ಫ್ಯಾಕ್ಟ್‌ಚೆಕ್: ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ವ್ಯಕ್ತಿಯೋರ್ವರಿಗೆ ಧಳಿಸಿದ್ದಾರೆ ಎಂದು ಉತ್ತರ ಪ್ರದೇಶದ ವಿಡಿಯೋ ಹಂಚಿಕೆ
ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ವ್ಯಕ್ತಿಯೋರ್ವರಿಗೆ ಧಳಿಸಿದ್ದಾರೆ ಎಂದು ಉತ್ತರ ಪ್ರದೇಶದ ವಿಡಿಯೋ ಹಂಚಿಕೆ
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಪೊಲೀಸ್ ಅಧಿಕಾರಿ ಬೆಲ್ಟ್ನಲ್ಲಿ ಮನ ಬಂದಂತೆ ಹೊಡೆಯುತ್ತಿರುವುದು ಕಾಣಬಹುದು. ಪೊಲೀಸ್ ಅಧಿಕಾರಿ ಹೊಡೆಯುವಾಗ ಇನ್ನಿಬ್ಬರು ಆ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ಇದು ಉತ್ತರ ಕರ್ನಾಟದಲ್ಲಿ ನಡೆದಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ರಾಜ್ಯ ಸರ್ಕಾರದ ಆದೇಶವೇ? ರಾಜ್ಯದ ಗೃಹ ಸಚಿವರು ತಾವೇ ಉತ್ತರಿಸಬೇಕು. ರಾಜ್ಯದ ಜನತೆ ತಿಳಿಯಬೇಕು ಇದಕ್ಕೆಲ್ಲ ಅವಕಾಶ ಇದೆಯಾ ನಮ್ಮ ಪೊಲೀಸ್ ಠಾಣೆಗಳಲ್ಲಿ ಅನ್ನುವುದು. #Karnatakanews #ಉತ್ತರಕನ್ನಡ ಜಿಲ್ಲಾ ಪೊಲೀಸ್ #Karnataka State Police #DR. G Parameshwara’’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ನಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಟ್ಯಾಗ್ ಮಾಡಿದ್ದಾರೆ
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆಗುತ್ತಿರುವ ವಿಡಿಯೋ ಉತ್ತರ ಕನ್ನಡದಲ್ಲ ಬದಲಿಗೆ ಅದು ಉತ್ತರಪ್ರದೇಶಕ್ಕೆ ಸೇರಿದೆ.
ನಾವು ವೈರಲ್ ಆದ ಪೋಸ್ಟ್ ಬಗ್ಗೆ ಸತ್ಯಾಂಶವನ್ನು ತಿಳಿಯಲು ಪೊಸ್ಟ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಏಪ್ರಿಲ್ 25, 2025ರಂದು ʼನವ ಭಾರತ್ ಟೈಮ್ಸ್ʼ ಪ್ರಕಟಿಸಿದ ವೆಬ್‌ಸೈಟ್‌ನಲ್ಲಿ ʼजौनपुर के पुलिस थाने में युवक को इंस्पेक्टर ने खंभे से बांधकर बुरी तरह पीटा, चीख से गूंज उठा परिसरʼ ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದು ಕಂಡು ಬಂದಿದೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜೌನ್‌ಪುರ ಪೊಲೀಸ್ ಠಾಣೆಯಲ್ಲಿ, ಇನ್ಸ್‌ಪೆಕ್ಟರ್ ಯುವಕನನ್ನು ಕಂಬಕ್ಕೆ ಕಟ್ಟಿ ಕೆಟ್ಟದಾಗಿ ಹೊಡೆದರು, ಕ್ಯಾಂಪಸ್‌ನಲ್ಲಿ ಕಿರುಚಾಟದ ಶಬ್ದಗಳು ಪ್ರತಿಧ್ವನಿಸಿದವುʼ ಇನ್ನು ವರದಿಯಲ್ಲಿ ‘‘ಉತ್ತರ ಪ್ರದೇಶದ ಜೌನ್‌ಪುರದ ಮುಂಗಾರಬಾದ್‌ಶಾಪುರ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊವೊಂದು ಬೆಳಕಿಗೆ ಬಂದಿದೆ. ಆ ಪ್ರದೇಶದ ಯುವಕನೊಬ್ಬ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಿದ್ದ. ಅವನು ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ ಅವರೊಂದಿಗೆ ಕಾನೂನಿನ ಬಗ್ಗೆ ಮಾತನಾಡಿದನೆಂದು ಆರೋಪಿಸಲಾಗಿದೆ. ಯುವಕನ ಮಾತಿನಿಂದ ಕೋಪಗೊಂಡ ಇನ್ಸ್‌ಪೆಕ್ಟರ್ ಯುವಕನನ್ನು ಬೆಲ್ಟ್‌ನಿಂದ ಹೊಡೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಇಬ್ಬರು ಪೊಲೀಸರು ಯುವಕನನ್ನು ಕಂಬಕ್ಕೆ ಬಿಗಿಯಾಗಿ ಹಿಡಿದುಕೊಂಡರು. ಯುವಕ ನೋವಿನಿಂದ ನರಳುತ್ತಿದ್ದಾಗಲೂ, ಅವನು ಅವನನ್ನು ಹೊಡೆಯುತ್ತಲೇ ಇದ್ದರು. ವಿನೋದ್ ಮಿಶ್ರಾ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ” ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.
ಏಪ್ರಿಲ್ 24, 2025ರಂದು ʼಈಟಿವಿ ಭಾರತ್ʼ ವೆಬ್‌ಸೈಟ್‌ನಲ್ಲಿ ʼथाने में पोल से बांधकर युवक को बेल्ट से पीटा; VIDEO सामने आने पर एक्शन, इंस्पेक्टर समेत 6 निलंबित - YOUTH BEATEN UP POLICE STATIONʼ ಎಂಬ ಹೆಡ್‌ಲೈನ್‌ನ್ನು ನೀಡಿ ವರದಿ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪೊಲೀಸ್ ಠಾಣೆಯಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಬೆಲ್ಟ್‌ನಿಂದ ಥಳಿಸಲಾಗಿದೆ; ವಿಡಿಯೋ ಬಹಿರಂಗವಾದ ನಂತರ ಕ್ರಮ ಕೈಗೊಳ್ಳಲಾಗಿದೆ, ಇನ್ಸ್‌ಪೆಕ್ಟರ್ ಸೇರಿದಂತೆ 6 ಮಂದಿಯನ್ನು ಅಮಾನತುಗೊಳಿಸಲಾಗಿದೆ - ಪೊಲೀಸ್ ಠಾಣೆ ಮೇಲೆ ಯುವಕರ ಹಲ್ಲೆʼ ಎಂದು ಬರೆದಿರುವುದನ್ನು ನೊಡಬಹುದು. ಇನ್ನು ವರದಿಯಲ್ಲಿ ʼಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಇತರ ಪೊಲೀಸರು ಪೊಲೀಸ್ ಠಾಣೆಯಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಬೆಲ್ಟ್‌ನಿಂದ ಹೊಡೆದಿದ್ದಾರೆ. ಈ ಪ್ರಕರಣ ಮುಂಗ್ರಾ ಬಾದ್‌ಶಾಪುರ ಪೊಲೀಸ್ ಠಾಣೆಗೆ ಸೇರಿದ್ದು. ಸುಮಾರು ಎರಡು ದಿನಗಳ ಹಿಂದೆ, ಯುವಕನನ್ನು ಒಂದು ಪ್ರಕರಣದಲ್ಲಿ ವಿಚಾರಣೆಗಾಗಿ ಇಲ್ಲಿಗೆ ಕರೆತರಲಾಗಿತ್ತು. ಇದರ ನಂತರ, ಆತನನ್ನು ಕ್ರೂರವಾಗಿ ಥಳಿಸಲಾಯಿತು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ ಸೇರಿದಂತೆ 6 ಪೊಲೀಸರನ್ನು ಎಸ್‌ಪಿ ಅಮಾನತುಗೊಳಿಸಿದ್ದಾರೆ. ದಿಲೀಪ್ ಕುಮಾರ್ ಸಿಂಗ್ ಅವರನ್ನು ಹೊಸ ಪೊಲೀಸ್ ಠಾಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಈ ಘಟನೆ ಉತ್ತರ ಪ್ರದೇಶದ್ದು ಎಂಬುದು ನಮಗೆ ಸ್ಪಷ್ಟವಾಗಿದೆ.
ಏಪ್ರಿಲ್ 24, 2025ರಂದು ʼಅಮರ್ ಉಜಾಲಾʼ ವೆಬ್‌ಸೈಟ್‌ನಲ್ಲಿ ʼJaunpur News: बेल्ट और कुर्सी से की युवक की पिटाई, वीडियो वायरल हुआ तो नप गए थानाध्यक्ष; एसपी ने लिया ये एक्शनʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ, ‘‘ಜೌನ್‌ಪುರ ಜಿಲ್ಲೆಯ ಮುಂಗಾರಾಬಾದ್‌ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿದ ಆರೋಪ ಕೇಳಿಬಂದಿದೆ. ಯುವಕನನ್ನು ಕ್ರೂರವಾಗಿ ಥಳಿಸುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೌಸ್ತುಭ್ ಅವರು ಪೊಲೀಸ್ ಠಾಣೆಯ ಉಸ್ತುವಾರಿ ವಿನೋದ್ ಕುಮಾರ್ ಮಿಶ್ರಾ ಅವರನ್ನು ಅಮಾನತುಗೊಳಿಸಿದ್ದಾರೆ. ಮತ್ತು ದಿಲೀಪ್ ಕುಮಾರ್ ಸಿಂಗ್ ಅವರನ್ನು ಮುಂಗಾರಬಾದ್‌ಶಹಪುರದ ಪೊಲೀಸ್ ಠಾಣೆಯ ಉಸ್ತುವಾರಿಯನ್ನಾಗಿ ನೇಮಿಸಿದರು. ಪೊಲೀಸರು ಇತರ ಪಕ್ಷದಿಂದ 26,000 ರೂ.ಗಳನ್ನು ಪಡೆದು ಕ್ರೂರವಾಗಿ ಥಳಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ. ʼ ಎಂದು ವರದಿಯಲ್ಲಿರುವುದು ಕಾಣಬಹುದು
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆಗುತ್ತಿರುವ ವಿಡಿಯೋ ಉತ್ತರ ಕನ್ನಡದಲ್ಲ ಬದಲಿಗೆ ಅದು ಉತ್ತರಪ್ರದೇಶಕ್ಕೆ ಸೇರಿದ್ದು ಎಂದು ಸಾಭೀತಾಗಿದೆ.