ಭಾರತದಲ್ಲಿ ಮಾಟ ಮಂತ್ರ ಮಾಡಿದ ಪತ್ರವನ್ನು ನೀಡುತ್ತಿದ್ದಾರೆ ಎಂದು ಬಾಂಗ್ಲಾದೇಶದ ಸ್ಕ್ರಿಪ್ಟ್ಡ್‌ ವಿಡಿಯೋ ಹಂಚಿಕೆ

ಭಾರತದಲ್ಲಿ ಮಾಟ ಮಂತ್ರ ಮಾಡಿದ ಪತ್ರವನ್ನು ನೀಡುತ್ತಿದ್ದಾರೆ ಎಂದು ಬಾಂಗ್ಲಾದೇಶದ ಸ್ಕ್ರಿಪ್ಟ್ಡ್‌ ವಿಡಿಯೋ ಹಂಚಿಕೆ

Update: 2025-02-25 02:30 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ವಿಡಿಯೋವಿನಲ್ಲಿ ಒಬ್ಬ ವ್ಯಕ್ತಿ ಬೈಕ್‌ ಸವಾರನನ್ನು ಹಿಪ್ನೋಟೈಸ್‌ ಮಾಡಿ ದರೋಡೆ ಮಾಡುತ್ತಿದ್ದಾನೆ ʼಇದು ಭಾರತದ ಅತಿ ದೊಡ್ಡ ವಂಚನೆʼ ಎಂಬ ಶೀರ್ಷಿಕೆಯೊಂದಿಗೆ ಸಿಸಿಟಿವಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವು ಜನ ಈ ರೀತಿಯ ಪತ್ರವನ್ನು ನೀಡಿ ಓದಲು ಹೇಳಿದರೆ ಓದ ಬೇಡಿ. ಓದಿದರೆ, ನೀವು ಪತ್ರ ಕೊಟ್ಟವರ ಹಿಡಿತದಲ್ಲಿರುತ್ತೀರ ಆಗ ಆ ವ್ಯಕ್ತಿ ನಿಮ್ಮನ್ನು ದರೋಡೆ ಮಾಡುತ್ತಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ 0.53 ಸೆಕೆಂಡ್‌ಗಳನ್ನು ಒಳಗೊಂಡಿರುವ ಈ ವಿಡಿಯೋದಲ್ಲಿ ಕೂಡ ಬೈಕ್‌ನಲ್ಲಿ ವ್ಯಕ್ತಿಯೊಬ್ಬ ಕುಳಿತಿರುವುದು ಕಂಡು ಬಂದಿದೆ. ಆತನ ಬಳಿ ಮಾಸ್ಕ್‌ ಧರಿಸಿದ ವ್ಯಕ್ತಿಯೊಬ್ಬ ಬಂದು ಪತ್ರವನ್ನು ಆತನ ಕೈಗೆ ನೀಡುತ್ತಾನೆ. ಪತ್ರವನ್ನು ಓದಿದ ಬೈಕ್‌ ಸವಾರ ಹಣ ಹಾಗೂ ಬ್ಯಾಗಗ್‌ನ್ನು ಮಾಸ್ಕ್‌ ಧರಿಸಿದ ವ್ತಕ್ತಿಗೆ ನೀಡುತ್ತಾನೆ. ಬಳಿಕ ಮಾಸ್ಕ್‌ ಧರಿಸಿದ ವ್ಯಕ್ತಿ ಸ್ಥಳದಿಂದ ಹೊರಟೋಗುತ್ತಾನೆ. ಹೀಗಾಗಿ ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮದ ಬಳಕೆದಾರರು ಈ ವಿಡಿಯೋವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಫೆಬ್ರವರಿ 15, 2025ರಂದು ʼದಿ ರಿಯಾಕ್ಟ್‌ ಲೈಫ್‌ʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ ʼइंडिया का सबसे बड़ा फ्रॉड! |एक सेकंड में भाई को बस में कर के लूट लिया। ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತದ ಅತಿ ದೊಡ್ಡ ವಂಚನೆ! | ಒಂದೇ ಸೆಕೆಂಟ್‌ನಲ್ಲಿ ಬಸ್ಸಿನಲ್ಲಿ ದರೋಡೆ ಮಾಡಲಾಯಿತುʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.

Full View

ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಗೋವಿಂದ್‌ ದಾಸ್‌ ಎಂಬ ಯೂಟ್ಯೂಬ್‌ ಖಾತೆದಾರರೊಬ್ಬರು ʼIndia ka sabse froad schemeʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ಮತ್ತಷ್ಟು ವೈರಲ್‌ ಆದ ಸುದ್ದಿಯನ್ನು ನೀವಿಲ್ಲಿ , ಇಲ್ಲಿ, ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೇಳಿರುವ ಹಾಗೆ ಭಾರತದಲ್ಲಿ ಮಾಟ-ಮಂತ್ರ ಮಾಡಿದ ಪತ್ರವನ್ನು ಜನ ಸಾಮಾನ್ಯರಿಗೆ ಓದಲು ನೀಡಿ ದರೋಡೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹುಸಿ ಸುಳ್ಳು. ವಾಸ್ತವವಾಗಿ ಈ ವಿಡಿಯೋ ಬಾಂಗ್ಲಾದೇಶದ 'ಡಿಜಿಟಲ್ ಸೃಷ್ಟಿಕರ್ತ' 'ಜಿಮ್ ಅಹ್ಮದ್'ರ ಸ್ಕ್ರಿಪ್ಟ್‌ಡ್‌ ವಿಡಿಯೋ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ವಿಡಿಯೋವಿನಲ್ಲಿ ಕಾಣುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಕೆಲವು ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಿಗೆ ಕರೆದೊಯ್ಯಿತು. ಇದರಲ್ಲಿ ಕೆಲವು ವಿಡಿಯೋಗಳಲ್ಲಿ ʼದಿ ಜಿಮ್‌ ಅಹ್ಮದ್‌ʼ ಎಂಬ ವಾಟರ್‌ ಮಾರ್ಕ್‌ ಇರುವುದನ್ನು ನಾವು ಗಮನಿಸಿದೆವು.

Full View

ಈ ವಾಟರ್‌ ಮಾರ್ಕ್‌ನ್ನೇ ಸುಳಿವಾಗಿ ತೆಗೆದುಕೊಂಡು ನಾವು ಗೂಗಲ್‌ನಲ್ಲಿ ಕೀವರ್ಡ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫಕಿಬಾಜ್‌ ಕಾಮಿಡಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ವೈರಲ್‌ ಆದ ವಿಡಿಯೋವಿನ ಮೂಲ ಆವೃತ್ತಿಯೊಂದು ಕಂಡುಬಂದಿತು. ಈ ಫೇಸ್‌ಬುಕ್‌ ಖಾತೆ (ಜಿಮ್‌ ಅಹ್ಮದ್‌) ಮುಖ ಪುಟದಲ್ಲಿ ಮೂರು ಚಿತ್ರಗಳ ಕೊಲಾಜ್‌ ಇರುವುದನ್ನು ನೋಡಬಹುದು. ಈ ವಿಡಿಯೋವನ್ನು ಜನವರಿ 23, 2025ರಂದು ಹಂಚಿಕೊಂಡಿರುವುದನ್ನು ನೋಡಬಹುದು.


ಈ ಫೇಜ್‌ನ ಬಯೋವಿನಲ್ಲಿ ‘ಜಿಮ್ ಅಹ್ಮದ್’ ಬಾಂಗ್ಲಾದೇಶದ ಡಿಜಿಟಲ್ ಕಂಟೆಟ್‌ ಕ್ರಿಯೇಟರ್‌ ಎಂದು ತಿಳಿದುಬಂದಿತು. ಈ ಪೇಜ್‌ನಲ್ಲಿ ಕಾಮಿಡಿ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುತ್ತಾರೆ. ಅವರು ಇದೇ ರೀತಿಯ ಹಾಸ್ಯ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಯೂಟ್ಯೂಬ್ ಚಾನಲ್‌ ಸಹ ಹೊಂದಿದ್ದಾರೆ. ಇನ್ನು ಇದೇ ವೈರಲ್ ವೀಡಿಯೊವನ್ನು ಯೂಟ್ಯೂಬ್‌ನಲ್ಲಿಯೂ ಅಪ್‌ಲೋಡ್ ಮಾಡಿದ್ದಾರೆ.


ಜನವರಿ 24, 2025 ರಂದು, ಜಿಮ್ ಅಹ್ಮದ್ ಫೇಸ್‌ಬುಕ್‌ನಲ್ಲಿ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದರು , ಅದರಲ್ಲಿ ಅವರು ವೈರಲ್ ಆದ ವೀಡಿಯೊವನ್ನು ತಾವೇ ಮಾಡಿದ್ದೇವೆ ಮತ್ತು ಇದು ಕೇವಲ ಎಚ್ಚರಿಕೆಯ ವೀಡಿಯೊ, ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್‌ ವಿಡಿಯೋ ಪೂರ್ವ ನಿಯೋಜಿತ ಅಥವಾ ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಆಗಿದೆ ಎಂಬುದು ಖಚಿತವಾಗಿದೆ.

Full View

ಹೀಗಾಗಿ ವೈರಲ್‌ ಆದ ವಿಡಿಯೋ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೇಳಿರುವ ಹಾಗೆ ಭಾರತದಲ್ಲಿ ಮಾಟ-ಮಂತ್ರ ಮಾಡಿದ ಪತ್ರವನ್ನು ಜನ ಸಾಮಾನ್ಯರಿಗೆ ಓದಲು ನೀಡಿ ದರೋಡೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹುಸಿ ಸುಳ್ಳು. ವೈರಲ್‌ ಆದ ವಿಡಿಯೋ ಬಾಂಗ್ಲಾದೇಶದ ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ ಜಿಮ್‌ ಅಹ್ಮದ್‌ಗೆ ಸಂಬಂಧಿಸಿದ್ದು. ಇದೊಂದು ಸ್ಕ್ರಿಪ್ಟ್ಡ್‌ ವಿಡಿಯೋ ಎಂದು ಅವರೇ ಖುದ್ದಾಗಿ ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದಾರೆ. 

Claim :  ಭಾರತದಲ್ಲಿ ಮಾಟ ಮಂತ್ರ ಮಾಡಿದ ಪತ್ರವನ್ನು ನೀಡುತ್ತಿದ್ದಾರೆ ಎಂದು ಬಾಂಗ್ಲಾದೇಶದ ಸ್ಕ್ರಿಪ್ಟ್ಡ್‌ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News