ಫ್ಯಾಕ್ಟ್‌ಚೆಕ್‌: ರಾಯ್‌ಪುರ್‌ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದಕ್ಕೆ ಥಳಿಸಿದ ವಿಡಿಯೋವದು

ರಾಯ್‌ಪುರ್‌ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದಕ್ಕೆ ಥಳಿಸಿದ ವಿಡಿಯೋವದು

Update: 2025-02-04 03:30 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಜನವರಿ 26 ರಂದು ಪಂಜಾಬ್‌ನ ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ಮೊಗದ ನಿವಾಸಿ ಆಕಾಶದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಇದೀಗ ಈ ಘಟನೆ ನಡೆದ ಮೂರು ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ವಕೀಲರು ನ್ಯಾಯಾಲಯದ ಆವರಣದಲ್ಲಿ ಪೊಲೀಸರ ಎದುರೇ ವ್ಯಕ್ತಿಯನ್ನು ಥಳಿಸುತ್ತಿರುವುದು ಕಾಣಬಹುದು. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದಕ್ಕಾಗಿ ವಕೀಲರು ಆರೋಪಿಗಳನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜನವರಿ 28, 2025ರಂದು ʼಐಎನ್‌ಸಿ ಕಲ್ಯಾಣ ಕರ್ನಾಟಕʼ ಎಂಬ ಎಕ್ಸ್‌ ಖಾತೆದಾರರು ʼಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರವ ಮೂರ್ತಿ ಧಕ್ಕೆ ಮಾಡಿದ ವ್ಯಕ್ತಿಗೆ ಬಿಸಿ ಬಿಸಿ ಕಜ್ಜಾಯ ಪಂಜಾಬ್ ಕೋರ್ಟಿನಲ್ಲಿ ವಕೀಲರು ಹಾಗೂ ಜನರು ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪ್ರತಿಮೆ ಹಾಗೂ ಸಂವಿಧಾನ ಮುಟ್ಟಿದರೆ ಉಳಿಗಾಲವಿಲ್ಲ ಎಚ್ಚರಿಕೆ ??ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಇನ್ನು ವಿಡಿಯೋವಿನಲ್ಲಿ ಕ್ಯಾಪ್ಷನ್‌ ಆಗಿ ʼಅಂಬೇಡ್ಕರ್‌ ಪ್ರತಿಮೆ ಹಾನಿ ಮಾಡಿದ ಬಿಜೆಪಿ. ಮನುವ್ಯಾದಿಗೆ ದಂಡಂ ಅಶಗುಣಂ ವಕೀಲರ ಪಡೆಯಿಂದ ಇನ್ಮೇಲೆ ಯಾರೇ ಅಂಬೇಡ್ಕರ್‌ ಹಾಗೂ ಅಂವಿಧಾನಕ್ಕೆ ಅಪಮಾನ ಮಾಡಿದ್ರೆ ಪಬ್ಲಿಕ್‌ನಲ್ಲಿ ಜಾಡಿಸಬೇಕು. ಇದು ಪಂಜಾಬ್‌ ಅಮೃತಸರದ ಕೋರ್ಟ್‌ನ ಪ್ರಾಂಗಣದಲ್ಲಿ ನಡೆದ ಘಟನೆʼ ಎಂಬ ಕ್ರಾಪ್ಷನ್‌ನೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ʼಐನ್‌ಸಿ ವಿಜಯನಗರ್‌ ಡಿಸ್ಟಿಕ್ಟ್‌ʼ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʼಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವ ಮೂರ್ತಿ ಧಕ್ಕೆ ಮಾಡಿದ ವ್ಯಕ್ತಿಗೆ ಬಿಸಿ ಬಿಸಿ ಕಜ್ಜಾಯ ಪಂಜಾಬ್ ಕೋರ್ಟಿನಲ್ಲಿ ವಕೀಲರು ಹಾಗೂ ಜನರು ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪ್ರತಿಮೆ ಹಾಗೂ ಸಂವಿಧಾನ ಮುಟ್ಟಿದರೆ ಉಳಿಗಾಲವಿಲ್ಲ ಎಚ್ಚರಿಕೆ ??ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋ ಛತ್ತೀಸ್‌ಗಢದ ರಾಯ್‌ಪುರ್‌ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಯುವಕಿಗೆ ವಕೀಲರೇ ಥಳಿಸಿದ ಘಟನೆಯ ವಿಡಿಯೋ ಇದು.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್‌ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜನವರಿ 17, 2025ರಂದು ಝೀ ನ್ಯೂಸ್‌ ವೆಬ್‌ಸೈಟ್‌ನಲ್ಲಿ ʼरायपुर कोर्ट में मचा बवाल!, आरोपी ने पहले मारा थप्पड़, बदला लेने पहुंचे वकील, पुलिस के सामने दौड़ा-दौड़ाकर पीटाʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಾಯ್‌ಪುರ ನ್ಯಾಯಾಲಯದಲ್ಲಿ ಗಲಾಟೆ, ಸೇಡು ತೀರಿಸಿಕೊಳ್ಳಲು ಬಂದ ವಕೀಲರು, ಪೊಲೀಸರ ಮುಂದೆ ಥಳಿತ’ ಎಂದು ವರದಿಯಾಗಿರುವುದನ್ನು ನೋಡಬಹುದು. ವರದಿಯಲ್ಲಿ ʼ“ರಾಯ್‌ಪುರದ ನ್ಯಾಯಾಲಯದ ಮುಂದೆ ವಕೀಲರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಇತರೆ ವಕೀಲರು ಆರೋಪಿಯನ್ನು ತೀವ್ರವಾಗಿ ಥಳಿಸಿದ್ದಾರೆ. ಆರೋಪಿ ಅಜಯ್ ಸಿಂಗ್ ವಕೀಲ ದೀರ್ಗೇಶ್ ಶರ್ಮಾಗೆ ಕಪಾಳಮೋಕ್ಷ ಮಾಡಿದ್ದು, ನಂತರ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಖಮ್ರರಾಯ್ ಪೊಲೀಸ್ ಠಾಣೆಯಲ್ಲಿ ವಕೀಲರು ಗದ್ದಲ ಸೃಷ್ಟಿಸಿದ್ದರು. ಆರೋಪಿಯ ವಿರುದ್ಧ ಎಫ್‌ಐಆ‌ರ್ ದಾಖಲಿಸಿ ಬಂಧಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೊರಗೆ ಕರೆತಂದ ಕೂಡಲೇ ಆರೋಪಿಯನ್ನು ನೋಡಿದ ವಕೀಲರು ಆಕ್ರೋಶಗೊಂಡು ತೀವ್ರವಾಗಿ ಥಳಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಆರೋಪಿಯನ್ನು ರಕ್ಷಿಸಲು ಯತ್ನಿಸುತ್ತಿರುವುದು ಕಂಡು ಬಂತು" ಎಂದು ವರದಿಯಾಗಿರುವುದನ್ನು ನೋಡಬಹುದು.


ಜನವರಿ 17, 2025ರಂದು ʼಐಬಿಸಿ24ʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ ʼRaipur District Court में आरोपी की वकीलों ने की पिटाई। जानिए पूरा मामला। Raipur News। CG Newsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.

Full View

ದೈನಿಕ್‌ ಭಾಸ್ಕರ್‌ ವರದಿಯ ಪ್ರಕಾರ ʼरायपुर कोर्ट में युवक को वकीलों ने पीटा...VIDEO:मारपीट में रेलिंग टूटी, IPS से भी झूमाझटकी,वकील पर हमला के आरोपी को लेकर पहुंची थी पुलिसʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.


ʼನ್ಯೂಸ್‌ 24 ಮಧ್ಯ ಪ್ರದೇಶ್‌ ಚತ್ತೀಸ್‌ಘಡ್‌ʼ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ʼChhattisgarh News : कोर्ट परिसर में बंदी की पिटाई...अज्ञात वकीलों पर बवाल और मारपीट का केस दर्जʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೀಒವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

Full View

ನವಭಾರತ್‌ ಟೈಮ್ಸ್‌ ವರದಿಯ ಪ್ರಕಾರ ʼ, "ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿ ಅಜಯ್ ಸಿಂಗ್ ಅವರನ್ನು ಬಿಗಿ ಭದ್ರತೆಯ ನಡುವೆ 17 ಜನವರಿ 2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಯಿತು. ಈ ವೇಳೆ ವಕೀಲರು ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನೂರಾರು ವಕೀಲರು ಆರೋಪಿಯನ್ನು ಸುತ್ತುವರಿದು ಥಳಿಸಿದ್ದಾರೆ. ಪೊಲೀಸರು ಹೇಗೋ ಮಧ್ಯಪ್ರವೇಶಿಸಿ ಆರೋಪಿಯನ್ನು ಅಲ್ಲಿಂದ ಕರೆದೊಯ್ದರು” ಎಂದು ವರದಿಯಾಗಿರುವುದನ್ನು ನೋಡಬಹುದು.

ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋ ಛತ್ತೀಸ್‌ಗಢದ ರಾಯ್‌ಪುರ್‌ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಯುವಕನಿಗೆ ವಕೀಲರೇ ಥಳಿಸಿದ ಘಟನೆಯ ವಿಡಿಯೋ ಇದು.

Claim :  ರಾಯ್‌ಪುರ್‌ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದಕ್ಕೆ ಥಳಿಸಿದ ವಿಡಿಯೋವದು
Claimed By :  Social Media Users
Fact Check :  Unknown
Tags:    

Similar News