ಫ್ಯಾಕ್ಟ್‌ಚೆಕ್‌: ಮೋದಿ ಪರ ಘೋಷಣೆ ಕೂಗಿದ್ದಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯೊಂದರಲ್ಲಿ ನೆರೆದಿದ್ದ ಪ್ರಜಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ

ಮೋದಿ ಪರ ಘೋಷಣೆ ಕೂಗಿದ್ದಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯೊಂದರಲ್ಲಿ ನೆರೆದಿದ್ದ ಪ್ರಜಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ

Update: 2024-01-06 14:30 GMT

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ್ದ ಜನರ ಮೇಲೆ ಕೋಗಾಡಿದ್ದಾರೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋದಲ್ಲಿ ಖರ್ಗೆ ಸಭೆಯೊಂದರಲ್ಲಿ "ಎಲ್ಲರೂ ಶಾಂತ ರೂಪದಲ್ಲಿ ವರ್ತಿಸಬೇಕು, ಯಾರಿಗೆ ಭಾಷಣ ಕೇಳಲು ಇಷ್ಟವಿಲ್ಲವೋ ಅವರು ಹೊರಹೊಗಬಹುದು. ನಿಮಗೆ ಕಾಂಗ್ರೆಸ್‌ ನಾಯಕ ಕಾಣುತ್ತಿಲ್ಲವಾ, ಬಾಯಿಗೆ ಬಂದಂತೆ ಮಾತಾನಾಡುತ್ತಿದ್ದೀರಲ್ಲವಾ. ಇಷ್ಟ ಇರುವವರು ಇರಿ ಇಲ್ಲವಾದರೆ ಹೊರಹೋಗಿ" ಎಂದು ಹೇಳಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಡಿಯೋವನ್ನು ಪೋಸ್ಟ್‌ ಮಾಡಿ ಮಲ್ಲಿಕಾರ್ಜುನ ಖರ್ಗೆಯವರು ಸಭೆಯೊಂದರಲ್ಲಿ ನೆರೆದಿದ್ದ ಪ್ರಜೆಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ ಎಂದು ಪೋಸ್ಟ್‌ ಮಾಡದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವನ್ನು ಎಡಿಟ್‌ ಮಾಡಲಾಗಿದೆ.

ಇಂಡಿಯಾ ಟುಡೆ, ಟೈಮ್ಸ್‌ ನೌ ಮತ್ತು ಆನಿ ನ್ಯೂಸ್‌ ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ವೈರಲ್‌ ಆದ ವಿಡಿಯೋವಿನ ಪೂರ್ತಿ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದರು. ಇತ್ತೀಚೆಗೆ ನಡೆದ ತೆಲಂಗಾಣ ಅಸೆಂಬ್ಲಿ ಚುನಾವಣೆ 2023ರಲ್ಲಿ ಚಿತ್ರೀಕರಿಸಲಾದ ವಿಡಿಯೋವದು. ಸೂಕ್ಮವಾಗಿ ವಿಡಿಯೋವನ್ನು ಗಮನಿಸಿ ನೋಡಿದರೂ ವಿಡಿಯೋದಲ್ಲಿ ಎಲ್ಲಿಯೋ "ಮೋದಿ ಪರ ಘೋಷಣೆಗಳು" ಕೇಳಿಬಂದಿಲ್ಲ. ವಿಡಿಯೋವಿನ್ನು ಬೇರೆ ಆಡಿಯೋದ ಜೊತೆಗೆ ಎಡಿಟ್‌ ಮಾಡಲಾಗಿದೆ.

Full View

ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಪಕ್ಷ ನೀಡಿರುವ ಭರವಸೆಗಳ ಕುರಿತು ಪಟ್ಟಿ ಮಾಡುವಾಗ ಅಲ್ಲಿ ನೆರೆದಿದ್ದ ಜನರು ಗೊಂದಲ ಉಂಟುಮಾಡುತ್ತಿದ್ದರು. ಹೀಗಾಗಿ ಖರ್ಗೆಯವರು ಎಲ್ಲರೂ ಶಾಂತರಾಗಿರಿ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಎಲ್ಲಿಯೂ "ಮೋದಿ ಪರವಾಗಿ ಅಧವಾ ಮೋದಿಯ ಬಗ್ಗೆ ಯಾವುದೇ ಪಠಣವೂ" ಖರ್ಗೆಯವರು ಮಾಡಿಲ್ಲ ಎಂದು ನ್ಯೂಸ್‌18 ಮತ್ತು ಇಂಡಿಯಾ ಟುಡೆ ವರದಿ ಮಾಡಲಾಗಿದೆ

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ತಮ್ಮ ಎಕ್ಸ್‌ ಖಾತೆಯಲ್ಲಿ "ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವರ ಪಕ್ಷದಲ್ಲೇ ಯಾವ ಗೌರವವಿಲ್ಲ, ಸಾರ್ವಜನಿಕ ಸಭೆಗಳಲ್ಲಿ ಅವರನ್ನು ಅವಮಾನಿಸುತ್ತಾರೆ" ಎಂದು ಬರೆದು ಪೋಸ್ಟ್‌ ಮಾಡಿದ್ದರು.

ವೈರಲ್‌ ಆದ ವಿಡಿಯೋವಿನಲ್ಲಿ ಮೋದಿ ಪರ ಬರುವ ಆಡಿಯೋವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುನಿಸಿಪಲ್‌ ಕೌನ್ಸಿಲ್‌ ಮೀಟಿಂಗ್‌ನಲ್ಲಿ ಯುವ ಜನರೊಂದಿಗೆ ಮಾತುಕಥೆ ನಡೆಸುವಾಗ ಅಲ್ಲಿ ನೆರೆದಿದ್ದ ಯುವಕರು ಹೇಳಿದ ಮಾತುಗಳಿವು.

Full View

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

Claim :  Congress President Mallikarjun Kharge lashed out at the gathering after being instigated by Modi chants.
Claimed By :  Social Media Users
Fact Check :  False
Tags:    

Similar News