ಫ್ಯಾಕ್ಟ್‌ಚೆಕ್‌: ವಿಪಕ್ಷ ನಾಯಕರು ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಹೇಳಿಕೆಗಳನ್ನು ನೀಡಿದ್ದರು

ವಿಪಕ್ಷ ನಾಯಕರು ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಹೇಳಿಕೆಗಳನ್ನು ನೀಡಿದ್ದರು

Update: 2025-05-03 02:30 GMT

​​ಏಪ್ರಿಲ್‌ 24, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ʼजिन्हें सब्जियों-फलों के ठेलों पर नाम लिखे जाने से दिक्कत थी, वो कल नाम पूछकर की गई हत्या पर चुप हैं। उनकी संवेदनाएं तब जागती हैं जब मामला उनके एजेंडे में फिट बैठे। ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼತರಕಾರಿ ಮತ್ತು ಹಣ್ಣಿನ ಬಂಡಿಗಳ ಮೇಲೆ ಬರೆದ ಹೆಸರುಗಳಿಂದ ಸಮಸ್ಯೆ ಇದ್ದವರು ಧರ್ಮದ ಬಗ್ಗೆ ಕೇಳುವ ಆಧಾರದ ಮೇಲೆ ನಡೆದ ಕೊಲೆಗಳ ಬಗ್ಗೆ ಮೌನವಾಗಿದ್ದಾರೆ. ವಿಷಯವು ಅವರ ಕಾರ್ಯಸೂಚಿಗೆ ಹೊಂದಿಕೆಯಾದಾಗ ಮಾತ್ರ ಅವರ ಸಂವೇದನೆಗಳು ಜಾಗೃತಗೊಳ್ಳುತ್ತವೆ" ಎಂದು ಪೊಸ್ಟ್‌ ಮಾಡಿದ್ದಾರೆ. (ಆರ್ಕೈವ್‌)

ಫೇಸ್‌ಬುಕ್ ಬಳಕೆದಾರ ಭೂಪೇಂದ್ರ ಚೌಹಾಣ್ ಅವರು ಏಪ್ರಿಲ್ 28, 2025 ರಂದು ವೈರಲ್ ಕೊಲಾಜ್ ಅನ್ನು ಪೋಸ್ಟ್ ಮಾಡಿ, ತರಕಾರಿ ಮತ್ತು ಹಣ್ಣಿನ ಬಂಡಿಗಳ ಮೇಲೆ ಬರೆದ ಹೆಸರುಗಳಿಂದ ಸಮಸ್ಯೆ ಇದ್ದವರು ಧರ್ಮದ ಆಧಾರದ ಮೇಲೆ ನಡೆದ ಕೊಲೆಗಳ ಬಗ್ಗೆ ಮೌನವಾಗಿರುತ್ತಾರೆ. ವಿಷಯವು ಅವರ ಕಾರ್ಯಸೂಚಿಗೆ ಹೊಂದಿಕೆಯಾದಾಗ ಮಾತ್ರ ಅವರ ಭಾವನೆಗಳು ಜಾಗೃತಗೊಳ್ಳುತ್ತವೆ" ಎಂದು ಬರೆದಿದ್ದಾರೆ. ಈ ಪೋಸ್ಟ್ ಅನ್ನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಮತ್ತು ಸುಪ್ರಿಯಾ ಶ್ರೀನಾಟೆ ಅವರ ಚಿತ್ರಗಳೊಂದಿಗೆ ಹಂಚಿಕೊಳ್ಳಲಾಗಿದೆ.


ಮತ್ತಷ್ಟು ವೈರಲ್‌ ಆದ ಸುದ್ದಿಯನ್ನು ನೀವಿಲ್ಲಿ, ಇಲ್ಲಿ ನೋಡಬಹುದು.


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಸುದ್ದಿಯಲ್ಲಿ ಹೇಳಿರುವ ರೀತಿ ವಿಪಕ್ಷದ ನಾಯಕರುಗಳಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಅಖಿಲೇಶ್‌ ಯಾದವ್‌, ಸೇರಿದಂತೆ ಹಲವರು ಉಗ್ರರ ದಾಳಿಯನ್ನು ಖಂಡಿಸಿಲ್ಲ ಎಂಬುದು ಸುಳ್ಳು, ವೈರಲ್‌ ಪೋಸ್ಟ್‌ ರಾಜಕೀಯ ಉದ್ದೇಶದಿಂದ ಸುಳ್ಳು ನಿರೂಪಣೆಯೊಂದಿಗೆ ಶೇರ್‌ ಮಾಡಲಾಗುತ್ತಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಏಪ್ರಿಲ್‌ 22, 2025ರಂದು ರಾಹುಲ್‌ ಗಾಂಧಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಾಣಿಸಿತು. ಪೊಸ್ಟ್‌ನಲ್ಲಿ ʼजम्मू-कश्मीर के पहलगाम में हुए कायराना आतंकी हमले में पर्यटकों के मारे जाने और कई लोगों के घायल होने की ख़बर बेहद निंदनीय और दिल दहलाने वाली है। मैं शोकाकुल परिवारों के प्रति गहरी संवेदनाएं व्यक्त करता हूं और घायलों के जल्द स्वस्थ होने की आशा करता हूं। आतंक के खिलाफ पूरा देश एकजुट है। सरकार जम्मू-कश्मीर में हालात सामान्य होने के खोखले दावों के बजाय अब जवाबदेही लेते हुए ठोस कदम उठाए —ताकि आगे ऐसी बर्बर घटनाएं न होने पाएं और निर्दोष भारतीय यूं अपनी जान न गंवाएं।ʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ” ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಅತ್ಯಂತ ಖಂಡನೀಯ ಮತ್ತು ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಆಶಿಸುತ್ತೇನೆ. ಇಡೀ ದೇಶವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಪೊಳ್ಳು ಹೇಳಿಕೆಗಳನ್ನು ನೀಡುವ ಬದಲು, ಸರ್ಕಾರವು ಈಗ ಜವಾಬ್ದಾರಿಯನ್ನು ತೆಗೆದುಕೊಂಡು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಬೇಕು – ಇದರಿಂದ ಭವಿಷ್ಯದಲ್ಲಿ ಇಂತಹ ಅನಾಗರಿಕ ಘಟನೆಗಳು ಸಂಭವಿಸುವುದಿಲ್ಲ ಮತ್ತು ಮುಗ್ಧ ಭಾರತೀಯರು ಈ ರೀತಿ ಪ್ರಾಣ ಕಳೆದುಕೊಳ್ಳುವುದಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಆರ್ಕೈವ್‌

ಅಖಿಲೇಶ್‌ ಯಾದವ್‌ರವರು ಏಪ್ರಿಲ್‌ 22, 2025ರಂದು ʼजम्मू-कश्मीर के पहलगाम में आतंकी हमले की भयावह तस्वीरें दिल दहला देनेवाली हैं। ये हमला हर दृष्टिकोण से निंदनीय है। घायलों के शीघ्रातिशीघ्र उपचार के लिए देश की सबसे अच्छी चिकित्सा सेवाएं और सुविधाएं तत्काल सुनिश्चित की जाएं। सबके स्वास्थ्य लाभ और जीवन के लिए हृदय से कामना। केंद्र की सरकार को सबसे पहले सुरक्षा के वातावरण को सुनिश्चित करने की ज़रूरत है, तभी स्थानीय निवासियों और पर्यटकों का जीवन सुरक्षित रह सकता है।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಭಯಾನಕ ಚಿತ್ರಗಳು ಹೃದಯವಿದ್ರಾವಕವಾಗಿವೆ. ಈ ದಾಳಿ ಎಲ್ಲಾ ದೃಷ್ಟಿಕೋನಗಳಿಂದಲೂ ಖಂಡನೀಯ. ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ನೀಡಲು ದೇಶದ ಅತ್ಯುತ್ತಮ ವೈದ್ಯಕೀಯ ಸೇವೆಗಳು ಮತ್ತು ಸೌಲಭ್ಯಗಳನ್ನು ತಕ್ಷಣವೇ ಖಚಿತಪಡಿಸಿಕೊಳ್ಳಬೇಕು. ಎಲ್ಲರ ಆರೋಗ್ಯ ಮತ್ತು ಜೀವನಕ್ಕಾಗಿ ಹೃತ್ಪೂರ್ವಕ ಹಾರೈಕೆಗಳು. ಕೇಂದ್ರ ಸರ್ಕಾರವು ಮೊದಲು ಭದ್ರತೆಯ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು, ಆಗ ಮಾತ್ರ ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರ ಜೀವನ ಸುರಕ್ಷಿತವಾಗಿರಲು ಸಾಧ್ಯ.” ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.

ಏಪ್ರಿಲ್‌ 22, 2025ರಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಹೇಳಿಕೆಯ ಕುರಿತು ನಾವು ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ “जम्मू-कश्मीर के पहलगाम में पर्यटकों पर कायराना आतंकी हमला अत्यंत निंदनीय एवं शर्मनाक कृत्य है। निहत्थे-निर्दोष आम नागरिकों को निशाना बनाना मानवता के खिलाफ अपराध है। यह पूरी तरह अस्वीकार्य है। पूरा देश आतंकवाद के खिलाफ एकजुट है और कड़े स्वर में इसकी निंदा करता है। खबरों के मुताबिक, इस हमले में कई पर्यटक हताहत हुए हैं। ईश्वर दिवंगत आत्माओं को शांति दें। घायलों के शीघ्र स्वस्थ होने की प्रार्थना करती हूं। ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಕೃತ್ಯ. ನಿರಾಯುಧ ಮತ್ತು ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದು ಮಾನವೀಯತೆಯ ವಿರುದ್ಧದ ಅಪರಾಧ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇಡೀ ದೇಶವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತದೆ. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಅನೇಕ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ದೇವರು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಿಯಾಂಕ ಗಾಂಧಿ ಅವರು ಪೋಸ್ಟ್‌ ಮಾಡಿರುವುದು ನೋಡಬಹುದು.

ಇನ್ನು ವೈರಲ್‌ ಪೊಸ್ಟ್‌ನಲ್ಲಿ ʼಸುಪ್ರಿಯಾ ಶ್ರೀನಾಟೆʼರವರು ಸಹ ಉಗ್ರರ ದಾಳಿಯನ್ನು ಖಂಡಿಸಿಲ್ಲ ಎಂಬ ಸುದ್ದಿ ಪೊಸ್ಟ್‌ ಮಾಡಿದ್ದರು. ಈ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಸುಪ್ರಿಯಾ ಶ್ರೀನಾಟೆರವರ ಎಕ್ಸ್‌ ಖಾತೆಯನ್ನು ಪರಿಶೀಲಿಸಿದೆವು. ಹುಡುಕಾಟದಲ್ಲಿ ನಮಗೆ, ಸುಪ್ರಿಯಾ ಶ್ರೀನಾಟೆರವರು ಕೂಡ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವುದನ್ನು ನೋಡಬಹುದು. ಪೊಸ್ಟ್‌ನಲ್ಲಿ ʼजम्मू-कश्मीर के पहलगाम में आतंकियों ने जिस बर्बरता से पर्यटकों की हत्या की है, उससे रूह काँप जाये | इस कायराना हरकत के ख़िलाफ़ पूरा देश एकजुट हो कर खड़ा है - इस देश के ख़िलाफ़ आँख उठा कर देखने वाले यह याद रखें कि यह देश हर बार आतंकवाद के ख़िलाफ़ जीता है | मोदी सरकार जम्मू-कश्मीर में हालात सामान्य होने के खोखले दावे करती आई है - लेकिन वस्तुतः स्थिति बेहद चिंताजनक है | आज मज़बूत निर्णायक कदम उठाने की ज़रूरत है - डींगे हाँकने का वक़्त बीत चुका है - निर्दोष लोगों की हत्या पर ढुलमुल रवैया नहीं अपनाया जा सकताʼ ಎಂದು ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ವಿಪಕ್ಷದ ಇನ್ನೂ ಹಲವು ನಾಯಕರು ಉಗ್ರರ ದಾಳಿಯನ್ನು ಖಂಡಿಸಿರುವುದು ಅವರ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ ವೈರಲ್‌ ಪೋಸ್ಟ್‌ ಆಧಾರ ರಹಿತವಾಗಿದ್ದು, ಸುಳ್ಳು ನಿರೂಪಣೆಯಿಂದ ಕೂಡಿದೆ.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿಯಲ್ಲಿ ಹೇಳಿರುವ ರೀತಿ ವಿಪಕ್ಷದ ನಾಯಕರುಗಳಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಅಖಿಲೇಶ್‌ ಯಾದವ್‌, ಸೇರಿದಂತೆ ಹಲವರು ಉಗ್ರರ ದಾಳಿಯನ್ನು ಖಂಡಿಸಿಲ್ಲ ಎಂಬುದು ಸುಳ್ಳು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅದೇ ದಿನದಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಮತ್ತು ಸುಪ್ರಿಯಾ ಶ್ರೀನಾಟೆ ಹೇಳಿಕೆಗಳನ್ನು ನೀಡಿದ್ದರು ಮತ್ತು ಅದನ್ನು ಬಲವಾಗಿ ಖಂಡಿಸಿದ್ದರು.

Claim :  ವಿಪಕ್ಷ ನಾಯಕರು ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಹೇಳಿಕೆಗಳನ್ನು ನೀಡಿದ್ದರು
Claimed By :  Social Media Users
Fact Check :  Unknown
Tags:    

Similar News