ಮೈಸೂರಿನಲ್ಲಿ ಪತ್ತೆಯಾದ ಚಿರತೆಯ ವಿಡಿಯೋವನ್ನು ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಕಂಡು ಬಂದಿದೆ ಎಂದು ಹಂಚಿಕೆ
ಬೆಂಗಳೂರಿನ ಬನ್ನೇರುಘಟ್ಟ ಬಳಿ ಪತ್ತೆಯಾದ ಚಿರತೆಯ ವಿಡಿಯೋವನ್ನು ಮೈಸೂರಿನ ವಿಡಿಯೋ ಎಂದು ಹಂಚಿಕೆ
ʼಕಾಡು ಒತ್ತುವರಿ ಆಗುತ್ತಿದೆ. ಕಲ್ಲು ಗಣಿಗಾರಿಕೆ, ಕಾರ್ಖಾನೆಗಳು ಹೆಚ್ಚಾಗುತ್ತಿವೆ. ಕಾಡಿನಲ್ಲಿ ಚಿರತೆಗಳಿಗೆ ಆಹಾರ, ನೀರಿನ ಕೊರತೆ ಉಂಟಾಗುತ್ತಿದೆ. ಕಾಡಂಚಿನಲ್ಲಿ ಮೇಯಲು ಹೋಗುತ್ತಿದ್ದ ಕುರಿ, ಮೇಕೆ, ದನಗಳ ಮೇಲೆ ಚಿರತೆಗಳು ದಾಳಿ ನಡೆಸುವುದು ಸರ್ವೇ ಸಾಮಾನ್ಯ. ಈ ಹಿಂದೆ ಕೂಡ ದಾಳಿ ಮಾಡುತ್ತಿದ್ದವು. ಈಗಲೂ ಮುಂದುವರಿದಿದೆ. : ಕಾಡು ಕ್ಷೀಣಿಸುತ್ತಿರುವುದೇ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕಾರಣ. ಚಿರತೆಗಳ ಆವಾಸ ಸ್ಥಾನದಲ್ಲಿ ಆಹಾರ ಲಭಿಸದಿರುವುದು ಅವು ನಾಡಿಗೆ ಬರಲು ಪ್ರೇರೇಪಿಸುತ್ತಿದೆ. ಸಸ್ಯಾಹಾರಿ ಪ್ರಾಣಿಗಳು ಹೇಗೋ ಬದುಕುತ್ತವೆ. ಕಾಡು ಕಡಿಮೆಯಾಗಿದ್ದರಿಂದ ಮಾಂಸಾಹಾರಿ ಪ್ರಾಣಿಗಳು ಆಹಾರದ ಕೊರತೆ ಎದುರಿಸಿ ನಾಡಿಗೆ ನುಗ್ಗುತ್ತವೆ. ಆದರೆ, ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಚಿರತೆಗಳು, ಇತ್ತೀಚಿನ ತಿಂಗಳಲ್ಲಿ ಅವುಗಳು ನಾಡಿಗೆ ಬಂದು ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಜನವರಿ 30, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ಚಿರತೆಯೊಂದು ಬೈಕ್ ಸವಾರರನ ಮೇಲೆ ದಾಡಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡು ʼLeapored found in Bangalore near Bannerghattaʼ ಎಂದು ಇಂಗ್ಲೀಷ್‌ನಲ್ಲಿ ಬರೆದಿರುವುದನ್ನು ನೋಡಬಹುದು. ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬನ್ನೇರುಘಟ್ಟ ಬಳಿಯ ಬೆಂಗಳೂರಿನಲ್ಲಿ ಪತ್ತೆಯಾದ ಚಿರತೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ 2022ರ ನವೆಂಬರ್ನಲ್ಲಿ ಮೈಸೂರಿನಲ್ಲಿ ನಡೆದ ಘಟನೆಯದ್ದು.
ನಾವು ವೈರಲ್ ಆದ ವಿಡಿಯೋದಲ್ಲಿನ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋದಲ್ಲಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವಂಬರ್ 04, 2022ರಂದು ʼಕನ್ನಡ ಪ್ರಭʼ ವೆಬ್‌ಸೈಟ್‌ನಲ್ಲಿ ʼಮೈಸೂರು: ಕೆ.ಆರ್.ನಗರದಲ್ಲಿ ಚಿರತೆ ದಾಳಿ; ಹಲವರಿಗೆ ಗಾಯ, ಕೊನೆಗೂ ಸೆರೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಹಾಡುಹಗಲೇ ಮೈಸೂರು ಜಿಲ್ಲೆ ಕೆ.ಆರ್. ನಗರದ ಪಟ್ಟಣದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಜನರ ಮೇಲೆ ಎರಗಿರುವ ವೀಡಿಯೋ ವೈರಲ್ ಆಗಿದೆ. ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿರುವ ಕನಕ ನಗರದಲ್ಲಿ ಶುಕ್ರವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಕೆಲವರ ಮೇಲೆ ದಾಳಿ ನಡೆಸಿದೆ. ಮುಳ್ಳೂರು ರಸ್ತೆ ಬಳಿಯ ರಾಜ ಪ್ರಕಾಶ್ ಶಾಲೆಯ ಹತ್ತಿರ ಬೀದಿನಾಯಿಯನ್ನು ಬೆನ್ನಟ್ಟಿಕೊಂಡು ಹೋದ ಚಿರತೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಎರಗಿದೆ. ಆನಂತರ ಮತ್ತಿಬ್ಬರ ಮೇಲೂ ದಾಳಿ ನಡೆಸಿದೆ. ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಮತ್ತು ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದರು. ಬಳಿಕ ಅದನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಜನರಲ್ಲಿ ಭಯ ಉಂಟು ಮಾಡುತ್ತಿತ್ತು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೂ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದರು. ಹಾಡುಹಗಲೇ ಮೈಸೂರು ಜಿಲ್ಲೆ ಕೆ.ಆರ್. ನಗರದ ಪಟ್ಟಣದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಜನರ ಮೇಲೆ ಎರಗಿರುವ ವೀಡಿಯೋ ವೈರಲ್ ಆಗಿದೆʼ ಎಂದು ವರದಿ ಮಾಡಿದ್ದಾರೆ.
ನವಂಬರ್ 04, 2022ರಂದು ʼಪಬ್ಲಿಕ್ ಟಿವಿʼ ವೆಬ್‌ಸೈಟ್‌ನಲ್ಲಿ ʼಹಾಡಹಗಲೇ ಬೈಕ್ ಸವಾರನ ಮೇಲೆ ಎರಗಿದ ಚಿರತೆʼ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಂಡಿದ್ದಾರೆ. ವರದಿಯಲ್ಲಿ ʼಕಾಡಿನಿಂದ ನಾಡಿಗೆ ಬಂದ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ಪಟ್ಟಣದಲ್ಲಿ ನಡೆದಿದೆ. ಗುರುವಾರ ರಾತ್ರಿ ಕೆಲ ಕಾಲ ಜನರಿಗೆ ತೊಂದರೆ ಕೊಟ್ಟಿದ್ದ ಚಿರತೆ ಬೆಳಗ್ಗೆಯೂ ಪಟ್ಟಣದ ಒಳ ಭಾಗಕ್ಕೆ ಉಪಟಳ ನೀಡಿತು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್ ನಗರ ಪಟ್ಟಣದ ಜನ ನಿಜಕ್ಕೂ ಚಿರತೆಯ ಅಬ್ಬರ ಕಂಡು ಬೆಚ್ಚಿದ್ದರು. ಏಕೆಂದರೆ ದೊಡ್ಡ ಗಾತ್ರದ ಚಿರತೆ ಪಟ್ಟಣಕ್ಕೆ ಎಂಟ್ರಿ ಕೊಟ್ಟು ಜನರು ಓಡಾಡದಂತೆ ಮಾಡಿತ್ತು. ಕೆ.ಆರ್ ನಗರ ಪಟ್ಟಣದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಚಿರತೆ ಮೊದಲು ಕಾಣಿಸಿಕೊಂಡಿತ್ತು. ರಸ್ತೆಯಲ್ಲೇ ಮಲಗಿದ್ದ ಚಿರತೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ದಾಳಿ ನಡೆಸಿದೆ. ರಾತ್ರಿಯಿಂದಲ್ಲೂ ಇದೇ ಮಾರ್ಗದ ಬಳಿ ಇದ್ದ ಚಿರತೆ ಬೆಳಗ್ಗೆ ಪಟ್ಟಣದ ಒಳಗಡೆ ಬಂದಿತ್ತುʼ ಎಂದು ವರದಿಯಾಗಿದೆ.
ನವೆಂಬರ್ 4, 2022 ರಂದು ʼದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ʼನ ಯೂಟ್ಯೂಬ್ ಚಾನೆಲ್‌ನಲ್ಲಿ ʼKarnataka: Leopard attacks residents, crashes into passing motorcyclist in Mysuruʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವರದಿಯಲ್ಲಿʼA shocking video of a #leopard attacking people in #Mysuru has gone viral on social media. The incident took place in Kanaka Nagar in Mysuru. In the video leopard is seen frantically running across a street and springing upon a bike-borne man. The bewildered biker fall off his vehicle. The wild animal is then seen running away, and locals chasing it. #karnataka ʼ ಎಂದು ಕ್ಯಾಪ್ಷನ್‌ನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ‘‘ಮೈಸೂರಿನಲ್ಲಿ ಚಿರತೆ ಜನರ ಮೇಲೆ ದಾಳಿ ಮಾಡುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೈಸೂರಿನ ಕನಕ ನಗರದಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಚಿರತೆ ಬೀದಿಯಲ್ಲಿ ಓಡಿಹೋಗಿ ಬೈಕ್‌ನಲ್ಲಿ ಬಂದ ವ್ಯಕ್ತಿಯ ಮೇಲೆ ಧಾವಿಸುತ್ತಿರುವುದು ಕಂಡುಬರುತ್ತದೆ. ದಿಗ್ಭ್ರಮೆಗೊಂಡ ಬೈಕ್ ಸವಾರ ತನ್ನ ವಾಹನದಿಂದ ಬೀಳುತ್ತಾನೆ. ನಂತರ ಚಿರತೆ ಓಡಿಹೋಗುವುದನ್ನು ಮತ್ತು ಸ್ಥಳೀಯರು ಅದನ್ನು ಬೆನ್ನಟ್ಟುವುದನ್ನು ಕಾಣಬಹುದುʼ ಬರೆದಿರುವುದನ್ನು ನಾವು ನೋಡಬಹುದು.
ನವೆಂಬರ್ 4, 2022 ರಂದು ʼದಿ ಎಕನಾಮಿಕ್ ಟೈಮ್ಸ್ʼನ ಯೂಟ್ಯೂಬ್ ಚಾನೆಲ್‌ನಲ್ಲಿ ʼLeopard enters residential area in Mysuru, attacks some people; later captured by the forest deptʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮೈಸೂರಿನ ಜನವಸತಿ ಪ್ರದೇಶಕ್ಕೆ ಚಿರತೆ ಪ್ರವೇಶಿಸಿ, ಕೆಲವು ಜನರ ಮೇಲೆ ದಾಳಿ ಮಾಡಿದೆ; ನಂತರ ಅರಣ್ಯ ಇಲಾಖೆಯಿಂದ ಸೆರೆಹಿಡಿಯಲ್ಪಟ್ಟಿದೆ" ಎಂಬ ವಿವರಣೆ ನೀಡಲಾಗಿದೆ.
ಇದೇ ವೀಡಿಯೊವನ್ನು ನವೆಂಬರ್ 2022ರಲ್ಲಿ ಇತರ ಸುದ್ದಿ ವೆಬ್‌ಸೈಟ್‌ಗಳ ವರದಿಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಇದು ಮೈಸೂರಿನಲ್ಲಿ ನಡೆದ ಘಟನೆ ಎಂದು ಇದರಲ್ಲಿ ಹೇಳಲಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ 2022ರ ನವೆಂಬರ್ನಲ್ಲಿ ಮೈಸೂರಿನಲ್ಲಿ ನಡೆದ ಘಟನೆಯದ್ದಾಗಿದೆ.