ಫ್ಯಾಕ್ಟ್‌ಚೆಕ್: ಸರ್ಕಾರವು 104 ಸಹಾಯವಾಣಿ ಸಂಖ್ಯೆಯೊಂದಿಗೆ 'ಬ್ಲಡ್ ಆನ್ ಕಾಲ್' ಸೇವೆಯನ್ನು ಪ್ರಾರಂಭಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೆ
ಸರ್ಕಾರವು 104 ಸಹಾಯವಾಣಿ ಸಂಖ್ಯೆಯೊಂದಿಗೆ 'ಬ್ಲಡ್ ಆನ್ ಕಾಲ್' ಸೇವೆಯನ್ನು ಪ್ರಾರಂಭಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರತದಲ್ಲಿ ರಕ್ತದ ಅವಶ್ಯಕತೆಗಾಗಿ ಸರ್ಕಾರವು 104 ಸಹಾಯವಾಣಿ ಸಂಖ್ಯೆಯೊಂದಿಗೆ ಹೊಸ ʼಬ್ಲಡ್ ಆನ್ ಕಾಲ್ʼ ಸೇವೆಯನ್ನು ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.
ಅಕ್ಟೋಬರ್ 20, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಕೆಲವು ವಾಟ್ಸಪ್ ಗ್ರೂಪ್‌ನಲ್ಲಿ ಹಂಚಿಕೊಂಡಿರುವ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿರುವುದನ್ನು ಕಂಡುಬಂದಿದೆ. ಈ ಸಂದೇಶದಲ್ಲಿ ʼಸರ್ಕಾರದ ಹೊಸ ಯೋಜನೆ. ಇಂದಿನಿಂದ ಭಾರತದಲ್ಲಿ ರಕ್ತದ ಅವಶ್ಯಕತೆಗಳಿಗಾಗಿ "104" ಎಂಬ ವಿಶೇಷ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಈ ಸೇವೆಯ ಹೆಸರನ್ನು "Blood_On_Call" ಎಂದು ಕರೆಯುತ್ತಾರೆ. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಲೋಮೀಟರ್ ವ್ಯಾಪ್ತಿಯೊಳಗೆ, ನಾಲ್ಕು ಗಂಟೆಗಳ ಒಳಗೆ ರಕ್ತವನ್ನು ತಲುಪಿಸಲಾಗುತ್ತದೆ. ಒಂದು ಬಾಟಲಿಗೆ ₹450/- ಮತ್ತು ಸಾರಿಗೆ ಶುಲ್ಕವಾಗಿ ₹100/- ವಿಧಿಸಲಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸ್ನೇಹಿತರು, ಬಂಧುಗಳು ಮತ್ತು ಗುಂಪುಗಳಲ್ಲಿ ಹಂಚಿಕೊಳ್ಳಿ. ಗಮನಿಸಿ ಈ ಸೌಲಭ್ಯ ಅನೇಕ ಜೀವಗಳನ್ನು ಉಳಿಸಬಹುದುʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 17, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಸರ್ಕಾರದ ಹೊಸ ಯೋಜನೆ. ಇಂದಿನಿಂದ, "104" ಭಾರತದಲ್ಲಿ ರಕ್ತದ ಅಗತ್ಯಗಳಿಗಾಗಿ ವಿಶೇಷ ಸಂಖ್ಯೆಯಾಗಲಿದೆ. "ರಕ್ತ_ಆನ್_ಕಾಲ್" ಎಂಬುದು ಸೇವೆಯ ಹೆಸರು. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಮೀ ವ್ಯಾಪ್ತಿಯಲ್ಲಿ, ನಾಲ್ಕು ಗಂಟೆಗಳ ಒಳಗೆ, ರಕ್ತವನ್ನು ತಲುಪಿಸಲಾಗುತ್ತದೆ. ಒಂದು ಬಾಟಲಿಗೆ ರೂ. 450/- ಮತ್ತು ಸಾರಿಗೆಗೆ ರೂ. 100/- ದಯವಿಟ್ಟು ಈ ಸಂದೇಶವನ್ನು ನೀವು ಸಂಪರ್ಕಿಸಿದ ಇತರ ಸ್ನೇಹಿತರು, ಸಂಬಂಧಿಕರು ಮತ್ತು ಗುಂಪುಗಳಿಗೆ ರವಾನಿಸಿ. ಗಮನಿಸಿ ಈ ಸೌಲಭ್ಯವು ಅನೇಕ ಜೀವಗಳನ್ನು ಉಳಿಸುತ್ತದೆʼ ಎಂದು ಬರೆದು ಹಂಚಿಕೊಂಡಿರುವುದನ್ನು ಕಾಣಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 16, 2025 ಫೇಸ್‌ಬುಕ್ ಖಾತೆದಾರರೊಬ್ಬರು ʼಸರ್ಕಾರದ ಹೊಸ ಯೋಜನೆ. ಇಂದಿನಿಂದ ಭಾರತದಲ್ಲಿ ರಕ್ತದ ಅವಶ್ಯಕತೆಗಳಿಗಾಗಿ "104" ಎಂಬ ವಿಶೇಷ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಈ ಸೇವೆಯ ಹೆಸರನ್ನು "Blood_On_Call" ಎಂದು ಕರೆಯುತ್ತಾರೆ. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಲೋಮೀಟರ್ ವ್ಯಾಪ್ತಿಯೊಳಗೆ, ನಾಲ್ಕು ಗಂಟೆಗಳ ಒಳಗೆ ರಕ್ತವನ್ನು ತಲುಪಿಸಲಾಗುತ್ತದೆ. ಒಂದು ಬಾಟಲಿಗೆ ₹450/- ಮತ್ತು ಸಾರಿಗೆ ಶುಲ್ಕವಾಗಿ ₹100/- ವಿಧಿಸಲಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸ್ನೇಹಿತರು, ಬಂಧುಗಳು ಮತ್ತು ಗುಂಪುಗಳಲ್ಲಿ ಹಂಚಿಕೊಳ್ಳಿ. ಗಮನಿಸಿ — ಈ ಸೌಲಭ್ಯ ಅನೇಕ ಜೀವಗಳನ್ನು ಉಳಿಸಬಹುದು. #bloodsaveslivesʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಮತ್ತಷ್ಟು ವೈರಲ್ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಪೊಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ರಕ್ತದ ಅವಶ್ಯಕತೆಗೆ ಇಂತಹ ಯಾವುದೇ ಹೆಲ್ಪ್ ಲೈನ್ ಚಾಲ್ತಿಯಲ್ಲಿ ಇಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ನಾವು ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದಾಗ, 104 ಕರೆ ಮಾಡಿದರೆ ರಕ್ತ ತಲುಪಿಸುವ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ನಮಗೆ ಸಿಗಲಿಲ್ಲ. ಕರ್ನಾಟಕ ರಾಜ್ಯಗಳಲ್ಲಿ ಸರ್ಕಾರದಿಂದ ಯಾವುದೇ ಪ್ರಕಟಣೆಗಳಿಲ್ಲ ಎಂದು ನಾವು ಖಚಿತ ಪಡಿಸಿಕೊಂಡಿದ್ದೇವೆ.
ಜನವರಿ 7, 2014 ರ ʼಟೈಮ್ಸ್ ಆಫ್ ಇಂಡಿಯಾʼ ವೆಬ್‌ಸೈಟ್‌ನಲ್ಲಿ ʼNow, dial 104 to get blood at doorstepʼ ಎಂಬ ಶೀರ್ಷಿಕೆಯೊಂದಿಗಿರುವ ವರದಿಯೊಂದು ಕಂಡುಬಂದಿದೆ. ವರದಿಯಲ್ಲಿ ʼಮಹಾರಾಷ್ಟ್ರ ಸರ್ಕಾರವು ಮಂಗಳವಾರ ರಾಜ್ಯಾದ್ಯಂತ 'ಜೀವನ್ ಅಮೃತ್ ಸೇವಾ' ಅಥವಾ 'ಬ್ಲಡ್-ಆನ್-ಕಾಲ್' ಎಂಬ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ರೋಗಿಗಳಿಗೆ ಅಗತ್ಯವಿರುವ ರಕ್ತವು ಈಗ ಒಂದು ಫೋನ್ ಕರೆಯಷ್ಟು ದೂರದಲ್ಲಿದೆ.
ಈ ಉದ್ದೇಶಕ್ಕಾಗಿ ಪುಣೆಯ ಔಂದ್ ಸಿವಿಲ್ ಆಸ್ಪತ್ರೆಯಲ್ಲಿ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ. ಜನರು ತಮ್ಮ ಅವಶ್ಯಕತೆಗಳೊಂದಿಗೆ ಕಾಲ್ ಸೆಂಟರ್ ಅನ್ನು ಸಂಪರ್ಕಿಸಲು 104 ಅನ್ನು ಡಯಲ್ ಮಾಡಬಹುದು ಮತ್ತು ಮಾಹಿತಿಯನ್ನು ಆಯಾ ಜಿಲ್ಲಾ ರಕ್ತ ನಿಧಿಗಳಿಗೆ ರವಾನಿಸಲಾಗುತ್ತದೆʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು
ಇನ್ನು ಏಪ್ರಿಲ್ 8, 2022ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್‌ಸೈಟ್‌ನಲ್ಲಿ ʼMaharashtra discontinues 'financially unviable' blood-on-call serviceʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಮಹಾರಾಷ್ಟ್ರದಲ್ಲಿ ಟೋಲ್-ಫ್ರೀ ಸಂಖ್ಯೆ ವರ್ಗಾವಣೆ ಮಂಡಳಿಯ (SBTC) 104 ನಲ್ಲಿ ಲಭ್ಯವಿದ್ದ ಬ್ಲಡ್-ಆನ್-ಕಾಲ್ ಸೇವೆಯನ್ನು ಏಪ್ರಿಲ್ 1 ರಿಂದ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ರಾಜ್ಯ ರಕ್ತ ಸಹಾಯಕ ನಿರ್ದೇಶಕ ಡಾ. ಅರುಣ್ ಥೋರಟ್ ಗುರುವಾರ ಈ ಸೇವೆಯು "ಆರ್ಥಿಕವಾಗಿ ಲಾಭದಾಯಕವಲ್ಲದ" ಕಾರಣ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. "ಎಲ್ಲಾ ಸಾಧಕ-ಬಾಧಕಗಳನ್ನು ತೂಗಿದ ನಂತರ, ಸಾರ್ವಜನಿಕ ಆರೋಗ್ಯ ಇಲಾಖೆಯು ಯೋಜನೆಯನ್ನು ಸ್ಥಗಿತಗೊಳಿಸುವ ನೀತಿ ನಿರ್ಧಾರವನ್ನು ತೆಗೆದುಕೊಂಡಿತು" ಎಂದು ಅವರು ಹೇಳಿದರು. ಸೇವೆಯ ಮೂಲಕ ಪ್ರತಿ ಚೀಲ ರಕ್ತದ ವೆಚ್ಚ ನಾಟಕೀಯವಾಗಿ ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯು ಅತ್ಯಂತ ಕಳಪೆ ಪ್ರತಿಕ್ರಿಯೆಯನ್ನು ಹೊಂದಿದ್ದ ಜಿಲ್ಲೆಗಳಲ್ಲಿ, ಒಂದು ಚೀಲ ರಕ್ತದ ಆನ್-ಕಾಲ್ ಪೂರೈಕೆಗೆ ಗಲುವ ವೆಚ್ಚವು ಸಿಬ್ಬಂದಿ ವೇತನ ಮತ್ತು ಒಳಗೊಂಡಿರುವ GO ಗೆ ನೀಡಲಾದ ನಿಗದಿತ ಗೌರವಧನವನ್ನು ಪರಿಗಣಿಸಿ ಕೆಲವು ಲಕ್ಷ ರೂಪಾಯಿಗಳಿಗೆ ಏರಿತು. ಸೇವೆಗಾಗಿ ಪಡೆಯುವವರ ಸಂಖ್ಯೆಯನ್ನು ಲೆಕ್ಕಿಸದೆ ಸಿಬ್ಬಂದಿ ವೇತನ ಮತ್ತು ಗೌರವಧನವು ಏಕರೂಪವಾಗಿ ಉಳಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆʼ ಎಂದು ವರದಿಯಾಗಿದೆ.
ಹುಡುಕಾಟದ ವೇಳೆ, ನವೆಂಬರ್ 5, 2024 ರಂದು ಪಿಐಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ʼವೀಡಿಯೊವನ್ನು ಪೋಸ್ಟ್ ಮಾಡಿದೆ. ಅದು ಅವುಗಳನ್ನು ದಾರಿತಪ್ಪಿಸುವಂತಿದೆ ಎಂದು ಹೇಳಿದೆ. ಸರ್ಕಾರವು ಅಂತಹ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಈ ಹಿಂದೆ ಕೂಡ ಇದೇರೀತಿಯ ಹೇಳಿಕೆ ಬೇರೆ ರಾಜ್ಯಗಳಲ್ಲಿ ವೈರಲ್ ಆಗಿತ್ತು ಎಂಬುದು ಕಂಡುಬಂದಿದೆ.
ಕರ್ನಾಟಕದಲ್ಲಿ 104 ಎಂಬ ಹೆಲ್ಪ್ ಲೈನ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದ್ದು, ಆರೋಗ್ಯ ಸೇವೆಗಳಿಗೆ ಮೀಸಲಾಗಿರಿಸಿದೆ. ಕೋವಿಡ್ ಸಂದರ್ಭದಲ್ಲಿ ಕೋವಿಡ್-19 ರಾಜ್ಯ ನಿಯಂತ್ರಣ ಕೊಠಡಿಯ ಸಂಖ್ಯೆಯಾಗಿ ಇದು ಕಾರ್ಯ ನಿರ್ವಹಣೆಯಲ್ಲಿತ್ತು. ಈ ಮಾಹಿತಿಯು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣದ ಸಹಾಯವಾಣಿ ಸಂಪರ್ಕ ವಿಭಾಗದಲ್ಲಿದೆ. ನಾವು 104ಗೆ ಕರೆ ಮಾಡಿ ನೋಡಿದೆವು. ಆದರೆ, ಈ ನಂಬರ್‌ಗೆ ಕರೆ ಕನೆಕ್ಟ್ ಆಗದೇ ಇರುವುದು ನಮಗೆ ತಿಳಿಯಿತು.
ಇದರಿಂದ ಸಾಭೀತಾಗಿದ್ದೇನೆಂದರೆ, ರಾಜ್ಯದಲ್ಲಿ ರಕ್ತದ ಅವಶ್ಯಕತೆಗೆ 104 ಹೆಲ್ಪ್ ಲೈನ್ಗೆ ಕರೆ ಮಾಡಬಹುದು ಎಂದು ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ರಕ್ತದ ಅವಶ್ಯಕತೆಗೆ ಇಂತಹ ಯಾವುದೇ ಹೆಲ್ಪ್ ಲೈನ್ ಚಾಲ್ತಿಯಲ್ಲಿ ಇಲ್ಲ.