ಫ್ಯಾಕ್ಟ್‌ಚೆಕ್‌: ಜಾತಿವಾರುನಿಂದಾಗಿ ಕಾಂಗ್ರೆಸ್‌ ದೇಶವನ್ನು ವಿಭಜಿಸುತ್ತಿದೆ ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ನೀಡಿದ್ದರಾ?

ಜಾತಿವಾರುನಿಂದಾಗಿ ಕಾಂಗ್ರೆಸ್‌ ದೇಶವನ್ನು ವಿಭಜಿಸುತ್ತಿದೆ ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ನೀಡಿದ್ದರಾ?

Update: 2024-03-23 17:23 GMT

ಭಾರತ ದೇಶವನ್ನು ಜಾತಿ ಆಧಾರದ ಮೇಲೆ ವಿಭಜಿಸುವಲ್ಲಿ ಕಾಂಗ್ರೆಸ್‌ ಪಕ್ಷದ ಪಾತ್ರವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋವಿನಲ್ಲಿ ಖರ್ಗೆ "‘ಕಾಂಗ್ರೆಸ್ ಪಕ್ಷ ಎಂದಿನಿಂದಲೋ ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಲೇ ಬಂದಿದೆ’ ಎಂಬ ಹೇಳಿಕೆಯನ್ನಿಡಿರುವುದನ್ನು ನಾವು ಕಾಣಬಹುದು. ಈ ವಿಡಿಯೋವಿಗೆ ನೆಟ್ಟಿಗರು #WhyModi ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಖರ್ಗೆ ಅವರ ಕಾಮೆಂಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಆದ ವಿಡಿಯೋ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಣಿಪುರದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸಂಬಂಧಿಸಿದ್ದು. ಭಾರತ್‌ ಜೋಡೋ ಯಾತ್ರೆ ಮಾರ್ಚ್ 20, 2024 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

ಫ್ಯಾಕ್ಟ್‌ಚೆಕ್‌

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಾತಿಯ ಆಧಾರದ ಮೇಲೆ ನಮ್ಮ ಪಕ್ಷ ದೇಶವನ್ನು ವಿಭಜಿಸುತ್ತಿದೆ ಎಂದು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿ ಸುಳ್ಳು.

ವೈರಲ್‌ ಆದ ಮೂಲ ವಿಡಿಯೋವನ್ನು ಗಮನಿಸಿದರೆ ಖರ್ಗೆಯವರು ಬಿಜೆಪಿ ನಾಯಕ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಟೀಕಿಸುತ್ತಿರುವುದನ್ನು ನಾವು ನೋಡಬಹುದು.

ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ನಾವು ರಿವರ್ಸ್‌ ಇಮೇಜ್‌ ಸರ್ಚ್ ಮಾಡಿದಾಗ ನಮಗೆ 15 ಫೆಬ್ರವರಿ 2021 ರಂದು ANI ಎಂಬ ಸುದ್ದಿ ಸಂಸ್ಥೆ ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಈ ವಿಡಿಯೋವಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಔರಂಗಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ವಿಡಿಯೋವಿದು ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಲಾಗಿತ್ತು.

ಬಿಹಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಂಬ ಕೀವರ್ಡ್‌ನನ್ನು ಉಪಯೋಗಿಸಿಕೊಂಡು ನಾವು ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿರುವ ಮೂಲ ವಿಡಿಯೋವನ್ನು ನಾವು ಕಂಡುಕೊಂಡೆವು.

ಫೆಬ್ರವರಿ 15, 2024 ರಂದು ಬಿಹಾರದ ಔರಂಗಾಬಾದ್‌ನಲ್ಲಿ ನಡೆದ "ಭಾರತ್ ಜೋಡೋ ನ್ಯಾಯ್ ಯಾತ್ರೆ"ಯ ಭಾಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆಗಳನ್ನು ನೀಡಿದ್ದರು. ಪೂತ್ರಿ ವೀಡಿಯೋವನ್ನು ತೀಕ್ಷ್ಣವಾಗಿ ಗಮನಿಸುವುದಾದರೆ, ಜಾತಿ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೇಡಿಕೆಯನ್ನು ಉಲ್ಲೇಖಿಸಿ ಖರ್ಗೆ ಈ ಕಾಮೆಂಟ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. 30:00 ರ ಟೈಮ್‌ಸ್ಟ್ಯಾಂಪ್‌ನಲ್ಲಿ, ಖರ್ಗೆ ಜಾತಿ ಲೆಕ್ಕಾಚಾರದ ಪ್ರಯೋಜನಗಳ ಬಗ್ಗೆ, ಹಾಗೂ ಜಾತಿ ಲೆಕ್ಕಾಚಾರದ ನಮ್ಮ ಬೇಡಿಕೆಯಲ್ಲಿ ತಪ್ಪೇನು? ಆದರೆ ಕೆಲವರು, ಕಾಂಗ್ರೆಸ್ ಪಕ್ಷವು ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದೆ ಎಂದು ಟೀಕಿಸಿದ್ದಾರೆ ಎಂದು ಹೇಳಿಕೆಯನ್ನಿಟಿರುವುದು ನಾವು ನೋಡಬಹುದು.

ಜಾತಿ ಗಣತಿ ಬಗ್ಗೆ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷ ನಾಯಕರು ಸಹ ಒಂದೇ ಮಾತಿನ ಮೇಲಿದ್ದಾರೆ. ಕಾಂಗ್ರೆಸ್‌ ಪಕ್ಷ ಈ ಸಲ ಗೆದ್ದರೆ ಜಾತಿ ಗಣತಿ ಮಾಡುವುದು ಕಡ್ಡಾಯ.ಈ ಜನಗಣತಿಯು ವಿವಿಧ ಜಾತಿಗಳ ಮತ್ತು ಜನರ ಸ್ಥಿತಿಗತಿಗಳನ್ನು ತಿಳಿಸಲು ಸಹಾಯವಾಗಿರುತ್ತದೆ. ಸ್ವಾತಂತ್ರ್ಯದ ನಂತರ ಹಿಂದುಳಿದ ವರ್ಗಗಳಾದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಅಲ್ಪಸಂಖ್ಯಾತರು ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿವಿಧ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಜಾತಿ ಗಣತಿ ಬಹಳ ಸಹಾಯಕವಾಗಿದೆ. ಆದ್ದರಿಂದಲೇ ನಾವು ಜಾತಿಗಣತಿ ನಡೆಸಲು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ವೆಬ್ ಸೈಟ್‌ನಲ್ಲಿ ಖರ್ಗೆಯವರ ಭಾಷಣವನ್ನು ನಾವು ನೋಡಬಹುದು.

ಖರ್ಗೆಯವರು ಮಾತನಾಡಿರುವ ವಿಡಿಯೋವನ್ನು ಎಡಿಟ್‌ ಮಾಡಲಾಗಿದೆ. ಜಾತಿ ಲೆಕ್ಕಾಚಾರದ ಬೇಡಿಕೆಯ ಕುರಿತು ಮೋದಿಯ ಹೇಳಿಕೆಗಳನ್ನು ಖರ್ಗೆ ತನ್ನ ಭಾಷಣದಲ್ಲಿ ಹೇಳೀದ್ದರು. ಈ ಹೇಳಿಕೆಯನ್ನು ನಾವು ಮೂಲ ವಿಡಿಯೋವಿನಲ್ಲಿ 13:13 ರಿಂದ 13:18 ರ ನಡುವೆ ನೋಡಬಹುದು. ಇದನ್ನು ಗಮನಿಸಿದರೆ ಮೂಲ ವಿಡಿಯೋವನ್ನು ತಿರುಚಿ, ಎಡಿಟ್‌ ಮಾಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

Full View 

ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂಲ ವಿಡಿಯೋವಿನಲ್ಲಿ ಖರ್ಗೆಯವರು ಬಿಜೆಪಿ ನಾಯಕ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಟೀಕಿಸುತ್ತಿರುವುದನ್ನು ನಾವು ನೋಡಬಹುದು.

Claim :  At a public meeting, Mallikarjun Kharge said,\"As always, Congress divides the country. It divides the country in the name of caste.
Claimed By :  Social Media Users
Fact Check :  False
Tags:    

Similar News