ಫ್ಯಾಕ್ಟ್‌ಚೆಕ್: ಹಸು ಯುವಕನನ್ನು ತಳ್ಳಿ ಆತನ ಪ್ರಾಣವನ್ನು ಉಳಿಸಿತು ಎಂದು ಎಐ ವಿಡಿಯೋ ಹಂಚಿಕೆ
ಹಸು ಯುವಕನನ್ನು ತಳ್ಳಿ ಆತನ ಪ್ರಾಣವನ್ನು ಉಳಿಸಿತು ಎಂದು ಎಐ ವಿಡಿಯೋ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆಯನ್ನು ನೋಡಬಹುದು. ಒಬ್ಬ ಯುವಕ ರಸ್ತೆ ಪಕ್ಕದಲ್ಲಿ ನಿಂತು ತನ್ನ ಮೊಬೈಲ್ ಫೋನ್ ನೋಡುತ್ತಾ ಇರುವುದನ್ನು ನೋಡಬಹುದು. ಆತ ತನ್ನ ಫೋನ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಸುತ್ತಮುತ್ತ ನಡೆಯುತ್ತಿರುವುದನ್ನು ಗಮನಿಸುವುದಿಲ್ಲ. ಅಷ್ಟರಲ್ಲಿ ಒಂದು ಹಸು ಅವನ ಹತ್ತಿರಕ್ಕೆ ಬಂದು ಆತನನ್ನು ದೂರ ತಳ್ಳುತ್ತದೆ. ಆಗ ಆ ಹುಡುಗ ಅಲ್ಲಿಂದ ಸ್ವಲ್ಪ ದೂರ ಸರಿಯುತ್ತಾನೆ. ಅದೇ ಕ್ಷಣದಲ್ಲಿ ಒಂದು ಕಾರು ವೇಗವಾಗಿ ರಸ್ತೆ ಬದಿಗೆ ಬರುತ್ತದೆ. ಯುವಕ ಮೊಬೈಲ್ ನೋಡುತ್ತಾ ಅಲ್ಲಿ ನಿಂತಿದ್ದರೆ ಕಾರು ಅವನಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಆದರೆ ಹಸು ಅವನ ಹತ್ತಿರ ಬಂದ ಕಾರಣ ಅವನು ಹಿಂದೆ ಸರಿದಿದ್ದರಿಂದ ಅಪಾಯದಿಂದ ತಪ್ಪಿಸಿಕೊಳ್ಳುತ್ತಾನೆ. ಈ ರೀತಿಯಾಗಿ ನೋಡಿದರೆ, ಆ ಕ್ಷಣದಲ್ಲಿ ಹಸು ಬಂದದ್ದರಿಂದಲೇ ಯುವಕ ಅಲ್ಲಿ ಸರಿದು ದೊಡ್ಡ ಅಪಘಾತದಿಂದ ಪಾರಾದಂತೆ ಕಾಣಿಸುತ್ತದೆ. ಹೀಗಾಗಿ ಈ ಘಟನೆಯನ್ನು ನೋಡಿದವರು “ಹಸು ಯುವಕನ ಪ್ರಾಣ ಉಳಿಸಿತು” ಎಂಬ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮಾರ್ಚ್ 13, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCow Suddenly Pushes Man. Car Crashes into his Exact Standing Spot Seconds Laterʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತದೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಒಂದು ಹಸು ಅಕಸ್ಮಾತಾಗಿ ಒಬ್ಬ ವ್ಯಕ್ತಿಯನ್ನು ತಳ್ಳುತ್ತದೆ. ಕೆಲವೇ ಕ್ಷಣಗಳ ನಂತರ, ಅವನು ನಿಂತಿದ್ದ ಅದೇ ಜಾಗಕ್ಕೆ ಒಂದು ಕಾರು ಬಂದು ಡಿಕ್ಕಿ ಹೊಡೆಯುತ್ತದೆ.ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮಾರ್ಚ್ 13,2026ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCow Suddenly Pushes Man. Car Crashes Into His Exact Standing Spot Seconds Laterʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಒಬ್ಬ ವ್ಯಕ್ತಿ ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಒಂದು ಹಸು ಅಚಾನಕ್ ಅವನನ್ನು ತಳ್ಳುತ್ತದೆ. ಹಸು ತಳ್ಳಿದ ಕಾರಣ ಅವನು ತನ್ನ ನಿಂತಿದ್ದ ಜಾಗದಿಂದ ಸ್ವಲ್ಪ ದೂರಕ್ಕೆ ಸರಿಯುತ್ತಾನೆ. ಕೆಲವೇ ಕ್ಷಣಗಳ ನಂತರ ಒಂದು ಕಾರು ಬಂದು ಅವನು ನಿಂತಿದ್ದ ಅದೇ ಜಾಗಕ್ಕೆ ಡಿಕ್ಕಿ ಹೊಡೆಯುತ್ತದೆ. ಹೀಗಾಗಿ ಹಸು ತಳ್ಳಿದದ್ದರಿಂದ ಆ ವ್ಯಕ್ತಿ ದೊಡ್ಡ ಅಪಘಾತದಿಂದ ಪಾರಾಗುತ್ತಾನೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇದೇ ಖಾತೆದಾರ ತನ್ನ ಖಾತೆಯಲ್ಲಿ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು. ಇಂತಹ ತಪ್ಪುಗಳು ಸಾಮಾನ್ಯವಾಗಿ ಎಐ ಮೂಲಕ ತಯಾರಿಸಿದ ವಿಡಿಯೋಗಳಲ್ಲಿ ಕಾಣಿಸುತ್ತವೆ. ಈ ಎಲ್ಲ ಕಾರಣಗಳಿಂದ ಈ ವಿಡಿಯೋ ಡಿಜಿಟಲ್ ರೀತಿಯಲ್ಲಿ ತಯಾರಿಸಿರಬಹುದು ಎಂಬ ಅನುಮಾನಗಳು ಮೂಡಿ ನಾವು ಎಐ ಟೂಲ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 93% ಶಾತದಷ್ಟು, ಮತ್ತೊಂದು ವಿಡಿಯೋ 96% ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಹೈವ್ ಮಾಡರೇಶನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು 99.1% ಪ್ರತಿಶಾತದಷ್ಟು, ಮತ್ತೊಂದು ವಿಡಿಯೋ 54.1% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ಎರಡು ವಿಡಿಯೋವು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಎಐ ಡಿಟೆಕ್ಟರ್ ಟೂಲ್ ʼಇಲುಮಿನಟ್ರೀʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು 58% ಪ್ರತಿಶಾತದಷ್ಟು, ಮತ್ತೊಂದು ವಿಡಿಯೋ 87.5% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.