ಫ್ಯಾಕ್ಟ್‌ಚೆಕ್‌: ಅಸ್ಸಾಂನಲ್ಲಿ ಅಕ್ರಮ ವಲಸಿಗಳು ಪೊಲೀಸರ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

ಅಸ್ಸಾಂನಲ್ಲಿ ಅಕ್ರಮ ವಲಸಿಗಳು ಪೊಲೀಸರ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

Update: 2025-08-11 01:30 GMT

​ಅಕ್ರಮ ಬಾಂಗ್ಲಾದೇಶಿ ವಲಸಿಗರು ಅಸ್ಸಾಂನ ಗೋಲ್ಪಾರಾದಲ್ಲಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಲು ಮೆರವಣಿಗೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಉದ್ದನೆಯ ಈಟಿಗಳನ್ನು ಹಿಡಿದಿರುವ ದೊಡ್ಡ ಗುಂಪನ್ನು ತೋರಿಸುವ ವೀಡಿಯೊವೊಂದು ಸಾಮಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇವರು ಭಾರತದ ಅಸ್ಸಾಂನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ತಯಾರಿ ನಡೆಸುತ್ತಿರುವ ಬಾಂಗ್ಲಾದೇಶಿ ವಲಸಿಗರು ಎಂದು ಆರೋಪಿಸಲಾಗಿದೆ.

ಆಗಸ್ಟ್‌ 5, 2025ರಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಅಸ್ಸಾಂನ ಗೋಲ್ಪಾರದಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ಅಕ್ರಮ ಬಾಂಗ್ಲಾದೇಶಿಗಳು ಮನೆಯಲ್ಲಿ ತಯಾರಿಸಿದ ಈಟಿಗಳನ್ನು ಹಿಡಿದುಕೊಂಡಿದ್ದಾರೆ...!!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಆಗಸ್ಟ್‌ 6,2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAssam Tension: Illegal Bangladeshis Plan Violent Attack on Govt Team with Homemade Weapons.ʼ ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಸ್ಸಾಂ ಉದ್ವಿಗ್ನತೆ: ಅಕ್ರಮ ಬಾಂಗ್ಲಾದೇಶಿಗಳು ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಸರ್ಕಾರಿ ತಂಡದ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ಯೋಜಿಸಿದ್ದಾರೆʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಆಗಸ್ಟ್‌ 05, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIllegal Bangladeshis have armed themselves with homemade spears to launch a violent attack on officials and police in Goalpara, Assamʼ ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಸ್ಸಾಂನ ಗೋಲ್‌ಪಾರಾದಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ಅಕ್ರಮ ಬಾಂಗ್ಲಾದೇಶಿಗಳು ಮನೆಯಲ್ಲಿ ತಯಾರಿಸಿದ ಈಟಿಗಳಿಂದ ಶಸ್ತ್ರಸಜ್ಜಿತರಾಗಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)​


​ಆಗಸ್ಟ್‌ 05, 2025ರಂದು ಮತ್ತೊಂದು ಎಕ್ಸ್‌ ಖಾತೆಯಲ್ಲಿ ʼIllegal Bangladeshi have armed themselves with homemade spear and other fatal weapons to attack the govt officials and police who come to clear the illegal encroachment done by these illegals in Goalpara, Assam. @CMOfficeAssam @himantabiswa , please direct the police to do whatever they can to tackle with these terr0rists. Anyone who attacks the police should be neutralised , we can’t let the life of our soldiers go in risk because of these illegals !! #Assam #AntiEncroachmentDrive #NRC #NRCJaruriHai #DeportKanglusʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಸ್ಸಾಂನ ಗೋಲ್ಪಾರಾದಲ್ಲಿ ಈ ಅಕ್ರಮಗಳು ಮಾಡಿದ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಬರುವ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ದಾಳಿ ಮಾಡಲು ಅಕ್ರಮ ಬಾಂಗ್ಲಾದೇಶಿಗಳು ಮನೆಯಲ್ಲಿ ತಯಾರಿಸಿದ ಈಟಿ ಮತ್ತು ಇತರ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ದಯವಿಟ್ಟು ಈ ಭಯೋತ್ಪಾದಕರನ್ನು ನಿಭಾಯಿಸಲು ಅವರು ಏನು ಬೇಕಾದರೂ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿ. ಪೊಲೀಸರ ಮೇಲೆ ದಾಳಿ ಮಾಡುವವರನ್ನು ತಟಸ್ಥಗೊಳಿಸಬೇಕು, ಈ ಅಕ್ರಮಗಳಿಂದಾಗಿ ನಮ್ಮ ಸೈನಿಕರ ಪ್ರಾಣಕ್ಕೆ ಅಪಾಯವಾಗಲು ನಾವು ಬಿಡುವುದಿಲ್ಲ !!ʼ ಎಂದು ಬರೆದು ಅಸ್ಸಾಂ ಸಿಎಂ ಕಛೇರಿಗೆ ಟ್ಯಾಗ್‌ ಮಾಡಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಮತ್ತಷ್ಟು ವೈರಲ್‌ ಆದ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಅಸ್ಸಾಂನ ಗೋಲ್‌ಪಾರಾಗೆ ಸಂಬಂಧಿಸಿದ್ದಲ್ಲ. ಈ ವೀಡಿಯೊ ಬಾಂಗ್ಲಾದೇಶದ್ದಾಗಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಎರಡು ಬಣಗಳ ನಡುವಿನ ಗಲಾಟೆಯನ್ನು ಇದು ತೋರಿಸುತ್ತದೆ.

ನಾವು  ವೈರಲ್‌ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜುಲೈ 01, 2025ರಂದು ʼಜಾಗೋ ನ್ಯೂಸ್‌24.ಕಾಂʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ ʼবিএনপির দুই গ্রুপের সং/ঘ/র্ষে আ/হ/ত ৪০, লুটপাট-অ/গ্নি/সং/যো/গ | Kishoreganj | Jago newsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವರದಿಯಲ್ಲಿ ʼಎರಡು ಬಿಎನ್‌ಪಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ 40 ಜನರು ಕೊಲ್ಲಲ್ಪಟ್ಟರು, ಲೂಟಿ ಮಾಡಲಾಯಿತು, ಸುಟ್ಟುಹಾಕಲಾಯಿತು | ಕಿಶೋರ್‌ಗಂಜ್ʼ ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೊದ 1:24 ಸೆಕೆಂಡುಗಳಲ್ಲಿ ವೈರಲ್ ಆದ ವಿಡಿಯೋವಿನ ಕ್ಲಿಪ್‌ನ್ನು ನೀವಿಲ್ಲಿ ನೋಡಬಹುದು.

Full View


Full View

​ಜುಲೈ 1, 2025ರಂದು ʼಚಾನೆಲ್‌ ಐ ನ್ಯೂಸ್‌ʼ ಎಂಬ ಯೂಟ್ಯೂಬ್​ ಚಾನೆಲ್‌ನಲ್ಲಿ ʼঅষ্টগ্রামে বিএনপির দুই পক্ষের রক্তক্ষয়ী সংঘর্ষে আহত অন্তত ৪০, লুটপাট-অগ্নিসংযোগʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂ ನಲ್ಲಿ ಹಂಚಿಕೊಂಡಿದೆ. ಈ ವರದಿಯಲ್ಲಿ "ಕಿಶೋರ್‌ಗಂಜ್‌ನ ಅಷ್ಟಗ್ರಾಮ್‌ನಲ್ಲಿ ಬಿಎನ್‌ಪಿಯ ಎರಡು ಬಣಗಳ ನಡುವೆ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಉಪಜಿಲ್ಲಾದ ಖೈರ್‌ಪುರ-ಅಬ್ದುಲ್ಲಾಪುರ ಒಕ್ಕೂಟದ ಅಬ್ದುಲ್ಲಾಪುರ ಗ್ರಾಮದಲ್ಲಿ ಹಿಂಸಾತ್ಮಕ ಘಟನೆ ನಡೆದಿದೆ. ಘರ್ಷಣೆಯ ಸಮಯದಲ್ಲಿ ವಿಧ್ವಂಸಕ ಕೃತ್ಯ, ಲೂಟಿ ಮತ್ತು ಬೆಂಕಿ ಹಚ್ಚಿದ ಆರೋಪಗಳಿವೆ. ಸ್ಥಳೀಯ ಮೂಲಗಳ ಪ್ರಕಾರ, ಯೂನಿಯನ್ ಬಿಎನ್‌ಪಿ ಅಧ್ಯಕ್ಷ ಕಮಲ್ ಪಾಷಾ ಮತ್ತು ಜಿಲ್ಲಾ ಸ್ವಯಂಸೇವಕ ಪಕ್ಷದ ಜಂಟಿ ಸಂಚಾಲಕ ಫರ್ಹಾದ್ ಅಹ್ಮದ್ ನಡುವೆ ದೀರ್ಘಕಾಲದ ಕುಟುಂಬ ಮತ್ತು ರಾಜಕೀಯ ವಿವಾದವಿತ್ತು. ಈ ಹಳೆಯ ಸಂಘರ್ಷ ಹಿಂಸಾಚಾರಕ್ಕೆ ತಿರುಗಿತು" ಎಂದು ವೀಡಿಯೊದಲ್ಲಿ ಹೇಳಲಾಗಿದೆ. 0:35 ನಿಮಿಷದಿಂದ, ವೈರಲ್ ವೀಡಿಯೊದಲ್ಲಿ ಕಂಡುಬರುವ ಚೌಕಟ್ಟುಗಳನ್ನು ಹೋಲುವ ಚೌಕಟ್ಟುಗಳನ್ನು ಕಾಣಬಹುದು.

Full View




ಇದನ್ನೇ ನಾವು ಸುಳಿವಾಗಿ ತೆಗೆದುಕೊಂಡು ಸೂಕ್ತ ಕೀವರ್ಡ್‌ಗಳೊಂದಿಗೆ ಹುಡುಕಿದೆವು. ಜುಲೈ 01, 2025ರಂದು ʼಢಾಕಾ ಮೇಲ್ʼ ವೆಬ್‌ಸೈಟ್‌ನಲ್ಲಿ ʼ40 injured in bloody clash between two BNP factions in Ashtagramʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ಈ ಘಟನೆ ಜುಲೈ 1, 2025 ರಂದು ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಆಸ್ತಾಗ್ರಾಮ್ ಉಪಜಿಲಾದ ಖೈರ್‌ಪುರ-ಅಬ್ದುಲ್ಲಾಪುರ ಒಕ್ಕೂಟದ ಅಬ್ದುಲ್ಲಾಪುರದಲ್ಲಿ ಸಂಭವಿಸಿದೆ. ಈ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 40 ಜನರು ಗಾಯಗೊಂಡರು. ಈ ಘರ್ಷಣೆಯಲ್ಲಿ ಬೆಂಕಿ ಹಚ್ಚುವುದು, ಲೂಟಿ ಮಾಡುವುದು ಮತ್ತು ವಿಧ್ವಂಸಕ ಕೃತ್ಯಗಳು ನಡೆದಿವೆ ಎಂದು ವರದಿಗಳು ಸೂಚಿಸುತ್ತವೆ.


​ಜುಲೈ 1, 2025ರಂದು ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್ ʼಕಲ್ಬೆಲಾʼ ವೆಬ್‌ಸೈಟ್‌ನಲ್ಲಿ ಈ ಘಟನೆಯನ್ನು ವರದಿ ಮಾಡಿರುವುದು ಕಂಡುಕೊಂಡೆವು. ವರದಿಯ ಪ್ರಕಾರ, ಕಿಶೋರ್‌ಗಂಜ್‌ನ ಅಷ್ಟಗ್ರಾಮದಲ್ಲಿ, ಎರಡು ಬಿಎನ್‌ಪಿ ಬಣಗಳ ನಡುವಿನ ದೀರ್ಘಕಾಲದ ರಾಜಕೀಯ ಮತ್ತು ಕೌಟುಂಬಿಕ ಪೈಪೋಟಿ ಜುಲೈ 1 ರಂದು ಹಿಂಸಾತ್ಮಕ ಘರ್ಷಣೆಗಳಾಗಿ ಭುಗಿಲೆದ್ದಿತು. ಕನಿಷ್ಠ 40 ಜನರು ಗಾಯಗೊಂಡರು ಮತ್ತು ಈ ಸಂಘರ್ಷದಲ್ಲಿ ಕಲ್ಲು ತೂರಾಟ, ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿ ಹಾನಿ ಸಂಭವಿಸಿತು. ಸ್ಥಳೀಯ ಪೊಲೀಸರು ಅಂತಿಮವಾಗಿ ಮಧ್ಯಪ್ರವೇಶಿಸಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದರು.

ಅಷ್ಟೇ ಅಲ್ಲ, ಅಸ್ಸಾಂನ ಗೋಲ್ಪಾರ ಪೊಲೀಸರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಒಂದು ಪೋಸ್ಟ್‌ನಲ್ಲಿ ವೀಡಿಯೊವನ್ನು ನಕಲಿ ಎಂದು ಫ್ಲ್ಯಾಗ್ ಮಾಡಿದೆ. ಪೋಸ್ಟ್‌ನಲ್ಲಿ, ʼA fake video in circulation falsely claimed that the incident happened in Goalpara. We request everyone not to get carried away and spread such rumour to ensure peace and order. We have initiated an enquiry to identify the miscreants for taking necessary legal action. ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಪ್ರಸರಣದಲ್ಲಿರುವ ನಕಲಿ ವೀಡಿಯೊವು ಗೋಲ್ಪಾರದಲ್ಲಿ ಘಟನೆ ನಡೆದಿದೆ ಎಂದು ತಪ್ಪಾಗಿ ಹೇಳಿಕೊಂಡಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಇಂತಹ ವದಂತಿಗಳನ್ನು ಹರಡದಂತೆ ನಾವು ವಿನಂತಿಸುತ್ತೇವೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ದುಷ್ಕರ್ಮಿಗಳನ್ನು ಗುರುತಿಸಲು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಲಾಗಿದೆ.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಅಸ್ಸಾಂನ ಗೋಲ್‌ಪಾರಾಗೆ ಸಂಬಂಧಿಸಿದ್ದಲ್ಲ. ಈ ವೀಡಿಯೊ ಬಾಂಗ್ಲಾದೇಶದ್ದಾಗಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಎರಡು ಬಣಗಳ ನಡುವಿನ ಗಲಾಟೆಯನ್ನು ಇದು ತೋರಿಸುತ್ತದೆ.

Claim :  ಅಸ್ಸಾಂನಲ್ಲಿ ಅಕ್ರಮ ವಲಸಿಗಳು ಪೊಲೀಸರ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News