ಫ್ಯಾಕ್ಟ್‌ಚೆಕ್‌: ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ ಎಂದು ಎಐ ಚಿತ್ರ ಮತ್ತು ತಪ್ಪು ಮಾಹಿತಿ ಹಂಚಿಕೆ

ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ ಎಂದು ಎಐ ಚಿತ್ರ ಮತ್ತು ತಪ್ಪು ಮಾಹಿತಿ ಹಂಚಿಕೆ

Update: 2025-06-08 02:30 GMT

Patanjali has launched an electric scooter

ಪತಂಜಲಿಗೆ ಸಂಬಂಧಿಸಿದ ಪೊಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ಪೊಸ್ಟ್‌ನಲ್ಲಿ ಸ್ವಾಮಿ ರಾಮದೇವ್ ಸ್ಕೂಟರ್ ಮೇಲೆ ಕುಳಿತಿರುವ ಚಿತ್ರವನ್ನು ಹಂಚಿಕೊಂಡು, ಪತಂಜಲಿ 25,000ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ ಎಂದು ಕೆಲವು ಬಳಕೆದಾರರು ಶೀರ್ಷಿಕೆಯನ್ನೀಡಿ ಪೊಸ್ಟ್‌ ಮಾಡುತ್ತಿದ್ದಾರೆ. ಬಳಕೆದಾರರು ಈ ಪೋಸ್ಟ್‌ನಲ್ಲಿ ಈ ಸ್ಕೂಟರ್‌ನ ವಿಶೇಷತೆಯನ್ನು ಸಹ ಹೇಳುತ್ತಿದ್ದಾರೆ. ಕೆಲವು ವೆಬ್‌ಸೈಟ್‌ಗಳಲ್ಲಿ ಪತಂಜಲಿ ಆಯುರ್ವೇದ ಕಂಪನಿಯು ಕೇವಲ 14,000 ರೂಪಾಯಿಗಳಿಗೆ 440 ಕಿಮೀ ರೇಂಜ್‌ನೊಂದಿಗೆ “ಯುವ” ಎಂಬ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯು ಸ್ಕೂಟರ್‌ನ ವಿಶೇಷತೆಗಳಾದ 3-4 ಗಂಟೆಗಳ ಚಾರ್ಜಿಂಗ್ ಸಮಯ, 60 ಕಿಮೀ/ಗಂಟೆಯ ಗರಿಷ್ಠ ವೇಗ ಮತ್ತು ಡಿಟ್ಯಾಚಬಲ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ ಎಂದು ಪ್ರತಿಪಾದಿಸಲಾಗಿದೆ. ಈ ವೈರಲ್ ಸುದ್ದಿಯು ಭಾರತದ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಕೈಗೆಟಕುವ ಬೆಲೆಯಲ್ಲಿ ಉನ್ನತ ಗುಣಮಟ್ಟದ EV ಖರೀದಿಸುವುದು ಉತ್ತಮ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಮೇ 26, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼमैं तो यही लूंगा देख लेना लिखकर रख लो आज ही अपने डायरी में जय हो आपकी आदरणीय योग गुरु बाबा रामदेव जी ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಾನು ಇದನ್ನ ತೆಗೆದುಕೊಳ್ಳುತ್ತೇನೆ, ನೋಡಿ, ಇವತ್ತೇ ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ, ಜೈ ಹೋ ನಿಮ್ಮ ಗೌರವಾನ್ವಿತ ಯೋಗ ಗುರು ಬಾಬಾ ರಾಮದೇವ್ ಜಿʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿದ್ದರು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಮೇ 29, 2025ರಂದು ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಕಾರ್ಡ್ ಇಲ್ಲ, ಸಾಲವಿಲ್ಲ, ಇಎಂಐ ಇಲ್ಲ – ಪತಂಜಲಿಯ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹ 25,000ಗೆ ಬಿಡುಗಡೆಯಾಗಿದೆ, ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ. ವ್ಯಾಪ್ತಿ… ಪತಂಜಲಿ ಕಂಪನಿಯು ಪರಿಸರವನ್ನು ಉತ್ತಮ ಮತ್ತು ಸುರಕ್ಷಿತವಾಗಿಸಲು ಕೈಗೆಟುಕುವ ಮತ್ತು ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಅತ್ಯಂತ ವಿಶೇಷವಾದ ವಿಷಯವೆಂದರೆ ಪ್ರಸ್ತುತ ನೀವು ಕಾರ್ಡ್, ಸಾಲ ಅಥವಾ ಇಎಂಐ ಇಲ್ಲದೆ ಕೇವಲ ₹ 25,000 ಗೆ ಖರೀದಿಸಬಹುದು. ಬಜೆಟ್ ವಿಭಾಗದಲ್ಲಿ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ವೈಶಿಷ್ಟ್ಯಗಳ ಪ್ರಯೋಜನವನ್ನು ಬಯಸುವವರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ಪತಂಜಲಿ ಕಂಪನಿಯ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಸ್ಥಳೀಯ ತಂತ್ರಜ್ಞಾನವನ್ನು ಆಧರಿಸಿದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದನ್ನು ಗ್ರೀನ್ ಇಂಡಿಯಾ ಮಿಷನ್ ಅನ್ನು ಉತ್ತೇಜಿಸುವ ಗುರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 200 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ, ಅದರ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಎಂದು ಬರೆದು ಪೊಸ್ಟ್‌ ಮಾಡಿರುವುದನ್ನು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


26, ಮೇ 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ʼना कार्ड, ना लोन, ना EMI सिर्फ ₹25,000 में लॉन्च हुआ Patanjali का Green Electric स्कूटर, सिंगल चार्ज में 200km की रेंजʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿರುವುದನ್ನು ನೋಡಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಮೇ 05, 2025ರಂದು ಎಕ್ಸ್‌ ಖಾತೆದಾರರೊಬ್ಬರು ʼElon musk ko bhi peeche chod dia patanjali ne! From Ayurveda to EV scooter. What kuch bhi looks likeʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿದ್ದಾರೆ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)


ಮೇ 29, 2025ರಂದು ʼಸುನಾಮಿ ಚತ್ತೀಸ್‌ಘಡ್‌ʼ ಎಂಬ ವೆಬ್‌ಸೈಟ್‌ನಲ್ಲಿ ʼಕಾರ್ಡ್ ಇಲ್ಲ, ಸಾಲವಿಲ್ಲ, ಇಎಂಐ ಇಲ್ಲ – ಪತಂಜಲಿಯ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹25,000 ಗೆ ಬಿಡುಗಡೆಯಾಗಿದೆ, ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ. ದೂರ ಕ್ರಮಿಸುತ್ತದೆ ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಕಾರ್ಡ್ ಇಲ್ಲ, ಸಾಲವಿಲ್ಲ, ಇಎಂಐ ಇಲ್ಲ – ಪತಂಜಲಿಯ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹25,000 ಗೆ ಬಿಡುಗಡೆಯಾಗಿದೆ, ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ. ದೂರ ಕ್ರಮಿಸುತ್ತದೆ. ಪತಂಜಲಿ ಕಂಪನಿಯು ಪರಿಸರವನ್ನು ಉತ್ತಮ ಮತ್ತು ಸುರಕ್ಷಿತವಾಗಿಸಲು ಕೈಗೆಟುಕುವ ಮತ್ತು ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಅತ್ಯಂತ ವಿಶೇಷವಾದ ವಿಷಯವೆಂದರೆ ಪ್ರಸ್ತುತ ನೀವು ಕಾರ್ಡ್, ಸಾಲ ಅಥವಾ ಇಎಂಐ ಇಲ್ಲದೆ ಕೇವಲ ₹ 25,000 ಗೆ ಖರೀದಿಸಬಹುದು. ಬಜೆಟ್ ವಿಭಾಗದಲ್ಲಿ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ವೈಶಿಷ್ಟ್ಯಗಳ ಪ್ರಯೋಜನಗಳನ್ನು ಬಯಸುವವರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ಪತಂಜಲಿ ಕಂಪನಿಯ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಸ್ಥಳೀಯ ತಂತ್ರಜ್ಞಾನವನ್ನು ಆಧರಿಸಿದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಗ್ರೀನ್ ಇಂಡಿಯಾ ಮಿಷನ್ ಅನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 200 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ, ಅದರ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣʼ ಎಂದು ವರದಿ ಮಾಡಿರುವುದನ್ನು ನೋಡಬಹುದು.


ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾತಲಾಣದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪತಂಜಲಿ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೇಳಿಕೆ ಸಂಪೂರ್ಣವಾಗಿ ಸುಳ್ಳಾಗಿದೆ. ಪೊಸ್ಟ್‌ಗಳಲ್ಲಿ ಕಾಣುವ ರಾಮ್‌ದೇವ್‌ ಚಿತ್ರವನ್ನು ಎಐ ಬಳಸಿ ರಚಿಸಲಾಗಿದೆ.

ನಾವು ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಯಾವುದಾದರು ಮಾಧ್ಯಮಗಳು ಅಧಿಕೃತ ವರದಿಗಳನ್ನು ಪ್ರಕಟಿಸಿವೆಯೇ ಎಂದು ಪರಿಶೀಲನೆ ನಡೆಸಿದೆವು. ಆದರೆ ಈ ಕುರಿತು ನಮಗೆ ಯಾವುದೇ ರೀತಿಯಾದ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ಜಾಗತಿಕ ಮಟ್ಟದಲ್ಲಿ ಈ ಸುದ್ದಿ ಹೆಚ್ಚು ಸಂಚಲನ ಮೂಡಿಸುತ್ತಿತ್ತು. ಇದರಿಂದಾಗಿ ನಮಗೆ ವೈರಲ್‌ ಪೋಸ್ಟ್‌ನಲ್ಲಿನ ಪ್ರತಿಪಾದನೆ ನಮಗೆ ಅನುಮಾನವನ್ನು ಹೆಚ್ಚು ಮಾಡಿತ್ತು.


ನಾವು ಪತಂಜಲಿಯ ಅಧಿಕೃತ ವೆಬ್‌ಸೈಟ್ (www.patanjaliayurved.net) (www.patanjaliayurved.net) ಮತ್ತು ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಿದಾಗ, ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್‌ಗೆ ಸಂಬಂಧಿಸಿದ ಯಾವುದೇ ಅಧಿಕೃತ ಘೋಷಣೆ ಕಂಡು ಬಂದಿಲ್ಲ. ಇನ್ನು ವೈರಲ್‌ ಫೋಸ್ಟ್‌ನಲ್ಲಿ ಹೇಳಲಾದ ವಿಶೇಷತೆಗಳೊಂದಿಗೆ ನಿಜವಾಗಿಯೂ ಸಾಕಷ್ಟು ವಿಶೇಷತೆಗಳೊಂದಿಗೆ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ನೀಡಲಾಗುತ್ತದೆ ಎಂದು ಪರಿಶೀಲಿಸಿದಾಗ ಇದರಲ್ಲಿಯೂ ಯಾವುದೇ ಸತ್ಯಾಂಶವಿಲ್ಲವೆಂಬುದು ಸಾಭೀತಾಗಿದೆ. ಆಟೋಮೋಟಿವ್ ತಜ್ಞರು ಮತ್ತು ಎಲೆಕ್ಟ್ರಿಕ್ ವಾಹನ ವಿಶೇಷಜ್ಞರ ಪ್ರಕಾರ, 440 ಕಿಮೀ ರೇಂಜ್‌ಗೆ ಕನಿಷ್ಠ 7 ಕಿಲೋವ್ಯಾಟ್-ಅವರ್‌ನ ಬ್ಯಾಟರಿ ಅಗತ್ಯವಿದೆ, ಇದು ಸ್ಕೂಟರ್‌ನ ಗಾತ್ರ ಮತ್ತು 14,000 ರೂಪಾಯಿಗಳ ಬೆಲೆಯಲ್ಲಿ ಸಾಧ್ಯವಿಲ್ಲ. ಒಎಲ್‌ಎ, ಆಥರ್, ಮತ್ತು ಟಿವಿಎಸ್‌ನಂತಹ ಪ್ರಮುಖ ಕಂಪನಿಗಳ ಸ್ಕೂಟರ್‌ಗಳು 100-200 ಕಿಮೀ ರೇಂಜ್‌ನೊಂದಿಗೆ 70,000 ರಿಂದ 1.2 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತವೆ, ಹಾಗಾಗಿ ವೈರಲ್‌ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಾಗಿದೆ.


ನಾವು ವೈರಲ್ ಫೋಟೋವನ್ನು was it AI ಎಂಬ ಎಐ ಫೋಟೋಗಳನ್ನು ಪತ್ತೆ ಹಚ್ಚುವ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು ಎಐನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.


ಈ ವೈರಲ್ ಫೋಟೋ ಎಐನಿಂದ ರಚಿತವಾಗಿರಬಹುದು ಎಂಬ ಅನುಮಾನದಿಂದ, ಎಐ ಡಿಟೆಕ್ಟರ್ ಪರಿಕರವಾದ ಸೈಟ್‌ ಇಂಜೀನ್‌ ಪರಿಶೀಲಿಸಿದ್ದೇವೆ. ಈ ಎರಡೂ ಪರಿಕರಗಳು ವೈರಲ್ ಫೋಟೋ ಎಐನಿಂದ ರಚಿತವಾಗಿದೆ ಎಂದು ದೃಢಪಡಿಸಿವೆ. ಹೈವ್ ಮಾಡರೇಶನ್ ಪ್ರಕಾರ, ಇದು ಎಐ ರಚಿತವಾಗುವ ಸಾಧ್ಯತೆ ಶೇ.99ರಷ್ಟು ಇದೆ.


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ ಹಾಗೆ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪತಂಜಲಿ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿಲ್ಲ.

Claim :  ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ ಎಂದು ಎಐ ಚಿತ್ರ ಮತ್ತು ತಪ್ಪು ಮಾಹಿತಿ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News