ಅಯೋಧ್ಯೆಯ ರಾಮಮಂದಿರದಲ್ಲಿ ಬಂದಂತಹ ಭಾರಿ ದೇಣಿಗೆಯನ್ನು ಟ್ರಸ್ಟ್‌ನ ವ್ಯವಸ್ತಾಪಕರು ಹೊರತೆಗೆಯುತ್ತಿರುವ ವಿಡಿಯೋವಿನ ಅಸಲಿಯತ್ತೇನು?

ಅಯೋಧ್ಯೆಯ ರಾಮಮಂದಿರದಲ್ಲಿ ಬಂದಂತಹ ಭಾರಿ ದೇಣಿಗೆಯನ್ನು ಟ್ರಸ್ಟ್‌ನ ವ್ಯವಸ್ತಾಪಕರು ಹೊರತೆಗೆಯುತ್ತಿರುವ ವಿಡಿಯೋವಿನ ಅಸಲಿಯತ್ತೇನು?

Update: 2024-02-05 13:00 GMT

ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಅಯೋಧ್ಯೆಯ ರಾಮಮಂದಿರದ ಜವಾಬ್ದಾರಿಗಳನ್ನು ತೆಗೆದುಕೊಂಡಿದೆ. ಅಯೋಧ್ಯೆಯ ರಾಮಮಂದಿರಕ್ಕೆ ಯಾರಾದರು ದೇಣಿಗೆ ನೀಡಬಹುದು. ಈಗಾಗಲೇ ವಿದೇಶದಿಂದ ಮತ್ತು ಕೆಲವು ಎನ್‌ಆರ್‌ಐಗಳಿಂದ ದೇವಸ್ಥಾನಕ್ಕೆ ಸಾಕಷ್ಟು ದೇಣಿಗೆ ಸಂಗ್ರಹವಾಗಿದೆ. ಅಯೋಧ್ಯೆಯ ರಾಮಮಂದಿರಕ್ಕೆ ಕಾಣಿಕೆ ನೀಡುವವರಿಗೆ ಸರ್ಕಾರದಿಂದ ವಿನಾಯಿತಿಯು ಸಹ ಸಿಗಲಿದೆ ಎಂದು ಟ್ರಸ್ಟ್‌ ವ್ಯವಸ್ಥಾಪಕರು ತಿಳಿಸಿದ್ದಾರೆ.

ದೇವಸ್ಥಾನದ ಉದ್ಘಾಟನೆಯ ನಂತರ ರಾಮಮಂದಿರಕ್ಕೆ ಭಕ್ತಾದಿಗಳಿಂದ ಸಾವಿರಾರು ಕೋಟಿ ದೇಣಿಗೆ ಸಂಗ್ರಹವಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿರುವ ಕಾಣಿಕೆಯ ಹುಂಡಿ ತುಂಬಿದೆ ಎಂದು ಕೆಲವು ಡಿಜಿಟಲ್‌ ಕ್ರಿಯೆಟರ್ಸ್‌, ಸಾಮಾಜಿಕ ಮಾಧ್ಯಮದ ಬಳಕೆದಾರರು ವಿಡಿಯೋವನ್ನು ತಮ್ಮ ಸಾಮಾಜಿಕ ಖಾತೆಗಳಲ್ಲಿ ಶೇರ್‌ ಮಾಡಿದ್ದಾರೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಮೊದಲ ದಿನ ಬಂದಂತಹ ಕಾಣಿಕೆಯಿಂದಾಗಿ, ಕಾಣಿಕೆಯ ಹುಂಡಿ ತುಂಬಿ ತುಳುಕುತ್ತಿದೆ ಎಂಬ ಶೀರ್ಷಿಕೆಯನ್ನೀಡಿ ಕೆಲವು ಮಾಧ್ಯಮ ಖಾತೆದಾರರು ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.

ನಾವು ಸಾಕಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಹುಡುಕಿದ ನಂತರ ನಮಗೆ ಯಾವುದೇ ನಿಜಾಂಶವಿಲ್ಲ ಎಂದು ಕಂಡುಕೊಂಡೆವು. ವೈರಲ್‌ ಆದ ವಿಡಿಯೋ ರಾಜಸ್ಥಾನದ ಚಿತ್ತೋರ್‌ಗಡ್‌ನಲ್ಲಿರುವ ಸ್ನ್ವೇಲಿಯಾ ಸೆಠ್‌ ಎಂಬ ಆಲಯಕ್ಕೆ ಸಂಬಂಧಿಸಿದ್ದು.

ಸ್ನ್ವೇಲಿಯಾ ಸೆಠ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೈರಲ್‌ ಆದ ಅಧಿಕೃತ ವಿಡಿಯೋವನ್ನು ಡಿಸಂಬರ್‌, 16,2023ರಂದು ಅಪ್‌ಲೋಡ್‌ ಮಾಡಲಾಗಿತ್ತು. ದೇವಸ್ಥಾನಕ್ಕೆ ಬಂದಂತಹ ದೇಣಿಗೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿತ್ತು. ಅಪ್‌ಲೋಡ್‌ ಆದಂತಹ ಪೋಸ್ಟ್‌ನ ಪ್ರಕಾರ ಡಿಸಂಬರ್‌ 11,2023ರಂದು ಭಗವಾನ್‌ ಸ್ನ್ವೇಲಿಯಾ ಸೆಠ್‌ ದೇವಸ್ಥಾನದ ಕಾಣಿಕೆಯ ಹುಂಡಿಯನ್ನು ತೆಗೆಯಲಾಗಿತ್ತು. ಕಾಣಿಕೆಯ ಹುಂಡಿಯಲ್ಲಿ ಬಂದಂತಹ ದೇಣಿಗೆಯಲ್ಲಿ 17 ಕೋಟಿ 19ಲಕ್ಷ ರೂ ದೇಣಿಗೆಯಾಗಿ ಸಂಗ್ರಹವಾಗಿತ್ತು. ಅಷ್ಟೇ ಅಲ್ಲ 552 ಗ್ರಾಂ ಚಿನ್ನದ ಆಭರಣಗಳು, 16 ಕೆಜಿ 670ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಇನ್ನು ದೇವಸ್ಥಾನದ ಟ್ರಸ್ಟ್‌ ಬಾಕ್ಸ್‌ನಲ್ಲಿ 107 ಗ್ರಾಂ ಬಂಗಾರ ಮತ್ತು 40ಕೆಜಿ 425ಗ್ರಾಂ ಬೆಳ್ಳಿ ಕಾಣಿಕೆಯಾಗಿ ಸಂಗ್ರಹವಾಗಿದೆ ಎಂದು ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

Full View

ಸ್ನ್ವೇಲಿಯಾ ಸೆಠ್‌ ದೇವಸ್ಥಾನದ ಪ್ರಧಾನ ಅರ್ಚಕರಾದ ನಿತಿನ್‌ ವೈಷ್ಣವ್‌ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿಜನವರಿ 16,2024ರಂದು ವಿಡಿಯೋವನ್ನು ಹಂಚಿಕೊಂಡಿದ್ದರು.

Full View

ಇತ್ತೀಚಿಗೆ ನಡೆದ ಪವಿತ್ರೋತ್ಸವದ ದಿನದಂದು ಅಯೋಧ್ಯೆಯ ರಾಮಮಂದಿರಕ್ಕೆ ಅಪಾರ ದೇಣಿಗೆ ಸಂಗ್ರಹವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ ವೈರಲ್‌ ಆದ ವಿಡಿಯೋ ಅಯೋಧ್ಯೆಯ ರಾಮಮಂದಿರದಲ್ಲ, ರಾಜಸ್ಥಾನಕ್ಕೆ ಸೇರಿದ ಸನ್ವಾಲಿಯಾ ಸೆಠ್‌ ದೇಗುಲದ್ದು.

ಹೀಗಾಗಿ ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಅಯೋಧ್ಯೆಯ ರಾಮಮಂದಿರದಲ್ಲ, ರಾಜಸ್ಥಾನದ ಸನ್ವಾಲಿಯಾ ಸೇಠಾ ದೇವಸ್ಥಾನಕ್ಕೆ ಸಂಬಂಧಿಸಿದ್ದು.

Claim :  Donation box of Ayodhya’s Ram Temple overflowing as temple trust gets huge funds on the inaugural day
Claimed By :  Social Media Users
Fact Check :  False
Tags:    

Similar News