ಫ್ಯಾಕ್ಟ್‌ಚೆಕ್‌: ತೆಲಂಗಾಣ ಚುನಾವಣೆಗೆ ಸಂಬಂಧಿಸಿದಂತೆ ಕಮ್ಮ ಸಮುದಾಯದವರಿಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಯಾವುದೇ ಪತ್ರ ಬರೆದಿಲ್ಲ

ತೆಲಂಗಾಣ ಚುನಾವಣೆಗೆ ಸಂಬಂಧಿಸಿದಂತೆ ಕಮ್ಮ ಸಮುದಾಯದವರಿಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಯಾವುದೇ ಪತ್ರ ಬರೆದಿಲ್ಲ

Update: 2023-11-17 06:59 GMT

CBN_FakeLettter

2014ರಲ್ಲಿ ಆಂಧ್ರ ಪ್ರದೇಶದಿಂದ ತೆಲಂಗಾಣ ವಿಭಜನೆಯಾದ ನಂತರ ತೆಲುಗು ದೇಶಂ ಪಕ್ಷ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಥಿಸದಿರಲು ತೆಲುಗು ದೇಶಂ ಪಾರ್ಟಿ ನಿರ್ಧರಿಸಿದೆ. ತೆಲಂಗಾಣ ರಚನೆಯಾದ ನಂತರ ತೆಲುಗು ದೇಶಂ ಪಕ್ಷ ಚುನಾವಣೆಯಲ್ಲಿ ಭಾಗವಹಿಸದೇ ಇರುವುದು ಇದೇ ಮೊದಲು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಮ್ಮ ಸಮುದಾಯದ ಬೆಂಬಲ ನೀಡುವಂತೆ ಕೋರಿ ಟಿಡಿಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬರೆದಿರುವಂತಹ ಪತ್ರವೊಂದು ಇದೀಗ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗಿದೆ.

"ಕಮ್ಮ ಸಮುದಾಯದ ಜನರಿಗೆ ಚಂದ್ರಬಾಬುರವರಿಂದ ಪತ್ರ" ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಈ ಪತ್ರ ಹರಿದಾಡುತ್ತಿದೆ.



Full View

ಫ್ಯಾಕ್ಟ್‌ಚೆಕ್‌

ಚಂದ್ರಬಾಬು ನಾಯ್ಡು ಅವರು ಕಮ್ಮ ಸಮುದಾಯಕ್ಕೆ ಯಾವುದೇ ಪತ್ರ ಬರೆದಿಲ್ಲ.

"ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಗನ್‌ ರೆಡ್ಡಿಗೆ ಚುನಾವಣೆಯ ಕುರಿತು ಎಷ್ಟು ಭಯವಿದೆಯೋ ಈ ಪತ್ರದಲ್ಲೇ ತಿಳಿಯುತ್ತಿದೆ. ಜಾತಿ ಅಭಿಮಾನ ತುಂಬಿರುವ ಜಗನ್ ಮೋಹನ್ ರೆಡ್ಡಿ ರಾಜಕೀಯದ ಉದ್ದೇಶಕ್ಕಾಗಿ ಅದೇ ಜಾತಿಯವರನ್ನು ಪ್ರಚೋದಿಸುತ್ತಿದ್ದಾರೆ. ಈ ಸುಳ್ಳರ ಮತ್ತು ನಕಲಿ ವ್ಯಕ್ತಿಗಳಮಾತನ್ನು ಯಾರು ನಂಬಬೇಡಿ" ಎಂದು ತೆಲುಗು ದೇಶಂ ಪಕ್ಷ ಹರಿದಾಡುತ್ತಿರುವ ಸುದ್ದಿಯನ್ನು ಖಂಡಿಸಿ ತಮ್ಮ X ಖಾತೆಯಲ್ಲಿ ಅಧಿಕೃತವಾಗಿ ಪೋಸ್ಟ್‌ನ್ನು ಮಾಡಿದೆ.

ತೆಲುಗು ಭಾಷೆಯಲ್ಲಿ ಪ್ರಕಟವಾದ ವರದಿಗಳ ಪ್ರಕಾರ , ತೆಲುಗು ದೇಶಂ ಪಕ್ಷದ ನಾಯಕರು ಹರಿದಾಡುತ್ತಿರುವ ನಕಲಿ ಪತ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಲ್ಲಿ ಮನವಿ ಮಾಡಿದ್ದರೆ. ಅಷ್ಟೇ ಅಲ್ಲ ಟಿಡಿಪಿ ವಕ್ತಾರರಾದ ಪ್ರೊಫೆಸರ್ ತಿರುನಗರಿ ಜ್ಯೋತ್ಸ್ನಾ ಹೈದರಾಬಾದ್‌ನಲ್ಲಿರುವ ಸೈಬರ್ ಕ್ರೈಂ ಡಿಸಿಪಿ ಕವಿತಾಗೆ ದೂರನ್ನು ನೀಡಿದ್ದಾರೆ.

ಹೀಗಾಗಿ ವೈರಲ್‌ ಆದ ಸುದ್ದಿ ಮತ್ತು ಪತ್ರದಲ್ಲಿರುವ ಅಂಶಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೇಸ್‌ ಪಕ್ಷಕ್ಕೆ ಬೆಂಬಲ ನೀಡುವಂತೆ ತೆಲುಗು ದೇಶಂ ಕಪ್ಷದ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಯಾವುದೇ ಪತ್ರವನ್ನು ಬರೆದಿಲ್ಲ.

Claim :  Chandrababu Naidu writes a letter to the Kamma community in Telangana to support the Congress party during the elections
Claimed By :  Social Media Users
Fact Check :  False
Tags:    

Similar News