ಫ್ಯಾಕ್ಟ್‌ಚೆಕ್‌: ಬಿಆರ್‌ಎಸ್ ಪಕ್ಷದ ನಾಯಕರು ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ, ಹಳೆಯದ್ದು

ಬಿಆರ್‌ಎಸ್ ಪಕ್ಷದ ನಾಯಕರು ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ, ಹಳೆಯದ್ದು

Update: 2023-11-20 06:42 GMT

BRS meeting

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷದ ಮುಖಂಡರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ರೋಡ್ ಶೋ ಮೂಲಕ ಮತ್ತು ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಮೂಲಕ ಹಲವಾರು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯವನ್ನು ಭರ್ಜರಿಯಿಂದ ನಡೆಸುತ್ತಿದ್ದಾರೆ.

ಕಾಂಗ್ರೇಸ್‌ 4ಟಿಎಸ್‌ ಎಂಬ ಖಾತೆದಾರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋವಿನಲ್ಲಿ BRS ಪಕ್ಷದ ಸಭೆಯ ನಂತರ ಸಭೆಗೆ ಬಂದಂತಹ ಸದಸ್ಯರಿಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರತಿಯೊಬ್ಬರಿಗೂ 300ರೂ ವಿತರಿಸುತ್ತಿದ್ದಾರೆ, "ಬಿಆರ್‌ಎಸ್ ಪಕ್ಷದ ಸಭೆಯ ನಂತರ 300 ರೂ ವಿತರಣೆ..!! #ByeByeKCR" ಎಂದು ವೀಡಿಯೋವಿಗೆ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದಾರೆ.


ಮತ್ತೊಬ್ಬ ಖಾತೆದಾರ "ಚಿನ್ನದಂತಹ ತೆಲಂಗಾಣ ರಾಜ್ಯವನ್ನು ನಿರ್ಮಿಸಲು ಹಣ ಕೊಟ್ಟರೆ ತಪ್ಪೇನು" ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್‌ ಮಾಡಿದ್ದಾರೆ.

Full View

ಉತ್ತರಾಂಧ್ರ ಎಂಬ X ಖಾತೆದಾರ ತನ್ನ ಪೋಸ್ಟ್‌ನಲ್ಲಿ "ಕೆಸಿಆರ್‌ ಸಭೆಯಲ್ಲಿ ಭಾಗವಹಿಸಲು ಕೈಗೆ ಹಣ ಬರಲೇಬೇಕು. ಇಲ್ಲ ಅಂದ್ರೆ ಯಾರು ಬರುತ್ತಾರೆ? ಯಾರು ಬರುವುದಿಲ್ಲ! #KCR #TSpolls #UANow " ಎಂದು ಪೋಸ್ಟ್‌ ಮಾಡಿದ್ದರು.

ಇದೇ ವಾದದೊಂದಿಗೆ ಯೂಟ್ಯೂಬ್‌ನಲ್ಲೂ ವೀಡಿಯೋವನ್ನು ಕಂಡುಕೊಂಡೆವು.

Full View


Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸುಳ್ಳು. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೋ 2020ರಲ್ಲಿ ಚಿತ್ರೀಕರಿಸಿದ್ದು. ವೈರಲ್‌ ಆದ ವೀಡಿಯೋದಲ್ಲಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ ಆಪ್‌ ಕಾ ಮಜೀದ್‌ಎಂಬ ಫೇಸ್‌ಬುಕ್‌ ಖಾತೆದಾರ 2020ರಲ್ಲಿ ತನ್ನ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದನು.

Full View

ಕೆಲವೊಂದಷ್ಟು ತೆಲುಗು ಟಿವಿ ಚಾನೆಲ್‌ಗಳಲ್ಲಿ ಈ ಕುರಿತು ಏನಾದರೂ ಮಾಹಿತಿ ದೊರೆಯ ಬಹುದಾ ಎಂದು ಹುಡುಕಿದಾಗ, CVR News ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಜನವರಿ 21,2020ರಂದು ಅಪ್‌ಲೋಡ್‌ ಮಾಡಿರುವಂತಹ ವೀಡಿಯೋವೊಂದನ್ನು ಕಂಡುಕೊಂಡೆವು. ವೀಡಿಯೋಗೆ TRS Leaders Distributing Money for Municipal Elections at Sathupalli | CVR News ಎಂಬ ಶೀರ್ಷಿಕೆಯಾಗಿ ವೀಡಿಯೋವನ್ನು ಶೇರ್‌ ಮಾಡಿದ್ದರು. ಸತ್ತುಪಲ್ಲಿ ಪುರಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡಲು ಟಿಆರ್‌ಎಸ್‌ ನಾಯಕರು ಮದ್ಯಪಾನ, ಉಡುಗೊರೆ, ಹಾಗೂ ಹಣವನ್ನು ಹಂಚುತ್ತಿದ್ದರು ಎಂದು ಆ್ಯಂಕರ್ ವಿಡಿಯೋದಲ್ಲಿ ಹೇಳಿದ್ದಾರೆ ಅಷ್ಟೇ ಅಲ್ಲ ಚಿತ್ರೀಕರಸಿದ ಮಾಧ್ಯಮದವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Full View

ಜನವರಿ 20, 2020 ರಂದು ಟಿಆರ್‌ಎಸ್ ಅಭ್ಯರ್ಥಿ ಅನೀಶ್ ಮತದಾರರಿಗೆ ಹಣ ಹಂಚುತ್ತಿರುವ ದೃಶ್ಯ ಎನ್‌ಟಿವಿ ತೆಲುಗು ಚಾನೆಲ್‌ನಲ್ಲಿ ನೋಡಬಹುದು. "ಪೆದ್ದಪಲ್ಲಿ ಮತ್ತು ಸಾತುಪಲ್ಲಿ ಪುರಸಭೆಯ 7ನೇ ವಾರ್ಡ್‌ನಲ್ಲಿ ಟಿಆರ್‌ಎಸ್ ಅಭ್ಯರ್ಥಿ ಅನೀಶ್ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಹಣ ಹಂಚುತ್ತಾ ಸಿಕ್ಕಿ ಬಿದ್ದಿದ್ದಾರೆ" ಎಂದು ಎನ್‌ಟಿವಿ ತೆಲುಗು ವಿಡಿಯೋವೊಂದನ್ನು ಪೋಸ್ಟ್ ಮಾಡಿತ್ತು.

Full View

ಹಾಗಾಗಿ, ಬಿಆರ್‌ಎಸ್ ಪಕ್ಷದ ಸದಸ್ಯರು ಹಣ ಹಂಚುತ್ತಿದ್ದಾರೆ ಎಂದು ವೈರಲ್‌ ಆದ ವೀಡಿಯೋ 2020ರದ್ದು ವಿಡಿಯೋ ಹಳೆಯದು. ಸತ್ತುಪಲ್ಲಿಯ ಪುರಸಭೆ ಚುನಾವಣೆ ವೇಳೆ ಟಿಆರ್‌ಎಸ್ ಸದಸ್ಯರು ಮತದಾರರಿಗೆ ಹಣ ಹಂಚಿದ ಸಂದರ್ಭವದು. ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

Claim :  The video shows a recent incident of BRS party leaders paying voters to attend the party rallies and vote for the party
Claimed By :  Social Media Users
Fact Check :  False
Tags:    

Similar News