ಫ್ಯಾಕ್ಟ್‌ಚೆಕ್‌: ಇವಿಎಂ ಮೇಲೆ ಇಂಕ್‌ನ್ನು ಎಸೆಯುತ್ತಿರುವ ದೃಶ್ಯ 2024ರ ಚುನಾವಣೆಯದಲ್ಲ.

ಇವಿಎಂ ಮೇಲೆ ಇಂಕ್‌ನ್ನು ಎಸೆಯುತ್ತಿರುವ ದೃಶ್ಯ 2024ರ ಚುನಾವಣೆಯದಲ್ಲ.

Update: 2024-04-30 18:29 GMT

ವೈರಲ್‌ ಆದ ವಿಡಿಯೋ ಇತ್ತೀಚಿನ ಚುನಾವಣೆಯದಲ್ಲ. 2019ರಲ್ಲಿ ಸುನೀಲ್ ಖಾಂಬೆ ಎಂಬ ಬಿಎಸ್‌ಪಿ ಕಾರ್ಯಕರ್ತ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮತಗಟ್ಟೆಯಲ್ಲಿ ಇವಿಎಂ ಮೇಲೆ ಶಾಯಿ ಎಸೆದು ಇವಿಯಂ ಬಳಕೆಯ ಮೇಲೆ ಘೋಷಣೆಗಳನ್ನು ಕೂಗಿದ್ದಾನೆ.

 ಚುನಾವಣೆಯ ಸಮಯದಲ್ಲಿ ಮತಗಳನ್ನು ದಾಖಲಿಸಲು ಇವಿಎಂಗಳನ್ನು ಬಳಸುತ್ತೇವೆ. ಮತಗಳನ್ನು ವೇಗವಾಗಿ ಮತ್ತು ನಿಖರವಾಗಿ ಎಣಿಸಲು ಇವಿಎಂಗಳನ್ನು ಉಪಯೋಗಿಸುತ್ತೇವೆ. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಇವಿಎಂ ಬಳಕೆಗೆ ರಾಜಕೀಯ ಪಕ್ಷಗಳ ಮುಖಂಡರು ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ವಿಡಿಯೋವಿನಲ್ಲಿ ಉದ್ದನೆಯ ಕೂದಲಿನ ಬಿಳಿ ಅಂಗಿಯನ್ನು ಧರಿಸಿರುವ ವ್ಯಕ್ತಿಯೊಬ್ಬ ಮತಗಟ್ಟೆಯಲ್ಲಿ ಇವಿಎಂ ಯಂತ್ರಗಳ ಮೇಲೆ ಇಂಕನ್ನು ಎಸೆಯುತ್ತಿರುವ ದೃಶ್ಯವನ್ನು ನೋಡಬಹುದು. ಆ ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

“Nagpur man threw ink on EVM & was chanting anti-EVM slogans Public showing outrage towards EVM still why only public is punished is this forceful election ? The post was accompanied with hashtags #ElectionDay #ElectionCommissionofIndia #Elections2024 #LokSabhaElections2024 ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದರು.

ಕನ್ನಡಕ್ಕೆ ಅನುವಾದಿಸಿದಾಗ "ನಾಗ್ಪುರದ ವ್ಯಕ್ತಿಯೊಬ್ಬ ಇವಿಎಂ ಮಿಷನ್‌ಗಳ ಮೇಲೆ ಇಂಕನ್ನು ಚೆಲ್ಲಿ, ಇವಿಎಂ ಬಳಕೆಯ ವಿರುದ್ದ ಘೋಷಣೆಗಳನ್ನು ಕೂಗಿದ್ದಾನೆ. ಆ ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ #ElectionDay #ElectionCommissionofIndia #Elections2024 #LokSabhaElections2024 ಎಂಬ ಹ್ಯಾಷ್‌ಟ್ಯಾಗ್‌ ಮತ್ತು ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

#Nagpur man threw ink on EVM &was chanting anti evm slogans



ಫ್ಯಾಕ್ಟ್‌ಚೆಕ್‌:

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2019ರಲ್ಲಿ ಸುನೀಲ್ ಖಾಂಬೆ ಎಂಬ ಬಿಎಸ್‌ಪಿ ಕಾರ್ಯಕರ್ತ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮತಗಟ್ಟೆಯಲ್ಲಿ ಇವಿಎಂ ಮೇಲೆ ಶಾಯಿ ಎಸೆದು ಇವಿಯಂ ಬಳಕೆಯ ಮೇಲೆ ಘೋಷಣೆಗಳನ್ನು ಕೂಗಿದ್ದಾನೆ.

ವೈರಲ್‌ ಆದ ಸುದ್ದಿಯಲ್ಲಿ ನಿಜಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಅಕ್ಟೋಬರ್ 21, 2019 ರಂದು ANI ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡೆವು“#WATCH Thane: A Bahujan Samaj Party (BSP) leader, Sunil Khambe threw ink on the EVM at a polling booth while voting for #MaharashtraAssemblyPolls was underway today. He was raising slogans of "EVM murdabad" & "EVM nahi chalega". He was later taken to a police station by police”. ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವುದನ್ನು ನಾವು ಕಂಡುಕೊಂಡೆವು.

Full View

ಕೀವರ್ಡ್‌ಗಳ ಮೂಲಕ ನಾವು ಹುಡುಕಾಟ ನಡೆಸಿದಾಗ ನಮಗೆ 2019ರಲ್ಲಿ "ಸುನಿಲ್ ಖಂಬೆ ಎಂಬಾತ ಇವಿಎಂ ಮೇಲೆ ಇಂಕನ್ನು ಎಸೆದರು" ಎಂದು ಹಲವಾರು ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದನ್ನು ನಾವು ಕಂಡಕಿಂಡೆವು.

ದಿ ಪ್ರಿಂಟ್‌: ಮಹಾರಾಷ್ಟ್ರದ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಬಿಎಸ್‌ಪಿ ನಾಯಕ ಸುನೀಲ್ ಖಂಬೆ ಇವಿಎಂ ಮೇಲೆ ಶಾಯಿ ಎಸೆದಿದ್ದಾರೆ. ಎಂದು ವರದಿ ಮಾಡಿರುವುದನ್ನು ನೋಡಬಹುದು

Full View 

ಎಬಿಪಿ ನ್ಯೂಸ್ ವರದಿಯ ಪ್ರಕಾರ : ಇವಿಎಂ ಮೇಲೆ ಶಾಯಿ ಎಸೆದ ಬಿಎಸ್‌ಪಿ ನಾಯಕ, ‘ಇವಿಎಂ ಮುರ್ದಾಬಾದ್’ ಎಂದು ಘೋಷಣೆ ಕೂಗಿರುವುದನ್ನು ನೋಡಬಹುದು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

Full View

ಎನ್‌ಡಿಟಿವಿ ವರದಿಯ ಪ್ರಕಾರ : “ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮತಗಟ್ಟೆಯಲ್ಲಿ ಸೋಮವಾರ ಬಿಎಸ್‌ಪಿ ಕಾರ್ಯಕರ್ತ ಇವಿಎಂ ಮೇಲೆ ಶಾಯಿ ಎಸೆದಿದ್ದಾನೆ ”. ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು

ವೈರಲ್‌ ಆದ ವಿಡಿಯೋ ಇತ್ತೀಚಿನ ಚುನಾವಣೆಯದಲ್ಲ. 2019ರಲ್ಲಿ ಸುನೀಲ್ ಖಾಂಬೆ ಎಂಬ ಬಿಎಸ್‌ಪಿ ಕಾರ್ಯಕರ್ತ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮತಗಟ್ಟೆಯಲ್ಲಿ ಇವಿಎಂ ಮೇಲೆ ಶಾಯಿ ಎಸೆದು ಇವಿಯಂ ಬಳಕೆಯ ಮೇಲೆ ಘೋಷಣೆಗಳನ್ನು ಕೂಗಿದ್ದಾನೆ.

Claim :  ಇವಿಎಂ ಮೇಲೆ ಇಂಕ್‌ನ್ನು ಎಸೆಯುತ್ತಿರುವ ದೃಶ್ಯ 2024ರ ಚುನಾವಣೆಯದಲ್ಲ.
Claimed By :  Social Media Users
Fact Check :  False
Tags:    

Similar News