ಫ್ಯಾಕ್ಟ್‌ಚೆಕ್‌: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ರ್ಯಾಲಿಯ ನಂತರ ಮೈದಾನದ ಪರಿಸ್ಥಿತಿ ಎಂದು ಎಐ ಚಿತ್ರ ಹಂಚಿಕೆ

ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ರ್ಯಾಲಿಯ ನಂತರ ಮೈದಾನದ ಪರಿಸ್ಥಿತಿ ಎಂದು ಎಐ ಚಿತ್ರ ಹಂಚಿಕೆ

Update: 2026-03-20 12:55 GMT

ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಚ್ 14ರಂದು ಕೊಲ್ಕತ್ತ ಗೆ ಭೇಟಿ ನೀಡಿದರು. ಈ ವೇಳೆ ಅವರು ಸುಮಾರು ₹18,680 ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಕೆಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರು. ನಂತರ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭಾರೀ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ಭೇಟಿ ಬಿಜೆಪಿ ಪಕ್ಷದ ಪರಿವರ್ತನ ಯಾತ್ರೆಯ ಸಮಾರೋಪದ ಭಾಗವಾಗಿತ್ತು. ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಪ್ರಕಾರ, ಬ್ರಿಗೇಡ್ ಸಭೆಯನ್ನು ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಅತಿದೊಡ್ಡ ಸಾರ್ವಜನಿಕ ಸಮಾವೇಶಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಪಕ್ಷದ ಶಕ್ತಿಯನ್ನು ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿ ಕಾಣಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಸಭೆಗೆ ಸಂಬಂಧಿಸಿದ ಫೋಟೋವೊಂದು ಹರಿದಾಡುತ್ತಿತ್ತು. ಈ ಚಿತ್ರದಲ್ಲಿ ಒಂದು ಮೈದಾನದಲ್ಲಿ ಖಾಲಿ ಬಾಟಲ್‌ಗಳು, ಪ್ಲಾಸ್ಟಿಕ್ ಕಸ ಮತ್ತು ಕೆಲವು ತ್ಯಾಜ್ಯ ವಸ್ತುಗಳು ಚದುರಿರುವುದನ್ನು ನೋಡಬಹುದು. ಈ ಚಿತ್ರವನ್ನು ಕೊಲ್ಕತ್ತದಲ್ಲಿ ನಡೆದ ಬಿಜೆಪಿ ರ‍್ಯಾಲಿಗೆ ಸಂಬಂಧಿಸಿದ್ದು. ಈ ಕಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಸಾರ್ವಜನಿಕ ಸಭೆಗೆ ಬಂದಿದ್ದ ಪಕ್ಷದ ಕಾರ್ಯಕರ್ತರು ಬಿಟ್ಟುಹೋಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮಾರ್ಚ್‌ 15, 2026ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼবিজেপির “বি-গ্রেড” !!ʼ ಎಂದು ಬೆಂಗಾಲಿ ಭಾಷೆಯಲ್ಲಿ ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಿಜೆಪಿಯ "ಬಿ-ಗ್ರೇಡ್"ʼ ಎಂದು ಬರೆದಿರುವುದನ್ನು ನೋಡಬಹುದು

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮಾರ್ಚ್‌ 15, 2026ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼकलकत्ता में मोदी की रैली के बाद का दृश्य ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೋಲ್ಕತ್ತಾದಲ್ಲಿ ಮೋದಿ ಅವರ ರ್ಯಾಲಿಯ ನಂತರದ ದೃಶ್ಯಗಳುʼ ಎಂದು ಬರೆದಿರುವುದನ್ನು ನೋಡಬಹುದು

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮಾರ್ಚ್‌ 16, 2026ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼबंगाल - कलकत्ता में मोदी की रैली जीस ग्राउंड में थी - उसी ग्राउंड में रैली खत्म होने के बाद की तस्वीर है देखिए।ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಂಗಾಳ- ಕೊಲ್ಕತ್ತದಲ್ಲಿ ನರೇಂದ್ರ ಮೋದಿ ರ್ಯಾಲಿ ನಡೆದ ಮೈದಾನ ಇದೇ. ರ್ಯಾಲಿ ಮುಗಿದ ನಂತರ ತೆಗೆದ ಚಿತ್ರ ಇದು, ನೋಡಿರಿ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಫೋಟೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಫೋಟೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ಫೋಟೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ಫೋಟೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.

ವೈರಲ್‌ ಆದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್‌ ಆದ ಫೋಟೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು. ಈ ಚಿತ್ರದಲ್ಲಿ ಬಿಜೆಪಿ ಧ್ವಜದ ಒಂದು ಭಾಗದಲ್ಲಿ ಬಿ ಮತ್ತು ಆರ್‌ ಬದಲಿಗೆ ಪಕ್ಷದ ಇಂಗ್ಲಿಷ್ ಮೊದಲಕ್ಷರಗಳಾದ ಬಿ ಮತ್ತು ಜೆ ಇವೆ. ನೆಲದ ಮೇಲೆ ಬಿದ್ದಿರುವ ಬಾಟಲಿಯ ಲೇಬಲ್‌ ಮೇಲೆ ಇರುವ ಅಕ್ಷರಗಳು ಸಹ ತಿಳಿಯದ ಭಾಷೆಯಲ್ಲಿದೆ.


ಇಂತಹ ತಪ್ಪುಗಳು ಸಾಮಾನ್ಯವಾಗಿ ಎಐ ಮೂಲಕ ತಯಾರಿಸಿದ ಫೋಟೋಗಳಲ್ಲಿ ಕಾಣಿಸುತ್ತವೆ. ಈ ಎಲ್ಲ ಕಾರಣಗಳಿಂದ ಈ ಫೋಟೋ ಡಿಜಿಟಲ್ ರೀತಿಯಲ್ಲಿ ತಯಾರಿಸಿರಬಹುದು ಎಂಬ ಅನುಮಾನಗಳು ಮೂಡಿ ನಾವು ಎಐ ಟೂಲ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು.

ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ಫೋಟೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ಫೋಟೋ 98% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಹೈವ್‌ ಮಾಡರೇಶನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ಫೋಟೋವನ್ನು 90.8% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ಫೋಟೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಫೋಟೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ಫೋಟೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ರ್ಯಾಲಿಯ ನಂತರ ಮೈದಾನದ ಪರಿಸ್ಥಿತಿ ಎಂದು ಎಐ ಚಿತ್ರ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News