ಫ್ಯಾಕ್ಟ್‌ಚೆಕ್‌: ಅಸ್ಸಾಂನರುವ ಮುಸ್ಲಿಮರು ಮೋದಿ ಸೋಲಿಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

ಅಸ್ಸಾಂನರುವ ಮುಸ್ಲಿಮರು ಮೋದಿ ಸೋಲಿಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

Update: 2025-12-15 02:30 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್‌ ಆಗುತ್ತಿರುವ ವಿಡಿಯೋವಿನಲ್ಲಿ ಮುಸ್ಲಿಮರು ಒಟ್ಟಾಗಿ ಸೇರಿರುವುದನ್ನು ನೋಡಬಹುದು, ವೇದಿಕೆಯ ಮೇಲೆ ಮತ್ತು ಹೊರಗೆ ಸಾವಿರಾರು ಜನರು "ಅಲ್ಲಾ-ಅಲ್ಲಾ" ಎಂದು ಜಪಿಸುವುದನ್ನು ಕಾಣಬಹುದು ಮತ್ತು ಕೇಳಬಹುದು. ಈ ವೀಡಿಯೊವನ್ನು ಹಂಚಿಕೊಂಡವರು ಅಸ್ಸಾಂನ ಮುಸ್ಲಿಮರು ಶರ್ಮಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಡಿಸಂಬರ್‌ 08, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಇದು ಬಾಂಗ್ಲಾದೇಶವಲ್ಲ - ಇದು ಅಸ್ಸಾಂನಿಂದ ಅಕ್ರಮ ವಲಸಿಗರು ಮೋದಿ ಜಿಯವರ ಸೋಲಿಗಾಗಿ ಪ್ರಾರ್ಥಿಸುತ್ತಿರುವ ದೃಶ್ಯಗಳಾಗಿವೆʼ ಎಂಬ ಶೀರ್ಷಿಕೆಯೊಂದಿಗೆ ಮುಸ್ಲೀಮರು ಪ್ರಾರ್ಥಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಡಿಸಂಬರ್‌ 08, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಇದು ಬಾಂಗ್ಲಾದೇಶವಲ್ಲ - ಇದು ಅಸ್ಸಾಂನಿಂದ ಅಕ್ರಮ ವಲಸಿಗರು ಮೋದಿ ಜಿಯವರ ಸೋಲಿಗಾಗಿ ಪ್ರಾರ್ಥಿಸುತ್ತಿರುವ ದೃಶ್ಯಗಳಾಗಿವೆ.ʼ ಎಂದು ಬರೆದಿರುವುದನ್ನು ನೋಡಬಹುದು.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಡಿಸಂಬರ್‌ 07, 2025 ಎಂಬ ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThis is not Bangladesh - these are scenes from Assam where illegals are praying for defeat of Modi ji and Himanta Da. We are literally sitting on a tickingʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇದು ಬಾಂಗ್ಲಾದೇಶವಲ್ಲ. ಇವು ಅಸ್ಸಾಂನ ದೃಶ್ಯಗಳು, ಅಲ್ಲಿ ಅಕ್ರಮಿಗಳು ಮೋದಿ ಜಿ ಮತ್ತು ಹಿಮಂತ ಬಿಸ್ವಾರವರ ಸೋಲಿಗಾಗಿ ಪ್ರಾರ್ಥಿಸುತ್ತಿದ್ದಾರೆ. ನಾವು ಅಕ್ಷರಶಃ ಟಿಕ್ ಟಿಕ್ ಮೇಲೆ ಕುಳಿತಿದ್ದೇವೆʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಡಿಸಂಬರ್‌ 07, 2025 ಎಂಬ ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThis is not Bangladesh. these are scenes from Assam where illegals are praying for defeat of Modi ji & Himanta Da. A large prayer gathering in rural Assam, crowded tents, imams leading chants of “Allah,” and hundreds of people joining in. The video is going viral and sparking conversations onlineʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇದು ಬಾಂಗ್ಲಾದೇಶವಲ್ಲ. ಅಸ್ಸಾಂನಲ್ಲಿ ಅಕ್ರಮ ವಲಸಿಗರು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾರ ಸೋಲಿಗಾಗಿ ಪ್ರಾರ್ಥಿಸುತ್ತಿರುವ ದೃಶ್ಯಗಳಿವು. ಗ್ರಾಮೀಣ ಅಸ್ಸಾಂನಲ್ಲಿ ನಡೆದ ದೊಡ್ಡ ಪ್ರಾರ್ಥನಾ ಸಭೆ, ಗುಂಪಾಗಿ ಕಟ್ಟಿರುವ ಟೆಂಟ್‌ಗಳು, “ಅಲ್ಲಾಹ್” ಎಂದು ಘೋಷಣೆಗಳನ್ನು ಮುನ್ನಡೆಸುತ್ತಿರುವ ಇಮಾಮ್‌ಗಳು ಮತ್ತು ನೂರಾರು ಜನರು ಇದರಲ್ಲಿ ಭಾಗವಹಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು" ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಮತ್ತಷ್ಟು ವೈರಲ್‌ ಆದ ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಅಸ್ಸಾಂನದ್ದಲ್ಲ. ಇದು ಬಾಂಗ್ಲಾದೇಶದ ಬಾರಿಸಲ್ ಜಿಲ್ಲೆಯ ಚಾರ್ಮೊನೈ ಮಹ್ಫಿಲ್ ಕಾರ್ಯಕ್ರಮದ್ದು.

ನಾವು ವೈರಲ್‌ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವೆಂಬರ್ 27, 2025ರಂದು ಫೇಸ್‌ಬುಕ್‌ ಖಾತೆಯೊಂದರಲ್ಲಿ ʼBy standing on the main stage in Allah's Zikir, today I washed the inside and became clean. With the pronunciation of "Allah", it seems that all the Kalimas stored on the soul are melting. Standing in the field of this light I realized that true peace is only in the name of God. Oh Allah, may I hold this feeling of purity in my heart of deathʼ ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯ ಪ್ರಕಾರ, ಮೌಲಾನಾ ಮುಹಮ್ಮದ್ ರಾಜ್ ಎಂಬ ವ್ಯಕ್ತಿ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು ಮತ್ತು ಸ್ವತಃ ಅವರೇ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು. ಆದರೆ, ಈ ವೀಡಿಯೊವನ್ನು ಯಾವಾಗ ಅಥವಾ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ.

Full View

ನಾವು ಆತನ ಫೇಸ್‌ಬುಕ್‌ನ್ನು ಮತ್ತಷ್ಟು ಪರಿಶೀಲಿಸಿದಾಗ ಅದೇ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ರೆಕಾರ್ಡ್ ಮಾಡಲಾದ ಮತ್ತೊಂದು ವೀಡಿಯೊವನ್ನು ಕಂಡುಕೊಂಡೆವು, ಆ ವಿಡಿಯೋವನ್ನು ನವೆಂಬರ್ 29, 2025ರಂದು ಹಂಚಿಕೊಳ್ಳಲಾಗಿತ್ತು. ಈ ವೀಡಿಯೊವಿನ ಶೀರ್ಷಿಕೆಯಲ್ಲಿ, ಮುಹಮ್ಮದ್ ರಾಜ್ ಭಾಗವಹಿಸುತ್ತಿರುವುದು "ಚಾರ್ಮೊನೈ ಮಹ್ಫಿಲ್"ನಿಂದ ಎಂದು ಹೇಳಿದ್ದಾರೆ.

Full View

ಇದನ್ನೇ ಸುಳಿವಾಗಿ ಬಳಸಿಕೊಂಡು ನಾವು ʼಚಾರ್ಮೊನೈ ಮಹ್ಫಿಲ್ʼ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಇದು ಚಾರ್ಮೊನೈ ಮಹ್ಫಿಲ್ ಬಾಂಗ್ಲಾದೇಶದ ಬಾರಿಸಾಲ್‌ನಲ್ಲಿರುವ ಚಾರ್ಮೊನೈ ದರ್ಬಾರ್ ಷರೀಫ್‌ನಲ್ಲಿ ನಡೆಯುವ ಧಾರ್ಮಿಕ ಸಭೆ ಎಂದು ನಮಗೆ ತಿಳಿದುಬಂದಿತು. ಈ ಕಾರ್ಯಕ್ರಮವನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುತ್ತದೆ, ಒಮ್ಮೆ ಬಂಗಾಳಿ ತಿಂಗಳ ಅಗ್ರಹಾರಾಯಣದಲ್ಲಿ ಮತ್ತು ಒಮ್ಮೆ ಫಾಲ್ಗುಣದಲ್ಲಿ. 2025 ರಲ್ಲಿ, ಫಾಲ್ಗುಣ ಮಹ್ಫಿಲ್ ಫೆಬ್ರವರಿ 19 ರಂದು ಪ್ರಾರಂಭವಾಯಿತು ಮತ್ತು ಇತ್ತೀಚಿನ ಅಗ್ರಹಾರಾಯಣ ಮಹ್ಫಿಲ್ 2025 ರ ನವೆಂಬರ್ 26 ರಿಂದ 28 ರವರೆಗೆ ನಡೆಯಿತುʼ ಎಂಬ ವರದಿಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಕಂಡುಕೊಂಡೆವು






ನವೆಂಬರ್ 27 ರಂದು ನಡೆದ ಚಾರ್ಮೊನೈ ಮಹ್ಫಿಲ್ 2025ರ ವೀಡಿಯೊ ಯೂಟ್ಯೂಬ್ ಚಾನೆಲ್ ಅಬು ಬಕರ್ ಮೀಡಿಯಾದಲ್ಲಿ ಲಭ್ಯವಿದೆ. ಈ ವೀಡಿಯೊದಲ್ಲಿನ 26:49 ನಿಮಿಷದಲ್ಲಿ ಕಾಣುವ ಫ್ರೇಮ್‌ ಮತ್ತು ವೈರಲ್ ವೀಡಿಯೊದಲ್ಲಿ ಕಾಣುವ ಹೋಲಿಕೆಯನ್ನು ಕೆಳಗೆ ನೋಡಬಹುದು.

Full View

ಚಾರ್ಮೊನೈ ಆವಾಜ್ ಮೆಹ್ಫಿಲ್ ಬಗ್ಗೆ ಇತ್ತೀಚಿನ ಸುದ್ದಿ ವರದಿಗಳನ್ನು ಪರಿಶೀಲಿಸುವಾಗ, ವೇದಿಕೆಯ ಅಲಂಕಾರಗಳು, ವಿಶೇಷವಾಗಿ ಕೂಟದ ನಡುವೆ ಇರಿಸಲಾಗಿರುವ ದೊಡ್ಡ ಗಡಿಯಾರದಂತಹ ರಚನೆಯು ವೈರಲ್ ವೀಡಿಯೊದಲ್ಲಿ ಕಂಡುಬರುವುದಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುವುದನ್ನು ನಾವು ಗಮನಿಸಿದ್ದೇವೆ. ಪಕ್ಕಪಕ್ಕದ ಹೋಲಿಕೆಯು ದೃಶ್ಯಗಳು ಅಸ್ಸಾಂ ಅಲ್ಲ, ಬಾಂಗ್ಲಾದೇಶದ ಚಾರ್ಮೊನೈ ಮಹ್ಫಿಲ್‌ನಲ್ಲಿರುವ ಸೆಟಪ್‌ನೊಂದಿಗೆ ಹೊಂದಿಕೆಯಾಗುತ್ತವೆ ಎಂದು ಸಾಭೀತಾಗುತ್ತದೆ.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಅಸ್ಸಾಂನದ್ದಲ್ಲ. ಇದು ಬಾಂಗ್ಲಾದೇಶದ ಬಾರಿಸಲ್ ಜಿಲ್ಲೆಯ ಚಾರ್ಮೊನೈ ಮಹ್ಫಿಲ್ ಕಾರ್ಯಕ್ರಮದ್ದು ಎಂದು ಸಾಭಿತಾಗಿದೆ.

Claim :  ಅಸ್ಸಾಂನರುವ ಮುಸ್ಲಿಮರು ಮೋದಿ ಸೋಲಿಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News