ಫ್ಯಾಕ್ಟ್‌ ಚೆಕ್‌ : ಜನ್ನತ್‌ ಕಿ ತಸ್ವೀರ್ ಅನ್ನೋ ಕಾಶ್ಮೀರದ ಹಾಡನ್ನ ಕಾಂಗ್ರೆಸ್‌ ನಿಷೇಧಿಸಲಿಲ್ಲ

1966ರಲ್ಲಿ ಬಿಡುಗಡೆಯಾದ ಜೋಹರ್ ಇನ್‌ ಕಾಶ್ಮೀರ್ ಚಿತ್ರದಿಂದ ಹಾಡನ್ನು ತೆಗೆದುಹಾಕುವಂತೆ ಕಾಂಗ್ರೆಸ್‌ ಸರ್ಕಾರ ಹೇಳಿರಲಿಲ್ಲ

Update: 2023-08-17 11:13 GMT

'ಜನ್ನತ್‌ ಕಿ ಹೈ ತಸ್ವೀರ್, ಯೆ ತಸ್ವೀರ್‍‌ ನ ದೇಂಗೆ'ಎಂಬ ಹಾಡಿನಲ್ಲಿ ನಾಯಕ, ಭಾರತದಲ್ಲಿರುವ ಕಾಶ್ಮೀರದ ಮಹತ್ವವನ್ನು ವಿವರಿಸುತ್ತಾನೆ. ಯಾವುದೇ ಕಾರಣಕ್ಕೂ ಈ ನೆಲವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುವ ಈ ಹಾಡಿನ ವಿಡಿಯೋ ವೈರಲ್ ಆಗಿದೆ.


 



ಹಾಡನ್ನು ಹಂಚಿಕೊಂಡಿರುವ ವೈರಲ್‌ ಪೋಸ್ಟ್‌ಗಳಲ್ಲಿ, 'ಇದು 1952ರ ಹಾಡು. ಪಾಕಿಸ್ತಾನಿಗಳು ಸಿಲೋನ್‌ ರೇಡಿಯೋದಲ್ಲಿ ಪ್ರಸಾರವಾದ ಈ ಹಾಡನ್ನು ಕೇಳಿ, ಭಾರತದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ಮೇಲೆ ಒತ್ತಡ ಹೇರಿ, ನಿಷೇಧಿಸಿದ್ದಾರೆ. ಆದರೆ ಈ ಹಾಡು ದೇಶಭಕ್ತರ ಹೃದಯದಲ್ಲಿ ಹಸಿರಾಗಿದ್ದು, ಇಂದು ಮತ್ತೆ ಹರಿದಾಡುತ್ತಿದೆ' ಎಂದು ಬರೆದು, ವಿಡಿಯೋ ಹಂಚಿಕೊಳ್ಳಲಾಗಿದೆ.

https://www.facebook.com/reel/680346447301902

www.telugupost.com ತೆಲುಗು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಈ ಪೋಸ್ಟ್‌ ವೈರಲ್‌ ಆಗಿರುವುದನ್ನು ಗುರುತಿಸಿದ್ದು, ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಕಾಂಗ್ರೆಸ್‌ ಸರ್ಕಾರ ಸಿನಿಮಾವನ್ನೇ ನಿಷೇಧಿಸಿದೆ ಎಂದು ಬರೆದಿದ್ದಾರೆ.


ಫ್ಯಾಕ್ಟ್‌ ಚೆಕ್‌

ನಾವು ಗೂಗಲ್‌ ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಈ ಕೆಳಗಿನ ವಿವರಗಳು ಲಭ್ಯವಾದವು

ಚಿತ್ರದ ಹೆಸರು: ಜೋಹರ್‍‌ ಇನ್‌ ಕಾಶ್ಮೀರ್

ಬಿಡುಗಡೆ: 1966

ಗಾಯಕ: ಮೊಹಮ್ಮದ್ ರಫಿ

ಕತೆ ಮತ್ತು ಚಿತ್ರಕತೆ - ಐ ಎಸ್ ಜೋಹರ್‍‌


ಜೋಹರ್‍‌ ಇನ್‌ ಕಾಶ್ಮೀರ್‍‌ ಚಿತ್ರವು ಭಾರತದ ವಿಭಜನೆಯ ಹಿನ್ನೆಲೆಯನ್ನು ಚಿತ್ರಿಸಿದ್ದು. ಭಾರತೀಯರು ಹಾಗೂ ಪಾಕಿಸ್ತಾನಿಯರು ದೇಶ ವಿಭಜನೆಯ ಸಂಕಷ್ಟಗಳನ್ನು ಎದುರಿಸಿದ ಬಗೆಯನ್ನು ಕಟ್ಟಿಕೊಡುವ ಈ ಚಿತ್ರವು 1966ರಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ 1952ರಲ್ಲಿ ಪಾಕಿಸ್ತಾನಿಯರು ರೇಡಿಯೋ ಸಿಲೋನ್‌ನಲ್ಲಿ ಹಾಡು ಕೇಳಿ, ಕಾಂಗ್ರೆಸ್‌ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು ಎಂಬುದು ಸುಳ್ಳು.

https://www.imdb.com/title/tt0231828/

www.telugupost.com ಚಿತ್ರದಿಂದ ಹಾಡನ್ನು ತೆಗೆದು ಹಾಕಿದ್ದನ್ನು ಪರಿಶೀಲಿಸಿತು. 1966ರ ಡಿಸೆಂಬರ್‍‌ 17ರಲ್ಲಿ ಹೊರಡಿಸಿದ್ದ ದಿ ಗೆಝೆಟ್‌ ಆಫ್‌ ಇಂಡಿಯಾದಲ್ಲಿ 1966ರ ಜುಲೈ 23ರಂದು ಪ್ರಕಟಿಸಿದ ಸೆನ್ಸಾರ್‍‌ ಮಂಡಳಿ ರಿಪೋರ್ಟ್‌ ಅನ್ನು ಪರಿಶೀಲಿಸಿತು. ಇದರಲ್ಲಿ, ಮಂಡಳಿಯು "ಹಾಜಿ ಪೀರ್" ಎರಡು ಪದಗಳನ್ನು ಮಾತ್ರ ತೆಗೆದುಹಾಕುವಂತೆ ಹೇಳಿತ್ತೇ ಹೊರತು, ಇಡೀ ಹಾಡನ್ನು ತೆಗೆದು ಹಾಕಲು ಹೇಳಿರಲಿಲ್ಲ.


 ಪಿಡಿಫ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ:  https://ia800600.us.archive.org/10/items/in.gazette.1966.353/O-1688-1966-0051-76871.pdf

ಜೋಹರ್‍‌ ಇನ್‌ ಕಾಶ್ಮೀರ್ ಚಿತ್ರವೂ ಇಂದಿಗೂ ಜಿಯೋ ಸಿನಿಮಾ, ಈರೋಸ್‌ನೌ ಮತ್ತು ಅಮೆಜಾನ್‌ಪ್ರೈಮ್‌ನಲ್ಲಿ ಲಭ್ಯವಿದ್ದು, ಅವುಗಳ ಲಿಂಕ್‌ ಈ ಕೆಳಗೆ ನೀಡಿದ್ದೇವೆ.

https://www.jiocinema.com/movies/johar-in-kashmir/3490597/ವಾಚ್

https://erosnow.com/movie/watch/1060811/johar-in-ಕಾಶ್ಮೀರ

https://www.primevideo.com/detail/Johar-in-Kashmir/0FWQIDNR88YQKDVUKVEYKCLC9E

ಓದುಗರ ವೈರಲ್‌ ಆಗಿರುವ ಹಾಡನ್ನು ಚಿತ್ರದ 46 ನಿಮಿಷದಿಂದ ನೋಡಬಹುದು. 

ಈ ಮಾಹಿತಿಯ ಹಿನ್ನೆಲೆಯಲ್ಲಿ, ೧೯೫೨ರಲ್ಲಿ ಕಾಂಗ್ರೆಸ್‌ ಸರ್ಕಾರವು "ಜನ್ನತ್‌ ಕಿ ಹೈ ತಸ್ವೀರ್, ಯೆ ತಸ್ವೀರ್‍‌ ನ ದೇಂಗೆ" ಹಾಡನ್ನು ನಿಷೇಧಿಸಿದೆ ಎಂಬ ವಾದ ಸುಳ್ಳು. 

Claim :  The Congress government has banned the song 'Jannat ki hai tasvir.. ye tasvir na denge..' in 1952, buckling under pressure from the
Claimed By :  Social Media Users
Fact Check :  False
Tags:    

Similar News