ಫ್ಯಾಕ್ಟ್‌ಚೆಕ್‌: ಅನುಚಿತ ಬಟ್ಟೆ ಧರಿಸಿ ದೇಹ ಪ್ರದರ್ಶನ ಮಾಡುವ ಹುಡುಗಿಯರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ದ್ರೌಪದಿ ಮುರ್ಮು ಹೇಳಿಲ್ಲ

ಅನುಚಿತ ಬಟ್ಟೆ ಧರಿಸಿ ದೇಹ ಪ್ರದರ್ಶನ ಮಾಡುವ ಹುಡುಗಿಯರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ದ್ರೌಪದಿ ಮುರ್ಮು ಹೇಳಿಲ್ಲ

Update: 2026-03-08 11:16 GMT

​ದ್ರೌಪದಿ ಮುರ್ಮುಗೆ ಸಂಬಂಧಿಸಿದ ಪೋಸ್ಟ್‌ವೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಆ ಪೋಸ್ಟ್‌ನಲ್ಲಿ, “ಅನುಚಿತ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕಾಣಿಸುವ ಹುಡುಗಿಯರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಮತ್ತು ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್‌ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ ಎಂದು ಪೊಸ್ಟ್‌ ಮಾಡಲಾಗಿದೆ.

ಫೆಬ್ರವರಿ 27, 2026ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದೇನೆಂದರೆ, ಯಾವ ಹುಡುಗಿಯರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದೇಹ ಪ್ರದರ್ಶನ ಮಾಡುತ್ತಾರೋ ಅಥವಾ ಅಶ್ಲೀಲ ವಿಡಿಯೋಗಳನ್ನು ಮಾಡುತ್ತಾರೋ, ಅದು ಸಣ್ಣ ಹುಡುಗರ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಮತ್ತು ಅತ್ಯಾಚಾರದಂತಹ ಘಟನೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ಹುಡುಗಿಯರ ಅಕೌಂಟ್‌ಗಳನ್ನು ಡಿಲೀಟ್ ಮಾಡಲಾಗುವುದು ಮತ್ತು ಅವರ ಮೇಲೆ ಕೇಸ್ ಕೂಡ ದಾಖಲಿಸಲಾಗುವುದುʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)

ಫೆಬ್ರವರಿ 28, 2026ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಸಾಮಾಜಿಕ ಜಾಲತಾಣ ಗಳಲ್ಲಿ ಅರೆನಗ್ನ ಹಾಗೂ ಅಶ್ಲೀಲವಾದೆ ವಿಡಿಯೋ ಹಾಗೂ ಚಿತ್ರಗಳನ್ನು ಪೋಸ್ಟ್ ಮಾಡುವುದು,ಅಪ್ರಾಪ್ತ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದ್ದು ಇದರಿಂದ ಸಮಾಜದಲ್ಲಿ ಅಹಿತಕರ ಘಟನೆ ಗಳು ನಡೆಯುತ್ತಿರುವ ಕಾರಣ ಅಂತಹ ಸಾಮಾಜಿಕ ಜಾಲತಾಣ ಅಕೌಂಟ್ ಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡುವ ಕುರಿತು ನಮ್ಮ ರಾಷ್ಟ್ರಪತಿ " ದ್ರೌಪದಿ ಮುರ್ಮು"ರವರು ಎಚ್ಚರಿಕೆ ನೀಡಿದ್ದಾರೆ! ರಾಷ್ಟ್ರಪತಿಗಳ ನಿರ್ಧಾರಕ್ಕೆ ಒಂದು ಮೆಚ್ಚುಗೆ ಇರಲಿʼ ಎಂಬ ಶೀರ್ಷಿಕೆಯೊಂದಿಗೆ ರೀಲ್‌ ಶೇರ್‌ ಮಾಡಿದ್ದಾರೆ.

https://youtube.com/shorts/B0vP8VOht-c?si=QZCtmxLcVHBZO6vx

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)

​Youtube.jpg​

ಫೆಬ್ರವರಿ 24, 2026ರಂದು ಫೇಸ್‌ಬುಕ್‌ ಖಾತೆದಾರರರೊಬ್ಬರು ತಮ್ಮ ಖಾತೆಯಲ್ಲಿ ʼಕೆಲವು ಹುಡುಗಿಯರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದೇಹವನ್ನು ಹೆಚ್ಚು ತೋರಿಸುವ ಫೋಟೋಗಳು ಅಥವಾ ಅಸಭ್ಯ ವಿಡಿಯೋಗಳನ್ನು ಹಾಕುತ್ತಾರೆ. ಇವುಗಳನ್ನು ನೋಡಿದಾಗ ಸಣ್ಣ ಹುಡುಗರ ಮೇಲೆ ಕೆಟ್ಟ ಪರಿಣಾಮ ಬೀಳಬಹುದು ಎಂದು ಹೇಳಲಾಗುತ್ತಿದೆ. ಅದರಿಂದ ಸಮಾಜದಲ್ಲಿ ಅತ್ಯಾಚಾರದಂತಹ ಘಟನೆಗಳು ಹೆಚ್ಚಾಗಬಹುದು ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ. ಆ ಕಾರಣದಿಂದ ಇಂತಹ ರೀತಿಯ ಕಂಟೆಂಟ್ ಹಾಕುವ ಹುಡುಗಿಯರ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಡಿಲೀಟ್ ಮಾಡಬಹುದು ಮತ್ತು ಅವರ ಮೇಲೆ ಕಾನೂನು ಕ್ರಮ ಕೂಡ ಕೈಗೊಳ್ಳಬಹುದು ಎಂದು ಹೇಳಲಾಗಿದೆ.ʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿಲಾಗಿದೆ.

https://www.facebook.com/share/p/1CX8HraWJy/

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)

​Facebook.jpg​

ವೈರಲ್‌ ಆದ ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ ನೋಡಬಹುದು

https://www.instagram.com/reel/DVIquy2kdy3/

https://youtube.com/shorts/-4jBKo8nS8o?si=00vcHIs0R68gbmfp

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಷ್ಟ್ರಪತಿ ಮುರ್ಮು ʼಅನುಚಿತ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕಾಣಿಸುವ ಹುಡುಗಿಯರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಮತ್ತು ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್‌ ಮಾಡಲಾಗುತ್ತದೆʼ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಯಾವುದೇ ಹೇಳಿಕೆಯನ್ನು ನೀಡಿಲ್ಲ.

ನಾವು ವೈರಲ್‌ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳೀಯಲು ವೈರಲ್‌ ಆದ ಪೊಸ್ಟ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಯಾವುದೇ ವಿಶ್ವಾಸರ್ಹ ವರದಿಗಳು ಕಂಡುಬಂದಿಲ್ಲ. ಮುರ್ಮು ಮಹಿಳೆಯರ ಉಡುಪಿನ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ನಾವು ರಾಷ್ಟ್ರಪತಿ ಮುರ್ಮು ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಹೇಳಿಕೆಗಳು ಯಾವುದೇ ಕಂಡುಬಂದಿಲ್ಲ.

https://www.instagram.com/presidentofindia/?hl=en

http://x.com/rashtrapatibhvn

ನಾವು ಹುಡುಕಾಟ ಮಾಡುವ ಸಮಯದಲ್ಲಿ ಫೆಬ್ರವರಿ 24, 2026ರಂದು ಪಿಐಬಿ ಫ್ಯಾಕ್ಟ್‌ಚೆಕ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ʼसोशल मीडिया पर वायरल एक इंस्टाग्राम रील के माध्यम से यह दावा किया जा रहा है कि राष्ट्रपति द्रौपदी मुर्मू ने यह बयान दिया है कि सोशल मीडिया पर जो भी अभिनेत्री अनुचित कपड़े पहनकर पोस्ट डालती है, उसका आधार कार्ड बैन कर दिया जाएगा और उसके सभी सोशल मीडिया अकाउंट डिलीट कर दिए जाएंगे।ʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕಯೆನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಹೇಳಿಕೆ ಸಂಪೂರ್ಣ ಸುಳ್ಳು. ಸೋಷಿಯಲ್ ಮೀಡಿಯಾದಲ್ಲಿ ರೀಲ್ ವೈರಲ್ ಆಗಿದ್ದು, ಅದರಲ್ಲಿ “ಅನುಚಿತ ಉಡುಪುಗಳನ್ನು ಧರಿಸಿ ಫೋಟೋ ಅಥವಾ ವಿಡಿಯೋಗಳನ್ನು ಪೋಸ್ಟ್ ಮಾಡುವ ನಟಿಯರ ಆಧಾರ್ ಕಾರ್ಡ್‌ನ್ನು ನಿಷೇಧ ಮಾಡಲಾಗುತ್ತದೆ ಮತ್ತು ಅವರ ಎಲ್ಲಾ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್‌ ಮಾಡಲಾಗುವುದು” ಎಂದು ರಾಷ್ಟ್ರಪತಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಪಿಐಬಿ ಫ್ಯಾಕ್ಟ್‌ಚೆಕ್ ಇದನ್ನು ಪರಿಶೀಲಿಸಿ, ಈ ಹೇಳಿಕೆ ಸಂಪೂರ್ಣವಾಗಿ ನಕಲಿ ಎಂದು ತಿಳಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಜನರು ಇಂತಹ ತಪ್ಪು ಮಾಹಿತಿಯನ್ನು ನಂಬದೆ, ಸೋಷಿಯಲ್ ಮೀಡಿಯಾದಲ್ಲಿ ಹರಡುವ ನಕಲಿ ಪೋಸ್ಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕೂಡ ಸಲಹೆ ನೀಡಿದೆ.

https://x.com/PIBFactCheck/status/2026152772425621922?s=20

ಇದರಿಂದ ಸಾಭೀತಾಗಿದ್ದೇನೆಂದರೆ, ಅನುಚಿತ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕಾಣಿಸುವ ಹುಡುಗಿಯರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಮತ್ತು ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್‌ ಮಾಡಲಾಗುತ್ತದೆʼ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಯಾವುದೇ ಹೇಳಿಕೆಯನ್ನು ನೀಡಿಲ್ಲ

Claim :  ಅನುಚಿತ ಬಟ್ಟೆ ಧರಿಸಿ ದೇಹ ಪ್ರದರ್ಶನ ಮಾಡುವ ಹುಡುಗಿಯರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ದ್ರೌಪದಿ ಮುರ್ಮು ಹೇಳಿಲ್ಲ
Claimed By :  Social Media Users
Fact Check :  Unknown
Tags:    

Similar News