ಫ್ಯಾಕ್ಟ್‌ಚೆಕ್: 2025ರ ಅಯೋಧ್ಯೆಯ ದೀಪೋತ್ಸವದ ಚಿತ್ರ ಎಂದು ಎಐ ಚಿತ್ರ ಹಂಚಿಕೆ
2025ರ ಅಯೋಧ್ಯೆಯ ದೀಪೋತ್ಸವದ ಚಿತ್ರ ಎಂದು ಎಐ ಚಿತ್ರ ಹಂಚಿಕೆ
ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯು ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ಮಿಂಚಿತು. 2025 ರ ದೀಪೋತ್ಸವದ ಸಂದರ್ಭದಲ್ಲಿ, ಸರಾಯು ಘಾಟ್‌ನಲ್ಲಿ ನಂಬಿಕೆ ಮತ್ತು ಬೆಳಕಿನ ಸಂಗಮವು ಕಂಡುಬಂದಿತು. 26 ಲಕ್ಷಕ್ಕೂ ಹೆಚ್ಚು ದೀಪಗಳು ಸರಯು ನದಿಯ ಘಾಟ್‌ಗಳನ್ನು ಬೆಳಗಿಸುವುದರೊಂದಿಗೆ 2,000 ಕ್ಕೂ ಹೆಚ್ಚು ಜನರು ಒಟ್ಟಾಗಿ ಆರತಿ ಮಾಡುವ ಮೂಲಕ ಅಪೂರ್ಣ ಕ್ಷಣಕ್ಕೆ ಸಾಕ್ಷಿಯಾಯಿತು. ದೀಪಾವಳಿಯ ಸಂದರ್ಭವಾಗಿ ಅಯೋಧ್ಯೆಯಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಜನರು ದೀಪಗಳನ್ನು ಬೆಳಗಿಸಿದ್ದಕ್ಕಾಗಿ ಮತ್ತು 26,17,215 ಎಣ್ಣೆ ದೀಪಗಳ ಭವ್ಯ ಪ್ರದರ್ಶನಕ್ಕಾಗಿ ಅಯೋಧ್ಯೆ ವಿಶ್ವ ದಾಖಲೆಯಲ್ಲಿ ದಾಖಲೆ ರಚಿತವಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಎರಡು ಹೊಸ ಗಿನ್ನೆಸ್ ವಿಶ್ವ ದಾಖಲೆಗಳಿಗೆ ಪ್ರಮಾಣಪತ್ರಗಳನ್ನು ಪಡೆದರು.
ಇದರ ನಡುವೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶಿತ ನಗರದೃಶ್ಯವನ್ನು ತೋರಿಸುವ ಅದ್ಭುತವಾದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಅಯೋಧ್ಯೆಯ ದೀಪೋತ್ಸವ ಆಚರಣೆಯ ಸಮಯದಲ್ಲಿ ಕ್ಲಿಕ್ ಮಾಡಿರುವಂತಹ ಚಿತ್ರ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ 21, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ಚಿತ್ರವನ್ನು ಹಂಚಿಕೊಂಡು ʼ26 ಲಕ್ಷ ಹಣತೆಗಳ ದೀಪಗಳು ಒಮ್ಮೆಲೆ ಬೆಳಗಿದಾಗ ಅಯೋದ್ಯೆಯ ವೈಭವ ಈ ರೀತಿಯಾಗಿರುತ್ತೆ. ವಿಶ್ವದಾಖಲೆ ಬರೆದ ಅಯೋಧ್ಯಾ ದೀಪೋತ್ಸವ. 26 ಲಕ್ಷ ಹಣತೆಗಳೊಂದಿಗೆ ಬೆಳಗಿದ ರಾಮನಗರಿ. ಶ್ರೀ ರಾಮನ ಕಾಲದ ಅಯೋಧ್ಯೆ ಹೀಗೆ ಇತ್ತೇನೊʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ಕಾಣಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 21, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಅಯೋಧ್ಯದ್ದು ಎಂದು ಹೇಳುವ ವೈರಲ್ ಚಿತ್ರವನ್ನು ಹಂಚಿಕೊಂಡು ʼNot AI-generated, this was Banaras Ghat last night. Absolutely divineʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼAI-ರಚಿತವಲ್ಲ, ಇದು ನಿನ್ನೆ ರಾತ್ರಿ ಬನಾರಸ್ ಘಾಟ್ ಆಗಿತ್ತು. ಸಂಪೂರ್ಣವಾಗಿ ದೈವಿಕʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 21, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ʼThe most beautiful thing you will ever see this Diwali. Jai Shree Ramʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ದೀಪಾವಳಿಯಲ್ಲಿ ನೀವು ನೋಡುವ ಅತ್ಯಂತ ಸುಂದರವಾದ ನೋಟವಿದು. ಜೈ ಶ್ರೀ ರಾಮ್ʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 21, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ʼThe Ayodhya Deepotsav this year is the stuff of legend. How pleased our ancestors must be tonight! Jai Shri Ram! ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಈ ವರ್ಷದ ಅಯೋಧ್ಯಾ ದೀಪೋತ್ಸವವು ದಂತಕಥೆಯಾಗಿದೆ. ನಮ್ಮ ಪೂರ್ವಜರು ಇಂದು ರಾತ್ರಿ ಎಷ್ಟು ಸಂತೋಷಪಟ್ಟಿರಬೇಕು. ಜೈ ಶ್ರೀ ರಾಮ್ʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 20, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡು ʼMesmerizing Ayodhya!!!ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 20, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡು ʼAyodhya Deepotsavʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು.
ಅಕ್ಟೋಬರ್ 20, 2025ರಂದು ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ʼIn Pics: Ayodhya lights up on Diwali-eve, makes history with Guinness recordsʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ದೀಪಾವಳಿ ಹಬ್ಬದ ಆಚರಣೆಯ ಭಾಗವಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಯೋಧ್ಯೆಯ ರಾಮ ಮಂದಿರ ಅಲಂಕಾರಿಕ ದೀಪಗಳಿಂದ ಬೆಳಗುತ್ತಿದೆ. ದೀಪಾವಳಿಯ ಮುನ್ನಾದಿನ ಅಯೋಧ್ಯಾ ನಗರವು ಬೆಳಗುತ್ತದೆ. ದೀಪಾವಳಿಯ ಮುನ್ನಾದಿನದಂದು ದೀಪೋತ್ಸವ ಆಚರಣೆಯ ಸಮಯದಲ್ಲಿ ಪಟಾಕಿಗಳು ಅಯೋಧ್ಯೆಯನ್ನು ಬೆಳಗಿಸುತ್ತವೆ. ದೀಪಾವಳಿಯ ಮುನ್ನಾದಿನದ ದೀಪೋತ್ಸವ ಆಚರಣೆಯ ಸಂದರ್ಭದಲ್ಲಿ ಸರಯು ನದಿಯ ಉದ್ದಕ್ಕೂ ಸುಮಾರು 2.61 ಮಿಲಿಯನ್ ಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತದೆ. ಭಾನುವಾರ ದೀಪಾವಳಿ ಹಬ್ಬದ ಮುನ್ನಾದಿನದಂದು ಸರಯು ನದಿಯ ದಡದಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಜನಸಮೂಹ ನೆರೆದಿತ್ತುʼ ಎಂದು ಫೋಟೋ ಗ್ಯಾಲರಿಯನ್ನು ಪ್ರಕಟಿಸಿದೆ
ಅಕ್ಟೋಬರ್ 20, 2025ರಂದು ʼಬಿಬಿಸಿʼ ವೆಬ್‌ಸೈಟ್‌ನಲ್ಲಿ ʼದೀಪಾವಳಿ ಹಬ್ಬದಂದು ಭಾರತೀಯ ಪಟ್ಟಣದಲ್ಲಿ ಲಕ್ಷಾಂತರ ದೀಪಗಳು ಬೆಳಗಿದ್ದು, ಹೊಸ ವಿಶ್ವ ದಾಖಲೆ ನಿರ್ಮಿಸಲಾಗಿದೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಹಿಂದೂಗಳ ದೀಪಗಳ ಹಬ್ಬವಾದ ದೀಪಾವಳಿಗೆ ಮುನ್ನ ಭಾನುವಾರ ಉತ್ತರ ಭಾರತದ ದೇವಾಲಯ ಪಟ್ಟಣವಾದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದಾಖಲೆಯ 2.6 ಮಿಲಿಯನ್ ದೀಪಗಳನ್ನು ಬೆಳಗಿಸಲಾಯಿತು. 14 ವರ್ಷಗಳ ವನವಾಸದ ನಂತರ ಪೂಜ್ಯ ದೇವರು ರಾಮನು ತನ್ನ ಜನ್ಮಸ್ಥಳಕ್ಕೆ ಹಿಂದಿರುಗಿದ್ದನ್ನು ಆಚರಿಸಲು, ಸರಯು ನದಿಯ ದಡದಲ್ಲಿ ಸಾವಿರಾರು ಸ್ವಯಂಸೇವಕರು ಎಣ್ಣೆ ದೀಪಗಳನ್ನು ಬೆಳಗಿಸಿದರು. ಈ ಪ್ರದರ್ಶನವು "ಅತಿದೊಡ್ಡ ಎಣ್ಣೆ ದೀಪಗಳ ಪ್ರದರ್ಶನ"ಕ್ಕಾಗಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿತು, ಇದು ಕಳೆದ ವರ್ಷ ಅಯೋಧ್ಯೆಯಲ್ಲಿ ಪ್ರದರ್ಶಿಸಲಾದ 2.51 ಮಿಲಿಯನ್ ಅನ್ನು ಮೀರಿದೆʼ ಎಂಬ ವರದಿ ಮಾಡಿರುವುದನ್ನು ನೋಡಬಹುದು.
ಅಕ್ಟೋಬರ್ 21, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCheck out this stunning AI-generated Diwali image that went viral. It beautifully symbolizes Hindu cultural endurance, sparking conversations around tradition, pollution critiques, and the incredible 2.6 million diyas lit in Ayodhya" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಎಕಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವೈರಲ್ ಆಗಿರುವ ಈ ಅದ್ಭುತ ಎಐ ರಚಿತ ದೀಪಾವಳಿ ಚಿತ್ರವನ್ನು ಪರಿಶೀಲಿಸಿ!ಇದು ಹಿಂದೂ ಸಾಂಸ್ಕೃತಿಕ ಸಹಿಷ್ಣುತೆಯನ್ನು ಸುಂದರವಾಗಿ ಸಂಕೇತಿಸುತ್ತದೆ, ಸಂಪ್ರದಾಯದ ಸುತ್ತ ಸಂಭಾಷಣೆಗಳನ್ನು ಹುಟ್ಟುಹಾಕುತ್ತದೆ, ಮಾಲಿನ್ಯ ವಿಮರ್ಶೆಗಳು ಮತ್ತು ಅಯೋಧ್ಯೆಯಲ್ಲಿ ಬೆಳಗಿದ ನಂಬಲಾಗದ 2.6 ಮಿಲಿಯನ್ ದೀಪಗಳು!ʼ ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು.
ಅಕ್ಟೋಬರ್ 20, 2025 ರಂದು @WallzByAI ಎಂಬ ಖಾತೆದಾರ, ಎಐ ಕಲಾವಿದ, ಈ ಫೋಟೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಈತನ ಖಾತೆಯಲ್ಲಿ ಎಐಯಿಂದ ರಚಿಸಿದ ಅನೇಕ ದೇವರ ಫೋಟೋಗಳಿವೆ.
ನಾವು, ವೈರಲ್ ಪೋಸ್ಟ್‌ನಲ್ಲಿರುವ ಚಿತ್ರವನ್ನು ಎಚ್ಚರಿಕೆಯಿಂದ ಗಮನಿಸಿದಾಗ ಇದರಲ್ಲಿ ಕುಶಲತೆಯಿಂದ ಮಾಡಲ್ಪಟ್ಟಿರಬಹುದು ಅಥವಾ ಎಐ ರಚಿತವಾಗಿರಬಹುದು ಎಂದು ಸುಳಿವು ನೀಡಿತು. ಉದಾಹರಣೆಗೆ, ಹೆಚ್ಚುವರಿ ಹೊಳಪು ವಿನ್ಯಾಸ ಮತ್ತು ರೋಡ್ನ ತುದಿ ನೈಜ್ಯತೆಗೆ ದೂರವಾಗಿತ್ತು. ಇದರಿಂದ ಸೂಚನೆಯನ್ನು ತೆಗೆದುಕೊಂಡು ನಾವು ಎಐ ಪತ್ತೆ ಸಾಧನದಲ್ಲಿ ಪರಿಶೀಲಿಸಿದ್ದೇವೆ.
ನಾವು ಚಿತ್ರವನ್ನು ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 96.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಮತ್ತೋಂದು ಎಐ ಇಮೇಜ್ ಡಿಟೆಕ್ಷನ್ ಟೂಲ್ ಆದ ʼಸೈಟ್ ಇಂಜಿನ್ʼದಲ್ಲಿ ಪರಿಶೀಲಿಸಿದೆವು. ನಮಗೆ ಈ ಫೋಟೋವು 81% ಎಐ ರಚಿತವಾಗಿದೆ ಎಂದು ಕಂಡುಬಂದಿದೆ.
ವೈರಲ್ ಫೋಟೋವನ್ನು was it AI ಎಂಬ ಎಐ ಫೋಟೋಗಳನ್ನು ಪತ್ತೆ ಹಚ್ಚುವ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು ಎಐನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ
ಇದರಿಂದ ಸಾಭಿತಾಗಿರುವುದೇನೆಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ