ಫ್ಯಾಕ್ಟ್‌ಚೆಕ್: ಇರಾನ್‌ನ ನಾಯಕ ಅಲಿ ಖಮೇನಿ ಪಾರ್ಥಿವ ಶರೀರದ ವಿಡಿಯೋ ಎಂದು ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್-ಖೈರುಲ್ಲಾ ವಿಡಿಯೋ ಹಂಚಿಕೆ
ಇರಾನ್‌ನ ನಾಯಕ ಅಲಿ ಖಮೇನಿ ಪಾರ್ಥಿವ ಶರೀರದ ವಿಡಿಯೋ ಎಂದು ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್-ಖೈರುಲ್ಲಾ ವಿಡಿಯೋ ಹಂಚಿಕೆ
ಸಾಮಾಜಿಕ ಜಾಲತಾಣಗಳಲ್ಲಿ “ಅಲಿ ಖಮೇನಿ ಅಂತಿಮ ಯಾತ್ರೆ” ಎಂದು ಹೇಳಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇರಾನ್‌ನ ಸುಪ್ರೀಂ ಲೀಡರ್ ಆಗಿದ್ದ ಖಮೇನಿ 28 ಫೆಬ್ರವರಿ 2026ರಂದು ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ನಡೆದ ಅಮೆರಿಕಾ–ಇಸ್ರೇಲ್ ಸಂಯುಕ್ತ ವಾಯು ದಾಳಿಯಲ್ಲಿ ಸಾವನ್ನಪ್ಪಿದರು ಎಂದು ಇರಾನ್ ಸರ್ಕಾರ ದೃಢಪಡಿಸಿತು. ಅವರ ನಿಧನದ ನಂತರ ದೇಶದಲ್ಲಿ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಯಿತು. ಇದರ ನಡೆವೆ ಸಾಮಾಜಿಕ ಜಾಲತಾಣದಲ್ಲಿ ಖಮೇನಿ ಅಂತಿಮ ಯಾತ್ರೆ ಎಂಬ ಶಿರ್ಷಿಕೆಯೊಂದಿಗೆ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ
ಮಾರ್ಚ್ 02, 2026ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಇರಾನಿಯ ಮುಖ್ಯಸ್ಥ ಖಮೇನಿ ಅಂತಿಮ ಯಾತ್ರೆ!!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮಾರ್ಚ್ 02, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼBREAKING: Body Of Iran's Supreme Leader Ali Khamenei Arrives Amid National Mourningʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್: ರಾಷ್ಟ್ರವ್ಯಾಪಿ ಶೋಕಾಚರಣೆ ನಡೆಯುತ್ತಿರುವ ನಡುವೆಯೇ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಪಾರ್ಥಿವ ದೇಹ ಆಗಮಿಸಿದೆʼ ಎಂದು ಬರೆದಿರುವುದನದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮಾರ್ಚ್ 02, 2026ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIran TV announced the death of their supreme leader kill by US - Isreal strikʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಾಜ್ಯ ಟೆಲಿವಿಷನ್ ಘೋಷಿಸಿದೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ವೀಡಿಯೊ ಅಯತೊಲ್ಲ ಅಲಿ ಖಮೇನಿ ಅವರ ಅಂತಿಮ ಯಾತ್ರೆಯದ್ದಲ್ಲ, ಇದು ಇರಾಕ್‌ನ ಶುವಾಯ್ಲತ್ ಎಂಬ ಬುಡಕಟ್ಟಿನ ಮುಖ್ಯಸ್ಥ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್-ಖೈರುಲ್ಲಾ ಅವರ ನಿಧನದ ವೀಡಿಯೊ
ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫೆಬ್ರವರಿ 03, 2026ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಇರಾಕ್‌ನಲ್ಲಿ ಜನರಿಗೆ ಸಹಾಯ ಮಾಡುವ ಗುಣ ಮತ್ತು ಉದಾರತೆಗೆ ಪ್ರಸಿದ್ಧರಾಗಿದ್ದ ಶೇಖ್ ಅರ್ಕಾನ್ ಹಮೀದ್ ಮೊಹಾನ್‌ಗೆ ಇಂದು ಅಂತಿಮ ವಿದಾಯ ಹೇಳಲಾಗಿದೆ. ಆತ ಶುಯ್ಲಾತ್ ಕುಲದ ಪ್ರಮುಖ ನಾಯಕ, ಸಮಾಜ ಸೇವೆ ಮತ್ತು ಜನರಿಗೆ ನೆರವಾಗುವುದರಿಂದ ಪರಿಚಿತರಾಗಿದ್ದರು. ಶೇಖ್ ಅರ್ಕಾನ್ ಹಮೀದ್ ಮೊಹಾನ್ ನಿಧನದಿಂದ ಕುಟುಂಬದವರು ದುಃಖ ವ್ಯಕ್ತಪಡಿಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫೆಬ್ರವರಿ 03, 2026ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ 1 ನಿಮಿಷ 41 ಸೆಕೆಂಡಿನ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದ ಕೊನೆಯ ಭಾಗ 59ನೇ ಸೆಕೆಂಡ್‌ನಿಂದ 1 ನಿಮಿಷ 41 ಸೆಕೆಂಡ್ ವರೆಗೆ ವಿಡಿಯೋವನ್ನು ಗಮನಿಸಿದರೆ, ಇತ್ತೀಚಿಗೆ ವೈರಲ್ ಆಗುತ್ತಿರುವ ವೀಡಿಯೊಗೆ ಸಂಪೂರ್ಣವಾಗಿ ಹೋಲುತ್ತದೆ. ಎರಡೂ ವೀಡಿಯೊಗಳಲ್ಲಿ ಅದೇ ಜನರು ಮತ್ತು ಅದೇ ಸ್ಥಳದ ದೃಶ್ಯಗಳು ಕಾಣಿಸುತ್ತವೆ. ವೀಡಿಯೊದ ಮೊದಲ ಭಾಗದಲ್ಲಿ ಒಬ್ಬ ವ್ಯಕ್ತಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ನೋಡಬಹುದು.
ಮತ್ತಷು ಹುಡುಕಾಟ ಮಾಡಿದಾಗ, ಈ ಫೋಟೋದಲ್ಲಿರುವ ವ್ಯಕ್ತಿ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್ ಖೈರುಲ್ಲಾ ಎಂದು ನಮಗೆ ತಿಳಿದುಬಂದಿತು. ಈತ ಇರಾಕ್‌ನ ಶುವಾಯ್ಲತ್ ಬುಡಕಟ್ಟಿನ ಪ್ರಮುಖ ನಾಯಕ. ತಮ್ಮ ಸಮಾಜದಲ್ಲಿ ಜನರಿಗೆ ಸಹಾಯ ಮಾಡುವ ಗುಣ ಮತ್ತು ನಾಯಕತ್ವದಿಂದ ಪ್ರಸಿದ್ಧರಾಗಿದ್ದರು. ಆತನ ನಿಧನವಾದ ನಂತರ, ಇರಾಕ್‌ನ ಹಲವರು ಫೇಸ್‌ಬುಕ್‌ನಲ್ಲಿ ಅವರ ಫೋಟೋವನ್ನು ಹಂಚಿಕೊಂಡು ದುಃಖ ವ್ಯಕ್ತಪಡಿಸಿದ್ದಾರೆ. ಆ ಪೊಸ್ಟ್‌ಗಳನ್ನು ನೀವಿಲ್ಲಿ ನೋಡಬಹುದು
ಅಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿ ಕಾಣುವ ಹಲವಾರು ಪೋಸ್ಟ್‌ಗಳಲ್ಲಿ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್ ಖೈರುಲ್ಲಾ ಪಾರ್ಥಿವ ದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ತರಲಾಗುತ್ತಿರುವುದು ಹಾಗೂ ಅಂತ್ಯಕ್ರಿಯೆಯ ವಿವಿಧ ದೃಶ್ಯಗಳ ವೀಡಿಯೊಗಳು ಕಂಡುಬಂದಿವೆ. ಅವುಗಳಲ್ಲಿ ಕೆಲವು ಯೂಟ್ಯೂಬ್ ವೀಡಿಯೊಗಳಲ್ಲಿಯೂ ಅರ್ಕನ್ ಹಮೀದ್ ಮೋಹನ್ ಅವರ ಅಂತ್ಯಕ್ರಿಯೆಯ ದೃಶ್ಯಗಳು ದೊರಕಿವೆ. ಆ ವೀಡಿಯೊಗಳನ್ನು ಗಮನಿಸಿದಾಗ, ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಅಳುತ್ತಿರುವ ಅದೇ ವ್ಯಕ್ತಿಯನ್ನು ಅಲ್ಲಿಯೂ ಕಾಣಬಹುದು. ಇದರಿಂದ ವೈರಲ್ ವೀಡಿಯೊ ಕೂಡ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದದ್ದೇ ಎಂದು ಸ್ಪಷ್ಟವಾಗುತ್ತದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವಾಸ್ತವವಾಗಿ ವೈರಲ್ ವೀಡಿಯೊ ಅಯತೊಲ್ಲ ಅಲಿ ಖಮೇನಿ ಅಂತಿಮ ಯಾತ್ರೆಗೆ ಸಂಬಂಧಿಸಿದ್ದಲ್ಲ, ಇದು ಇರಾಕ್‌ನ ಶುವಾಯ್ಲತ್ ಎಂಬ ಬುಡಕಟ್ಟಿನ ಮುಖ್ಯಸ್ಥ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್-ಖೈರುಲ್ಲಾ ಅವರ ನಿಧನದ ವೀಡಿಯೊ ಎಂದು ಸಾಭೀತಾಯಿತು