ಫ್ಯಾಕ್ಟ್‌ಚೆಕ್‌: ರಂಜಾನ್ ಸಮಯದಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ಎಂದು ಎಐ ವಿಡಿಯೋ ಹಂಚಿಕೆ

ರಂಜಾನ್ ಸಮಯದಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ಎಂದು ಎಐ ವಿಡಿಯೋ ಹಂಚಿಕೆ

Update: 2026-03-14 06:30 GMT

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ಯುದ್ಧದಂತಹ ಉದ್ವಿಗ್ನ ಪರಿಸ್ಥಿತಿ ಫೆಬ್ರವರಿ ತಿಂಗಳ ಕೊನೆಯ ವಾರದಿಂದ ಹೆಚ್ಚು ತೀವ್ರವಾಗಿದೆ. ವೈಮಾನಿಕ ದಾಳಿಗಳ ವೇಳೆ ಇರಾನ್‌ನ ನಾಯಕ ಅಲಿ ಖಾಮೆನೇಯಿ ಮೃತಪಟ್ಟಿದ್ದಾರೆ ಎಂಬ ವರದಿಗಳು ಹೊರಬಂದ ನಂತರ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ಅದರ ನಂತರದಿಂದ ಅಮೆರಿಕಾ ಇರಾನ್ ಮೇಲೆ ದಾಳಿ ನಡೆಸುವುದು, ಅದಕ್ಕೆ ಪ್ರತಿಯಾಗಿ ಇರಾನ್ ಕ್ರಮ ತೆಗೆದುಕೊಳ್ಳುವುದು ಇತ್ಯಾದಿ ಘಟನೆಗಳು ಆ ಪ್ರದೇಶದಲ್ಲಿ ಮುಂದುವರಿದಿವೆ. ಈ ಪರಿಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಫೇಕ್‌ ವಿಡಿಯೋಗಳು ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣದ ಬಳಕೆದಾರರು ಈ ವಿಡಿಯೋಗಳನ್ನು ನಿಜವಾದ ಘಟನೆ ಎಂದು ಹೇಳಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಆ ವಿಡಿಯೋದಲ್ಲಿ ಮಸೀದಿಯಂತೆ ಕಾಣುವ ಕಟ್ಟಡದ ಒಳಗೆ ಗೊಂದಲ ಉಂಟಾಗಿರುವ ದೃಶ್ಯಗಳನ್ನು ನೋಡಬಹುದು. ಅಲ್ಲಿ ಪ್ರಾರ್ಥನೆ ಮಾಡಲು ಬಂದ ಜನರು ಒಳ ಹೋಗುವಾಗ ಪ್ರವೇಶ ದ್ವಾರದ ಬಳಿ ಏಕಾಏಕಿ ದೊಡ್ಡ ಸ್ಫೋಟ ಸಂಭವಿಸಿದಂತೆ ವಿಡಿಯೋದಲ್ಲಿ ಕಾಣುತ್ತದೆ. ಸ್ಫೋಟದ ನಂತರ ಗಟ್ಟಿಯಾಗಿ ಹೊಗೆ ಬರುವುದು, ಧೂಳು ತುಂಬಿರುವ ದೃಶ್ಯವನ್ನು ನೋಡಬಹುದು ಮತ್ತು ಕಟ್ಟಡದ ಅವಶೇಷಗಳು ತುಂಡುಗಳಾಗಿ ಹಾರುವುದು ಕೂಡ ಕಾಣಿಸುತ್ತದೆ. ಇದನ್ನು ಕಂಡು ಅಲ್ಲಿ ಇದ್ದ ಜನರು ಭಯದಿಂದ ಕಿರುಚುತ್ತಾ ಹೊರಗೆ ಓಡಿಹೋಗುತ್ತಾರೆ. ಕೆಲವರು ಅಲ್ಲಿಯೇ ಜಾರಿ ಬಿದ್ದುಕೊಳ್ಳುವ ದೃಶ್ಯಗಳು ಕೂಡ ವಿಡಿಯೋದಲ್ಲಿ ಕಾಣಿಸುತ್ತವೆ.

ಮಾರ್ಚ್‌ 10 ,2026ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼರಂಜಾನ್ ಸಮಯದಲ್ಲಿ ಇರಾನ್ ಮೇಲೆ #ಇಸ್ರೇಲ್ ದಾಳಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮಾರ್ಚ್‌ 11, 2026ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ತೆಲುಗಿನಲ್ಲಿ ʼఇదేమీ ai కాదు. Iran లో బాంబుల వర్షం..మదమెక్కిన మతం కోసం ఒకడి పాకులాట తో మొదలైన యుద్ధం తీవ్రమై దేశ దేశాలకి పాకి తీవ్ర యుద్ధంగా పరిణమించింది. రష్యా కూడా రంగంలోకి దిగడంతో మరింత తీవ్రమైంది. పాకీ ఊరికే ఉండదుగా ఇరాన్ మీద కాలుదువ్వింది. ఇరాన్ పాకిని కొట్టడానికి సిద్ధమైంది. పాకీ లో ఇప్పటికే ప్రజలకి తిండి లేదు.. బలుచిస్తాన్ సిస్తాన్ పుండు మీద కారం లా తయారయ్యాయి. వీటికి తోడు షియా ముస్లిం లు పాకి వ్యతిరేకంగా తయారయ్యారు. ముప్పేట దాడిలో పాకి భవిష్యత్తు ఎలా ఉండబోతోంది అంటే మ్యాప్ లో ఒకప్పుడు ఉండేది అని చెప్పుకోవడానికి సిద్ధమైంది. ముస్లిం క్రిస్టియన్ దేశాలు చాలావరకు నాశనం అవ్వడం ఖాయం. రాబోయే 15 నుండి 20 ఏళ్లలో వాళ్ళల్లో వాళ్ళు కొట్టుకు చస్తారు చూస్తూ ఉండండి.. ప్రస్తుతం జరిగేది శాంపిల్ మాత్రమే. భూమికి చికిత్స మొదలైందిʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇದು ಏಐ ಮೂಲಕ ತಯಾರಿಸಿದ ವಿಡಿಯೋ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಇರಾನ್‌ನಲ್ಲಿ ಬಾಂಬ್ ದಾಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಧರ್ಮದ ಹೆಸರಿನಲ್ಲಿ ಆರಂಭವಾದ ಈ ಸಂಘರ್ಷ ಈಗ ನಿಧಾನವಾಗಿ ದೊಡ್ಡ ಯುದ್ಧದ ಸ್ವರೂಪ ಪಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ದೇಶಕ್ಕೆ ಮಾತ್ರ ಸೀಮಿತವಾಗಿದ್ದ ಈ ಸಮಸ್ಯೆ ಈಗ ಹಲವಾರು ದೇಶಗಳಿಗೆ ಹರಡುವ ಆತಂಕವೂ ವ್ಯಕ್ತವಾಗುತ್ತಿದೆ. ಈ ಮಧ್ಯೆ ರಷ್ಯಾ ಕೂಡ ಈ ವಿಚಾರದಲ್ಲಿ ಭಾಗವಹಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ಇರಾನ್ ವಿರುದ್ಧ ಕಠಿಣ ನಿಲುವು ತಾಳಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಪ್ರತಿಯಾಗಿ ಇರಾನ್ ಕೂಡ ಪಾಕಿಸ್ತಾನಕ್ಕೆ ಎದುರಿಸಲು ಸಿದ್ಧವಾಗುತ್ತಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಪಾಕಿಸ್ತಾನದಲ್ಲೇ ಆರ್ಥಿಕ ಪರಿಸ್ಥಿತಿ ತುಂಬಾ ದುರ್ಬಲವಾಗಿದೆ ಎಂದು ವರದಿಗಳು ಹೇಳುತ್ತಿವೆ. ಹಲವಾರು ಕಡೆ ಜನರು ಜೀವನ ನಡೆಸಲು ಕಷ್ಟಪಡುವ ಸ್ಥಿತಿ ಇದೆ ಎನ್ನಲಾಗುತ್ತಿದೆ. ಬಲೂಚಿಸ್ತಾನ್ ಮತ್ತು ಸಿಸ್ತಾನ್ ಪ್ರದೇಶಗಳಲ್ಲಿ ಈಗಾಗಲೇ ಸಮಸ್ಯೆಗಳು ಇದ್ದು, ಅದು ಇನ್ನಷ್ಟು ತೀವ್ರವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ಶಿಯಾ ಮುಸ್ಲಿಂ ಸಮುದಾಯದಲ್ಲೂ ಅಸಮಾಧಾನ ಹೆಚ್ಚಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಕೆಲವರು ಮುಂದಿನ 15 ರಿಂದ 20 ವರ್ಷಗಳಲ್ಲಿ ಕೆಲವು ದೇಶಗಳಲ್ಲಿ ಒಳಸಂಘರ್ಷಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈಗ ನಡೆಯುತ್ತಿರುವುದು ದೊಡ್ಡ ಸಮಸ್ಯೆಯ ಆರಂಭ ಮಾತ್ರ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮಾರ್ಚ್‌ 11, 2026ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼलाहौर कुवैत बिल्ला; अल्ला के मर्जी के बिना एक पत्ता भी नहीं हिलता है.!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಲ್ಲಾಹನ ಇಚ್ಛೆಯಿಲ್ಲದೆ ಒಂದು ಎಲೆ ಕೂಡ ಅಲುಗಾಡುವುದಿಲ್ಲʼ ಎಂದು ಬರೆದಿರುವುದನ್ನು ನೋಡಬಹುದು

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.

ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್‌ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು. ವೀಡಿಯೊವನ್ನು ಜಾಗ್ರತೆಯಿಂದ ನೋಡಿದಾಗ ಇದರಲ್ಲಿ AI ಮೂಲಕ ಮಾಡಿರುವಂತೆ ಕಾಣುವ ಹಲವು ಲಕ್ಷಣಗಳು ಕಾಣಿಸುತ್ತವೆ. ಸ್ಫೋಟವಾಗುವ ರೀತಿ ಸಹಜವಾಗಿ ಕಾಣಿಸುವುದಿಲ್ಲ. ನಿಜವಾದ ಸ್ಫೋಟದಲ್ಲಿ ಕಾಣಿಸುವ ಹೊಗೆ ಮತ್ತು ಬೆಂಕಿಯ ಹರಡುವಿಕೆಯಂತಿಲ್ಲ, ಇಲ್ಲಿ ಅವು ಸ್ವಲ್ಪ ವಿಚಿತ್ರವಾಗಿ ಮತ್ತು ಅಸಮಂಜಸವಾಗಿ ಹರಡುತ್ತಿರುವಂತೆ ಕಾಣುತ್ತದೆ. ಅಷ್ಟೇ ಅಲ್ಲದೆ, ಹಿನ್ನೆಲೆಯಲ್ಲಿರುವ ಕಟ್ಟಡಗಳು ಮತ್ತು ವಸ್ತುಗಳು ಕೆಲವೆಡೆ ಬಾಗಿದಂತೆ ಅಥವಾ ರೂಪ ಬದಲಾಗಿದಂತೆ ಕಾಣುತ್ತವೆ. ಇದು ಸಾಮಾನ್ಯವಾಗಿ AI ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಒಂದು ತಪ್ಪಾಗಿದೆ. ಮತ್ತೊಂದು ವಿಷಯ ಎಂದರೆ, ಸ್ಫೋಟವಾದ ನಂತರ ಅಲ್ಲಿ ಇದ್ದ ಜನರ ಚಲನೆಗಳು ಸಹಜವಾಗಿಲ್ಲ. ಕೆಲವರ ದೇಹಗಳು ವಿಚಿತ್ರವಾಗಿ ಬದಲಾಗಿದಂತೆ ಕಾಣುತ್ತದೆ. ಕೆಲ ಸಂದರ್ಭಗಳಲ್ಲಿ ವ್ಯಕ್ತಿಗಳು ಅಚಾನಕ್ ಕಾಣೆಯಾಗಿದಂತೆ ಆಗಿ, ಮತ್ತೆ ಕಾಣಿಸಿಕೊಳ್ಳುವಂತೆ ಕೂಡ ಕಾಣುತ್ತದೆ. ಇವುಗಳನ್ನೆಲ್ಲ ನೋಡಿದರೆ, ಈ ವಿಡಿಯೋ ನಿಜವಾದದ್ದು ಅಲ್ಲದೇ AI ಮೂಲಕ ತಯಾರಿಸಿದದ್ದಾಗಿರಬಹುದು ಎಂಬ ಅನುಮಾನ ಮೂಡುತ್ತದೆ. ಇಂತಹ ತಪ್ಪುಗಳು ಸಾಮಾನ್ಯವಾಗಿ ಎಐ ಮೂಲಕ ತಯಾರಿಸಿದ ವಿಡಿಯೋಗಳಲ್ಲಿ ಕಾಣಿಸುತ್ತವೆ. ಈ ಎಲ್ಲ ಕಾರಣಗಳಿಂದ ಈ ವಿಡಿಯೋ ಡಿಜಿಟಲ್ ರೀತಿಯಲ್ಲಿ ತಯಾರಿಸಿರಬಹುದು ಎಂಬ ಅನುಮಾನಗಳು ಮೂಡಿ ನಾವು ಎಐ ಟೂಲ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು.


ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 94% ಶಾತದಷ್ಟು, ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಎಐ ಡಿಟೆಕ್ಟರ್‌ ಟೂಲ್‌ ʼಇಲುಮಿನಟ್ರೀʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು 86.4% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಮಾರ್ಚ್‌ 10 , 2026ರಂದು ಮಿರರ್‌ ನೌ ಯೂಟ್ಯೂಬ್‌ ಖಾತೆಯಲ್ಲಿ ʼಇರಾನ್ ಯುದ್ಧ ತೀವ್ರಗೊಂಡಂತೆ ಅಮೆರಿಕ, ಇಸ್ರೇಲ್ ಇಸ್ಫಹಾನ್ ಮಸೀದಿಗೆ ಹಾನಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಾನಿ: ವರದಿಗಳುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಈ ವರದಿಗಳ ಪ್ರಕಾರ ಇಸ್ಫಹಾನ್‌ನ ನಕ್ಷ್-ಇ ಜಹಾನ್ ಚೌಕದ ಬಳಿ ದಾಳಿ ನಡೆದಿದ್ದು, ಅಲ್ಲಿನ ಕೆಲವು ಪಾರಂಪರಿಕ ತಾಣಗಳಿಗೆ ಹಾನಿಯಾಗಿರಬಹುದು ಎಂಬ ಮಾಹಿತಿ ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಸೀದಿಯೊಳಗೆ ಸ್ಫೋಟವಾಗುತ್ತಿದ್ದಾಗ ಜನರು ಒಳಗೆ ಓಡುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಇಂತಹ ದೃಶ್ಯಗಳಿಗೆ ಹೊಂದಿಕೆಯಾಗುವ ಯಾವುದೇ ವಿಡಿಯೋ ಅಥವಾ ದೃಢವಾದ ದಾಖಲೆಗಳು ಆ ವರದಿಗಳಲ್ಲಿ ಕಾಣಿಸಿಲ್ಲ.

Full View

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ರಂಜಾನ್ ಸಮಯದಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News