ಫ್ಯಾಕ್ಟ್‌ಚೆಕ್‌: ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ

ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ

Update: 2025-07-18 02:00 GMT

ಒಡಿಶಾದ ವಿಶ್ವಪ್ರಸಿದ್ದ ಪುರಿಯಲ್ಲಿ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾ ಅವರ ರಥಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 750ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವುದು, ಈ ಪೈಕಿ 12 ಜನರ ಸ್ಥಿತಿ ಗಂಭೀರವಾಗಿರುವುದು ವರದಿಯಾಗಿತ್ತು. ರಥಯಾತ್ರೆಯ ‘ಪಹಾರಿ’ ಸಮಾರಂಭದ ಸಂದರ್ಭದಲ್ಲಿ ಗಜಪತಿ ದಿವ್ಯ ಸಂಘದೇವ್ ಅವರ ಅರಮನೆಯ ಬಳಿ ಜನಸಮೂಹ ಜಮಾಯಿಸಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಆಡಳಿತಕ್ಕೆ ತೊಂದರೆಯಾಗುತ್ತಿತ್ತು. ಈ ಸಮಯದಲ್ಲಿ ಭಕ್ತರಲ್ಲಿ ಗೊಂದಲ ಉಂಟಾಗಿ ಇದ್ದಕ್ಕಿದ್ದಂತೆ ನೂಕುನುಗ್ಗಲಿಗೆ ಕಾರಣವಾಗಿ ಕಾಲ್ತುಳಿತ ಸಂಭವಿಸಿತು. ಇದರಿಂದಾಗಿ, ಕೆಲವು ಭಕ್ತರು ಪ್ರಜ್ಞೆ ತಪ್ಪಿದರು ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಲು ಯತ್ನಿಸಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ಜುಲೈ 03, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼBlasphemy during Rath Yatra!! Woman caught doing Namaz under the Jagannath Rath in Puri. ರಥಯಾತ್ರೆಯ ಸಮಯದಲ್ಲಿ ದೇವದೂಷಣೆ! ಪುರಿಯ ಜಗನ್ನಾಥ ರಥದ ಕೆಳಗೆ ನಮಾಜ್ ಮಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾರೆ. ಹರೇ ರಾಮ ಹರೇ ರಾಮ ರಾಮ್ ರಾಮ್ ಹರೇ ಹರೇ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಜುಲೈ 02, 2025ರಂದು ಎಕ್ಸ್‌ ಖಾತದಾರರೊಬ್ಬರು ತಮ್ಮ ಖಾತೆಯಲ್ಲಿ ʼBlasphemy during Rath Yatra!! Woman caught doing Namaz under the Jagannath Rath in Puri. Enough of testing the patience of Hindus. Why isn't she arrested yet @odisha_police?ʼ ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಥಯಾತ್ರೆಯ ಸಮಯದಲ್ಲಿ ದೇವದೂಷಣೆ! ಪುರಿಯ ಜಗನ್ನಾಥ ರಥದ ಕೆಳಗೆ ನಮಾಜ್ ಮಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸುವುದು ಸಾಕು. ಅವಳನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ @odisha_police? ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಪೋಸ್ಟ್‌ ಕಾರ್ಡ್‌ ಕನ್ನಡ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡು, “ಶಾಕಿಂಗ್: ಪೂರಿ ಜಗನ್ನಾಥ ರಥದ ಅಡಿಯಲ್ಲಿ ನಮಾಜ್ ಮಾಡಿದ ಜಿಹಾದಿ ಮಹಿಳೆ ಹಿಂದೂಗಳ ಮೌನ & ತಾಳ್ಮೆ ಖಂಡಿತಾ ಒಳ್ಳೆಯದಲ್ಲ, ಅದು ನಮ್ಮ ಅವನತಿಗೆ ಕಾರಣವಾಗಲಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಜುಲೈ 03, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಹಿಂದೂಗಳ ಮೌನ & ತಾಳ್ಮೆ ಖಂಡಿತಾ... ನಮ್ಮ ಅವನತಿಗೆ ಕಾರಣವಾಗಲಿದೆ!!! ಇನ್ನಾದರೂ ಎಚ್ಚರಗೊಳ್ಳಿ ಹಿಂದೂಗಳೇʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್ 

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪುರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಲು ಯತ್ನಿಸಿದ್ದಾರೆ ಎಂಬುದು ಸುಳ್ಳು. ರಥದ ಕೆಳಗಿದ್ದ ಮಹಿಳೆ ಹಿಂದೂ ಆಗಿದ್ದು ರಥದ ಕೆಳೆಗೆ ಪ್ರಾರ್ಥನೆ ಮಾಡಲು ನನಗೂ ಅವಕಾಶ ಕೊಡಿ ಎಂದು ಕೇಳಿದ ವಿಡಿಯೋವೊಂದನ್ನು ಎಡಿಟ್‌ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ʼಮುಸ್ಲಿಂ ಮಹಿಳೆಯೊಬ್ಬರು ಪೂರಿ ಜಗನ್ನಾಥ ರಥದ ಕೆಳಗೆ ನಮಾಜ್ ಮಾಡಿದ ಘಟನೆ ನಡೆದಿರುವುದು ನಿಜವೇʼ ಎಂದು ತಿಳಿಯಲು ಗೂಗಲ್‌ನಲ್ಲಿ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಮಾಧ್ಯಮಗಳಲ್ಲಿ ಅಂತಹ ಯಾವುದೇ ಸುದ್ದಿ ಪ್ರಕಟವಾಗಿರುವ ಮಾಹಿತಿ ಲಭ್ಯವಾಗಿಲ್ಲ. ವಿಡಿಯೋವನ್ನು ಸಂಪೂರ್ಣವಾಗಿ ಗಮನಿಸಿದಾಗ ಇದು ನಮಾಜ್‌ ಪ್ರಕ್ರಿಯೆಯೇ ಅಲ್ಲ ಎಂಬುದು ನಮಗೆ ತಿಳಿಯಿತು. ಮುಸ್ಲಿಂ ಮಹಿಳೆಯರು ನಮಾಜ್ ಮಾಡುವಾಗ ಶಿರಸ್ತ್ರಾಣ/ಮುಸುಕು ಧರಿಸುತ್ತಾರೆ. ಆದರೆ ವಿಡಿಯೋದಲ್ಲಿ ಅಂತಹ ಯಾವುದೇ ಪ್ರಕ್ರಿಯೆ ಕಂಡು ಬಂದಿಲ್ಲ. ಹಾಗಾಗಿ ಇದು ನಮಾಜ್‌ ಕೂಡ ಅಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಈ ಘಟನೆ ಒಂದು ವೇಳೆ ನಿಜವಾಗಿದ್ದರೆ ಈ ಕುರಿತು ದೇಶದ ಎಲ್ಲಾ ಬಲಪಂಥೀಯ ಮಾಧ್ಯಮಗಳು ಸಾಕಷ್ಟು ವರದಿಗಳನ್ನು ಮಾಡುತ್ತಿದ್ದವು.


ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಆಲ್ಟ್‌ನ್ಯೂಸ್‌ನ ಫ್ಯಾಕ್ಟ್‌ಚೆಕ್ಕರ್ ಮೊಹಮದ್ ಜುಬೇರ್ ಹಂಚಿಕೊಂಡು ಇದು ಸುಳ್ಳು ಮತ್ತು ನಕಲಿ ಪೋಸ್ಟ್‌ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಈ ಘಟನೆಯ ಪೂರ್ಣ ವಿಡಿಯೋವನ್ನು ಹಂಚಿಕೊಂಡಿದ್ದು ರಥದ ಕೆಳಗಿದ್ದ ಮಹಿಳೆ ಹಿಂದೂ ಆಗಿದ್ದು ರಥದ ಕೆಳೆಗೆ ಪ್ರಾರ್ಥನೆ ಮಾಡಲು ನನಗೂ ಅವಕಾಶ ಕೊಡಿ ಎಂದು ವಾದ ಮಾಡುತ್ತಿರುವುದನ್ನು ಕೇಳಬಹುದು.

ವಿಡಿಯೋವನ್ನು ಸಂಪೂರ್ಣವಾಗಿ ಗಮನಿಸಿದಾಗ ಇದು ನಮಾಜ್‌ ಪ್ರಕ್ರಿಯೆಯೇ ಅಲ್ಲ ಎಂಬುದು ನಮಗೆ ತಿಳಿಯಿತು. ಮುಸ್ಲಿಂ ಮಹಿಳೆಯರು ನಮಾಜ್ ಮಾಡುವಾಗ ಶಿರಸ್ತ್ರಾಣ/ಮುಸುಕು ಧರಿಸುತ್ತಾರೆ. ಆದರೆ ವಿಡಿಯೋದಲ್ಲಿ ಅಂತಹ ಯಾವುದೇ ಪ್ರಕ್ರಿಯೆ ಕಂಡು ಬಂದಿಲ್ಲ. ಹಾಗಾಗಿ ಇದು ನಮಾಜ್‌ ಕೂಡ ಅಲ್ಲ ಎಂಬುದು ಸ್ಪಷ್ಟವಾಗಿದೆ. ಜಗನ್ನಾಥ ರಥದ ಕೆಳಗೆ ಕಾಣುವ ಹಿಂದೂ ಮಹಿಳಾ ಭಕ್ತರೊಬ್ಬರು ನಮಾಜ್ ಮಾಡುತ್ತಿರುವ ವಿಡಿಯೋವನ್ನು, ಮುಸ್ಲಿಂ ಮಹಿಳೆಯೊಬ್ಬರು ರಥದ ಕೆಳಗೆ ನಮಾಜ್ ಮಾಡುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಪೂರ್ಣ ವಿಡಿಯೋ ಲಭ್ಯವಿದೆ. ಮಹಿಳೆಯೊಬ್ಬರು ಮತ್ತೊಬ್ಬ ಮಹಿಳೆಗೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ವಾದಿಸುತ್ತಿರುವುದನ್ನು ಕಾಣಬಹುದು, ನಂತರ ಅವರು, “ನೀವು ಅವರಿಗೆ ಅವಕಾಶ ನೀಡಿದರೆ, ನನಗೇಕೆ ಅವಕಾಶ ನೀಡಬಾರದು” ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Full View

ಪೂರಿ ಜಗನ್ನಾಥ ದೇವರ ರಥದ ಕೆಳಗೆ ಮಹಿಳೆಯೊಬ್ಬರು ಪ್ರಾರ್ಥನೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವಂತೆ ಮುಸ್ಲಿಂ ಮಹಿಳೆಯೊಬ್ಬಳನ್ನು ನಮಾಜ್ ಮಾಡುತ್ತಿಲ್ಲ. ಅಲ್ಲಿ ಕುಳಿತುಕೊಳ್ಳಲು ಹೇಳಲಾಗಿದೆ ಎಂದು ವರದಿಯಾಗಿರುವ ಹಿಂದೂ ಮಹಿಳೆಯೊಬ್ಬರು ಅದರ ಬಗ್ಗೆ ವಾದಿಸುತ್ತಿರುವುದು ಕಂಡುಬಂದಿದೆ. ಬಲಪಂಥೀಯ ಸಾಮಾಜಿಕ ಮಾಧ್ಯಮ ಖಾತೆಗಳು ರಥದ ಕೆಳಗೆ ನಮಾಜ್ ಮಾಡುತ್ತಿರುವ ಮಹಿಳೆ ಮುಸ್ಲಿಂ ಎಂದು ತಪ್ಪಾಗಿ ಹೇಳಿಕೊಂಡಿವೆ, ಆದರೆ ಇದು ಸುಳ್ಳು.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪುರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಲು ಯತ್ನಿಸಿದ್ದಾರೆ ಎಂಬುದು ಸುಳ್ಳು. ರಥದ ಕೆಳಗಿದ್ದ ಮಹಿಳೆ ಹಿಂದೂ ಆಗಿದ್ದು ರಥದ ಕೆಳೆಗೆ ಪ್ರಾರ್ಥನೆ ಮಾಡಲು ನನಗೂ ಅವಕಾಶ ಕೊಡಿ ಎಂದು ಕೇಳಿದ ವಿಡಿಯೋವೊಂದನ್ನು ಎಡಿಟ್‌ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Claim :  ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News