ಫ್ಯಾಕ್ಟ್‌ಚೆಕ್: ಹಸಿದು ಬಂದ ಹುಡುಗನ ಮೇಲೆ ಚಹಾ ಮಾರಾಟಗಾರನೊಬ್ಬ ಟೀ ಸುರಿದಿದ್ದಾನೆ ಎಂದು ಸ್ಕ್ರಿಪ್ಟ್‌ಡ್ ವಿಡಿಯೋ ಹಂಚಿಕೆ
ಹಸಿದು ಬಂದ ಹುಡುಗನ ಮೇಲೆ ಚಹಾ ಮಾರಾಟಗಾರನೊಬ್ಬ ಟೀ ಸುರಿದಿದ್ದಾನೆ ಎಂದು ಸ್ಕ್ರಿಪ್ಟ್‌ಡ್ ವಿಡಿಯೋ ಹಂಚಿಕೆ
ಸಾಮಾಜಿಕ ಮಾಧ್ಯಮದಲ್ಲಿ ಒಂದು ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮಗುವಿನ ಮೇಲೆ ಬಿಸಿ ಟೀ ಸುರಿಯುತ್ತಿರುವಂತೆ ಕಾಣುತ್ತದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರು, ಸುಮಾರು 13 ವರ್ಷದ ಹಸಿದ ಮಗು ಸಹಾಯಕ್ಕಾಗಿ ಅಂಗಡಿ ಮಾಲೀಕನ ಬಳಿ ಹೋಗಿದ್ದಾನೆ ಆದರೆ ಸಹಾಯ ಮಾಡುವ ಬದಲು, ಅಂಗಡಿ ಮಾಲೀಕನು ಮಗುವಿನ ಮೇಲೆ ಬಿಸಿ ಟೀ ಸುರಿದಿದ್ದಾನೆ ಎಂಬುದನ್ನು ನಾವೀ ವಿಡಿಯೋವಿನಲ್ಲಿ ನೋಡಬಹುದು.
ಜನವರಿ 08, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼअभी-अभी बहुत ही दिल दहलाने वाला एक वीडियो देखा,ऐसे व्यक्ति के साथ कार्यवाही होना लाजमी हैʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಾನು ನೋಡಿದ ವಿಡಿಯೋ ನಿಜಕ್ಕೂ ಹೃದಯವಿದ್ರಾವಕವಾಗಿತ್ತು. ಇದಕ್ಕೆ ಕಾರಣರಾದವರು ಯಾರೇ ಆಗಿರಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 07, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ʼइस आदमी में कार्रवाई होनी चाहिएʼ ಎಂಬ ಶೀರ್ಷಿಕೆಯನ್ನು ನೋಡಬಹುದು. ಜೊತೆಗೆ ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼजब देना नही था, तो ये जुल्म क्यों?ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಅವನಿಗೆ ಕೊಡುವ ಉದ್ದೇಶವಿಲ್ಲದಿದ್ದರೆ, ಅಂತಹ ಕ್ರೌರ್ಯ ಏಕೆ ಅಗತ್ಯವಾಗಿತ್ತು?ʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 07, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCruelty disguised as kindness is still cruelty. Don’t call yourself human if this is your mindsetʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದಯೆಯ ಹೆಸರಿನಲ್ಲಿ ಕ್ರೌರ್ಯ ಇನ್ನೂ ಕ್ರೌರ್ಯವೇ. ಈ ರೀತಿಯ ಮನಸ್ಥಿತಿಗೆ ಮಾನವೀಯತೆ ಇಲ್ಲʼ ಎಂಬ ಶೀರ್ಷಿಕೆಯೊಂದಿಗಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 08, 2026ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼVery sad and heart breaking video... Not sure where this video is from, but it's pretty horrible. If the tea seller didn't owe the child anything he would have refused, but he spilled hot tea on them. This is an incident that shame humanity. Wherever the video is, the police there should take immediate action and give severe punishment to the shopkeeper.ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ವಿಡಿಯೋ ತುಂಬಾ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಈ ವಿಡಿಯೋ ಎಲ್ಲಿಂದ ಬಂತು ಎಂದು ನನಗೆ ಗೊತ್ತಿಲ್ಲ, ಆದರೆ ಏನಾಯಿತು ಎಂಬುದು ಭಯಾನಕವಾಗಿದೆ. ಟೀ ಮಾರಾಟಗಾರನಿಗೆ ಏನೂ ಕೊಡಲು ಇಷ್ಟವಿಲ್ಲದಿದ್ದರೆ, ಅವನು ನಿರಾಕರಿಸಬಹುದಿತ್ತು. ಬದಲಾಗಿ, ಅವನು ಮಗುವಿನ ಮೇಲೆ ಬಿಸಿ ಟೀ ಸುರಿದನು. ಈ ಘಟನೆ ಮಾನವೀಯತೆಗೆ ಅವಮಾನವನ್ನುಂಟುಮಾಡುತ್ತದೆ. ಇದು ಎಲ್ಲೇ ನಡೆದರೂ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅಂಗಡಿಯವನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡಕಾಟದಲ್ಲಿ ನಮಗೆ ಜನವರಿ 05, 2026ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರ ಖಾತೆಯಲ್ಲಿ ಇದೇ ವಿಡಿಯೋವೊಂದು ನಮಗೆ ಕಾಣಿಸಿತು. ವೈರಲ್ ಆದ ವಿಡಿಯೋಗೆ ʼये वीडियो केवल मनोरंजन के लिए है|ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ವಿಡಿಯೋವನ್ನು ಕೇವಲ ಮನೋರಂಜನೆಗಾಗಿ ಚಿತ್ರೀಕರಿಸಲಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು.
booster_bhai ಪ್ರೊಫೈಲ್ ವಿವರವಾಗಿ ಪರಿಶೀಲಿಸಿದಾಗ, ಈ ಖಾತೆಯ ಮಾಲೀಕನು ತಾನು ಡಿಜಿಟಲ್ ಕ್ರಿಯೇಟರ್ ಎಂದು ಇನ್ನ ಬಯೋವಿನಲ್ಲಿ ಸ್ಪಷ್ಟವಾಗಿ ಪರಿಚಯಿಸಿಕೊಂಡಿದ್ದಾನೆ. ಅತನ ಖಾತೆಯಲ್ಲಿ ನಾವು ನಿಯಮಿತವಾಗಿ ಹುಡುಗರ ಮೇಲೆ ಟೀ ಸುರಿಯುವಂತೆಯೇ ಕಾಣುವ, ಒಂದೇ ರೀತಿಯ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ನಾವು ನೋಡಬಹುದು.
ಇನ್ನೂ ಗಮನಿಸಿದಾಗ, ವೈರಲ್ ಆಗಿರುವ ವೀಡಿಯೊದಲ್ಲಿರುವ ಅದೇ ಹುಡುಗನು ಈ ಪೇಜನಲ್ಲಿ ಕಾಣುವ ಸಾಕಷ್ಟು ವೀಡಿಯೊಗಳಲ್ಲಿ ಕಾಣಿಸುತ್ತಾನೆ. ಆ ವೀಡಿಯೊಗಳಲ್ಲೂ ಸಹ ಇದೇ ರೀತಿಯ “ಚಹಾ ಸುರಿಯುವ” ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದರಿಂದ ಈ ದೃಶ್ಯಗಳು ಆಕಸ್ಮಿಕವಾಗಿ ನಡೆದ ಘಟನೆಗಳಲ್ಲ, ಇದೊಂದು ಸ್ಕ್ರಿಪ್ಟ್ ಮಾಡಲಾದ ವಿಡಿಯೋಗಳೆಂದು ನಮಗೆ ಸ್ಪಷ್ಟವಾಗುತ್ತದೆ.
ಅಲ್ಲದೆ, Booster Bhai ಯೂಟ್ಯೂಬ್ ಚಾನೆಲ್‌ನಲ್ಲಿ 700ಕ್ಕೂ ಹೆಚ್ಚು ಶಾರ್ಟ್ ವೀಡಿಯೊಗಳು ಇದ್ದು, ಅವುಗಳಲ್ಲಿ ಬಹುತೆಕವು ಇದೇ ರೀತಿಯ ಚಹಾ ಸುರಿಯುವ ನಾಟಕೀಯ ದೃಶ್ಯಗಳನ್ನು ಒಳಗೊಂಡಿವೆ. ಈ ವೈರಲ್ ಕ್ಲಿಪ್ ಮನರಂಜನೆಗಾಗಿ ಸ್ಕ್ರಿಪ್ಟ್ ಮಾಡಿ ತಯಾರಿಸಿದ ವಿಷಯ ಎಂಬುದನ್ನು ಮತ್ತಷ್ಟು ದೃಢಪಡಿಸುತ್ತದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.