ಫ್ಯಾಕ್ಟ್‌ಚೆಕ್‌: ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್‌ನಲ್ಲಿ ಎಸ್ಕಲೇಟರ್ ಕುಸಿತ ಎಂದು ಎಐ ವಿಡಿಯೋ ಹಂಚಿಕೆ

ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್‌ನಲ್ಲಿ ಎಸ್ಕಲೇಟರ್ ಕುಸಿತ ಎಂದು ಎಐ ವಿಡಿಯೋ ಹಂಚಿಕೆ

Update: 2025-09-16 05:19 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮೈಸೂರಿನ ಬಿಎಂ ಹ್ಯಾಬಿಟೇಟ್ ಮಾಲ್‌ನಲ್ಲಿ ಎಸ್ಕಲೇಟರ್‌ಗಳು ಕುಸಿದು ಬಿದ್ದು ಹಲವಾರು ಸಾವಾನಪ್ಪಿದ್ದಾರೆ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸೆಪ್ಟಂಬರ್‌ 11, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼEscalators collapsed and many dead at BM Habitat Mall, Mysuruʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮೈಸೂರಿನ ಬಿಎಂ ಹ್ಯಾಬಿಟೇಟ್ ಮಾಲ್‌ನಲ್ಲಿ ಎಸ್ಕಲೇಟರ್‌ಗಳು ಕುಸಿದು ಬಿದ್ದು ಹಲವರು ಸಾವನ್ನಪ್ಪಿದ್ದಾರೆʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಸೆಪ್ಟಂಬರ್‌ 14, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼMall in Mysore India, many diedʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಮತ್ತಷ್ಟು ವೈರಲ್‌ ಆದ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವೈರಲ್‌ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು ಹುಡುಕಾಟದಲ್ಲಿ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಹುಡುಕಾಟದಲ್ಲಿ ನಮಗೆ, ಇದೇ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ನಂತರ ನಾವು ಗೂಗಲ್‌ನಲ್ಲಿ ವಿವಿಧ ಕೀವರ್ಡ್‌ಗಳ ಮೂಲಕ ಹುಡುಕಾಟ ನಡೆಸಿದೆವು ʼಮೈಸೂರು ಬಿ.ಎಂ.ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತʼ ಎಂಬ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸೆಪ್ಟಂಬರ್‌ 08, 2025ರಂದು ಪ್ರಜಾವಾಣಿ ವರದಿಯಲ್ಲಿ ʼಜಯಲಕ್ಷ್ಮೀಪುರಂನ ಬಿ.ಎಂ ಹ್ಯಾಬಿಟ್ಯೂಟ್‌ ಮಾಲ್‌ನಲ್ಲಿ ಸೋಮವಾರ ಸಂಜೆ ಬ್ಯಾನರ್ ತೆರವುಗೊಳಿಸುವ ವೇಳೆ ಮಾಲ್‌ನ ಕಟ್ಟಡದಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಟೆಕ್ನಿಷಿಯನ್ ಮೃತಪಟ್ಟಿದ್ದು, ರಕ್ಷಿಸಲು ಹೋದ ಯುವಕನಿಗೆ ಗಂಭೀರ ಗಾಯಗಳಾಗಿವೆ. ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದ ಸುನೀಲ್ (35) ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂನ ನಿವಾಸಿ ಚಂದ್ರು (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಮಾಲ್‌ನಲ್ಲಿ ಟೆಕ್ನಿಶಿಯನ್ ಆಗಿದ್ದ ಸುನೀಲ್ ಸಂಜೆ 5 ಗಂಟೆ ಸಮಯದಲ್ಲಿ ಮಾಲ್‌ನ ಒಳ ಆವರಣದಲ್ಲಿ 60 ಅಡಿ ಎತ್ತರದಲ್ಲಿ ಅಳವಡಿಕೆಯಾಗಿದ್ದ ಬ್ಯಾನ‌ರ್ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಪಿಒಪಿ ಬಾ‌ರ್ ಮೇಲೆ ಕಾಲಿಟ್ಟಿದ್ದಾರೆ. ತಕ್ಷಣವೇ ಬಾರ್ ಕುಸಿದು ಸುನೀಲ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಚಂದ್ರು ಕೂಡ ಸ್ಥಳದಲ್ಲಿಯೇ ಇದ್ದು, ರಕ್ಷಣೆಗೆ ಮುಂದಾಗಿ ಕೆಳಗೆ ಬಿದ್ದಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಟ್ಟಡದ ಮಾಲೀಕರಾದ ದೀಪಕ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ತಂದೆ ದೂರು ನೀಡಿದ್ದು, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆʼ ಎಂದು ವರದಿಯಾಗಿದೆ


​ಸೆಪ್ಟೆಂಬರ್ 9, 2025ರ ಉದಯಕಾಲ ವರದಿಯಲ್ಲಿ, ಮೈಸೂರಿನ ಬಿ.ಎಂ. ಹ್ಯಾಬಿಟೇಟ್‌ ಮಾಲ್‌ನಲ್ಲಿ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಣಸೂರು ತಾಲೂಕಿನ ಎಲೆಕ್ಟ್ರಿಷಿಯನ್‌ ಸುನೀಲ್‌ (35) ಸ್ಥಳದಲ್ಲೇ ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂನ ಚಂದ್ರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡವರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯಲಕ್ಷ್ಮಿಪುರಂನಲ್ಲಿರುವ ಬಿ.ಎಂ. ಹ್ಯಾಬಿಟೇಟ್‌ ಮಾಲ್‌ ಕಟ್ಟಡದ ನಾಲ್ಕನೇ ಹಂತಸ್ತಿನಲ್ಲಿ ಬೋರ್ಡ್ ತೆರವು ಮಾಡುವ ಕೆಲಸ ಮಾಡುತ್ತಿದ್ದಾಗ ಸುನೀಲ್‌, ಕಟ್ಟಡದ ಮೇಲೆ ಅಳವಡಿಸಿದ್ದ ಪಿಒಪಿ ಮೇಲೆ ಕಾಲಿಟ್ಟಾಗ ಕುಸಿದಿದೆ. ಆಗ ಸುನೀಲ್ ರಾಡ್‌ನ ಸಹಾಯದಿಂದ ನೇತಾಡುತ್ತಿದ್ದು, ಸುನೀಲ್ ರಕ್ಷಣೆಗೆ ಮುಂದಾದ ಚಂದ್ರು ಕೂಡ ಪಿಒಪಿ ಮೇಲೆ ಕಾಲಿಟ್ಟಿದ್ದರಿಂದ ನಿಯಂತ್ರಣ ಕಳೆದುಕೊಂಡು ಇಬ್ಬರು ಕೆಳಗೆ ಬಿದ್ದಿದ್ದಾರೆʼ ಎಂದು ವರದಿಯಾಗಿದೆ.


​ಸೆಪ್ಟಂಬರ್‌ 09, 2025ರಂದು ʼಎಕ್ಸ್‌ಪ್ರೆಸ್‌ ಬೆಂಗಳೂರುʼ ಎಂಬ ಎಕ್ಸ್‌ ಖಾತೆಯಲ್ಲಿ ʼSunil, 30, a technician from Hunsur taluk who worked at the mall, and Chandru, 25, a Mysuru resident, died Monday evening after falling from a four-storey shopping mall in #Mysuru during an advertisement board removal operationʼ ಎಂಬ ಶೀರ್ಷಿಕೆಯೊಂದಿಗೆ ಅಪಘಾತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ

ವೈರಲ್‌ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವಿಡಿಯೋದಲ್ಲಿ ಕಾಣುವ ಕೆಲವು ವ್ಯಕ್ತಿಗಳು ವಿಡಿಯೋವಿನ ಕೆಲವು ಫ್ರೇಮ್‌ಗಳಲ್ಲಿ ಕಾಣೆಯಾಗುವುದನ್ನು ಗಮನಿಸಿದರೆ ನಮಗೆ ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಅನುಮಾನ ಬಂದಿತು. ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌́ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ ಚಿತ್ರ 1ಕ್ಕೆ 96% ಶಾತದಷ್ಟು ಚಿತ್ರ 2ಕ್ಕೆ 97% ಶತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 1ಕ್ಕೆ 99.9%, ಚಿತ್ರ 2ಕ್ಕೆ 97.6% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.


​ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್‌ನಲ್ಲಿ ಎಸ್ಕಲೇಟರ್ ಕುಸಿತ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News