ಫ್ಯಾಕ್ಟ್‌ಚೆಕ್: ಹಸುವಿನ ಮೇಲೆ ಅತ್ಯಾಚಾರವೆಸಗಿ ಸಿಕ್ಕಿಬಿದ್ದ ವ್ಯಕ್ತಿ ಮುಸ್ಲಿಂ ಅಲ್ಲ
ಹಸುವಿನ ಮೇಲೆ ಅತ್ಯಾಚಾರವೆಸಗಿ ಸಿಕ್ಕಿಬಿದ್ದ ವ್ಯಕ್ತಿ ಮುಸ್ಲಿಂ ಅಲ್ಲ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ 25 ಸೆಕೆಂಡುಗಳ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋವಿನಲ್ಲಿ ಯುವಕನೊಬ್ಬನನ್ನು ಅರೆನಗ್ನಗೊಳಿಸಿ ಹೊಡೆಯುವುದನ್ನು ನಾವು ನೋಡಬಹುದು. ಹಸುವಿನ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಬಜರಂಗದಳ ಸದಸ್ಯರು ಮುಸ್ಲಿಂ ಯುವಕನನ್ನು ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ನ್ನು ಹಂಚಿಕೊಳ್ಳಲಾಗುತ್ತಿದೆ
ಜೂನ್ 9, 2025ರಂದು ಎಕ್ಸ್ ಖಾತೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡು ಮುಸ್ಲಿಂ ಯುವಕನೊಬ್ಬ ಹಸುವಿನ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿಬಿದ್ದಿದ್ದಾನೆ. ಇದರಿಂದ ಕುಪಿತಗೊಂಡ ಜನರು ಆ ಯುವಕನನ್ನು ಥಳಿಸಿ ಮೆರವಣಿಗೆ ಮಾಡಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಂಡು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು (ಆರ್ಕೈವ್)
ಜೂನ್ 9, 2025ರಂದು ಎಕ್ಸ್ ಖಾತೆದಾರರೊಬ್ಬರು ವಿಡಿಯೋ ಪೋಸ್ಟ್ ಮಾಡಿ, “ಹಸುವಿನ ಮೇಲೆ ಅತ್ಯಾಚಾರ ಮಾಡದ ಇವನನ್ನು ಬಜರಂಗದಳ ಸಹೋದರರು ಅಡ್ಡರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಥಳಿಸಿದರು. ಇಂತಹ ಕಾಮಾಂಧ ಅಬ್ದುಲ್‌ನನ್ನು ಹಿಂದೂಗಳು ಏನು ಮಾಡಬೇಕು..” ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು (ಆರ್ಕೈವ್)
ಜೂನ್ 08, 2025ರಂದು ಎಕ್ಸ್ ಖಾತೆದಾರರೊಬ್ಬರು ʼगाय के साथ दुष्कर्म किया| बजरंग दल के भाइयों ने उसी अवस्था में बिना कपड़े पहनाए चौराहे पर परेड करवाके तबियत से कुटाई की हिंदूओ ऐसे हवस के अब्दुल के साथ क्या करना चाहिए...? He raped a cow!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಹಸುವಿನ ಮೇಲೆ ಅತ್ಯಾಚಾರ ಮಾಡಲಾಗಿದೆ. ಬಜರಂಗದಳ ಸಹೋದರರು ಅವನನ್ನು ಚೌಕದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ನಿರ್ದಯವಾಗಿ ಥಳಿಸಿದರು. ಇಂತಹ ಕಾಮುಕ ಅಬ್ದುಲ್‌ನನ್ನು ಹಿಂದೂಗಳು ಏನು ಮಾಡಬೇಕು...? ಅವನು ಹಸುವಿನ ಮೇಲೆ ಅತ್ಯಾಚಾರ ಮಾಡಿದನು! #SickCult #RapistCult #PervertPrdophiles #SaveCowSaveEarthʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು.(ಆರ್ಕೈವ್)
ಫೇಸ್‌ಬುಕ್ ಖಾತೆದಾರರೊಬ್ಬರು ʼगाय के साथ दुष्कर्म किया| बजरंग दल के भाइयों ने उसी अवस्था में बिना कपड़े पहनाए चौराहे पर परेड करवाके तबियत से कुटाई की| हिंदुओं ऐसे हवस के पुजारी अब्दुल के साथ क्या करना चाहिए...?ʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಹಸುವಿನ ಮೇಲೆ ಅತ್ಯಾಚಾರ ಮಾಡದ ಇವನನ್ನು ಬಜರಂಗದಳ ಸಹೋದರರು ಅಡ್ಡರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಥಳಿಸಿದರು. ಇಂತಹ ಕಾಮಾಂಧ ಅಬ್ದುಲ್‌ನನ್ನು ಹಿಂದೂಗಳು ಏನು ಮಾಡಬೇಕು?ʼ ಎಂದು ಬರೆದು ಪೋಸ್ಟ್ ಮಾಡಲಾಗಿದೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನಾವಿಲ್ಲಿ ನೋಡಬಹುದು.
ಈ ವಿಡಿಯೋ ನೋಡಿದ ಹಲವು ಮಂದಿ ಆರೋಪಿತ ವ್ಯಕ್ತಿ ನಿಜವಾಗಿಯೂ ಮುಸ್ಲಿಂ ಎಂದು ಭಾವಿಸಿ, ಕೋಮು ನಿರೂಪಣೆಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಹಲವರು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋದಲ್ಲಿ ಹೇಳಿರುವ ಹಾಗೆ ಹಸುವಿನೊಂದಿಗೆ ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದ ಯುವಕನ ಹೆಸರು ಅನುಜ್ ತಂಡಿ ಆತ ಮುಸ್ಲಿಂ ಅಲ್ಲ.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜೂನ್ 07 ,2025ರಂದು ದೈನಿಕ್ ಭಾಸ್ಕರ್ ಎಂಬ ವೆಬ್‌ಸೈಟ್‌ನಲ್ಲಿ ʼरायपुर में युवक ने की गौवंश से अश्लील हरकत:गुस्साए लोगों ने आरोपी को पीटा; नग्न कर निकाला जुलूसʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼರಾಯ್‌ಪುರದಲ್ಲಿ ಯುವಕನೊಬ್ಬ ಹಸುಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸುತ್ತಮುತ್ತಲಿನ ಜನರು ಆ ಯುವಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಡಿಯೋ ಮಾಡಿದ್ದಾರೆ. ಈ ಇಡೀ ಘಟನೆ ಅವಂತಿ ವಿಹಾರ್‌ನ ಖಮ್ಹರ್ದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಡೀ ಪ್ರಕರಣವು ಅವಂತಿ ವಿಹಾರ್ ನ ಖಮ್ಹರ್ದಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದೆ. ಆರೋಪಿ ಯುವಕನ ಹೆಸರು ಅನುಜ್ ತಂಡಿ ಎಂದು ಹೇಳಲಾಗಿದ್ದು, ಶನಿವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ದುಷ್ಕೃತ್ಯ ಎಸಗಿದ ಆರೋಪಿಯನ್ನು ಅರೆಬೆತ್ತಲೆ ಮೆರವಣಿಗೆಯಲ್ಲಿ ಕರೆದೊಯ್ದು ಖಮ್ಹರ್ದಿ ಪೊಲೀಸರಿಗೆ ಒಪ್ಪಿಸಿದರುʼ ಎಂದು ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ಜೂನ್ 07,2025ರಂದು ಐಬಿಸಿ 24 ಎಂಬ ವೆಬ್‌ಸೈಟ್‌ನಲ್ಲಿ ʼCow Rape In Raipur : मानवता हुई शर्मसार… दरिंदे ने गाय के साथ किया दुष्कर्म, आक्रोशित लोगों ने युवक को अर्धनग्न कर निकाला जुलूसʼ ಎಂಬ ಹೆಡ್‌ಲೈನ್‌ನೊಂಡಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼʼರಾಯ್ಪುರದ ಅವಂತಿ ವಿಹಾರ್ ಪ್ರದೇಶದಿಂದ ಒಂದು ದೊಡ್ಡ ಸುದ್ದಿ ಬಂದಿದೆ. ಅಲ್ಲಿ ಯುವಕನೊಬ್ಬ ಹಸುವಿನ ಮೇಲೆ ಅತ್ಯಾಚಾರ ಮಾಡುವ ಘೋರ ಅಪರಾಧ ಮಾಡಿದ್ದಾನೆ. ಈ ಘಟನೆಯ ನಂತರ, ಕೋಪಗೊಂಡ ಜನರು ಯುವಕನನ್ನು ಥಳಿಸಿ ಮೆರವಣಿಗೆ ನಡೆಸಿದರು. ಈ ಪ್ರಕರಣವು ಅವಂತಿ ವಿಹಾರ್‌ನ ಖಮ್ಹರ್ದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಶಾಲಾ ಮೈದಾನದಲ್ಲಿ ಹಸುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದ ಯುವಕನನ್ನು ಜನರು ಹಿಡಿದಿದ್ದಾರೆ. ಆರೋಪಿ ಯುವಕನ ಹೆಸರು ಅನುಜ್ ತಂಡಿ ಎಂದು ಹೇಳಲಾಗಿದ್ದು, ಘಟನೆಯ ನಂತರ, ಹಿಂದೂ ಸಂಘಟನೆಯ ಕಾರ್ಯಕರ್ತರು ಆ ಪ್ರದೇಶದಲ್ಲಿ ಯುವಕನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗುವಂತೆ ಮಾಡಿ ಪೊಲೀಸರಿಗೆ ಒಪ್ಪಿಸಿದರು. ʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಜೂನ್ 08, 2025ರಂದು ನ್ಯೂಸ್ ಝೀ ಇಂಡಿಯಾ24 ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ʼगौ माता से अनाचार करने वाले का बजरंग दल ने निकाला जुलूस #raipurnewsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು
ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋದಲ್ಲಿ ಹೇಳಿರುವ ಹಾಗೆ ಹಸುವಿನೊಂದಿಗೆ ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದ ಯುವಕನ ಹೆಸರು ಅನುಜ್ ತಂಡಿ ಆತ ಮುಸ್ಲಿಂ ಅಲ್ಲ.