ಫ್ಯಾಕ್ಟ್‌ಚೆಕ್‌: ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ಸಂಭವಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಡಿಯೋ ಹಂಚಿಕೆ

ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ಸಂಭವಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಡಿಯೋ ಹಂಚಿಕೆ

Update: 2025-06-15 14:42 GMT

ಮುಂಗಾರು ಅಥವಾ ನೈಋತ್ಯ ಮಾನ್ಸೂನ್ ಮೇ 24 ರಂದು ಕೇರಳಕ್ಕೆ ನಿಗದಿತ ಸಮಯಕ್ಕಿಂತ ಎಂಟು ದಿನ ಮುಂಚಿತವಾಗಿ ಆಗಮಿಸಿದೆ. ಇದಕ್ಕೆ ಬಹುಮುಖ್ಯವಾದ ಕಾರಣ ಈಗಾಗಲೇ ಎದ್ದಿರುವ ಚಂಡಮಾರುತ ಮುಂಗಾರು ಮಾರುತವನ್ನು ಚುರುಕುಗೊಳಿಸಿದೆ. ಮಹಾನಗರ, ವಾಣಿಜ್ಯನಗರ ಮುಂಬಯಿಯಲ್ಲಿ 75 ವರ್ಷದ ಬಳಿಕ 16 ದಿನ ಮೊದಲೇ ಮುಂಗಾರು ಪ್ರವೇಶ ಪಡೆದಿದ್ದು, ಸೋಮವಾರದ ಭಾರೀ ಮಳೆ ಆರ್ಭಟಕ್ಕೆ ಇಡೀ ನಗರವೇ ಜಲಾವೃವಾಗಿದೆ. ರೈಲು-ರಸ್ತೆ ಮಾರ್ಗ-ಮೆಟ್ರೋ-ವಿಮಾನಯಾನವೂ ಅಸ್ತವ್ಯಸ್ತಗೊಂಡಿದೆ. ಸಿಡಿಲಿನ ಆರ್ಭಟಕ್ಕೆ ಜನ ಪ್ರಾಣಕಳೆದುಕೊಂಡಿದ್ದಾರೆ. ಮಾನ್ಸೂನ್ ಬೇಗ ಆರಂಭ ಆಗುವುದರ ಪರಿಣಾಮಗಳ ಬಗ್ಗೆ ಹವಾಮಾನ ತಜ್ಞರು ಮೊದಲೇ ಎಚ್ಚರಿಕಯನ್ನೂ ಕೊಟ್ಟಿದ್ದರು.

2009ರಲ್ಲಿ ಮುಂಗಾರು ಇದೇ ರೀತಿ ಅಕಾಲಿಕವಾಗಿ ರಾಜ್ಯಕ್ಕೆ ಪ್ರವೇಶ ಮಾಡಿತ್ತು. ಬಳಿಕ ಇದೇ ಮೊದಲ ಬಾರಿಗೆ ಈ ವರ್ಷ ಮೇ 24 ರಂದು ಮುಂಗಾರು ಪ್ರವೇಶ ಪಡೆದಿದೆ, ಇದರ ಪ್ರಕಾರ ಪ್ರತಿ ವರ್ಷದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಒಂದು ವಾರ ಮೊದಲೇ ಮುಂಗಾರು ಪ್ರವೇಶಿಸಿದೆ.. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಬಂಗಾಳಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ಕ್ಷೀಣಿಸಿದ ಪರಿಣಾಮ ಮುಂಗಾರು ಮಾರುತಗಳು ಚುರುಕುಗೊಳ್ಳಲು ಮೂಲ ಕಾರಣ ಎನ್ನುವುದು ಐಎಂಡಿಯ ವಿಜ್ಞಾನಿಗಳ ಅಭಿಪ್ರಾಯ. ಅಲ್ಲದೆ ಈ ಅವಧಿಯಲ್ಲಿ ತಟಸ್ಥ ಎಲ್ ನಿನೊ-ದಕ್ಷಿಣ ಆಂದೋಲನ ಪರಿಸ್ಥಿತಿಗಳನ್ನು ಗಮನಿಸಲಾಗಿದೆ. ಇದು ಸಾಮಾನ್ಯವಾಗಿ ಭಾರತದ ಮೇಲೆ ಮಳೆಯನ್ನು ನಿಗ್ರಹಿಸುವ ಎಲ್ ನಿನೊ ವರ್ಷಗಳಂತಲ್ಲದೆ ಸಾಮಾನ್ಯ ಅಥವಾ ಬಲವಾದ ಮಾನ್ಸೂನ್ಗೆ ಕಾರಣ ಆಗುತ್ತದೆ. ಹಿಮಾಲಯ ಪ್ರದೇಶದ ಮೇಲೆ ಹಿಮದ ಹೊದಿಕೆ ಕಡಿಮೆಯಾಗಿರುವುದು ಮತ್ತೊಂದು ಕಾರಣವಾಗಿರಬಹುದು, ಇದು ಐತಿಹಾಸಿಕವಾಗಿ ಹೆಚ್ಚು ಹುರುಪಿನ ಮಾನ್ಸೂನ್ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿರುವ ಸ್ಥಿತಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆಯಿಂದಾಗಿ ಅರುಣಾಚಲ ಪ್ರದೇಶದಾದ್ಯಂತ ಹಲವು ಶಾಶ್ವತ ನದಿಗಳು ಅಪಾಯದ ಮಟ್ಟವನ್ನು ದಾಟಿದ್ದು, ಭಾರಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಯ ಪರಿಣಾಮ ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ – 13ರಲ್ಲಿ ಭೂಕುಸಿತ ಸಂಭವಿಸಿತ್ತು. ಪರಿಣಾಮ ವಾಹನವೊಂದು ಕೊಚ್ಚಿಹೋಗಿದ್ದು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದರು.

ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ ಎಂದು ಹೇಳಲಾಗುತ್ತಿದೆ. ಈ ವೀಡಿಯೊದಲ್ಲಿ ಭೂಕುಸಿತದಿಂದ ರಸ್ತೆಯೊಂದರಲ್ಲಿ ಭಾರಿ ಪ್ರಮಾಣದ ಕೆಸರು ಮತ್ತು ಕಲ್ಲುಬಂಡೆಗಳು ಜಾರುವ ದೃಶ್ಯವಿದೆ.

ಜೂನ್‌ 02, 2025ರಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ʼToday landslide Be carefully people of Arunachal Pradeshʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಇದು ಅರುಣಾಚಲ ಪ್ರದೇಶದ ಭೂಕುಸಿತ ಎಂದು ಬರೆದುಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಈ ವೀಡಿಯೊ ಜನರಲ್ಲಿ ಗೊಂದಲವನ್ನು ಸೃಷ್ಟಿಸಿದ್ದು, ಈ ಪ್ರದೇಶದಲ್ಲಿ ಭೀಕರ ಪ್ರಾಕೃತಿಕ ವಿಕೋಪ ಸಂಭವಿಸಿದೆ ಎಂಬ ಭಾವನೆಯನ್ನು ಹುಟ್ಟುಹಾಕಿದೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಜೂನ್‌ 02, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼToday landslide Be carefully people of Arunachal Pradeshʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಜೂನ್‌ 02, 2025ರಂದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʼlandslide Be carefully people of Arunachal Pradeshʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಭೂಕುಸಿತದ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ವೈರಲ್‌ ಆದ ಫೇಸ್‌ಬುಕ್‌ ಶಾಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. ಈ ವೈರಲ್‌ ವೀಡಿಯೊ ಜನರಲ್ಲಿ ಭಯ ಮತ್ತು ಗೊಂದಲವನ್ನುಂಟು ಮಾಡಿದೆ, ವಿಶೇಷವಾಗಿ ಅರುಣಾಚಲ ಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದ ವರದಿಗಳಿಂದಾಗಿ ಜನರು ಆತಂಕಗೊಂದಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ಈ ವೀಡಿಯೊವನ್ನು ನೋಡಿದ ಜನರು, ಅರುಣಾಚಲದಲ್ಲಿ ಇನ್ನಷ್ಟು ಭೀಕರ ಘಟನೆಗಳು ನಡೆದಿವೆ ಎಂದು ಭಾವಿಸಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್‌ ವೀಡಿಯೊವನ್ನು ಅರುಣಾಚಲ ಪ್ರದೇಶದ ಭೂಕುಸಿತ ಎಂದು ತಪ್ಪಾಗಿ ಚಿತ್ರಿಸಲಾಗಿದ್ದು, ವಾಸ್ತವವಾಗಿ ಇದು ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನ ಘಟನೆ ಎಂಬುದು ಸ್ಪಷ್ಟವಾಗಿದೆ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಕಾಶ್ಮೀರ ಸಮಾಚಾರ್ ಎಂಬ ಫೇಸ್‌ಬುಕ್ ಫೇಜ್‌ನಲ್ಲಿ ಈ ವೀಡಿಯೊವನ್ನು ಜಮ್ಮು ಮತ್ತು ಕಾಶ್ಮೀರದ ರಂಬನ್‌ನದ್ದು ಎಂದು ಹೇಳಿಕೊಂಡು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋವಿಗೆ ಶೀರ್ಷಿಕೆಯಾಗಿ ʼSHO Vikram Parihar's narrow escape from a sudden landslide in Ramban on the Jammu–Srinagar Highwayʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಜಮ್ಮು-ಶ್ರೀನಗರ ಹೆದ್ದಾರಿಯ ರಂಬನ್‌ನಲ್ಲಿ ಹಠಾತ್ ಭೂಕುಸಿತದಿಂದ SHO ವಿಕ್ರಮ್ ಪರಿಹಾರ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ ಎಂದು ನೋಡಬಹುದು.


ಮೇ 08, 2025 ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʼಜಮ್ಮು ಕಾಶ್ಮೀರದ ಚಂಬಾ ಸೇರಿಯಲ್ಲಿ ದಿಢೀರ್ ಪ್ರವಾಹʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮೇ 9 ರಂದು ಯುನಿಕ್ ವಾಯ್ಸ್ ನ್ಯೂಸ್‌ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ ಮತ್ತು ಅದರಲ್ಲಿ ಕೂಡ ಜಮ್ಮು-ಶ್ರೀನಗರ ಹೆದ್ದಾರಿಯ ರಂಬನ್‌ನದ್ದು ಎಂಬ ಹೇಳಿಕೆಯನ್ನು ಸಹ ನೀಡಿದ್ದೇವೆ. ಇಲ್ಲಿಯೂ ಸಹ, ವೀಡಿಯೊದಲ್ಲಿ ಕಾಣುವ ಪೊಲೀಸ್ ಅಧಿಕಾರಿ ಠಾಣಾ ಅಧಿಕಾರಿ ವಿಕ್ರಮ್ ಪರಿಹಾರ್ ಎಂದು ಉಲ್ಲೇಖಿಸಲಾಗಿದೆ.


ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು

ಏಪ್ರಿಲ್‌ 21, 2025ರಂದು ಹಿಂದೂಸ್ತಾನ್‌ ಟೈಮ್ಸ್‌ ವರದಿಯಲ್ಲಿ ʼಅರುಣಾಚಲ ಪ್ರದೇಶದಲ್ಲಿ ಭೀಕರ ಮಳೆ, 33,000 ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿ ಇಟಾನಗರ, ಅರುಣಾಚಲ ಪ್ರದೇಶದಲ್ಲಿ ಗುರುವಾರವೂ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು, ನಿರಂತರ ಮಳೆ ಮುಂದುವರಿದಿದ್ದು, ಈಶಾನ್ಯ ರಾಜ್ಯದ 24 ಜಿಲ್ಲೆಗಳಲ್ಲಿ 33,000 ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಮುಂಗಾರು ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಕನಿಷ್ಠ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಆದರೆ ಕಾಣೆಯಾದ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ವರದಿ ತಿಳಿಸಿದೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು 33,200 ಜನಸಂಖ್ಯೆ ಹೊಂದಿರುವ 214 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತದಿಂದ ಬಾಧಿತವಾಗಿವೆ, ಆದರೆ ಹೆಚ್ಚಿನ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳು ಹೆಚ್ಚಿನ ಉಕ್ಕಿ ಹರಿಯುತ್ತಿವೆ ಆದರೆ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಹರಿಯುತ್ತಿವೆ ಎಂದು ವರದಿ ತಿಳಿಸಿದೆ. ರಾಜ್ಯಾದ್ಯಂತ ಒಟ್ಟಾರೆಯಾಗಿ 481 ಮನೆಗಳು ಹಾನಿಗೊಳಗಾಗಿದ್ದು, 432 ಜಾನುವಾರುಗಳ ಸಾವು ವರದಿಯಾಗಿದ್ದು, ಇದರಲ್ಲಿ 335 ಕೋಳಿಗಳು ಮತ್ತು 97 ಪ್ರಾಣಿಗಳು ಸೇರಿವೆ. ಭೂಕುಸಿತ ಮತ್ತು ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಏಳು ಸಾವುಗಳು ಪೂರ್ವ ಕಾಮೆಂಗ್‌ನಿಂದ, ಇಬ್ಬರು ಲೋವರ್ ಸುಬನ್ಸಿರಿಯಿಂದ ಮತ್ತು ಲಾಂಗ್ಡಿಂಗ್, ಲೋಹಿತ್ ಮತ್ತು ಅಂಜಾವ್ ಜಿಲ್ಲೆಗಳಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


ಜೂನ್‌ 05, 2025ರಂದು ಎನ್‌ಇಟಿ ವೆಬ್‌ಸೈಟ್‌ನಲ್ಲಿ ʼOver 33,000 Affected in Arunachal Pradesh As Incessant Rain Triggers Flash Floods And Landslidesʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಅರುಣಾಚಲ ಪ್ರದೇಶದಾದ್ಯಂತ ನಿರಂತರ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, 24 ಜಿಲ್ಲೆಗಳಲ್ಲಿ 33,000 ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಳೆಗಾಲದಲ್ಲಿ ಪ್ರವಾಹ ಮತ್ತು ಭೂಕುಸಿತ ಘಟನೆಗಳಲ್ಲಿ 12 ಸಾವುಗಳು ಸಂಭವಿಸಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ವರದಿ ಮಾಡಿದೆ, ಕಾಣೆಯಾದ ಒಬ್ಬ ವ್ಯಕ್ತಿಗಾಗಿ ಹುಡುಕಾಟ ಮುಂದುವರೆದಿದೆ. ಒಟ್ಟು 214 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತದಿಂದ ಪ್ರಭಾವಿತವಾಗಿವೆ. ನದಿಗಳು ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿದ್ದರೂ, ನೀರಿನ ಮಟ್ಟವು ಸಾಮಾನ್ಯ ಪ್ರವಾಹ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು SEOC ತಿಳಿಸಿದೆ ಎಂದು ವರದಿಯಾಗಿರುವುದನ್ನು ನೋಡಬಹುದು.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್‌ ವೀಡಿಯೊವನ್ನು ಅರುಣಾಚಲ ಪ್ರದೇಶದ ಭೂಕುಸಿತ ಎಂದು ತಪ್ಪಾಗಿ ಚಿತ್ರಿಸಲಾಗಿದ್ದು, ವಾಸ್ತವವಾಗಿ ಇದು ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನ ಘಟನೆ ಎಂಬುದು ಸ್ಪಷ್ಟವಾಗಿದೆ.

Claim :  ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ಸಂಭವಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News