ಫ್ಯಾಕ್ಟ್‌ಚೆಕ್‌: ಪಾಕ್‌ನ ಜೆಎಫ್-17 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಐಎಎಫ್ ಎಂಬ ಹೇಳಿಕೆಯೊಂದಿಗೆ ಹಳೆಯ ವಿಡಿಯೋ ಹಂಚಿಕೆ

ಪಾಕ್‌ನ ಜೆಎಫ್-17 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಐಎಎಫ್ ಎಂಬ ಹೇಳಿಕೆಯೊಂದಿಗೆ ಹಳೆಯ ವಿಡಿಯೋ ಹಂಚಿಕೆ

Update: 2025-05-07 11:56 GMT

2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಇದರಲ್ಲಿ 26 ಜನರು ಸಾವನ್ನಪ್ಪಿದರು. ಈ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಗಿದೆ. ಪಾಕಿಸ್ತಾನದ ಮೇಲಿನ ಈ ವಾಯುದಾಳಿಯ ನಂತರ, ಭಾರತದ ರಕ್ಷಣಾ ಸಚಿವಾಲಯವು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್‌ ಅನ್ನು ನಡೆಸಲಾಗಿದೆ ಎಂದು ಸ್ಪಷ್ಟಪಡಿಸಲಾಯಿತು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಮಂಗಳವಾರ ತಡರಾತ್ರಿ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿತು. ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ ಈ ಕ್ರಮಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಸಲಾಗಿದೆ. ಇದರ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ದಾಳಿಗಳನ್ನು ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನ ಲಾಂಚ್ ಪ್ಯಾಡ್‌ಗಳಿದ್ದ 9 ಭಯೋತ್ಪಾದಕ ಅಡಗುತಾಣಗಳನ್ನು ಭಾರತೀಯ ವಾಯುಪಡೆ ಗುರಿಯಾಗಿಸಿಕೊಂಡಿತು. ಇವುಗಳಲ್ಲಿ ಕೋಟ್ಲಿ, ಬಹವಾಲ್ಪುರ್, ಮುಜಫರಾಬಾದ್ ಮತ್ತು ಪಂಜಾಬ್ ಪ್ರಾಂತ್ಯದ ಕೆಲವು ಸ್ಥಳಗಳು ಸೇರಿವೆ.

ಆಪರೇಷನ್ ಸಿಂಧೂರ್‌ನ ದೃಶ್ಯಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೈರಲ್‌ ಆದ ವಿಡಿಯೋವನ್ನು ನೋಡುವುದಾದರೆ, ಒಂದು ಖಾಲಿ ಮೈದಾನದಲ್ಲಿ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಸಾಮಾಜಿಕ ಬಳಕೆದಾರರು ತಮ್ಮ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಮೇ 07, 2025ರಂದು ಎಕ್ಸ್‌ ಖಾತೆದಾರರೊಬ್ಬರು ʼOne rafale has been hit by Pakistan pl 15 near bahawalpur , burnt into ashes l, pilot deadʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಹವಾಲ್ಪುರದ ಬಳಿ ಪಾಕಿಸ್ತಾನ ಪಿಎಲ್‌15 ರಫೇಲ್ ವಿಮಾನವೊಂದು ಡಿಕ್ಕಿ ಹೊಡೆದು ಸುಟ್ಟು ಭಸ್ಮವಾಗಿದೆ, ಪೈಲಟ್ ಸಾವುʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಸುದ್ದಿಗ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಮೇ 07, 2025ರಂದು ಎಕ್ಸ್‌ ಖಾತೆದಾರರರೊಬ್ಬರು ʼJF –17 विमान जिसे चीन और पाकिस्तान ने संयुक्त रूप से विकसित किया है| चीन ने जिस JF–17 विमान को पाकिस्तान वालों को दिया था, उसे भारतीय सेना ने मार गिराया है | भारतीय वायु सेना इंडियन आर्मी को सलाम ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರೆ. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿದ ಜೆಎಫ್–17 ವಿಮಾನಗಳು. ಚೀನಾ ಪಾಕಿಸ್ತಾನಕ್ಕೆ ನೀಡಿದ್ದ ಜೆಎಫ್–17 ವಿಮಾನವನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಗೆ ಸೆಲ್ಯೂಟ್ʼ ಎಂದು ಬರೆದಿರುವುದನ್ನು ನಾವಿಲ್ಲಿ ಕಾಣಬಹುದು. (ಆರ್ಕೈವ್‌)

ಫೇಸ್‌ಬುಕ್‌ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼപാകിസ്ഥാൻന്റെ സിയാൽകോട്ട് ജില്ലയിൽ ഇന്ത്യൻ അതിർത്തിയിലേക്ക് വരികയായിരുന്ന പാക്ക് യുദ്ധവിമാനം #അജ്ഞാത കാരണത്താൽ . തകർന്നുവീണു. എന്നാൽ രാജ്യവുമായി ബന്ധപ്പെട്ട ഏതെങ്കിലും നെഗറ്റീവ് വാർത്തകൾ റിപ്പോർട്ട് ചെയ്യുന്നത് വിലക്കിക്കൊണ്ട് പാകിസ്ഥാൻ ഇൻഫർമേഷൻ ആൻഡ് ബ്രോഡ്കാസ്റ്റിംഗ് മന്ത്രാലയം നോട്ടീസ്. പുറപ്പെടുവിച്ചതിനെത്തുടർന്ന് പാകിസ്ഥാൻ ചാനലുകൾ ആ വാർത്ത മുക്കി.ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯಲ್ಲಿ ಭಾರತದ ಗಡಿಯನ್ನು ಸಮೀಪಿಸುತ್ತಿದ್ದ ಪಾಕಿಸ್ತಾನಿ ಯುದ್ಧ ವಿಮಾನವು #ಅಜ್ಞಾತ ಕಾರಣಗಳಿಗಾಗಿ ಪತನಗೊಂಡಿದೆ. ಆದಾಗ್ಯೂ, ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶಕ್ಕೆ ಸಂಬಂಧಿಸಿದ ಯಾವುದೇ ನಕಾರಾತ್ಮಕ ಸುದ್ದಿಗಳನ್ನು ವರದಿ ಮಾಡುವುದನ್ನು ನಿಷೇಧಿಸಿ ನೋಟಿಸ್ ನೀಡಿದ ನಂತರ ಪಾಕಿಸ್ತಾನಿ ಚಾನೆಲ್‌ಗಳು ಸುದ್ದಿಯನ್ನು ನಿಗ್ರಹಿಸಿವೆ.ʼ ಎಂದು ಬರೆದಿರುವುದನ್ನು ಕಾಣಬಹುದು.

ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ , ಇಲ್ಲಿ, ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನವು ಏಪ್ರಿಲ್ 15 ರಂದು ವೆಹಾರಿಯಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಏಪ್ರಿಲ್ 16, 2025 ರ ʼಇಂಡಿಯಾ ಟಿವಿʼ ವೆಬ್‌ಸೈಟ್‌ನಲ್ಲಿ ʼPakistan Air Force's Mirage fighter aircraft crashes in Punjab provinceʼ ಎಂಬ ಹೆಡ್‌ಲೈನ್‌ನೊಂಡಿಗೆ ವರದಿ ಮಾಡಲಾಗಿದೆ. ವರದಿಯ ಪ್ರಕಾರ, ಈ ವೀಡಿಯೊ ವಾಸ್ತವವಾಗಿ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ತರಬೇತಿ ವಿಮಾನ ಅಪಘಾತದ ನಂತರದ ಘಟನೆಯನ್ನು ತೋರಿಸುತ್ತದೆ. ಏಪ್ರಿಲ್ 15 ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ವೆಹಾರಿ ಜಿಲ್ಲೆಯ ರಟ್ಟಾ ಟಿಬ್ಬಾ ಎಂಬ ಹಳ್ಳಿಯಲ್ಲಿ ಪತನಗೊಂಡ ಮಿರಾಜ್ ವಿ ರೋಸ್ ವಿಮಾನ ಇದಾಗಿದೆʼ ಎಂದು ವರದಿಯಾಗಿದೆ.


ದಿ ವೀಕ್‌ ಎಂಬ ವೆಬ್‌ಸೈಟ್‌ನಲ್ಲಿ ʼPakistan Air Force aircraft crashes in Punjab pakistanʼ ಎಂಬ ಹೆಡ್‌ಲೈನ್‌ನ್ನು ನೀಡಿ ವರದಿ ಮಾಡಲಾಗಿದೆ. ವರದಿಯಲ್ಲಿ ʼವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ ಎಂದು ದಿ ವೀಕ್ ವರದಿ ಮಾಡಿದೆ. ಅಪಘಾತಕ್ಕೆ ಯಾವುದೇ ಪ್ರತಿಕೂಲ ಕ್ರಮಕ್ಕಿಂತ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ.


ಏಪ್ರಿಲ್‌ 15,2025ರಂದು ʼರೇ ನ್ಯೂಸ್‌ʼ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ʼವೆಹಾರಿ ಜಿಲ್ಲೆಯ ಉಪನಗರವಾದ ರಟ್ಟಾ ಟಬ್ಬಾ ಬಳಿ ತಾಂತ್ರಿಕ ದೋಷದಿಂದಾಗಿ ಪಾಕಿಸ್ತಾನ ಸೇನಾ ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸಕಾಲದಲ್ಲಿ ಹೊರಜಿಗಿದ ಮತ್ತು ಸುರಕ್ಷಿತವಾಗಿದ್ದರು ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತದ ಬಗ್ಗೆ ವರದಿಯಾದ ತಕ್ಷಣ, ಸ್ಥಳೀಯ ಆಡಳಿತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ, ಪ್ರದೇಶವನ್ನು ಸುತ್ತುವರೆದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಸ್ಥಳೀಯ ನಿವಾಸಿಗಳ ಪ್ರಕಾರ, ವಿಮಾನವು ತೈಲ ಡಿಪೋ ಬಳಿ ಅಪಘಾತಕ್ಕೀಡಾಯಿತು, ಆದರೆ ದೇವರ ದಯೆಯಿಂದ ದೊಡ್ಡ ದುರಂತವೊಂದು ತಪ್ಪಿತು. ಮೂಲಗಳ ಪ್ರಕಾರ, ಘಟನೆಯ ಕಾರಣಗಳನ್ನು ನಿರ್ಧರಿಸಲು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಸ್ಥಳೀಯ ಪತ್ರಕರ್ತರು ಘಟನೆಯನ್ನು ದೃಢಪಡಿಸಿದ್ದು, ಪೈಲಟ್‌ಗಳ ಬದುಕುಳಿದಿರುವುದು ಒಂದು ದೊಡ್ಡ ವರದಾನವಾಗಿದ್ದು, ಘಟನೆಯಲ್ಲಿ ಯಾವುದೇ ನಾಗರಿಕರು ಅಥವಾ ಆಸ್ತಿಗೆ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ. ಯಾವುದೇ ಹಾನಿಯಾಗಿಲ್ಲ.ʼ ಎಂಬ ಶೀರ್ಷಿಕೆಯನ್ನಿಡಿ ವರದಿ ಮಾಡಿರುವುದನ್ನು ನೋಡಬಹುದು.

Full View

ಏಪ್ರಿಲ್‌ 15, 2025ರಂದು ಯೂಟ್ಯೂಬ್‌ ಚಾನೆಲ್‌ನಲ್ಲಿ ಸಾಮಾಜಿಕ ಮಾಧ್ಯಮ ಪುಟಗಳು ಅಪಘಾತದ ಸ್ಥಳದಲ್ಲಿ ಗಾಯಗೊಂಡ ಸಿಬ್ಬಂದಿಗೆ ನೀಡಲಾಗುತ್ತಿರುವ ವೈದ್ಯಕೀಯ ನೆರವು ಸೇರಿದಂತೆ ತಕ್ಷಣದ ರಕ್ಷಣಾ ಪ್ರಯತ್ನಗಳ ತುಣುಕುಗಳನ್ನು ಹಂಚಿಕೊಂಡಿವೆ. ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.

Full View

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನವು ಏಪ್ರಿಲ್ 15 ರಂದು ವೆಹಾರಿಯಲ್ಲಿ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ.

Claim :  ಪಾಕ್‌ನ ಜೆಎಫ್-17 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಐಎಎಫ್ ಎಂಬ ಹೇಳಿಕೆಯೊಂದಿಗೆ ಹಳೆಯ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News