ಫ್ಯಾಕ್ಟ್‌ಚೆಕ್: ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ ಎಂದು ಪಶ್ಚಿಮ ಬಂಗಾಳದಲ್ಲಿನ ಕಾಳಿ ವಿಗ್ರಹ ವಿಸರ್ಜನೆಯ ವೀಡಿಯೊ ಹಂಚಿಕೆ
ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ ಎಂದು ಪಶ್ಚಿಮ ಬಂಗಾಳದಲ್ಲಿನ ಕಾಳಿ ವಿಗ್ರಹ ವಿಸರ್ಜನೆಯ ವೀಡಿಯೊ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮುಳ್ಳುತಂತಿ ಬೇಲಿಯ ಉದ್ದಕ್ಕೂ ಸಾಲುಗಟ್ಟಿ ನಿಂತ ಜನರು ಮತ್ತು ಗೇಟ್ ಮೂಲಕ ನಿರ್ಗಮಿಸುವ ದೊಡ್ಡ ಗುಂಪೊಂದಿರುವ ವಿಡಿಯೋವೊಂದು ಹರಿದಾಡುತ್ತಿದೆ. ವಿಡಿಯೋವಿಗೆ ʼಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ. ಪುನೀತ್ ಕೆರೆಹಳ್ಳಿ ಅವರಿಗೆ ಕೆಟ್ಟದಾಗಿ ಮಾತನಾಡುವ ಜಿಹಾದಿ ಹಂದಿಗಳಿಗೆ ಈ ವಿಡಿಯೋ ಸಮರ್ಪಣೆʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಜನವರಿ 23, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ʼಅಕ್ರಮ ವಲಸಿಗರು ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ, ಒಬ್ಬ ಪುನೀತ್ ಕೆರೇಹಳ್ಳಿ ಇದ್ದದಕ್ಕೆ ಹೀಗೆ ಇನ್ನು ಎಲ್ಲ ಹಿಂದೂಗಳು ಒಂದಾದರೆ ಹೇಗಿರುತ್ತೆ.ʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 24, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಇದು ಹೆಮ್ಮೆ ಪಡುವ ವಿಷಯ ಮತ್ತು ವಿಚಾರ. ಹಿಂದೂ ಯಾವಾಗಲೂ ಒಬ್ಬಂಟಿಯ ಹೋರಾಟ ಅನ್ನೋದಕ್ಕೆ ಪುನೀತ್ ಕೆರೆಹಳ್ಳಿ ಸಾಕ್ಷಿ ನೋಡಿ. ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಹತ್ತು ಲಕ್ಷ ಜನ ಅಷ್ಟೇ ಹೊರಗೆ ಬಂದಿದ್ದು.. ಅಂದಿನ ಜನ ಸಂಖ್ಯೆ 33 ಕೋಟಿ ಇದ್ದರೂ ಸಹʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಬಾಂಗ್ಲಾದೇಶಿಯರು ಭಾರತಕ್ಕೆ ಕಾಲಿಟ್ಟರೆ ತಲೆ ತೆಗೆಯುತ್ತೇವೆ ಎಂದು ತಲವಾರು ಹಿಡಿದುಕೊಂಡು ನಿಂತ ವೀರ ಸನಾತನಿಗಳುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ ಎಂದು ಅಕ್ಟೋಬರ್ 30 2025ರಂದು ಪಶ್ಚಿಮ ಬಂಗಾಳದ ಫೂಂಕೋಟ್ಲಾದಲ್ಲಿ ನಡೆದ ಶ್ಯಾಮ ಪೂಜೆಯ ನಿಮಜ್ಜನ ಮೆರವಣಿಗೆ ಸಂಬಂಧಿಸಿದ್ದು.
ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋದಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಅಕ್ಟೋಬರ್ 30,2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋದಲ್ಲಿರುವ ಒಂದು ಭಾಗವು ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ಕಾಣಬಹುದು. ಭಾರತ-ಬಾಂಗ್ಲಾದೇಶ ಗಡಿಯ ಬಳಿಯ ಪಶ್ಚಿಮ ಬಂಗಾಳದ ಹಳ್ಳಿಯಾದ ಫೂನ್‌ಕೋಟ್ಲಾದಲ್ಲಿ ಶ್ಯಾಮಾ ಕಾಳಿ ಪೂಜೆಯ ಮುಳುಗಿಸುವ ಮೆರವಣಿಗೆಯ ವಿಡಿಯೋವಾಗಿದೆ.
ಫೇಸ್‌ಬುಕ್ ಲೈವ್ ವೀಡಿಯೊವನ್ನು ವೈರಲ್ ಕ್ಲಿಪ್‌ನೊಂದಿಗೆ ಹೋಲಿಸಿದಾಗ, ಎರಡೂ ವೀಡಿಯೊಗಳಲ್ಲಿ ಒಂದೇ ಜನರು ನೋಡಬಹುದು.
ಈ ಚಿತ್ರದಲ್ಲಿ ನೀವು ಮುಳ್ಳುತಂತಿ ಬೇಲಿ ಸೇರಿದಂತೆ ಹಿನ್ನೆಲೆ ಹೊಂದಿಕೆಯಾಗುವುದನ್ನು ನೋಡಬಹುದು. ಇದರಿಂದ ಈ ವೀಡಿಯೊ ನಿಜವಾಗಿಯೂ ಪಶ್ಚಿಮ ಬಂಗಾಳದ ಫೂಂಕೋಟ್ಲಾದಲ್ಲಿ ನಡೆದ ಶ್ಯಾಮ ಪೂಜೆಯ ನಿಮಜ್ಜನ ಮೆರವಣಿಗೆ ಸಂಬಂಧಿಸಿದ್ದೆಂದು. ಭಾರತದ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಮುರುಟಿಯಾ ಪೊಲೀಸ್ ಠಾಣೆಯ ಶಿಕಾರ್‌ಪುರದಲ್ಲಿ ಫಂಕಲ್ಟಾ ಎಂಬ ಗ್ರಾಮವಿದ್ದು, ಅಲ್ಲಿನ ಶ್ರೀ ಶ್ರೀ ಶ್ಯಾಮಾ ಮಾ ದೇವಸ್ಥಾನದಲ್ಲಿ ಪ್ರತಿ ವರ್ಷ ಕಾಳಿ ಪೂಜೆಯನ್ನು ಆಯೋಜಿಸಲಾಗುತ್ತದೆ.
ಅಷ್ಟೇ ಅಲ್ಲ, ನವಂಬರ್ 25, 2025ರಂದು ʼವೆಸ್ಟ್ ಬೆಂಗಾಲ್ ಪೊಲೀಸ್ʼ ಅಧಿಕೃತ ಎಕ್ಸ್ ಖಾತೆಯಲ್ಲಿ ʼA video/pic of immersion of Idol/Image of goddess Shyama/Kali of Village-Phunkotala (located near Bangladesh Border), PS- Murutia, District -Nadia, West Bengal in Mathabhanga river is being circulated as illegal immigrants leaving the state en masse due to SIR. This is FAKE and FALSE. ʼ ಎಂದು ಪೊಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವೈರಲ್ ವೀಡಿಯೊವನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಪೋಸ್ಟ್ ಹಂಚಿಕೊಂಡಿದೆ. ಇದು ವಾಸ್ತವವಾಗಿ ನಾಡಿಯಾ ಜಿಲ್ಲೆಯ ಫುಂಕೋಟಲಾ ಗ್ರಾಮದಲ್ಲಿ ಕಾಳಿ ವಿಗ್ರಹ ವಿಸರ್ಜನೆಯನ್ನು ತೋರಿಸುತ್ತದೆ, ರಾಜ್ಯವನ್ನು ತೊರೆಯುವ ಅಕ್ರಮ ವಲಸಿಗರಲ್ಲ ಎಂದು ಬರೆಯಲಾಗಿದೆʼ
ಇದರಿಂದ ಸಾಭೀತಾಗಿದ್ದೇನೆಂದರೆ, ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ ಎಂದು ಅಕ್ಟೋಬರ್ 30 2025ರಂದು ಪಶ್ಚಿಮ ಬಂಗಾಳದ ಫೂಂಕೋಟ್ಲಾದಲ್ಲಿ ನಡೆದ ಕಾಳಿ ವಿಗ್ರಹ ವಿಸರ್ಜನೆಯ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.