ಫ್ಯಾಕ್ಟ್‌ಚೆಕ್: ರಾಜಸ್ಥಾನದ ಚುರುವಿನಲ್ಲಿ ಜಾಗ್ವಾರ್ ವಿಮಾನ ಅಪಘಾತಕ್ಕೀಡಾಗಿದ್ದು ಒಂದೇ ಸೀಟಿನದ್ದು ಎಂದು ಸುಳ್ಳು ಸುದ್ದಿ ಹಂಚಿಕೆ
ರಾಜಸ್ಥಾನದ ಚುರುವಿನಲ್ಲಿ ಜಾಗ್ವಾರ್ ವಿಮಾನ ಅಪಘಾತಕ್ಕೀಡಾಗಿದ್ದು ಒಂದೇ ಸೀಟಿನದ್ದು ಎಂದು ಸುಳ್ಳು ಸುದ್ದಿ ಹಂಚಿಕೆ
ಜುಲೈ 9, 2025ರಂದು ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಜಾಗ್ವಾರ್ ಫೈಟರ್ ಜೆಟ್ ಪತನಗೊಂಡ ನಂತರ ಪಾಕಿಸ್ತಾನವು ಭಾರತದ ವಿರುದ್ಧ ಪಾಕಿಸ್ತಾನಿ ಮೂಲಭೂತ ವಾದಿಗಳು, ಈ ಘಟನೆಗೆ ಸಂಬಂಧ ಪಟ್ಟಂತೆ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೊಲಾಜ್ ಚಿತ್ರವೊಂದು ವೈರಲ್ ಆಗುತ್ತಿದೆ. ಚಿತ್ರದಲ್ಲಿ ಜಾಗ್ವಾರ್ ವಿಮಾನ ಮತ್ತು ಅದರ ಕೆಲವು ಹಾನಿಗೊಳಗಾದ ಭಾಗಗಳನ್ನು ತೋರಿಸಲಾಗಿದೆ. ವೈರಲ್ ಪೋಸ್ಟ್‌ನಲ್ಲಿ “ಭಾರತದ ರಾಜಸ್ಥಾನದಲ್ಲಿ ಜಾಗ್ವಾರ್ ಫೈಟರ್ ಜೆಟ್ ಪತನವಾಗಿದೆ (JS159), ಇದು ಒಂದು ಸೀಟಿನ ಸೌಲಭ್ಯ ಇರುವ ಜೆಟ್ ಆಗಿದೆ. ಆದರೆ ಭಾರತ ಇಬ್ಬರು ಫೈಲೆಟ್‌ಗಳು ಸಾವನ್ನಪ್ಪಿದ್ದಾರೆ ಎಂದು ತಪ್ಪು ಲೆಕ್ಕ ಕೊಟ್ಟಿದೆ, ಆ ಮೂಲಕ ತನ್ನ ಫೈಲೆಟ್‌ಗಳ ಸಾವಿನ ಬಗ್ಗೆ ಕೂಡ ಭಾರತ ಸುಳ್ಳು ಹೇಳುತ್ತಿದೆ” ಎಂದು ಭಾರತದ ವಿರುದ್ಧ ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ.
ಜುಲೈ 10, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼBREAKING: India claims two pilots died in today’s Jaguar (JS159) crash, despite it being a single-seat jet. This shows India has quietly added the death of a pilot lost in the May 7 incident with Pakistanʼ ಎಂಬ ಶೀರ್ಷಿಕೆಯೊಂದಿಗೆ ಕೊಲಾಜ್ ಆದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್: ಇಂದಿನ ಜಾಗ್ವಾರ್ (JS159) ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಭಾರತ ಹೇಳಿಕೊಂಡಿದೆ, ಅದು ಸಿಂಗಲ್ ಸೀಟ್ ಜೆಟ್ ಆಗಿದ್ದರೂ ಸಹ. ಮೇ 7 ರಂದು ನಡೆದ ಘಟನೆಯಲ್ಲಿ ಕಳೆದುಹೋದ ಪೈಲಟ್‌ನ ಸಾವನ್ನು ಭಾರತವು ಪಾಕಿಸ್ತಾನದೊಂದಿಗೆ ಸದ್ದಿಲ್ಲದೆ ಸೇರಿಸಿದೆ ಎಂದು ಇದು ತೋರಿಸುತ್ತದೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 10, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ಚಿತ್ರಗಳನ್ನು ಹಂಚಿಕೊಂಡು ಶೀರ್ಷಿಕೆಯಾಗಿ ʼ#India claims two pilots died in today’s #Jaguar (JS159) crash, despite it being a single-seat jet. This shows India has quietly added the death of a pilot lost in the May 7 incident with Pakistanʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು
ಈ ಪೋಸ್ಟ್‌ಗಳನ್ನು ನೋಡಿದ ಇನ್ನೀತರೆ ವಿದೇಶಿ ಬಳಕೆದಾರರು ಕೂಡ ಈ ಪಾಕಿಸ್ತಾನಿ ಮೂಲಭೂತವಾದಿಗಳು ಹೇಳಿದ್ದು ಸರಿ, ಭಾರತ ತನ್ನ ಫೈಲೆಟ್‌ಗಳ ಸಾವಿನ ವಿಚಾರದ ಕುರಿತು ಏನೋ ಸುಳ್ಳು ಹೇಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದು ಭಾರತದ ಸೇನೆ ಮತ್ತು ಭಾರತದ ಸರ್ಕಾರದ ಬಗ್ಗೆ ಸಾಕಷ್ಟು ವಿದೇಶಿಗರು ಅನುಮಾನ ಪಡುವಂತೆ ಮಾಡಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದ ಸತ್ಯಾಂಶವಿಲ್ಲ. ರಾಜಸ್ಥಾನದಲ್ಲಿ ಪತನವಾದ ಫೈಟರ್ ಜೆಟ್ 2 ಸೀಟ್‌ರ್ ಆಗಿದ್ದು, ಇದರಲ್ಲಿ ಇಬ್ಬರು ಫೈಲೆಟ್‌ಗಳು ಕೂಡ ಹುತಾತ್ಮರಾಗಿದ್ದಾರೆ. ಪಾಕಿಸ್ತಾನದ ಮೂಲಭೂತವಾದಿಗಳು ಭಾರತದ ವಿರುದ್ಧ ಸುಳ್ಳು ಸುದ್ದಿ ಹರಡುವ ಉದ್ದೇಶದಿಂದ ತಪ್ಪು ಮಾಹಿತಿಗಳು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನಮಗೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಜುಲೈ 10, 2025ರಂದು ‘ದಿ ಹಿಂದೂ’ ವೆಬ್‌ಸೈಟ್‌ನಲ್ಲಿ ʼTwo pilots killed in third Jaguar jet crash this yearʼ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ ವರದಿಯೊಂದನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ “ಈ ವರ್ಷದ ಮೂರನೇ ಜಾಗ್ವಾರ್ ಜೆಟ್ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದರು” ಎಂಬ ಶೀರ್ಷಿಕೆಯ ಲೇಖನವನ್ನು ಜುಲೈ 10 ರಂದು ಪ್ರಕಟಿಸಿರುವುದು ಕಂಡು ಬಂದಿದೆ. ಇದರ ಪ್ರಕಾರ ಹಾರಟ ತರಬೇತಿಯ ಸಂದರ್ಭದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹಾಗೆಯೇ 1970 ರ ದಶಕದಲ್ಲಿ ಎರಡು ಆಸನಗಳನ್ನು ಅಳವಡಿಸಲಾದ ಜಾಗ್ವರ್ ಫೈಟರ್ ಜೆಟ್‌ಗಳನ್ನು ಭಾರತದ ವಾಯುಸೇನೆ ಮಾತ್ರ ಬಳಸುತ್ತಿದೆ ಎಂಬ ಅಂಶ ಕೂಡ ಈ ಲೇಖನದಲ್ಲಿ ಕಂಡು ಬಂದಿದೆ. ಈ ವಿಷಯದ ಅರಿವೇ ಇಲ್ಲದ ಪಾಕ್ ಮೂಲಭೂತವಾದಿಗಳು ಸುಳ್ಳು ಸುದ್ದಿ ಹರಡುತ್ತಿರುವುದು ಸ್ಪಷ್ಟವಾಗಿದೆ.
ಜುಲೈ 10,2025ರಂದು ಎನ್‌ಡಿಟಿವಿ ತನ್ನ ವೆಬ್‌ಸೈಟ್‌ನಲ್ಲಿ ʼPilots Killed In Jaguar Crash: Squadron Leader, 31, Flight Lieutenant, 23ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಿನ್ನೆ ನಡೆದ ಜಾಗ್ವಾರ್ ಫೈಟರ್ ಬಾಂಬರ್ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್ ಸಿಂಧು (31) ಮತ್ತು ಫ್ಲೈಟ್ ಲೆಫ್ಟಿನೆಂಟ್ ರಿಷಿ ರಾಜ್ ಸಿಂಗ್ (23) ಎಂದು ಗುರುತಿಸಲಾಗಿದೆ. ಸ್ಕ್ವಾಡ್ರನ್ ಲೀಡರ್ ಸಿಂಧು ಹರಿಯಾಣದ ರೋಹ್ಟಕ್‌ನವರಾಗಿದ್ದರೆ, ಲೆಫ್ಟಿನೆಂಟ್ ಸಿಂಗ್ ರಾಜಸ್ಥಾನದ ಪಾಲಿ ಮೂಲದವರು. ಪೈಲಟ್‌ಗಳು ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ನಿನ್ನೆ ಮಧ್ಯಾಹ್ನ ಚುರು ಜಿಲ್ಲೆಯ ಭಾನೋಡಾ ಗ್ರಾಮದ ಬಳಿ ಅವಳಿ ಆಸನಗಳ ಯುದ್ಧ ವಿಮಾನ ಪತನಗೊಂಡಿತು. ಅಪಘಾತಕ್ಕೆ ಕಾರಣವೇನೆಂದು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆ ಪ್ರಕಟಿಸಿದೆʼ ಎಂದು ವರದಿಯಾಗಿದೆ.
ಜುಲೈ 10, 2025 ಟೈಮ್ಸ್ ಆಫ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ʼtwo IAF pilots killed as Jaguar jet crashed in Rajasthańs Churuʼ ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಜಾಗ್ವಾರ್ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಅಶೋಕ್ ಸಿಂಗ್ ಶೇಖಾವತ್ ವರದಿ ಮಾಡಿದ್ದಾರೆ. ಅಪಘಾತದ ಕಾರಣವನ್ನು ನಿರ್ಧರಿಸಲು IAF ತನಿಖಾ ನ್ಯಾಯಾಲಯಕ್ಕೆ ಆದೇಶಿಸಿದೆ - ಮಾರ್ಚ್ ನಂತರ ಅವಳಿ-ಎಂಜಿನ್ ಬಾಂಬರ್ ಒಳಗೊಂಡ ಮೂರನೇ ಅಪಘಾತ ಇದು. ಶ್ರೀಗಂಗಾನಗರ ಬಳಿಯ ಸೂರತ್‌ಗಢ ವಾಯುನೆಲೆಯಿಂದ ಹೊರಟ ಎರಡು ಆಸನಗಳ ವಿಮಾನವು ಮಧ್ಯಾಹ್ನ 12.40 ರ ಸುಮಾರಿಗೆ ದೊಡ್ಡ ಸ್ಫೋಟದೊಂದಿಗೆ ಪತನಗೊಂಡಿತು, ಇದು ಸ್ಥಳೀಯ ನಿವಾಸಿಗಳಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟುಹಾಕಿತುʼ ಎಂದು ವರದಿಯಾಗಿದೆ
ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವು ಇನ್ನಷ್ಟು ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಭಾರತದಲ್ಲಿ ಜಾಗ್ವರ್ ಫೈಟರ್ ಜೆಟ್‌ಗಳು 1 ಮತ್ತು 2 ಸೀಟರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ವರದಿಗಳು ಮತ್ತು ಮಾಹಿತಿಗಳು ಕಂಡು ಬಂದಿವೆ. ಭಾರತದಲ್ಲಿ ಕೆಲವೊಂದು ಯುದ್ಧ ವಿಮಾನಗಳನ್ನು ಹಲವು ಬದಲಾವಣೆಗಳೊಂದಿಗೆ ತರಬೇತಿಯ ಉದ್ದೇಶಗಳಿಗಾಗಿ ಕೂಡ ಬಳಸಲಾಗುತ್ತದೆ ಎನ್ನಲಾಗುತ್ತಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ರಾಜಸ್ಥಾನದಲ್ಲಿ ಪತನವಾದ ಫೈಟರ್ ಜೆಟ್ 2 ಸೀಟ್‌ರ್ ಆಗಿದ್ದು, ಇದರಲ್ಲಿ ಇಬ್ಬರು ಫೈಲೆಟ್‌ಗಳು ಕೂಡ ಹುತಾತ್ಮರಾಗಿದ್ದಾರೆ. ಪಾಕಿಸ್ತಾನದ ಮೂಲಭೂತವಾದಿಗಳು ಭಾರತದ ವಿರುದ್ಧ ಸುಳ್ಳು ಸುದ್ದಿ ಹರಡುವ ಉದ್ದೇಶದಿಂದ ತಪ್ಪು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.