ಪಶ್ಚಿಮ ಬಂಗಾಳದ ಹಿಂದೂ ಮನೆಗಳ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

ಪಶ್ಚಿಮ ಬಂಗಾಳದ ಹಿಂದೂ ಮನೆಗಳ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

Update: 2025-08-09 02:30 GMT

​ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳು ಮತ್ತು ಮಠಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಜುಲೈ 30, 2025ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್‌ನಲ್ಲಿ, “ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳು, ಮಠಗಳು ಮತ್ತು ಮಹಿಳೆಯರ ಮೇಲೆ ದಾಳಿಗಳನ್ನು ‘ಶಾಂತಿ ದೂತರು’ ನಡೆಸುತ್ತಿದ್ದಾರೆ. ಇವರ ಜನಸಂಖ್ಯೆ ಎಲ್ಲಿ ಹೆಚ್ಚಾಗುತ್ತದೆಯೋ, ಅಲ್ಲಿ ಹಿಂದೂಗಳ ಸ್ಥಿತಿ ಇಂತಹದ್ದೇ ಆಗುತ್ತದೆ” ಎಂದು ಉಲ್ಲೇಖಿಸಲಾಗಿದೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಜುಲೈ 29, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಕೆಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ತಮ್ಮ ಖಾತೆಯಲ್ಲಿ ವೈರಲ್‌ ವಿಡಿಯೋವನ್ನು ಹಂಚಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಹಲವರು ವೈರಲ್‌ ವಿಡಿಯೋವನ್ನು ಬಳಸಿಕೊಂಡು ಭಾರತದ ಅಲ್ಪಸಂಖ್ಯಾತರ ವಿರುದ್ಧ ತಪ್ಪು ಅರ್ಥ ಬರುವಂತೆ ಕೂಡ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಹಂಚಿಕೊಂಡ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, ಹಿಂದೂ ವ್ಯಕ್ತಿಯೊಬ್ಬರ ಸಾಮಾಜಿಕ ಮಾಧ್ಯಮ ಕಮೆಂಟ್ ಗೆ ಸಂಬಂಧಿಸಿದ ದಾಳಿಯಾಗಿದ ಎಂಬುದು ಸ್ಪಷ್ಟವಾಗಿದೆ.

ನಾವು ವೈರಲ್‌ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀ ಫ್ರೇಮ್‌ಗಳನ್ನು ಉಪಯೋಗಿಸಿ ಗಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾರ್ಚ್‌ 30, 2025ರಂದು ʼಹ್ಯೂಮನ್ ರೈಟ್ಸ್ ಸೆಂಟರ್ ಫಾರ್ ಬಾಂಗ್ಲಾದೇಶ್ʼ ಎಂಬ ವೆಬ್‌ಸೈಟ್‌ನಲ್ಲಿ ʼFacebook hack, Hindu Saha house vandalized, Goddess Laxmi desecratedʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ‘ಫೇಸ್‌ಬುಕ್ ಹ್ಯಾಕ್, ಹಿಂದೂ ಸಹಾ ಕುಟುಂಬದ ಮನೆಗೆ ಹಾನಿ, ಲಕ್ಷ್ಮಿ ದೇವಿಯ ಅವಮಾನ’ ಎಂಬ ಶೀರ್ಷಿಕೆ ನೀಡಿ, ಶಂಕರ್ ಸಹಾ ಎಂಬುವವರು ತಂಗೈಲ್ ಜಿಲ್ಲೆಯ ಸಖಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಹಿಂದೂ ಧರ್ಮಾನುಯಾಯಿಯಾದ ಶಂಕರ್‌ ಸಹಾ, ಸಂಜೆ 7:30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ, ಇದರಿಂದ ಹಲವರು ತಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹ್ಯಾಕರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಸಹಾ ಪೊಲೀಸರನ್ನು ಒತ್ತಾಯಿಸಿದ್ದಾರೆ ಎಂಬುದು ತಿಳಿದು ಬಂದಿದೆ.


​ಮಾರ್ಚ್ 30, 2025ರಂದು ‘ಸೇವ್ ಬಾಂಗ್ಲಾದೇಶ್ ಹಿಂದೂಸ್’ ಎಂಬ ಎಕ್ಸ್ ಬಳಕೆದಾರರು ವೈರಲ್ ವೀಡಿಯೋಗೆ ಸಮಾನವಾದ ಒಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋವಿಗೆ ಶೀರ್ಷಿಕೆಯಾಗಿ ʼRadical Muslims are attacking and looting the house of Shankar Saha in Sakhipur Upazila of Tangail, spreading rumors of insulting religion, and setting fire to the image of the Hindu goddess Lakshmi and burning it in public!!ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, “ತಂಗೈಲ್‌ನ ಸಖಿಪುರ ಉಪಜಿಲ್ಲಾದ ಶಂಕರ್ ಸಹಾ ಅವರ ಮನೆಯ ಮೇಲೆ ಮೂಲಭೂತವಾದಿ ಮುಸ್ಲಿಮರು ದೇವದೂಷಣೆಯ ವದಂತಿಗಳನ್ನು ಹಬ್ಬಿಸಿ ದಾಳಿ ನಡೆಸಿ, ಲೂಟಿ ಮಾಡಿದ್ದಾರೆ. ಅಲ್ಲದೆ, ಹಿಂದೂ ದೇವತೆ ಲಕ್ಷ್ಮೀಯ ಪ್ರತಿಮೆಗೆ ಬೆಂಕಿ ಹಚ್ಚಿ ಸಾರ್ವಜನಿಕವಾಗಿ ದಹಿಸಿದ್ದಾರೆ” ಎಂದು ಬರೆದಿರುವುದನ್ನು ನೋಡಬಹುದು.

ಮಾರ್ಚ್ 30, 2025ರಂದು ʼದಿ ಡೈಲಿ ಸ್ಟಾರ್‌ʼ ವೆಬ್‌ಸೈಟ್‌ನಲ್ಲಿ ʼHindu man's house vandalised in Tangail over 'Facebook comment'ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯ ಪ್ರಕಾರ, ತಂಗೈಲ್‌ನ ಸಖಿಪುರ ಉಪಜಿಲ್ಲಾದಲ್ಲಿ ಫೇಸ್‌ಬುಕ್‌ನಲ್ಲಿ ಮುಸ್ಲಿಮರ ವಿರುದ್ಧ ಕಾಮೆಂಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಿಂದೂ ವ್ಯಕ್ತಿಯೊಬ್ಬರ ಮನೆಯನ್ನು ರಾತ್ರಿ ಧ್ವಂಸಗೊಳಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸರ ಮಾಹಿತಿಯಂತೆ, ಬರಚೌನಾ ಪ್ರದೇಶದ ವ್ಯಾಪಾರಿ ಶಂಕರ್ ಸಹಾ ಅವರ ಹೇಳಿಕೆಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ರಾತ್ರಿ 9:30ರ ಸುಮಾರಿಗೆ ಕೋಪಗೊಂಡ ಗುಂಪೊಂದು ಶಂಕರ್ ಅವರ ಮನೆಯನ್ನು ಹಾನಿಗೊಳಿಸಿತು ಎಂದು ವರದಿಯಾಗಿದೆ. ಈ ಬಗ್ಗೆ ಸಖಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಶಂಕರ್ ದಿ ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಶಂಕರ್ ತಮ್ಮ ಲಿಖಿತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


​ಇನ್ನು ಮಾರ್ಚ್ 30, 2025ರಂದು ʼಬಿಬಿಸಿ ನ್ಯೂಸ್ ಬಾಂಗ್ಲಾʼ ವೆಬ್‌ಸೈಟ್‌ನಲ್ಲಿ ́ফেসবুক কমেন্টের জেরে বাড়িতে হামলা, কী হয়েছিল টাঙ্গাইলের সখিপুরে?ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನನು ನಾವಿಲ್ಲಿ ನೋಡಬಹುದು. ವರದಿಯ ಪ್ರಕಾರ, “ಫೇಸ್‌ಬುಕ್‌ನಲ್ಲಿ ಮಾಡಿದ ಕಾಮೆಂಟ್‌ಗೆ ಸಂಬಂಧಿಸಿದಂತೆ ತಂಗೈಲ್ ಜಿಲ್ಲೆಯ ಸಖಿಪುರದಲ್ಲಿ ಹಿಂದೂ ಮನೆಯ ಮೇಲೆ ನಡೆದ ದಾಳಿ ಮತ್ತು ಧ್ವಂಸ ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶನಿವಾರ ರಾತ್ರಿ ನಡೆದ ಘಟನೆಯ ಕುರಿತು ದಾಳಿಗೊಳಗಾದ ವ್ಯಕ್ತಿಯ ಮನೆ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರೊಬ್ಬರು ಭಾನುವಾರ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ವ್ಯಕ್ತಿಯೊಬ್ಬರ ಫೇಸ್‌ಬುಕ್ ಐಡಿಯಿಂದ ಕಾಮೆಂಟ್ ಬಂದ ನಂತರ, ಆ ವ್ಯಕ್ತಿ ಶನಿವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ಜಿಡಿ ದಾಖಲಿಸಿ, ತನ್ನ ಫೇಸ್‌ಬುಕ್ ಐಡಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ತಂಗೈಲ್‌ನ ಸಖಿಪುರ ಪೊಲೀಸ್ ಠಾಣಾಧಿಕಾರಿ (ಒಸಿ) ಮೊಹಮ್ಮದ್ ಜಾಕಿರ್ ಹೊಸೇನ್ ಬಿಬಿಸಿ ಬಾಂಗ್ಲಾಗೆ ತಿಳಿಸಿದರು.” ಎಂದು ಹೇಳಲಾಗಿದೆ.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಹಂಚಿಕೊಂಡ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, ಹಿಂದೂ ವ್ಯಕ್ತಿಯೊಬ್ಬರ ಸಾಮಾಜಿಕ ಮಾಧ್ಯಮ ಕಮೆಂಟ್ ಗೆ ಸಂಬಂಧಿಸಿದ ದಾಳಿಯಾಗಿದ ಎಂಬುದು ಸ್ಪಷ್ಟವಾಗಿದೆ.

Claim :  ಪಶ್ಚಿಮ ಬಂಗಾಳದ ಹಿಂದೂ ಮನೆಗಳ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News