ಫ್ಯಾಕ್ಟ್‌ಚೆಕ್‌: ಚಿಕ್ಕಮಗಳೂರಿನಲ್ಲಿ ಹಾಸ್ಪಿಟಲ್‌ನಲ್ಲಿ ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ ಎಂದು ಎಐ ವಿಡಿಯೋ ಹಂಚಿಕೆ​

ಚಿಕ್ಕಮಗಳೂರಿನಲ್ಲಿ ಹಾಸ್ಪಿಟಲ್‌ನಲ್ಲಿ ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ ಎಂದು ಎಐ ವಿಡಿಯೋ ಹಂಚಿಕೆ​

Update: 2026-01-22 02:30 GMT

ಚಿಕ್ಕಮಗಳೂರಿನಲ್ಲಿ ಹುಡುಗಿಗೆ ದೆವ್ವ ಹಿಡಿದಿದೆ ಎಂದು ಕೆಲವರು ಹೇಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಹುಡುಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ನೋಡಬಹುದು. ಇದ್ದಕ್ಕಿದ್ದಂತೆ, ಅವಳು ಜೋರಾಗಿ ಕಿರುಚಲು ಮತ್ತು ತಲೆ ಅಲ್ಲಾಡಿಸಲು ಪ್ರಾರಂಭಿಸುತ್ತಾಳೆ. ಅವಳ ಸುತ್ತಲಿನ ಜನರು ಅವಳನ್ನು ನಿಯಂತ್ರಿಸಲು ಹೆಣಗಾಡುತ್ತಾರೆ. ನಂತರ ಅವಳು ಎದ್ದು, ಗೋಡೆ ಹತ್ತಿ, ಛಾವಣಿಯಿಂದ ತಲೆಕೆಳಗಾಗಿ ನೇತಾಡುತ್ತಾಳೆ. ಇದೆಲ್ಲದರ ನಡುವೆ, ಅಲ್ಲಿದ್ದ ಜನರು ಮಂತ್ರಗಳನ್ನು ಪಠಿಸುವುದನ್ನು ಕೇಳಬಹುದು.

ಈ ವಿಡಿಯೋವನ್ನಯು ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಚಿಕ್ಕಮಗಳೂರಿನಲ್ಲಿ ಹಾಸ್ಪಿಟಲ್‌ನಲ್ಲಿ ಒಬ್ಬಳು ಅಕ್ಕನಿಗೆ ದೆವ್ವ ಹಿಡಿದಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿಗೆ ಕ್ಯಾಪ್ಷನ್‌ ಆಗಿ ʼದೆವ್ವ ಇಲ್ಲಾ ಅನ್ನೋರಿಗೆ ಈ ವಿಡಿಯೋʼ ಎಂದು ಬರೆದಿರುವುದನ್ನು ನೋಡಬಹುದು

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಜನವರಿ 16, 2026ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼWhat the hell is happeningʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್‌ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಆದರೆ, ಈ ಘಟನೆಗೆ ಸಂಬಂಧಿಸಿದ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ನಂತರ ನಾವು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸುಮನ್ ಕತ್ವಾಲ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡೆವು. ಈ ಖಾತೆಯಲ್ಲಿ ಎಐ ರಚಿತ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ. ಈ ಇನ್‌ಸ್ಟಾಗ್ರಾಮ್ ಬಯೋ ಪೇಜ್‌ನಲ್ಲಿ ಸುಮನ್ ಒಬ್ಬ ಡಿಜಿಟಲ್ ಸೃಷ್ಟಿಕರ್ತ, ಆತ ಎಐ ವೀಡಿಯೊಗಳನ್ನು ರಚಿಸುತ್ತಾನೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಪೇಜ್‌ನಲ್ಲಿ ವೈರಲ್ ಕ್ಲಿಪ್‌ನಂತೆಯೇ ಕಾಣುವ ಅನೇಕ ಇತರ ವೀಡಿಯೊಗಳನ್ನು ನೋಡಬಹುದು. ಇದು ವೈರಲ್ ಆಗಿರುವ ವೀಡಿಯೊದಂತೆಯೇ ಇರುವ ಮತ್ತೊಂದು ವೀಡಿಯೊವನ್ನು ಸಹ ಹಂಚಿಕೊಂಡಿದೆ. ಇದು ವೈರಲ್ ವೀಡಿಯೊವನ್ನು ಎಐ ಬಳಸಿ ರಚಿಸಲಾಗಿದೆ ಮತ್ತು ಇದು ನಿಜವಾದ ಘಟನೆಯಲ್ಲ ಎಂದು ತೋರಿಸುತ್ತದೆ.


​ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್‌ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು. ವಿಡಿಯೋವಿನಲ್ಲಿ ತೋರಿಸಿದ ರೀತಿಯಲ್ಲಿ ಹುಡುಗಿ ಗೋಡೆ ಹತ್ತಲು ಸಾಧ್ಯವಿಲ್ಲ. ವೀಡಿಯೊದಲ್ಲಿ ಸಾಕಷ್ಟು ತಪ್ಪುಗಳನ್ನು ನಾವು ನೋಡಬಹುದು, ಈ ವಿಡಿಯೋವನ್ನು ಎಐ ಮೂಲಕ ರಚಿಸಿರಬಹುದು ಎಂದು ಅನುಮಾನ ಮೂಡಿತು. ಉದಾಹರಣೆಗೆ, ಗೋಡೆಯ ಗಡಿಯಾರದಲ್ಲಿನ ಸಂಖ್ಯೆಗಳು ಅಸ್ಪಷ್ಟ ಮತ್ತು ಅಸ್ವಾಭಾವಿಕವಾಗಿ ಕಾಣುತ್ತವೆ. ವೀಡಿಯೊದ ಆರಂಭದಲ್ಲಿ, ಹಾಸಿಗೆಯ ಮೇಲೆ ಇರಿಸಲಾದ ಹುಡುಗಿಯ ಕೈಗಳು ತಪ್ಪಾದ ರೀತಿಯಲ್ಲಿ ತಿರುಗಿರುವುದನ್ನು ನೋಡಬಹುದು. ವೀಡಿಯೊದಲ್ಲಿರುವ ಇತರ ಜನರ ಕೈಗಳು ಮತ್ತು ಬಾಯಿಗಳು ಸಹ ವಿರೂಪಗೊಂಡಂತೆ ಕಾಣುತ್ತವೆ. ವಿಡಿಯೋವಿನ ಕೆಲವು ಫ್ರೇಮ್‌ಗಳಲ್ಲಿ ಕಾಣೆಯಾಗುವುದನ್ನು ಗಮನಿಸಿದರೆ ನಮಗೆ ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಅನುಮಾನ ಬಂದಿತು.


​ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 75% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಹೈವ್‌ ಮಾಡರೇಶನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು 99.7 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ಚಿಕ್ಕಮಗಳೂರಿನಲ್ಲಿ ಹಾಸ್ಪಿಟಲ್‌ನಲ್ಲಿ ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ ಎಂದು ಎಐ ವಿಡಿಯೋ ಹಂಚಿಕೆ​
Claimed By :  Social Media Users
Fact Check :  Unknown
Tags:    

Similar News