ಫ್ಯಾಕ್ಟ್‌ಚೆಕ್‌: ರಾಹುಲ್ ಗಾಂಧಿ ಜೊತೆ ಯೂಟ್ಯೂಬರ್ ಗೂಢಚಾರಿ ಜ್ಯೋತಿ ಮಲ್ಹೋತ್ರಾ ಫೋಟೋ ಎಂದು ಎಡಿಟ್‌ ಮಾಡಲಾದ ಫೋಟೋ ಹಂಚಿಕೆ

ರಾಹುಲ್ ಗಾಂಧಿ ಜೊತೆ ಯೂಟ್ಯೂಬರ್ ಗೂಢಚಾರಿ ಜ್ಯೋತಿ ಮಲ್ಹೋತ್ರಾ ಫೋಟೋ ಎಂದು ಎಡಿಟ್‌ ಮಾಡಲಾದ ಫೋಟೋ ಹಂಚಿಕೆ

Update: 2025-05-26 02:30 GMT

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಿವಿಧ ರಾಜಕೀಯ ಪಕ್ಷಗಳು, ನಾಯಕರೊಂದಿಗೆ ಸಂಪರ್ಕ ಹೊಂದಿದ್ದರೆಂಬ ಕುರಿತು ಈಗ ವಿವಿಧ ಹೇಳಿಕೆಗಳು ವೈರಲ್ ಆಗುತ್ತಿವೆ. ಕಾಂಗ್ರೆಸ್‌ ನೇತಾರ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರೊಂದಿಗೆ ಕಾಣಿಸಿಕೊಂಡಿದ್ದರು ಅಲ್ಲದೇ, ಜ್ಯೋತಿ ಮಲ್ಹೋತ್ರಾ ಬಿಜೆಪಿಯ ಕಾರ್ಯಕರ್ತೆ, ಆಕೆ ಬಿಜೆಪಿ ಟೋಪಿ ಧರಿಸಿ ಕಾಣಿಸಿಕೊಂಡಿದ್ದರು ಎಂಬ ಕುರಿತ ಫೋಟೋ ಕೂಡ ವೈರಲ್ ಆಗಿದೆ.

ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳಿಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು 33 ವರ್ಷದ ಟ್ರಾವೆಲ್ ವ್ಲಾಗರ್ ಜ್ಯೋತಿ ರಾಣಿ ಮಲ್ಹೋತ್ರಾ ಅವರನ್ನು ಮೇ 16, 2025 ರಂದು ಬಂಧಿಸಿದರು. 377,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಮಲ್ಹೋತ್ರಾ, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಅಧಿಕಾರಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ, ಹರಿಯಾಣ ಪೊಲೀಸರು ‘ಟ್ರಾವೆಲ್ ವಿತ್ ಜೋ’ ಹೆಸರಿನ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್ ಪುಟವನ್ನು ನಡೆಸುತ್ತಿರುವ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಬಂಧಿಸಿದ್ದರು. ಜ್ಯೋತಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿಗೆ ರಾಹುಲ್‌ ಗಾಂಧಿ ಇಬ್ಬರು ವಿಭಿನ್ನ ಮಹಿಳೆಯರೊಂದಿಗೆ ಇರುವ ಎರಡು ಫೋಟೋಗಳು "ಯೂಟ್ಯೂಬರ್ ಗೂಢಚಾರನೊಂದಿಗೆ" ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮೇ 22, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ʼRahul Gandhi with jyoti malhotra. #trending #shorts #shortsfeed #reels #jyotimalhotra #rahulgandhiʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್‌)


ಮೇ 21, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼMother ch@d Pappu with Pakistani Spy Jyoti Malhotra #FinishMaoists like Raul Vinci enemy no.1 of Bharatʼ ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ಆದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪಾಕಿಸ್ತಾನಿ ಗೂಢಚಾರ ಜ್ಯೋತಿ ಮಲ್ಹೋತ್ರಾ ಜೊತೆ ದೇಶದ್ರೋಹಿ. ಮಾವೋಯಿಸ್ಟ್‌ಗಳನ್ನು ಹತಮಾಡಿ. ರಾಹುಲ್‌ ವಿನ್ಸಿ ಭಾರತದ ಶತ್ರು ನಂಬರ್ 1 ರಂತೆ ಮಾವೋವಾದಿಗಳನ್ನು ಮುಗಿಸಿʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಮೇ 22, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ʼಪಾಕಿಸ್ತಾನದ* ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದ *ಹರಿಯಾಣದ ಜ್ಯೋತಿ ಮಲ್ಹೋತ್ರಾ -ರಾಹುಲ್ ಗಾಂಧಿ ಜೊತೆ* ! ಪ್ರತಿಯೊಬ್ಬ *ದೇಶದ್ರೋಹಿ ಮತ್ತು ರಾಷ್ಟ್ರ ವಿರೋಧಿ ರಾಹುಲ್ ಗಾಂಧಿಯೊಂದಿಗೆ* ಕಾಣುವುದು ಎಂತಹ *ವಿಚಿತ್ರ ಕಾಕತಾಳೀಯ*! ದೇಶದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯ *ಹಿಂದಿನ ಮಾಸ್ಟರ್ ಮೈಂಡ್ ರಾಹುಲ್ ಗಾಂಧಿಯೇ*?ʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್‌)


ಮೇ 22, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ʼಹರಿಯಾಣದಿಂದ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದ ಜ್ಯೋತಿ ಮಲ್ಹೋತ್ರಾ ಜೊತೆ ರಾಹುಲ್ ಗಾಂಧಿಯ ಸಂಬಂಧ ಮತ್ತು ವ್ಯವಹಾರ ಏನು?* *ದೇಶದ ಒಳಗೆ ಹಾಗೂ ಹೊರಗೆ ಇರುವ ಎಪ್ಟೋ ದೇಶದ್ರೋಹಿಗಳು ಮತ್ತು ರಾಷ್ಟ್ರವಿರೋಧಿಗಳು ಮತ್ತು ರಾಹುಲ್ ಗಾಂಧಿಯೊಂದಿಗೆ ಇರುವ ಆತ್ಮೀಯತೆ, ಸಂಯೋಗ ಮತ್ತು ವ್ಯವಹಾರ ಎಂತಹ ವಿಚಿತ್ರ ಕಾಕತಾಳೀಯ!* *ದೇಶದಲ್ಲಿ ನಡೆಯುತ್ತಿರುವ ಕುತಂತ್ರಗಳು ಮತ್ತು ಪ್ರಕ್ಷುಬ್ಧತೆಯ ಹಿಂದೆ ರಾಹುಲ್ ಗಾಂಧಿಯ ಪಾತ್ರ ಏನು? ಎಂದು ಬರೆದಿರುವುದನ್ನು ನೋಡಬಹುದು

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್‌)

ಮೇ 23, 2025ರಂದು ಎಕ್ಸ್‌ ಖಾತೆದಾರರೊಬ್ಬರು ʼहर देश द्रोही के साथ या देश द्रोह के आरोपितों के साथ श्री @RahulGandhi. की तस्वीर कैसे मिलती हैं ये समझ नहीं आया !!!! ये रिश्ता क्या कहलाता हैं ? वैसे ये मैडम ज्योति मलहोत्रा हैं पता हैं ना कौन ?ʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದೇಶದ್ರೋಹದ ಆರೋಪ ಹೊತ್ತಿರುವ ಪ್ರತಿಯೊಬ್ಬ ದೇಶದ್ರೋಹಿ ಅಥವಾ ವ್ಯಕ್ತಿಯೊಂದಿಗೆ ಶ್ರೀ @ರಾಹುಲ್ ಗಾಂಧಿ. ಅವರ ಫೋಟೋ ಹೇಗೆ ಕಂಡುಬರುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ!!!! ಈ ಸಂಬಂಧದ ಹೆಸರೇನು? ಅಂದಹಾಗೆ, ಇದು ಮೇಡಂ ಜ್ಯೋತಿ ಮಲ್ಹೋತ್ರಾ, ಅವರು ಯಾರೆಂದು ನಿಮಗೆ ತಿಳಿದಿದೆಯೇ?ʼ ಎಂದು ಬರೆದಿರುವುದನ್ನು ನೋಡಬಹುದು



ಪ್ರಮುಖವಾಗಿ ಬಲಪಂಥೀಯ ಸಾಮಾಜಿಕ ಜಾಲತಾಣದ ಖಾತೆಗಳು “ಕಾಂಗ್ರೆಸ್‌ನದ್ದು ಪಾಕಿಸ್ತಾನ ಪರವಾದ ನಿಲುವು, ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಜ್ಯೋತಿ ಮೆಲ್ಹೋತ್ರಾ ಜೊತೆ ಇರುವ ಫೋಟೋ ಇದಾಗಿದೆ. ಈಗ ಕಾಂಗ್ರೆಸ್‌ನ ನಿಲುವು ಏನು ಎಂಬುದು ಸ್ಪಷ್ಟವಾಗಿದೆ ಎಂಬಂತಹ ವಿವಿಧ ರೀತಿಯ ಬರಹಗಳೊಂದಿಗೆ ವೈರಲ್ ಫೋಟೋವನ್ನು ಶೇರ್ ಮಾಡಲಾಗುತ್ತಿದೆ. . ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಫೋಟೋದಲ್ಲಿರುವುದು ಮಹಿಳಾ ನಾಯಕಿಯರಾಗಿದ್ದು ಪಾಕಿಸ್ತಾನದ ಪರ ಗೂಢಚಾರ ನಡೆಸಿದ ಆರೋಪಿ ಜ್ಯೋತಿ ಮೇಲ್ಹೋತ್ರಾ ಅಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಎರಡು ಫೋಟೋಗಳು ಹಳೆಯದ್ದಾಗಿದೆ.

ವೈರಲ್‌ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಫೋಟೋದಲ್ಲಿರುವ ಎರಡು ಫೋಟೋಗಳನ್ನು ಕೀ ಪ್ರೇಮ್‌ಗಳನ್ನಾಗಿ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಕ್ಟೋಬರ್ 03, 2019ರಂದು “ಸೋನಿಯಾ ಗಾಂಧಿಯವರ ಭದ್ರಕೋಟೆಯಲ್ಲಿ ಕಾಂಗ್ರೆಸ್ ಬಂಡಾಯವನ್ನು ಎದುರಿಸುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಪ್ರಕಟಿಸಿದ ವರದಿ ಲಭ್ಯವಾಗಿದೆ. ʼCongress faces revolt in Sonia Gandhi's bastionʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼರಾಹುಲ್ ಗಾಂಧಿ ಅವರ ಜೊತೆ ಅದಿತಿ ಸಿಂಗ್ ಎಂದು ಫೈಲ್ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದು ವೈರಲ್ ಫೋಟೋವಿನ ಮೂಲ ಫೋಟೋವಾಗಿದ್ದು, ಅದಿತಿ ಸಿಂಗ್ ಅವರ ಫೋಟೋವನ್ನು ಎಡಿಟ್ ಮಾಡಿ ಜ್ಯೋತಿ ಮೇಲೆಹೋತ್ರ ಅವರ ಮುಖವನ್ನು ಅಳವಡಿಸಲಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹಾಗಾಗಿ ಮೊದಲ ಫೋಟೋ ಎಡಿಟರ್ ಎಂಬುದು ನಮಗೆ ಖಚಿತವಾಗಿದೆʼ ಎಂದು ಬರೆದಿರುವುದನ್ನು ಕಾಣಬಹುದು.


ಎರಡನೇ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಸೆಪ್ಟೆಂಬರ್ 18, 2022ರಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ʼShri @RahulGandhi participating in morning lag of #BharatJodoYatra from Taluk Head Quarters Hospital, Haripad to Sree Kuruttu Bhagavathi Temple, Ottappana (13 kms) in Kerala today.ʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯಬ್ಬು ಕನ್ನಡಕ್ಕೆ ಅನುವಾದಿಸಿದಾಗ “ಇಂದು ಕೇರಳದ ಒಟ್ಟಪ್ಪನದ ಶ್ರೀ ಕುರುಟ್ಟು ಭಗವತಿ ದೇವಸ್ಥಾನಕ್ಕೆ (13 ಕಿಮೀ) ಹರಿಪಾದ್‌ನ ತಾಲೂಕು ಪ್ರಧಾನ ಆಸ್ಪತ್ರೆಯಿಂದ #ಭಾರತ್‌ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಭಾಗವಹಿಸುತ್ತಿದ್ದಾರೆ.” ಎಂದು ಬರೆದು ಕೊಂಡಿರುವುದು ಕಂಡುಬಂದಿದೆ

ಇದನ್ನೇ ನಾವು ಸುಳಿವಾಗಿ ತೆಗೆದುಕೊಂಡು ನಾವು ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾತೃಭೂಮಿ.ಕಾಂ ಎಂಬ ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 18, 2022ರಂದು ʼBharat Jodo Yatra: Rahul Gandhi to meet farmers in Kuttanadʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತ ಜೋಡೋ ಯಾತ್ರೆ, ಕುಟ್ಟನಾಡಿನಲ್ಲಿ ರೈತರನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿʼ ಎಂದು ವರದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. ಇದರಲ್ಲಿ ರಾಹುಲ್ ಗಾಂಧಿ ಅವರ ಫೇಸ್‌ಬುಕ್‌ ಪೋಸ್ಟ್‌ ಒಂದು ಹಂಚಿಕೊಂಡಿರುವುದು ಕಂಡುಬಂದಿದ್ದು, ಇದರಲ್ಲಿ ರಾಹುಲ್ ಗಾಂಧಿಯವರು “ಇವು ಕೇವಲ ಚಿತ್ರಗಳಲ್ಲ, ಇದು ದೇಶದ ಪ್ರತಿಯೊಬ್ಬ ನಾಗರಿಕನ ಭಾವನೆಗಳು, ಅವರ ಭರವಸೆ, ಅವರ ಏಕತೆ, ಅವರ ಶಕ್ತಿ, ಅವರ ಪ್ರೀತಿಯೆಂದು ಬರೆದುಕೊಂಡಿರುವುದು ಕಂಡುಬಂದಿದೆ. ಇದರಲ್ಲಿ ವೈರಲ್ ಫೋಟೋಗೆ ಹೋಲಿಕೆಯಾಗುವ ಫೋಟೋ ಒಂದು ಕಂಡುಬಂದಿದೆ. ಈ ಫೋಟೋಗೂ ವೈರಲ್ ಫೋಟೋಗೂ ಸಾಕಷ್ಟು ಹೋಲಿಕೆ ಇರುವುದು ಕಂಡು ಬಂದಿದೆ. ಇದು ಹಳೆಯ ಫೋಟೋ ಕೂಡ ಆಗಿದ್ದು, ಇದರಲ್ಲಿ ಇರುವುದು ಜ್ಯೋತಿ ಮೆಲ್ಹೋತ್ರಾ ಅಲ್ಲ ಎಂಬುದು ಸ್ಪಷ್ಟವಾಗಿದೆ



Full View


AI-ಆಧಾರಿತ ಫೇಸ್ ಸ್ವಾಪ್ ಟೂಲ್ ಅನ್ನು ಬಳಸಿ, ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬ ವ್ಯಕ್ತಿಯ ಮುಖಕ್ಕೆ ಸರಳವಾಗಿ ಸೇರಿಸಲು ಅವಕಾಶ ಮಾಡಿಕೊಡುತ್ತದೆ. ಅದನ್ನು ಬಳಸಿಕೊಂಡು ಅದಿತಿ ಸಿಂಗ್ ಅವರ ಮುಖವನ್ನು ಜ್ಯೋತಿ ಮಲ್ಹೋತ್ರಾ ಅವರ ಮುಖದೊಂದಿಗೆ ಬದಲಾಯಿಸಲಾಗಿದೆ. ಎರಡೂ ಫೋಟೋಗಳನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ.


ಮೊದಲ ಫೋಟೋ ಮೂಲತಃ ರಾಯ್ ಬರೇಲಿಯ ರಾಜಕಾರಣಿ ಅದಿತಿ ಸಿಂಗ್ ಅವರನ್ನು ರಾಹುಲ್ ಗಾಂಧಿ ಅವರೊಂದಿಗೆ ತೋರಿಸುತ್ತಿದೆ.


ಎರಡನೇ ಫೋಟೋ 2022 ರ ಸೆಪ್ಟೆಂಬರ್ 18 ರಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿದ್ದಾಗ, ಕೇರಳದ ಅಲಪ್ಪುಳದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಭಾಶಯ ತಿಳಿಸುತ್ತಿರುವುದನ್ನು ತೋರಿಸುತ್ತದೆ.


ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಫೋಟೋದಲ್ಲಿರುವುದು ಮಹಿಳಾ ನಾಯಕಿಯರಾಗಿದ್ದು ಪಾಕಿಸ್ತಾನದ ಪರ ಗೂಢಚಾರ ನಡೆಸಿದ ಆರೋಪಿ ಜ್ಯೋತಿ ಮೇಲ್ಹೋತ್ರಾ ಅಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಎರಡು ಫೋಟೋಗಳು ಹಳೆಯದ್ದಾಗಿದೆ.

Claim :  ರಾಹುಲ್ ಗಾಂಧಿ ಜೊತೆ ಯೂಟ್ಯೂಬರ್ ಗೂಢಚಾರಿ ಜ್ಯೋತಿ ಮಲ್ಹೋತ್ರಾ ಫೋಟೋ ಎಂದು ಎಡಿಟ್‌ ಮಾಡಲಾದ ಫೋಟೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News