ಫ್ಯಾಕ್ಟ್‌ಚೆಕ್‌: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?

Update: 2024-04-20 19:54 GMT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೇಪರ್ ಹಿಡಿದುಕೊಂಡು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ಘೋಷಿಸುತ್ತಿರುವ 30 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

“मैं राहुल गाँधी , आज कांग्रेस से इस्तीफा दे रहा हूं , मुझसे और चुनावी हिंदू बनने का ढोंग नहीं होगा । अन्याय यात्रा के बाद न्याय पत्र भी निकला, लेकिन मोदी जी भ्रष्टाचारियों को जेल भेज रहे हैं । अब मोदी राज में हम सब भ्रष्टाचारियों को जेल भेज दिआ जायेगा I इस लिये मैं अपने नाना के घर इटली जा रहा हूं। ”

ರಾಹುಲ್ ಗಾಂಧಿ ಆದ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದೇವೆ. ಚುನಾವಣೆಯಲ್ಲಿ ವೋಟಿಗಾಗಿ ನಾನೇ ನಿಜವಾದ ಹಿಂದೂ ಎಂದು ಹೇಳಿ ಹೇಳಿ ಸುಸ್ತಾಗಿದ್ದೇನೆ. ಅನ್ಯಾಯ ಯಾತ್ರೆಯ ನಂತರ ನ್ಯಾಯಯಾತ್ರೆಯನ್ನೂ ಮಾಡಲು ತಯಾರಾಗಿದ್ದೇನೆ ಆದರೆ ಮೋದಿ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಲೇ ಇದ್ದಾರೆ. ಮೋದಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದರೆ ನನನ್ನೂ ಸಹ ಭ್ರಷ್ಟನೆಂದು ಜೈಲಿಗೆ ಕಳಿಸಬಹುದು. ಆದ್ದರಿಂದ ನಾನು ಇಟಲಿಯಲ್ಲಿರುವ ನನ್ನ ಅಜ್ಜನ ಮನೆಗೆ ಹೋಗುತ್ತಿದ್ದೇನೆ, ”ಎಂದು ರಾಹುಲ್‌ ಗಾಂದಿಯ ಧ್ವನಿಯಲ್ಲಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಇದೇ ವಿಡಿಯೋವನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡಿರುವ ವಿಡಿಯೋವಿಗೆ ನೆಟ್ಟಿಗರು ವಿಧವಿಧವಾಗಿ ಕಮೆಂಟ್‌ಗಳನ್ನು ಬರೆಯುತ್ತಿದ್ದಾಋಎ.

ಆದರೆ, ಅವರಲ್ಲಿ ಸಾಕಷ್ಟು ಮಂದಿ ಈ ವಿಡಿಯೋ ಮಾಡಿದವರು ಯಾರು? ಈ ವಿಡಿಯೋ ನಿಜವೋ ಅಥವಾ ಎಡಿಟ್ ಮಾಡಿರುವುದೋ ಗೊತ್ತಾಗುತ್ತಿಲ್ಲವಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಡಿಟ್‌ ಮಾಡಲಾಗಿದೆ. ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ವಾಗ್ದಾನ ಮಾಡುತ್ತಿದ್ದಾರೆ.

ಸತ್ಯಾಂಶವನ್ನು ತಿಳಿಯಲು ನಾವು "ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು" ಎಂಬ ಕೀವರ್ಡ್‌ನ ಮೂಲಕ ಹುಡುಕಾಟವನ್ನು ನಡೆಸಿದೆವು. ಆದರೆ ನಮಗೆ ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ. ಒಂದು ವೇಳೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರೆ ಖಂಡಿತಾ ಅದು ಸಾಮಾಜಿಕ ಮಾಧ್ಯಮಗಳಲಲಿ ಸಂಚಲನವನ್ನೇ ಉಂಟು ಮಾಡುತ್ತಿತ್ತು.

ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ವೈರಲ್‌ ವಿಡಿಯೋವಿನ ಕೆಲವು ಕ್ಲಿಪ್‌ನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಏಪ್ರಿಲ್ 3, 2024 ರಂದು ರಾಹುಲ್ ಗಾಂಧಿ ತಮ್ಮ ಅಧಿಕೃತ ಸಾಮಾಜಿಕ ಖಾತೆಯಲ್ಲಿ ನಾಮಪತ್ರ ಸಲ್ಲಿಸುವ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಇದೇ ವಿಡಿಯೋವನ್ನು ಎಡಿಟ್‌ ಮಾಡಿ ಕೆಲವರು ತಪ್ಪು ಮಾಹಿತಿಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಮೂಲ ವಿಡಿಯೋವಿಗೆ ಶೀರ್ಷಿಕೆಯಾಗಿ “ವಯನಾಡ್ ನನ್ನ ಮನೆ, ವಯನಾಡ್ ಜನರು ನನ್ನ ಕುಟುಂಬದವರು. ಕಳೆದ ಐದು ವರ್ಷಗಳಲ್ಲಿ ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ. ನನಗೆ ಇಲ್ಲಿನ ಜನಗಳಿಂದ ಪ್ರೀತಿ ಮತ್ತು ವಾತ್ಸಲ್ಯ ಸಿಕ್ಕಿದೆ. ಈ ಸುಂದರ ಭೂಮಿಯಿಂದ ನಾನು ಮತ್ತೊಮ್ಮೆ 2024ರ ಲೋಕಸಭಾ ಚುನಾವಣೆಗಾಗಿ ನನ್ನ ನಾಮನಿರ್ದೇಶನವನ್ನು ಸಲ್ಲಿಸುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಪೋಸ್ಟ್‌ ಮಾಡಿದ್ದರು.

"ನಾನು, ರಾಹುಲ್ ಗಾಂಧಿ, ಈ ಮೂಲಕ ಜನರ ಹೌಸ್‌ನಲ್ಲಿ ಸ್ಥಾನವನ್ನು ತುಂಬಲು ಅಭ್ಯರ್ಥಿಯಾಗಿ ನನ್ನ ನಾಮನಿರ್ದೇಶನವನ್ನು ಮಾಡುತ್ತಿದ್ದೇನೆ. ನನಗೆ ಭಾರತದ ಸಂವಿಧಾನದ ಬಗ್ಗೆ ನನಗೆ ನಂಬಿಕೆ ಮತ್ತು ನಿಷ್ಠೆ ಇದೆ. ನಾನು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸುತ್ತೇನೆ." ಎಂದು ರಾಹುಲ್‌ ಗಾಂಧಿ ಇಂಗ್ಲೀಷ್‌ನಲ್ಲಿ ಹೇಳುತ್ತಿರುವುದನ್ನು ನಾವು ಕಾಣಬಹುದು

ನಾವು ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ "Rahul Gandhi Filling Nomination for Wayanad Constituency" ಎಂಬ ಕೀವರ್ಡ್‌ನ ಮೂಲಕ ಹುಡುಕಾಟ ನಡೆಸಿದೆವು,ಹುಡುಕಾಟದಲ್ಲಿ ನಮಗೆ ಹಲವಾರು ಮಾಧ್ಯಮ ಸಂಸ್ಥೆಗಳು ಈ ಕುರಿತು ವರದಿಯನ್ನು ಮಾಡಿರುವುದನ್ನು ನಾವು ಕಂಡುಕೊಂಡೆವು.

ಏಪ್ರಿಲ್ 3, 2024 ರಂದು, ದಿ ಹಿಂದೂ ಪತ್ರಿಕೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ “Congress leader #RahulGandhi submitting nomination papers to #Wayanad district collector Renu Raj on Wednesday” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಹಿಂದೂಸ್ತಾನ್‌ ಟೈಮ್ಸ್‌ ವರದಿಯ ಪ್ರಕಾರ “Rahul Gandhi's 1st reaction after filing nomination from Wayanad Lok Sabha seat: ‘Will not rest until…’ ಎಂದು ವರದಿಯನ್ನು ಪ್ರಕಟಿಸಿದೆ

ಇಂಡಿಯಾ ಟುಡೆ ವರದಿಯಲ್ಲೂ ಸಹ “‘I, Rahul Gandhi…’: Watch Congress leader filing nomination from Wayanad” ರಾಜೀನಾಮೆ ನೀಡಿ ಇಟಲಿಗೆ ಹೋಗುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಎಲ್ಲಿಯೂ ಹೇಳಿಲ್ಲ ಎಂದು ರಾಹುಲ್ ಗಾಂಧಿಯವರ ಬಗ್ಗೆ ವರದಿಯನ್ನು ಪ್ರಕಟಿಸಿದೆ

ವೈರಲ್ ಆಗಿರುವ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂಲ ವಿಡಿಯೋವಿನಲ್ಲಿ ರಾಹುಲ್‌ ಗಾಂಧಿ ವಯನಾಡ್‌ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಪ್ರತಿಜ್ಞೆ ಮಾಡಿದ ವಿಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ವೈರಲ್‌ ಮಾಡಲಾಗಿದೆ.

Claim :  ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?
Claimed By :  Social Media Users
Fact Check :  False
Tags:    

Similar News