ಗುಜರಾತ್‌ನಲ್ಲಿ ಎಣ್ಣೆ ಲಾರಿ ಅಪಘಾತಗೊಂಡಾಗ ಬಿದ್ದ ಎಣ್ಣೆಯನ್ನು ಶಿರಾದಲ್ಲಿ ಎಣ್ಣೆ ದೊರಕಿದೆ ಎಂದು ಹಂಚಿಕೆ
ಗುಜರಾತ್‌ನಲ್ಲಿ ಎಣ್ಣೆ ಲಾರಿ ಅಪಘಾತಗೊಂಡಾಗ ಬಿದ್ದ ಎಣ್ಣೆಯನ್ನು ಶಿರಾದಲ್ಲಿ ಎಣ್ಣೆ ದೊರಕಿದೆ ಎಂದು ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತುಮಕೂರಿನ ಶಿರಾಗೆ ಸಂಬಂಧಿಸಿದ್ದು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಬಳಕೆದಾರರು ತಮ್ಮ ತಮ್ಮ ಖಾತೆಯಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ʼತುಮಕೂರು ಜಿಲ್ಲೆಯ ಶಿರಾದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ಎಣ್ಣೆ ಸಿಕ್ಕಿದೆ ಎಂಬಂತೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಜುಲೈ 17, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಅರಬ್ ದೇಶದಲ್ಲಿ ಭೂಮಿಯಿಂದ ತೈಲ ಹೇಗೆ ಉತ್ಪತ್ತಿಯಾಗಿ ಹೊರಬರುತ್ತದೆಯೋ ಹಾಗೆ ನಮ್ಮ ಕರ್ನಾಟಕದ ಒಂದು ಊರಲ್ಲಿ ಅಡುಗೆ ಮಾಡುವ ತೈಲ ಉತ್ಪತ್ತಿಯಾಗಿ ಬಂದಿದೆ ಅಡುಗೆ ಎಣ್ಣೆನ ತಗೋಳಲು ಮೂಗಿಬಿದ್ದ ಜನರು ಇನ್ಮುಂದೆ ಕರ್ನಾಟಕದಲ್ಲಿ ಅಡುಗೆ ಎಣ್ಣೆ ಕೋರತೆ ಬರೋದಿಲ್ಲ ಅನ್ಕೊಂಡಿದ್ದೀನಿ ಈ ದೃಶ್ಯದಲ್ಲಿ ಕಾಣಬಹುದುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼಭೂಮಿ ಹಾಗೇನೇ ಯಾರಿಗೆ ಯಾವಾಗ ಏನ್ ಕೊಡುತ್ತೆ ಗೊತ್ತಾಗುವುದಿಲ್ಲ....ʼ ಎಂದು ಬರೆದುಕೊಂಡಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 17, 2025ರಂದು ಇನ್‌ಸ್ಟಾಗ್ರಾಮ್ ಖಾತತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼನಮ್ಮ ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ನೆನ್ನೆ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದ್ದಾಗ ಇದ್ದಕ್ಕಿದ್ದಂತೆ ತೈಲ ಎಣ್ಣೆ ಸಿಕ್ಕೆದೆ ನಮ್ಮ ಶಿರಾ ಭಾಗದಲ್ಲಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ಮತ್ತೊಂದು ವಿಡಿಯೋವನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಿತ್ತಿದೆ ವಾಸ್ತವವಾಗಿ ಗುಜರಾತ್‌ನಲ್ಲಿ ತೈಲ ಟ್ಯಾಂಕರ್ ಅಪಘಾತಗೊಂಡು ಎಣ್ಣೆಯನ್ನು ಸಾರ್ವಜನಿಕರು ಡಬ್ಬಕ್ಕೆ ತುಂಬಿಕೊಂಡು ಹೋಗುವ ಘಟನೆಯನ್ನು, ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ತೈಲ ನಿಕ್ಷೇಪ ಸಿಕ್ಕಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಿದ್ದೇವೆ. ಮತ್ತೊಮ್ಮೆ ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೀಡಿಯೋದಲ್ಲಿ ಜನರು ಎಣ್ಣೆ ತುಂಬುತ್ತಿರುವ ಆಯಿಲ್ ಡಬ್ಬದಲ್ಲಿ ಗುಜರಾತಿ ಭಾಷೆಯಲ್ಲಿರುವುದನ್ನು ನಾವಿಲ್ಲಿ ಗಮನಿಸಬಹುದು.
ಹಾಗೆ ಎಣ್ಣೆ ತುಂಬಿದ ವಸ್ತುಗಳನ್ನು ಗೂಡ್ಸ್ ರಿಕ್ಷಾಕ್ಕೆ ಲೋಡ್ ಮಾಡುವುದನ್ನು ಕಾಣಬಹುದು. ಆ ಗೂಡ್ಸ್ ರಿಕ್ಷಾ ಗುಜರಾತಿ ನೋಂದಣಿ ಹೊಂದಿರುವುದನ್ನು ನೋಡಬಹುದು.
ನಾವು ಗೂಡ್ಸ್ ರಿಕ್ಷಾದ ನೋಂದಣಿಯನ್ನು ಪರಿಶೀಲಿಸಿದೆವು, ಪರಿಶೀಲನೆಯಲ್ಲಿ ನಮಗೆ ತಿಳಿದದ್ದು ಏನೆಂದರೆ, ಇದು ಗುಜರಾತ್‌ನಲ್ಲೇ ಓಡಾಡುವ ರಿಕ್ಷಾ ಎಂದು ಸ್ಪಷ್ಟವಾಯಿತು. ಆದ್ದರಿಂದ ವೈರಲ್ ವೀಡಿಯೋ ಗುಜರಾತ್‌ಗೆ ಸಂಬಂಧಿಸಿದ್ದಾಗಿದೆ.
ನಾವು ವೈರಲ್ ಅದ ಮತ್ತಷ್ಟು ವಿಡಿಯೋಗಳನ್ನು ನಾವಿಲ್ಲಿ ನೋಡಬಹುದು
ಜುಲೈ 11, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ಗುಜರಾತಿ ಭಾಷೆಯಲ್ಲಿ ʼઆજે તો તેલ નો વરસાદ થયો હો રાધનપુર મહોʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನಿ ಕನ್ನಡಕ್ಕೆ ಅನುವಾದಿಸಿದಾಗ ʼರಾಧಾನ್ಪುರದಲ್ಲಿ ಎಣ್ಣೆಯ ಮಳೆ” ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು. ಈ ದೃಶ್ಯದಲ್ಲಿ ಗುಜರಾತಿನ ರಾಧಾನ್ಪುರದಲ್ಲಿ ಎಣ್ಣೆಯನ್ನು ಪಾತ್ರೆಗಳಲ್ಲಿ ತುಂಬಿ ಜನರು ತೆಗೆದುಕೊಂಡು ಹೋಗುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದು.
ಆಗಸ್ಟ್ 1, 2023ರಂದು ʼದಿವ್ಯಾ ಭಾಸ್ಕರ್ʼ ವೆನ್‌ಸೈಟ್‌ನಲ್ಲಿ ಪ್ರಕಟಿಸಿದ ವರದಿಯಲ್ಲಿ ʼતેલ ભરવા લોકોની પડાપડી:વારાહી-રાધનપુર માર્ગ પર તેલનું ટેન્કર પલટી જતા રસ્તા પર રેલમછેલ થઈ, આસપાસના લોકો હાથમાં જે વાસણ આવ્યું તે લઈને ભરવા માટે પહોંચ્યાʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಾರಾಹಿ-ರಾಧನಪುರ ರಸ್ತೆಯಲ್ಲಿ ತೈಲ ಟ್ಯಾಂಕರ್ ಉರುಳಿಬಿದ್ದ ಪರಿಣಾಮ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಸುತ್ತಮುತ್ತಲಿನ ಜನರು ಸಿಕ್ಕ ಪಾತ್ರೆಗಳಿಂದ ಅದನ್ನು ತುಂಬಲು ಧಾವಿಸಿದರು.ʼ ಎಂದಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯ ಪ್ರಕಾರ “ವಾರಾಹಿ-ರಾಧನ್‌ಪುರ ರಸ್ತೆಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು, ಸುತ್ತಮುತ್ತಲಿನ ಜನರು ರಿಕ್ಷಾ ಒಂದಕ್ಕೆ ಎಣ್ಣೆಯನ್ನು ತುಂಬಲು ಪಾತ್ರೆಗಳೊಂದಿಗೆ ಅಲ್ಲಿಗೆ ತಲುಪಿದರು.” ಎಂದು ವರದಿಯಾಗಿರುವುದನ್ನು ಕಾಣಬಹುದು.
ಜುಲೈ 19, 2025ರಂದು ಐ ಪ್ಲಸ್ ನ್ಯೂಸ್ ಚಾನೆಲ್ ಪ್ರಕಟಿಸಿದ ಶಾರ್ಟ್ಸ್ ಅನ್ನು ಯೂಟ್ಯೂಬ್ ನಲ್ಲಿ ನೊಡಿದ್ದೇವೆ. ಇದರಲ್ಲಿ ರಾಧಾನ್ಪುರದಲ್ಲಿ ಎಣ್ಣೆಯ ಮಳೆ ಎಂದು ಕ್ಯಾಪ್ಷನ್‌ನೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಜೊತೆಗೆ ವೀಡಿಯೋದ ದೃಶ್ಯಗಳು ವೈರಲ್ ವೀಡಿಯೋಕ್ಕೆ ಹೆಚ್ಚಾಗಿ ಹೋಲಿಕೆಯಾಗುವುದನ್ನು ನಾವಿಲ್ಲಿ ಗಮನಿಸಿಬಹುದು.
ವೈರಲ್ ವಿಡಿಯೋದ ತನಿಖೆ ವೇಳೆ ಪತ್ರಿಕಾ ವರದಿಯು 2023ರಲ್ಲಿ ಲಾರಿ ಅಪಘಾತವಾದ ಬಗ್ಗೆ ವರದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. ಇದೇ ವೇಳೆ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಇತ್ತೀಚೆಗೆ ಪೋಸ್ಟ್ ಮಾಡಿರುವುದು ಲಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಘಟನೆ ನಿರ್ದಿಷ್ಟವಾಗಿ ಯಾವಾಗ ನಡೆದಿದೆ ಮತ್ತು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಮಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಿತ್ತಿದೆ ವಾಸ್ತವವಾಗಿ ಗುಜರಾತ್‌ನಲ್ಲಿ ತೈಲ ಟ್ಯಾಂಕರ್ ಅಪಘಾತಗೊಂಡು ಎಣ್ಣೆಯನ್ನು ಸಾರ್ವಜನಿಕರು ಡಬ್ಬಕ್ಕೆ ತುಂಬಿಕೊಂಡು ಹೋಗುವ ಘಟನೆಯನ್ನು, ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ತೈಲ ನಿಕ್ಷೇಪ ಸಿಕ್ಕಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.