ಫ್ಯಾಕ್ಟ್‌ಚೆಕ್‌: ಭಾರತ- ಪಾಕಿಸ್ತಾನ್‌ ಯುದ್ದದ ಅಪಘಾತದಲ್ಲಿ ಭಾರತೀಯ ಯುದ್ಧನೌಕೆಯನ್ನು ರಕ್ಷಿಸಲಾಗುತ್ತಿದೆ ಎಂದು ಎಐ ಚಿತ್ರ ಹಂಚಿಕೆ

ಭಾರತ- ಪಾಕಿಸ್ತಾನ್‌ ಯುದ್ದದ ಅಪಘಾತದಲ್ಲಿ ಭಾರತೀಯ ಯುದ್ಧನೌಕೆಯನ್ನು ರಕ್ಷಿಸಲಾಗುತ್ತಿದೆ ಎಂದು ಎಐ ಚಿತ್ರ ಹಂಚಿಕೆ

Update: 2025-05-11 02:30 GMT

​ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಎರಡೂ ದೇಶಗಳು ವಿವಿಧ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗುತ್ತಿರುವಾಗ, ಭಾರತೀಯ ಸೇನೆಯ ಅಪಘಾತದ ನಂತರದ ಚೇತರಿಕೆ ಕಾರ್ಯಾಚರಣೆಯಾಗಿದ್ದು, ಅಲ್ಲಿ ಜೆಟ್ ಅನ್ನು ಹೆಲಿಕಾಪ್ಟರ್‌ಗಳಿಂದ ಎತ್ತಲಾಗುತ್ತಿದೆʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮೇ 07, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ʼइस फोटो में जो फाइटर जेट दिख रहा है, वह एक F-16 Fighting Falcon है। इसके कुछ पहचान वाले फीचर्स: सिंगल इंजन डिजाइन| एयर इंटेक नीचे की ओर (chin-mounted). विशिष्ट विंग डिजाइन (relatively small and sleek) टेल फिन पर "841" जैसी markings. #F-16 फाइटर जेट है जो पाकिस्तान एयर फोर्स (PAF) के पास है। भारत के पास F-16 नहीं है। यह तस्वीर इंडियन आर्मी द्वारा क्रैश के बाद रिकवरी ऑपरेशन की है, जहां हेलिकॉप्टर के जरिए जेट को उठाया जा रहा है। ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ಫೋಟೋದಲ್ಲಿ ಕಾಣುವ ಫೈಟರ್ ಜೆಟ್ F-16 ಫೈಟಿಂಗ್ ಫಾಲ್ಕನ್ ಆಗಿದೆ. ಅದರ ಕೆಲವು ಗುರುತಿಸುವ ಲಕ್ಷಣಗಳು:

1. ಏಕ ಎಂಜಿನ್ ವಿನ್ಯಾಸ.

2. ಗಾಳಿಯ ಒಳಸೇರಿಸುವಿಕೆಯು ಕೆಳಮುಖವಾಗಿ ಕೋನೀಯವಾಗಿದೆ.

3. ವಿಶಿಷ್ಟ ರೆಕ್ಕೆ ವಿನ್ಯಾಸ ಬಾಲ ರೆಕ್ಕೆಯ ಮೇಲೆ "841" ನಂತಹ ಗುರುತುಗಳು

#F-16 ಪಾಕಿಸ್ತಾನ ವಾಯುಪಡೆ (PAF) ಒಡೆತನದ ಫೈಟರ್ ಜೆಟ್ ಇದಾಗಿದೆ. ಭಾರತವು F-16 ಗಳನ್ನು ಹೊಂದಿಲ್ಲ.

ಈ ಫೋಟೋ ಭಾರತೀಯ ಸೇನೆಯ ಅಪಘಾತದ ನಂತರದ ಚೇತರಿಕೆ ಕಾರ್ಯಾಚರಣೆಯಾಗಿದ್ದು, ಅಲ್ಲಿ ಜೆಟ್ ಅನ್ನು ಹೆಲಿಕಾಪ್ಟರ್‌ಗಳಿಂದ ಎತ್ತಲಾಗುತ್ತಿದೆʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌


​ಮೇ 04, 2025ರಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ಉರ್ದುವಿನಲ್ಲಿ ʼانڈیا کے ایک جنگی جہاز کو کریش کے بعد ریسکیو کیا جا رہا ہے۔ʼ ಎಂದು ಬರೆದಯ ಯುದ್ದನೌಕೆಯ ವಿಡಿಯೋವೊಂದನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಪಘಾತದ ನಂತರ ಭಾರತೀಯ ಯುದ್ಧನೌಕೆಯನ್ನು ರಕ್ಷಿಸಲಾಗುತ್ತಿದೆʼ ಎಂದು ಬರೆದಿರುವುದನ್ನು ನಾವಿಲ್ಲಿ ಕಾಣಬಹುದು.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಮೇ 07, 2025ರಂದು ಯೂಟ್ಯೂಬ್‌ ಖಾತೆದಾರರೊಬ್ಬರು ʼindian rafael shot down in Pakistan.Or india walo?✈️#indiapakistanwar #indianrafael #india #pakistanʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಆರ್ಕೈವ್‌)

ಮತ್ತಷ್ಟು ವೈರಲ್‌ ಆದ ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್‌ ಆದ ವಿಡಿಯೋವನ್ನು ಎಐನ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರು ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಂತರ ನಾವು ಗೂಗಲ್‌ನಲ್ಲಿ ವೈರಲ್‌ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮು ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲೂ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಂದು ವೇಳೆ ನಿಜವಾಗಿಯೂ ಭಾರತದ ಯುದ್ದನೌಕೆಗೆ ಏನಾದರೂ ಆಗಿದ್ದರೆ, ಖಚಿತವಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು.

ನಾವು ವೈರಲ್‌ ಆದ ವಿಡಿಯೋವಿನು ಸೂಕ್ಷ್ಮವಾಗಿ ಗಮನಿಸಿದೆವು. ವೈರಲ್‌ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು. ನಾವು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 97% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.​


​ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.3 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.


​​​Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.​


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಜಾಲತಾಣಧ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ಭಾರತ- ಪಾಕಿಸ್ತಾನ್‌ ಯುದ್ದದ ಅಪಘಾತದಲ್ಲಿ ಭಾರತೀಯ ಯುದ್ಧನೌಕೆಯನ್ನು ರಕ್ಷಿಸಲಾಗುತ್ತಿದೆ ಎಂದು ಎಐ ಚಿತ್ರ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News