಸಾರ್ಹ ಮೂಲ ಅಥವಾ ಯಾವುದೇ ಸುದ್ದಿವಾಹಿನಿಯಿಂದ ಸಿಗಲಿಲ್ಲ.