ಫ್ಯಾಕ್ಟ್‌ಚೆಕ್‌:ಸಕಲೇಶಪುರದಲ್ಲಿ ಕಾಡಾನೆಗಳ ದಂಡು ಎಂದು ಅಸ್ಸಾಂನ ವೀಡಿಯೊ ಹಂಚಿಕೆ

ಸಕಲೇಶಪುರದಲ್ಲಿ ಕಾಡಾನೆಗಳ ದಂಡು ಎಂದು ಅಸ್ಸಾಂನ ವೀಡಿಯೊ ಹಂಚಿಕೆ

Update: 2025-12-08 03:40 GMT

ಆನೆಗಳ ಹಿಂಡಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಕರ್ನಾಟಕದ್ದು ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ, ಆನೆಗಳ ಹಿಂಡು ರಸ್ತೆ ದಾಟುತ್ತಿರುವುದನ್ನು ಕಾಣಬಹುದು.

ನವಂಬರ್‌ 23, 2025ರಂದು ಯೂಟ್ಯೂಬ್‌ ಚಾನೆಲ್‌ನಲ್ಲಿ ʼsakaleshpura||ಸಕಲೇಶಪುರದಲ್ಲಿ ಆರಾಮಾಗಿ ರಸ್ತೆ ದಾಟುತ್ತಿರುವ ಗಜ ಪಡೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ನವಂಬರ್‌ 24, 2025ರಂದು ʼಲೋಕಲ್‌ ಆಪ್‌ʼ ವೆಬ್‌ಸೈಟ್‌ನಲ್ಲಿ ʼಸಕಲೇಶಪುರ: ಟೌನ್‌ನಲ್ಲಿ ಆನೆಗಳ ಶಾಂತಿಯುತ ವಾಕ್, ಬೆದರಿದ ಜನತೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಕಾಡಿನಿಂದ ತಪ್ಪಿಸಿಕೊಂಡ ಆನೆಗಳು ಪಟ್ಟಣದ ರಸ್ತೆಗಳಲ್ಲಿ ಶಾಂತಿಯುತವಾಗಿ ಸಂಚರಿಸಿದವು. ಇದರಿಂದ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತಾದರೂ, ಆನೆಗಳು ಯಾರಿಗೂ ಹಾನಿ ಮಾಡದೆ ಮುಂದೆ ಸಾಗಿದವು. ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಆನೆಗಳ ಈ ಅನಿರೀಕ್ಷಿತ ಭೇಟಿಯಿಂದ ಸ್ಥಳೀಯರಲ್ಲಿ ಕ್ಷಣಿಕ ಆತಂಕ ಉಂಟಾದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ.ʼ

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ನವಂಬರ್‌ 23, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼʼSAKLESHPUR TOWN, Hassan District, Karnataka. A gentle parade of giants a large herd of elephants, including several calves, moving from one forested coffee estate to another. As human activity continues to encroach on shrinking wildlife habitats and traditional migration corridors, these magnificent animals are increasingly forced into human spaces in search of foodʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸಕಲೇಶಪುರ ಪಟ್ಟಣ, ಹಾಸನ ಜಿಲ್ಲೆ, ಕರ್ನಾಟಕ. ಒಂದು ಅರಣ್ಯದ ಕಾಫಿ ಎಸ್ಟೇಟ್‌ನಿಂದ ಇನ್ನೊಂದಕ್ಕೆ ಚಲಿಸುವ ಹಲವಾರು ಕರುಗಳನ್ನು ಒಳಗೊಂಡಂತೆ ಆನೆಗಳ ದೊಡ್ಡ ಹಿಂಡಿನ ದೈತ್ಯರ ಸೌಮ್ಯ ಮೆರವಣಿಗೆ. ಮಾನವ ಚಟುವಟಿಕೆಗಳು ಕುಗ್ಗುತ್ತಿರುವ ವನ್ಯಜೀವಿಗಳ ಆವಾಸಸ್ಥಾನಗಳು ಮತ್ತು ಸಾಂಪ್ರದಾಯಿಕ ವಲಸೆ ಕಾರಿಡಾರ್‌ಗಳನ್ನು ಅತಿಕ್ರಮಿಸುತ್ತಿರುವುದರಿಂದ, ಈ ಭವ್ಯ ಪ್ರಾಣಿಗಳು ಆಹಾರ ಹುಡುಕುತ್ತಾ ಮಾನವ ಸ್ಥಳಗಳಿಗೆ ಹೆಚ್ಚಾಗಿ ಒತ್ತಾಯಿಸಲ್ಪಡುತ್ತಿವೆʼ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ನವಂಬರ್‌ 24, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಸಕಲೇಶಪುರದಲ್ಲಿ ಆರಾಮಾಗಿ ರಸ್ತೆ ದಾಟುತ್ತಿರುವ ಗಜ ಪಡೆ ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ನವಂಬರ್‌ 21, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಸಕಲೇಶಪುರ ನಗರದಲ್ಲಿ ಕಾಡಾನೆಗಳ ದಂಡು ಜನರಿಗೆ ಆತಂಕ ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್‌ ಆದ ವಿಡಿಯೋ ಅಸ್ಸಾಂನಲ್ಲಿ ರಸ್ತೆ ದಾಟುತ್ತಿರುವ ದೊಡ್ಡ ಆನೆ ಹಿಂಡಿನ ವೀಡಿಯೊವನ್ನು ಕರ್ನಾಟಕದ ಸಕಲೇಶಪುರದ ದೃಶ್ಯವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಾವು ವೈರಲ್‌ ಆದ ವಿಡಿಯೋವಿನದಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವಂಬರ್‌ 13. 2025ರಂದು ʼನ್ಯೂಸ್‌ 18 ಅಸ್ಸಾಂʼ ಫೇಸ್‌ಬುಕ್‌ ಖಾತೆಯಲ್ಲಿ ʼনুমলীগড়ত দিনক দিনে অধিক ভয়াবহ হৈ পৰিছে হাতী-মানুহৰ সংঘাত. এই সংঘাত ৰ কাৰণ জানিও নীৰৱ ভূমিকা ৰাজ্যৰ বিয়াগোম বন বিভাগৰʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಎಕಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನುಮಲಿಗಢದಲ್ಲಿ ಆನೆಗಳು ಮತ್ತು ಮನುಷ್ಯರ ನಡುವೆ ಸಾಕಷ್ಟು ಸಂಘರ್ಷವಿದೆ. ಸಂಘರ್ಷದ ಕಾರಣ ತಿಳಿದಿದ್ದರೂ ರಾಜ್ಯ ಅರಣ್ಯ ಇಲಾಖೆ ಮೌನವಾಗಿದೆʼ ಎಂಬ ಶೀರ್ಷಿಕೆಯೊಂದಿಗಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ನವಂಬರ್‌ 13, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼA Large Herd of Wild Elephants Crossing National Highway 39 Near Marangi Circle Office, Assamʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಎಕಯನ್ನು ಕನ್ನಡಕ್ಕೆ ಅನುವಾದಿಸಿದಾಗ ಅಸ್ಸಾಂನ ಮರಂಗಿ ಸರ್ಕಲ್ ಆಫೀಸ್ ಬಳಿ ರಾಷ್ಟ್ರೀಯ ಹೆದ್ದಾರಿ 39 ಅನ್ನು ದಾಟುತ್ತಿರುವ ಕಾಡು ಆನೆಗಳ ದೊಡ್ಡ ಹಿಂಡುʼ ಎಂದು ಬರೆದಿರುವುದನ್ನು ನೋಡಬಹುದು. ಈ ವೀಡಿಯೊಗಳು ಒಂದೇ ಘಟನೆಯನ್ನು ವಿಭಿನ್ನ ಕೋನಗಳಿಂದ ತೋರಿಸುತ್ತವೆ.

Full View

ನಾವು ಮರಂಗಿ ಸರ್ಕಲ್ ಆಫೀಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 39 ಅನ್ನು ಜಿಯೋಲೋಕಲೈಸ್ ಮಾಡಿದಾಗ , ವೈರಲ್ ವೀಡಿಯೋದಲ್ಲಿ ಗೋಚರಿಸುವ ಅಂಗಡಿಗಳು ಮತ್ತು ರಚನೆಗಳು ಸ್ಥಳಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ. ಪಕ್ಕಪಕ್ಕದ ಹೋಲಿಕೆಯು ವೈರಲ್ ವೀಡಿಯೋ ಕರ್ನಾಟಕದ್ದಲ್ಲ, ಅಸ್ಸಾಂನದ್ದು ಎಂದು ಸ್ಪಷ್ಟವಾಗಿ ದೃಢಪಡಿಸುತ್ತದೆ

Full View

ಹೆಚ್ಚುವರಿಯಾಗಿ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಆನೆ ಸಂಬಂಧಿತ ಘಟನೆಗಳನ್ನು ನಾವು ಪರಿಶೀಲಿಸಿದ್ದೇವೆ. ಸಕಲೇಶಪುರದ ಸುತ್ತಮುತ್ತಲಿನ ಅರಣ್ಯ ಮತ್ತು ಕಾಫಿ-ಎಸ್ಟೇಟ್ ಪ್ರದೇಶಗಳಲ್ಲಿ ಆನೆಗಳು ಅಲೆದಾಡುತ್ತವೆ , ಆದರೆ ಇತ್ತೀಚೆಗೆ ದೊಡ್ಡ ಹಿಂಡು ಪಟ್ಟಣಕ್ಕೆ ಪ್ರವೇಶಿಸಿದ ಯಾವುದೇ ವರದಿಗಳಿಲ್ಲ. ವೈರಲ್ ಕ್ಲಿಪ್ ಅನ್ನು ಸಕಲೇಶಪುರಕ್ಕೆ ಸಂಪರ್ಕಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ.

ಇದರಿಂದ ಸಾಭೀತಾಗಿದ್ದೇನೆಂದರೆ, ವಾಸ್ತವವಾಗಿ ವೈರಲ್‌ ಆದ ವಿಡಿಯೋ ಅಸ್ಸಾಂನಲ್ಲಿ ರಸ್ತೆ ದಾಟುತ್ತಿರುವ ದೊಡ್ಡ ಆನೆ ಹಿಂಡಿನ ವೀಡಿಯೊವನ್ನು ಕರ್ನಾಟಕದ ಸಕಲೇಶಪುರದ ದೃಶ್ಯವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Claim :  ಸಕಲೇಶಪುರದಲ್ಲಿ ಕಾಡಾನೆಗಳ ದಂಡು ಎಂದು ಅಸ್ಸಾಂನ ವೀಡಿಯೊ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News