ಫ್ಯಾಕ್ಟ್‌ ಚೆಕ್: ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂಬ ಮಾತು ಸುಳ್ಳು

ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂಬ ಮಾತು ಸುಳ್ಳು

Update: 2023-10-25 04:00 GMT

ಮಧ್ಯಪ್ರದೇಶದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಕಾಂಗ್ರೇಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂದು ಘೋಷಿಸಿದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಕ್ಟೋಬರ್‌ 15ರಂದು ಬರೆದಿರುವ ಪತ್ರದಲ್ಲಿರುವ ವಿಷಯವೇನೆಂದರೆ "ಮಾಜಿ ಮುಖ್ಯಮಂತ್ರಿ, ಕಾಂಗ್ರೇಸ್‌ ಪಕ್ಷದ ನಾಯಕನಾದ ನಾನು ಕಾಂಗ್ರೇಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇನ್ನು ಮುಂದೆ ಈ ಪಕ್ಷದಲ್ಲಿ ಯಾವುದೇ ರೀತಿಯ ಒಡನಾಟ ಇಟ್ಟುಕೊಳ್ಳುವುದಿಲ್ಲ ಹೀಗಾಗಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ" ಎಂದು ಲಿಖಿತ ರೂಪದಲ್ಲಿರುವ ಪತ್ರವೊಂದು ಹರಿದಾಡುತ್ತಿದೆ.

Full View


ಫ್ಯಾಕ್ಟ್‌ ಚೆಕ್

ಖುದ್ದು ದಿಗ್ವಿಜಯ್ ಸಿಂಗ್ ರಾಜೀನಾಮೆ ಕುರಿತು ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹರಿದಾಡುತ್ತಿರುವ ಸುದ್ದಿ ಸುಳ್ಳು ನಾನು ಯಾವುದೇ ರೀತಿಯ ರಾಜೀನಾಮೆಯ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ನೀಡಿಲ್ಲ ಎಂದು ಹೇಳಿದ್ದಾರೆ.

ದಿಗ್ವಿಜಯ ಸಿಂಗ್‌ ತನ್ನ X ಖಾತೆಯಲ್ಲಿ ಒಂದು ಪೋಸ್ಟನ್ನು ಹಂಚಿಕೊಂಡಿದ್ದಾರೆ." ಬಿಜೆಪಿ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುತ್ತಿದೆ, ನಾನು1971ರಲ್ಲಿ ಕಾಂಗ್ರೇಸ್‌ ಪಕ್ಷವನ್ನು ಸೇರಿದೆ ಯಾವುದೇ ಹುದ್ದೆಗಾಗಿ ಅಥವಾ ಯಾವುದೇ ಆಮೀಶಕ್ಕೊಳಗಾಗಿ ನಾನು ಪಕ್ಷ ಸೇರಿಲ್ಲ. ನನ್ನ ಕೊನೆಯ ದಿನದವರೆಗೂ ನಾನು ಈ ಪಕ್ಷಕ್ಕಾಗಿ ದುಡಿಯುತ್ತೇನೆ, ನನ್ನ ಸಿದ್ದಾಂತಗಳಿಗಾಗಿ ದುಡಿಯುತ್ತೇನೆ. ನನ್ನ ಕೊನೆಯುಸಿರು ಇರುವವರೆಗೂ ಕಾಂಗ್ರೇಸ್‌ ಪಕ್ಷದಲ್ಲೇ ಇರುತ್ತೇನೆ ಎಂದು ತಮ್ಮ X ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ಸತ್ಯಾಸತ್ಯತೆಯನ್ನು ತಿಳಿಸಿದ್ದಾರೆ

ಈ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ದ ಪೊಲೀಸ್‌ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.

ಕಾಂಗ್ರೇಸ್‌ ಪಕ್ಷವು ನಾಯಕ ದಿಗ್ವಿಜಯ ಸಿಂಗ್‌, ಬಿಜೆಪಿಯ ವಕ್ತಾರ ಹಿತೇಶ್‌ ವಾಜಪೇಯಿಯ ವಿರುದ್ದ ಆರೋಪ ಮಾಡಿದ್ದಾರೆ. ಬಿಜೆಪಿ ವಕ್ತಾರ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇವರ ವಿರುದ್ದ ಪ್ರಕರಣ ದಾಖಲಿಸಿ ಎಂದು ತಮ್ಮ ಟ್ವಿಟರ್‌ನಲ್ಲಿ ಮಧ್ಯ ಪ್ರದೇಶದ ಡಿಜಿಪಿಯವರನ್ನು ಮತ್ತು ಭಾರತೀಯ ಕಾಂಗ್ರೇಸ್‌ ಪಕ್ಷ ಮಧ್ಯ ಪ್ರದೇಶ್‌ನ್ನು ತಮ್ಮ ಟ್ವಿಟರ್‌ನಲ್ಲಿ ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ.

ದಾಖಲಾದ ಪ್ರಕರಣದಲ್ಲಿ "ದಿಗ್ವಿಜಯ ಸಿಂಗ್ ವರ್ಚಸ್ಸಿಗೆ ಕಳಂಕ ತರಬೇಕೆಂದು, ಬಿಜೆಪಿಯ ವಕ್ತಾರ ಡಾ.ಹೈಟೆಕ್ ವಾಜಪೇಯಿ ಟ್ವಿಟರ್‌ನಲ್ಲಿದ್ದ ಲೆಟರ್‌ ಹೆಡ್‌ನಲ್ಲಿರುವ ಸಹಿಯನ್ನು ನಕಲಿಸಿದ್ದಾರೆ" ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಸೈಬರ್‌ ಕ್ರೈಮ್‌ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ದ ಎಫ್ಐಆರ್ ದಾಖಲಿಸಿದೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಅಕ್ಟೋಬರ್ 16 ರಂದು ತಮ್ಮ ವರದಿಯಲ್ಲಿ ದಾಖಲಿಸಿದೆ.

ಅಕ್ಟೋಬರ್‌ 16ರಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಜೊತೆ ಮಾತನಾಡಿದ ದಿಗ್ವಿಜಯ ಸಿಂಗ್‌ "ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಅಚ್ಚುಮೆಚ್ಚಿನವನು ಅಂತ ಅನಿಸುತ್ತದೆ. ನನ್ನ ವಿರುದ್ಧ ಸುಳ್ಳು ಹೇಳಿಕೆಗಳು ಮತ್ತು ನನ್ನ ಹೆಸರಿನಲ್ಲಿ ನಕಲಿ ಪತ್ರಗಳನ್ನು ಸೃಷ್ಟಿಸಿ ನನಗೆ ಮಾನಹಾನಿ ಮಾಡಿದ್ದಾರೆ. ಇದೇ ಬಿಜೆಪಿಯವರಿಗೆ ಅಭ್ಯಾಸವಾಗಿ ಬಿಟ್ಟಿದೆ. ನನ್ನ ಸಂಸದ ಹಾಗೂ ಬೆಂಬಲಿಗರು ಪೊಲೀಸರಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ರೀತಿಯ ಕ್ರಮವನ್ನು ಬಿಜೆಪಿಯವರ ಮೇಲೆ ತೆಗೆದುಕೊಳ್ಳುತ್ತಿಲ್ಲ. ಪೊಲೀಸರು ಬಿಜೆಪಿಯವರಿಗಾಗಿ ಕೆಲಸ ಮಾಡುತ್ತಿದ್ದಾರೆಂದು ಕಾಣುತ್ತೆ. ನಾನು ಕಾನೂನಾತ್ಮಕವಾಗಿ ಹೋರಾಡುತ್ತೇನೆ" ಎಂದು ದಿಗ್ವಿಜಯ ಸಿಂಗ್‌ ಪಿಟಿಐಗೆ ಹೇಳಿದ್ದಾರೆ.

 ಈ ಮೇಲಿನ ಹೇಳಿಕೆಯಿಂದ ಸ್ಪಷ್ಟವಾಗಿದ್ದೇನೆಂದರೆ " ಕಾಂಗ್ರೇಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆಂದು" ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಸುಳ್ಳು. ಕಾಂಗ್ರೇಸ್‌ ನಾಯಕ ದಿಗ್ವಿಜಯ ಸಿಂಗ್‌ ಈ ರೀತಿಯ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪತ್ರ ನಕಲಿಯದ್ದು.

Claim :  Congress senior leader Digvijaya Singh did not resign from the Congress
Claimed By :  Social Media Users
Fact Check :  False
Tags:    

Similar News