ಫ್ಯಾಕ್ಟ್‌ಚೆಕ್: ಫ್ಲಿಪ್‌ಕಾರ್ಟ್‌ನಲ್ಲಿ 649 ರೂ.ಗೆ ಸ್ಮಾರ್ಟ್‌ಫೋನ್ ನೀಡುತ್ತಿದೆ ಎಂದು ನಕಲಿ ವೆಬ್‌ಸೈಟ್ ಲಿಂಕ್ ಹಂಚಿಕೆ
ಫ್ಲಿಪ್‌ಕಾರ್ಟ್‌ನಲ್ಲಿ 649 ರೂ.ಗೆ ಸ್ಮಾರ್ಟ್‌ಫೋನ್ ನೀಡುತ್ತಿದೆ ಎಂದು ನಕಲಿ ವೆಬ್‌ಸೈಟ್ ಲಿಂಕ್ ಹಂಚಿಕೆ
ಮಾರುಕಟ್ಟೆಯಲ್ಲಿಂದು ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಹೊಸ ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆ ಆಗುತ್ತವೆ. ಇದರಲ್ಲಿ ಬಹುತೇಕ ಮೊಬೈಲ್ಗಳು ಬಜೆಟ್ ಅಥವಾ ಮಧ್ಯಮ ಬೆಲೆಗೆ ಲಭ್ಯವಿರುವುದರಿಂದ ಬೇಗನೆ ಸೇಲ್ ಆಗಿ ಬಿಡುತ್ತದೆ. ಈಗ ಉಪಯೋಗಿಸುತ್ತಿರುವ ಮೊಬೈಲ್ ಬೋರ್ ಆಯಿತು ಎಂದಾಗ ಜನರು ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಪ್ರಸಿದ್ಧ ಆನ್‌ಲೈನ್ ಇ ಕಾಮರ್ಸ್ ತಾಣಗಳಲ್ಲಿ ಆಫರ್ಗಳಿಗೇನೂ ಬರವಿಲ್ಲ. ಹಲವು ಇ ಕಾಮರ್ಸ್ ತಾಣಗಳು ಆನ್‌ಲೈನ್ ಖರೀದಿಯಲ್ಲಿ ಡಿಸ್ಕೌಂಟ್ ನೀಡುತ್ತದೆ. ಇದೀಗ ಫ್ಲಿಪ್‌ಕಾರ್ಟ್ ಮೇಳವನ್ನು ಶುರುಮಾಡಿದೆ ಎಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಲಿಂಕ್‌ವೊಂದು ಹರಿದಾಡುತ್ತಿದೆ. ಈ ಪೊಸ್ಟ್‌ನ್ನು ನೋಡುವುದಾದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 ಸೇರಿದಂತೆ ವಿವಿಧ ಸ್ಮಾರ್ಟ್ ಫೋನ್ ಗಳನ್ನು ಕೇವಲ 649 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ದುಬಾರಿ ಸ್ಪೀಕರ್‌ಗಳನ್ನು ಸಹ ಅಗ್ಗದ ಬೆಲೆಗೆ ಖರೀದಿಸಬಹುದು. ಯಾರಿಗೆ ಈ ಸ್ಮಾರ್ಟ್ ಫೋನ್‌ಗಳ ಅವಶ್ಯಕತೆ ಇದೆಯೋ ಅವರಿಗೆ ಈ ಲಿಂಕ್ ಅನ್ನು ಹಂಚಿಕೊಳ್ಳಿ ಎಂದು ಯೂಆರ್‌ಎಲ್ ಲಿಂಕ್‌ವೊಂದನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಶೇರ್ ಮಾಡುತ್ತಿದ್ದಾರೆ.
ಏಪ್ರಿಲ್ 18, 2025ರಂದು ಫೆಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼLowest prices at ₹649ʼ ಎಂಬ ಶೀರ್ಷಿಕೆಯೊಂದಿಗೆ ʼಗ್ಯಾಲಕ್ಸಿ ಎಸ್24 ಎಫ್‌ಇʼ ಮತ್ತು ʼಗ್ಯಾಲಕ್ಸಿ ಎಫ್06ʼ ಮೊಬೈಲ್ ಚಿತ್ರಗಳೊಂದಿಗೆ ಅದರ ಬೆಲೆಯನ್ನೊಳಗೊಂಡ ಚಿತ್ರವೊಂದನ್ನು ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆ ಪೊಸ್ಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇನ್ನೂ ಕೆಲವರು ಈ ಮಾರಾಟ ಮೇಳದಲ್ಲಿ ದುಬಾರಿ ಸ್ಪೀಕರ್ ಸೇರಿದಂತೆ ಇನ್ನೂ ಹಲವು ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು ಎಂದು ಫ್ಲಿಪ್‌ಕಾರ್ಟ್ ಲೋಗೋವನ್ನು ಬಳಸಿಕೊಂಡು ಪ್ರಚಾರವನ್ನು ಮಾಡತ್ತಿದ್ದಾರೆ. ಇದನ್ನು ನಂಬಿದ ಹಲವು ಮಂದಿ ವೈರಲ್ ಪೋಸ್ಟರ್ ಜೊತೆಗೆ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಶೇರ್ ಮಾಡುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆಗಿರುವ ಲಿಂಕ್ ನಕಲಿ ವೆಬ್‌ಸೈಟ್‌ನದ್ದಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಚಿತ್ರವನ್ನು ಬಳಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಸತ್ಯಾಂಶವೂ ಸಿಗಲಿಲ್ಲ. ನಂತರ ನಾವು ಗೂಗಲ್‌ನಲ್ಲಿ ಸುದ್ದಿಗೆ ಸಂಬಂಧಿಸಿದ ಪ್ರಮುಖ ಕೀವರ್ಡ್‌ಗಳ ಮುಖಾಂತರ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫ್ಲಿಪ್‌ಕಾರ್ಟ್‌ನ ಮೂಲ ವೆಬ್‌ಸೈಟ್ ಲಿಂಕ್ ಮಾತ್ರ ದೊರಕಿತು. ಆದರೆ ಈ ಮೂಲ ವೆಬ್‌ಸೈಟ್‌ನಲ್ಲಿ ಯಾವುದೇ ರೀತಿಯ ಮಾರಾಟಮೇಳ ಕುರಿತು ಅಧಿಕೃತ ಮಾಹಿತಿಯನ್ನು ನೀಡಲಾಗಿಲ್ಲ. ಹೀಗಾಗಿ ವೈರಲ್ ಪೋಸ್ಟ್‌ಗೂ ಫ್ಲಿಪ್‌ಕಾರ್ಟ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ನಮಗೆ ಖಚಿತವಾಗಿದೆ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲುನಾವು ವೈರಲ್ ಪೋಸ್ಟ್‌ನಲ್ಲಿ ನೀಡಲಾದ ಲಿಂಕ್ ಅನ್ನು ಪರಿಶೀಲಿಸಿದೆವು. ಇದರ URL pokira.xyz ಎಂದಾಗಿತ್ತು. ಆದರೆ ನಿಜವಾದ ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್‌ನ ಲಿಂಕ್ flipkart.com ಆಗಿದೆ. ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಲ್ಲಾ ಉತ್ಪನ್ನಗಳಿಗೆ ಶೇಕಡ 90ರಷ್ಟು ರಿಯಾಯಿತಿಯನ್ನು ನೀಡಲಾಗಿದೆ. ನಾವು ಕಾರ್ಟ್‌ಗೆ ಫೋನ್ ಸೇರಿಸಿದಾಗ, ಅಥವಾ ಯಾವುದಾದರೂ ಉತ್ಪನ್ನವನ್ನು ಆಯ್ಕೆ ಮಾಡಿದಾಗ ನಮಗೆ ನಮ್ಮ ವೈಯಕ್ತಿಕ ವಿವರಗಳನ್ನು ಕೇಳಲಾಯಿತು. ನಂತರ ನಮ್ಮನ್ನು ಪಾವತಿ ವಿಧಾನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆನ್‌ಲೈನ್ ಪಾವತಿ ಆಯ್ಕೆ ಮಾತ್ರ ಲಭ್ಯವಿತ್ತು. ಇದರರ್ಥ ನೀವು ಬೇರೆ ಫೋನ್ ಖರೀದಿಸಲು ಬಯಸಿದರೆ, ನೀವು ತಕ್ಷಣ ಆನ್‌ಲೈನ್‌ನಲ್ಲಿ ಅಂದರೆ UPI ಮೂಲಕ ಪಾವತಿ ಮಾಡಬೇಕಾಗುತ್ತದೆ. ಆದರೆ ನಾವು ಮೂಲ ವೆಬ್‌ಸೈಟ್‌ನಲ್ಲಿ ಹುಡುಕಿದಾಗ, ಕ್ಯಾಶ್ ಆನ್ ಡೆಲಿವರಿ, ಆನ್‌ಲೈನ್ ಪಾವತಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಂತಹ ಬಹು ಪಾವತಿ ಆಯ್ಕೆಗಳು ಲಭ್ಯವಿರುವುದನ್ನು ನಾವು ಕಂಡುಕೊಂಡಿದ್ದೇವೆ. ವೆಬ್‌ಸೈಟ್‌ನಲ್ಲಿ EMI ಆಯ್ಕೆಯನ್ನು ಸಹ ನೀಡಲಾಗಿದೆ. ಇದರಿಂದ ನಮಗೆ ವೈರಲ್ ಆದ ಪೊಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಯಿತು.
ನಾವು ವೈರಲ್ ಆದ ವೆಬ್‌ಸೈಟ್ ಲಿಂಕ್‌ನ ಡೊಮೇನ್‌ನ ಮಾಹಿತಿಯನ್ನು ತಿಳಿಯಲು ನಾವು whois.com ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿದೆವು. ಇದರಲ್ಲಿ ನಾವು ವೈರಲ್ ಲಿಂಕ್ ಅನ್ನು ಪರಿಶೀಲಿಸಿದಾಗ ಲಭ್ಯವಿರುವ ಮಾಹಿತಿಯ ಪ್ರಕಾರ 12 ಮಾರ್ಚ್ 2025 ರಂದು ಈ ವೆಬ್‌ಸೈಟ್ ಅನ್ನು ನಿರ್ಮಿಸಲಾಗಿದೆ, ಮಾರ್ಚ್ 12, 2026ರಂದು ಎಕ್ಸೈರ್ ಆಗಲಿದೆ ಮತ್ತು 12 ಮಾರ್ಚ್ 2025ರಂದು ಈ ವೆಬ್‌ಸೈಟ್‌ನ್ನು ಅಪ್‌ಡೇಟ್ ಮಾಡಲಾಗಿದೆ ಎಂಬುದು ಖಚಿತವಾಗಿದೆ. ಹೀಗಾಗಿ ಇದನ್ನು ವಂಚನೆಯ ಉದ್ದೇಶದ ಕಾರಣದಿಂದ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆಗಿರುವ ಲಿಂಕ್ ನಕಲಿ ವೆಬ್‌ಸೈಟ್‌ನದ್ದಾಗಿದೆ. flipkart ಕೇವಲ 649 ರೂಪಾಯಿಗೆ ಸ್ಮಾರ್ಟ್ ಫೋನ್ ಸೇರಿದಂತೆ ವಿವಿಧ ಸರಕುಗಳನ್ನು ಕಡಿಮೆ ಮೊತ್ತದಲ್ಲಿ ನೀಡುತ್ತಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.