ಫ್ಯಾಕ್ಟ್‌ಚೆಕ್‌: ವೈಜಾಗ್‌ನ ಕಡಲತೀರದಲ್ಲಿ ಕಂಡುಬಂದಂತಹ ಹಿಂಡು ಮೀನುಗಳನ್ನು ತೋರಿಸುವ ವಿಡಿಯೋವಿನ ಅಸಲಿಯತ್ತೇನು?

ವೈಜಾಗ್‌ನ ಕಡಲತೀರದಲ್ಲಿ ಕಂಡುಬಂದಂತಹ ಹಿಂಡು ಮೀನುಗಳನ್ನು ತೋರಿಸುವ ವಿಡಿಯೋವಿನ ಅಸಲಿಯತ್ತೇನು?

Update: 2023-12-08 19:02 GMT

fish ashore Vizag beach

ಮೈಚಾಂಗ್ ಚಂಡಮಾರುತ ಚೆನ್ನೈ ಮತ್ತು ತಮಿಳುನಾಡಿನ ಹಲವಾರು ಭಾಗಗಳಿಗೆ ಬಹಳ ಹಾನಿ ಉಂಟು ಮಾಡಿದೆ. ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಇರುವ ಬಾಪಟ್ಲಾದಲ್ಲಿ ಭೂಕುಸಿತವೂ ಸಂಭವಿಸಿದೆ. ಅಷ್ಟೇ ಅಲ್ಲ ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಾಕಷ್ಟು ಸಾವು ನೋವುಗಳನ್ನು ಎದುರಿಸುವಂತಾಯಿತು.

ಮೈಚಾಂಗ್ ಚಂಡಮಾರುತದ ಕಾರಣದಿಂದಾಗಿ ಆಂಧ್ರಪ್ರದೇಶದ ವಿಶಾಕಪಟ್ಟಣಂನ ಬೀಚ್‌ನ ದಡದಲ್ಲಿ ಹಿಂಡು ಮೀನುಗಳು ಕಂಡುಬಂದಿದ್ದನ್ನು ಅಲ್ಲಿಗೆ ಬಂದ ಸಂದರ್ಶಕರು ಚಿತ್ರೀಕರಿಸಿದ್ದಾರೆ. ಆ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶೀರ್ಷಿಕೆಯಾಗಿ ತೆಲುಗಿನಲ್ಲಿ "తుఫాను కారణంగా విశాఖ బీచ్ లో ఒడ్డుకు కొట్టుకు వచ్చిన చేపలు” ಎಂದು ಬರೆದು ಪೋಸ್ಟ್‌ ಮಾಡಿದ್ದರು.

Full View

Full View

ಈ ಹೇಳಿಕೆಯೊಂದಿಗೆ ಇದೀಗ ಸಾಮಾಜಿಕ ತಾಲತಾಣದಲ್ಲಿ ಚಿತ್ರಗಳು ಮತ್ತು ವಿಡಿಯೋಗಳು ವೈರಲ್‌ ಆಗಿವೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ. ಮೇ 2023ರದ್ದು.

ವೈರಲ್ ಆದ ವೀಡಿಯೊದಿಂದ ಹೊರತೆಗೆಯಲಾದ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು Google ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಡಿದಾಗ ನಮಗೆ ಮೇ 2023ರಲ್ಲಿ ಅಪ್‌ಲೋಡ್‌ ಮಾಡಿರುವ ಕೆಲವು ವಿಡಿಯೋಗಳನ್ನು ನಾವು ತೆಲುಗು ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಯೂಟ್ಯೂಬ್ ಚಾನೆಲ್‌ನಲ್ಲಿರುವುದು ತಿಳಿದುಕೊಂಡೆವು.

ಸಮಯ್ ತೆಲುಗು ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಮೇ 29, 2023 ರಂದು ಪೋಸ್ಟ್‌ ಮಾಡಿರುವ ವಿಡಿಯೋವೊಂದನ್ನು ಪರಿಸೀಲಿಸಿದೆವು. ಯೂಟ್ಯೂಬ್‌ನಲ್ಲಿರುವ ವಿಡಿಯೋಗೆ ಶೀರ್ಷಿಕೆಯಾಗಿ "ಭೀಮಲಿ ಸಮುದ್ರು ತೀರಕ್ಕೆ ತೆಲಿಕೊಂಡು ಬಂದಂತಹ ಮೀನುಗಳು" ಎಂದು ಬರೆಯಲಾಗಿತ್ತು. ಜೊತೆಗೆ ಅಲ್ಲಿಗೆ ಬಂದಂತಹ ಪ್ರವಾಸಿಗರು ಇಲ್ಲಿನ ರಮಣೀಯ ದೃಶ್ಯವನ್ನು ನೋಡಿ ಖುಷಿ ಪಡುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿತ್ತು.

Full View

ತೆಲುಗಿನ ಎನ್‌ಟಿವಿಯಲ್ಲೂ ಸಹ ಈ ವಿಡಿಯೋವನ್ನು ಪೋಸ್ಟ್‌ ಮಾಡಿ "ಭೀಮಲಿ ಬಚ್‌ನ ದಡೆಗೆ ಹರಿದು ಬಂದಂತಹ ಮೀನುಗಳು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ದಡೆಗೆ ಬಂದಂತಹ ಮೀನುಗಳನ್ನು ಕೆಲವರು ಹಿಡಿಯಲು ಯತ್ನಿಸುತ್ತಿದ್ದಾರೆ ಇನ್ನು ಕೆಲವರು ಪ್ರಕೈತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ ಎಂದು ಪೋಸ್ಟ್‌ ಮಾಡಿದ್ದರು.

Full View

ವಿ6 ನ್ಯೂಸ್‌ನಲ್ಲೂ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿತ್ತು.

Full View

ಸಿರ್‌ಕೇರ್ ಎಕ್ಸ್‌ಪ್ರೆಸ್ ಯೂಟ್ಯೂಬ್ ಚಾನೆಲ್ ಮೇ 29, 2023 ರಂದು "ವಿಶಾಖಪಟ್ಟಣಂ ಬೀಚ್ @ ಸರ್ಕಾರ್ ಎಕ್ಸ್‌ಪ್ರೆಸ್‌ನಲ್ಲಿ ದಡಕ್ಕೆ ಹರಿದು ಬಂದಂತಹ ಮೀನುಗಳು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

Full View

ಹೀಗಾಗಿ ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ. ಮೈಚಾಂಗ್ ಚಂಡಮಾರುತದಿಂದಾಗಿ ಮೀನುಗಳು ದಡಕ್ಕೆ ಬಂದಿಲ್ಲ. ವೈರಲ್‌ ಆದ ವಿಡಿಯೋ ಮೇ 2023ರದ್ದು.

Claim :  The video shows fish washed ashore on the beach in Vizag due to the recent Cyclone Michaung
Claimed By :  Social Media Users
Fact Check :  Misleading
Tags:    

Similar News