ಫ್ಯಾಕ್ಟ್‌ಚೆಕ್‌: ಚೀನಾದ ಕಾರ್ ಡ್ರೈವಿಂಗ್ ಸ್ಕೂಲ್ ಕಂಪನಿಯು ಪ್ರಚಾರದ ವಿಡಿಯೋವನ್ನು ಹಿಮಾಚಲ ಪ್ರದೇಶದ್ದಲ್ಲಿ ನಡೆದ ಘಟನೆ ಎಂದು ಹಂಚಿಕೆ

ಚೀನಾದ ಕಾರ್ ಡ್ರೈವಿಂಗ್ ಸ್ಕೂಲ್ ಕಂಪನಿಯು ಪ್ರಚಾರದ ವಿಡಿಯೋವನ್ನು ಹಿಮಾಚಲ ಪ್ರದೇಶದ್ದಲ್ಲಿ ನಡೆದ ಘಟನೆ ಎಂದು ಹಂಚಿಕೆ

Update: 2025-05-06 02:30 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ವೈರಲ್‌ ಆದ ಈ ವಿಡಿಯೋದಲ್ಲಿ ಮರದ ಕೊಂಬೆಗಳ ನಡುವೆ ಕಾರು ಸಿಲುಕಿಕೊಂಡಿರುವುದನ್ನು ಕಾಣಬಹುದು. ಹಿಮಾಚಲ ಪ್ರದೇಶದ ಶಲಘಾಟ್‌ನಲ್ಲಿ ಬೀಸಿದ ಬಿರುಗಾಳಿಗೆ ಕಾರು ಹಾರಿಹೋಗಿ ಮರದ ಕೊಂಬೆಗಳ ಮೇಲೆ ಸಿಲುಕಿಕೊಂಡಿದೆ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ನ್ನು ಕೆಲವು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಏಪ್ರಿಲ್‌ 16, 2025ರಂದು ಎಕ್ಸ್‌ ಖಾತೆದಾರರೊಬ್ಬರು ʼflying car in Indiaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರತದ್ದು ಎಂದು ಹೇಳಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮತ್ತೊಬ್ಬ ಫೇಸ್‌ಬುಕ್‌ ಖಾತೆದಾರರೊಬ್ಬರು ʼThe result of a severe storm at night... A car by flying from Shalughat. Below Sai got stuck on a tree in Kharsi, no one has found out whose car is itʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಅನುವಾದಿಸಿದಾಗ ʼನಿನ್ನೆ ರಾತ್ರಿ ಭೀಕರ ಚಂಡಮಾರುತದ ಪರಿಣಾಮವಾಗಿ, ಶಾಲುಘಾಟ್ ನಿಂದ ಹಾರಿಹೋದ ಕಾರು, ಕೆಳಗಿನ ಸಾಯಿ ಖಾರ್ಸಿಯಲ್ಲಿರುವ ಮರದ ಮೇಲೆ ಸಿಲುಕಿಕೊಂಡಿತು. ಅದು ಯಾರ ಕಾರು ಎಂದು ಇನ್ನೂ ತಿಳಿದುಬಂದಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಆರ್ಕೈವ್‌)

Full View

ಇದೇ ರೀತಿಯ ಶೀರ್ಷಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು “ಫ್ಲೈಯಿಂಗ್ ಕಾರ್ ಸ್ಪಾಟೆಡ್ ಇನ್ ಇಂಡಿಯಾ” ಎಂದು ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್‌ನ ಲಿಂಕ್‌ನ್ನು ನೀವಿಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಕಾರ್ ಡ್ರೈವಿಂಗ್ ಸ್ಕೂಲ್ ಕಂಪನಿಯೊಂದು ಪ್ರಚಾರಕ್ಕೆಂದು ಈ ರೀತಿ ಮಾಡಿತ್ತು. ನಿಯಂತ್ರಕ ಅಧಿಕಾರಿಗಳು ಚಾಲನಾ ಶಾಲೆಯ ವಿರುದ್ಧ ಕ್ರಮ ಕೈಗೊಂಡ ನಂತರ, ಶಾಲೆಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ಮರದ ಮೇಲೆ ಕಾರನ್ನು ಒಳಗೊಂಡ ಪೋಸ್ಟ್‌ಗಳನ್ನು ಡಿಲೇಟ್‌ ಮಾಡಿತು.

ನಾವು ವೈರಲ್‌ ಆದ ಸುದ್ದಿಯಲ್ಲಿರುವ ಸತ್ಯಾಂಶವಿನ್ನು ತಿಳಿಯಲು ಗೂಗಲ್‌ನಲ್ಲಿ ವೈರಲ್‌ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ಲೆನ್ಸ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಏಪ್ರಿಲ್‌ 11, 2025ರಂದು ಎಕ್ಸ್‌ ಖಾತೆದಾರರೊಬ್ಬರು ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡು ʼDont Askʼ ಎಂಬ ಶೀರ್ಷಿಕೆಯನ್ನು ನೀಡಿ ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ವಿಡಿಯೋವಿನಲ್ಲಿ ರಕ್ಷಣಾ ಕಾರ್ಯಕರ್ತರು ಮರಗಳನ್ನು ಹತ್ತುವುದನ್ನು ನೋಡಬಹುದು. ಹಾಗೆ ಕಾರ್ಯಕರ್ತರ ಜಾಕೆಟ್‌ ಮೇಲೆ ಬೇರೆ ಭಾಷೆಯಲ್ಲಿರುವ ಪಠ್ಯವನ್ನು ನೋಡಬಹುದು.

ಏಪ್ರಿಲ್‌ 13, 2025ರಂದು cbsg.scol.com.cn ಎಂಬ ಚೀನಾ ವೆಬ್‌ಸೈಟ್‌ನಲ್ಲಿ ವರದಿಯೊಂದು ಪ್ರಕಟಿಸಲಾಗಿದೆ. ವರದಿಯ ಪ್ರಕಾರ ʼಚಾಂಗ್ನಿಂಗ್ ಕೌಂಟಿಯಲ್ಲಿರುವ ಚಾಲನಾ ಶಾಲೆಯೊಂದು ಕಾರನ್ನು ಮರದ ಮೇಲೆ ಓಡಿಸಿ ವಿಡಿಯೋ ಚಿತ್ರೀಕರಿಸಿ ಜನರನ್ನು ಆಕರ್ಷಿಸಲು ಅದನ್ನು ವೈರಲ್ ಮಾಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಾರನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂಬ ತಪ್ಪು ಮಾಹಿತಿ ಹರಡಿತು. ಇದಾದ ನಂತರ, ಅವರಿಗೆ ಅನೇಕ ಸರ್ಕಾರಿ ಇಲಾಖೆಗಳು ಛೀಮಾರಿ ಹಾಕಿದವು. ನಂತರ ಆ ವಿಡಿಯೋವನ್ನು ಡ್ರೈವಿಂಗ್ ಸ್ಕೂಲ್ ಖಾತೆಯಿಂದ ಅಳಿಸಲಾಗಿದೆ. ಕಾರು ನೆಲದಿಂದ ನಾಲ್ಕು ಅಥವಾ ಐದು ಮೀಟರ್ ಎತ್ತರದಲ್ಲಿರುವ ಮರದ ಮೇಲೆ ‘ನಿಲುಗಡೆ’ ಮಾಡಲಾಗಿತ್ತು.


ಏಪ್ರಿಲ್‌ 13, 2025ರಂದು ʼಕೆನಡಾ ಮೂಲದ ಚೀನೀ ಭಾಷಾ ಸುದ್ದಿ ವೇದಿಕೆಯಾದ singtao.ca ನಲ್ಲಿ ಪ್ರಕಟವಾದ ಸುದ್ದಿ ವರದಿಯ ಪ್ರಕಾರ, ಈ ಕಾರು ಮರದ ಮೇಲೆ ಹೇಗೆ ಬಿದ್ದಿತು ಎಂಬುದರ ಕುರಿತು ಹೇಳಲಾಗಿದೆ. ಸಾರ್ವಜನಿಕರ ಗಮನ ಸೆಳೆಯಲು ಪ್ರಚಾರದ ಭಾಗವಾಗಿ ಉದ್ದೇಶಪೂರ್ವಕವಾಗಿ ಕಾರನ್ನು ಮರದ ಮೇಲೆ ನಿಲ್ಲಿಸಲಾಗಿದೆ. ಇದರಿಂದಾಗಿ ಸಂಚಾರ ಪೊಲೀಸರು ಡ್ರೈವಿಂಗ್‌ ಸ್ಕೂಲ್‌ಗೆ ಸಮನ್ಸ್ ಜಾರಿ ಮಾಡಿ, ಸಾರಿಗೆ ಇಲಾಖೆ ಮತ್ತು ಸ್ಥಳೀಯ ಇಂಟರ್ನೆಟ್ ನಿಯಂತ್ರಕ ಕಚೇರಿ ಸೇರಿದಂತೆ ಹಲವಾರು ಅಧಿಕಾರಿಗಳು ಡ್ರೈವಿಂಗ್ ಸ್ಕೂಲ್ ಸಮನ್ಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದಾರೆ. ಡ್ರೈವಿಂಗ್ ಸ್ಕೂಲ್ ತನ್ನ ಸೋಶಿಯಲ್ ಮೀಡಿಯಾದ ಖಾತೆಯಿಂದ ವಿಡಿಯೋವನ್ನು ಡಿಲಿಟ್‌ ಮಾಡಲಾಗಿದೆ. ಸುದ್ದಿ ವರದಿಯ ಪ್ರಕಾರ, ಸಿಚುವಾನ್‌ನ ಯಿಬಿನ್‌ನ ಚಾಂಗ್ನಿಂಗ್ ಕೌಂಟಿಯ ಸಾಂಗ್‌ಜಿಯಾಬಾ ಕೈಗಾರಿಕಾ ವಲಯದಲ್ಲಿರುವ ಯಿಬಿನ್ ಬೋಡಾ ಆಟೋಮೋಟಿವ್ ಸರ್ವೀಸಸ್ ಕಂಪನಿಯ ತರಬೇತುದಾರರೊಬ್ಬರು ಈ ಘಟನೆ ಏಪ್ರಿಲ್ 10, 2025 ರಂದು ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ. ವೀಡಿಯೊ ದಾರಿತಪ್ಪಿಸುವ ಮಾಹಿತಿಯನ್ನು ಹೊಂದಿದ್ದು, ಅಂತಹ ಪ್ರಚಾರದ ಸಾಹಸಗಳನ್ನು ಮಾಡುವುದರಿಂದ ಸುರಕ್ಷತೆಯ ಅಪಾಯಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಏಪ್ರಿಲ್‌ 17, 2025ರಂದು ನ್ಯೂಸ್‌18 ಇಂಡಿಯಾ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ʼHimachal Pradesh में तूफान से तबाही | Weather Update Today | Storm | Hindi Newsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಸುದ್ದಿಯ ಪ್ರಕಾರ, ನಿನ್ನೆ ರಾತ್ರಿ ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಬಲವಾದ ಗಾಳಿ ಬೀಸಿದೆ. ಬಿರುಗಾಳಿಯಿಂದಾಗಿ ಮರಗಳು ವಾಹನಗಳ ಮೇಲೆ ಬಿದ್ದವು. ಅಲ್ಲಿ ಭಾರೀ ಮಳೆಯೊಂದಿಗೆ ಬಿರುಗಾಳಿ ಬೀಸುವ ಬಗ್ಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಹಾಗಾಗಿ ಈ ಘಟನೆಗೂ ಹಿಮಾಚಲ ಪ್ರದೇಶಕ್ಕೂ ಸಂಬಂಧವಿಲ್ಲ ಎಂದು ಸಾಭೀತಾಗಿದೆ.

Full View

ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಕಾರ್ ಡ್ರೈವಿಂಗ್ ಸ್ಕೂಲ್ ಕಂಪನಿಯೊಂದು ಪ್ರಚಾರಕ್ಕೆಂದು ಈ ರೀತಿ ಮಾಡಿತ್ತು. ನಿಯಂತ್ರಕ ಅಧಿಕಾರಿಗಳು ಚಾಲನಾ ಶಾಲೆಯ ವಿರುದ್ಧ ಕ್ರಮ ಕೈಗೊಂಡ ನಂತರ, ಶಾಲೆಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ಮರದ ಮೇಲೆ ಕಾರನ್ನು ಒಳಗೊಂಡ ಪೋಸ್ಟ್‌ಗಳನ್ನು ಡಿಲೇಟ್‌ ಮಾಡಿತು.

Claim :  ಚೀನಾದ ಕಾರ್ ಡ್ರೈವಿಂಗ್ ಸ್ಕೂಲ್ ಕಂಪನಿಯು ಪ್ರಚಾರದ ವಿಡಿಯೋವನ್ನು ಹಿಮಾಚಲ ಪ್ರದೇಶದ್ದಲ್ಲಿ ನಡೆದ ಘಟನೆ ಎಂದು ಹಂಚಿಕೆ
Claimed By :  Social Media Users
Fact Check :  Unknown
Tags:    

Similar News